ಕಥೆ - ಪರಿಮಳಾ ಪ್ರಸಾದ್

ಇಂದು ಭಾನುವಾರ. ಇಡೀ ದಿನ ಮಳೆ ಸುರಿಯುತ್ತಿತ್ತು. ಈಗಷ್ಟೇ ಮಳೆಯ ಸುರಿಯುವಿಕೆ ನಿಂತಿತ್ತು. ಆದರೆ ಗಾಳಿಯ ರಭಸ ಈಗಲೂ ಕೇಳಿಬರುತ್ತಿತ್ತು. ಒದ್ದೆಯಾದ ರಸ್ತೆಯಲ್ಲಿ ಬೆಳಕು ಮಂದಾಗಿ ಗೋಚರಿಸುತ್ತಿತ್ತು. ಸುಷ್ಮಾ ಕಿಟಕಿಯ ಎದುರು ನಿಂತು, ಎಲ್ಲೋ ಕಳೆದುಹೋದಂತಿದ್ದಳು. ಕಿಟಕಿಯ ಹೊರಗೆ ನೋಡುತ್ತಾ ರಾಹುಲ್ ಬಗ್ಗೆ ಯೋಚಿಸುತ್ತಿದ್ದಳು. ಇಂತಹ ಹವಾಮಾನದಲ್ಲಿ ಅವನು ಎಲ್ಲಿದ್ದಾನೋ ಏನೋ? ಹವಾಮಾನದಲ್ಲಿ ಒಂದು ರೀತಿಯ ತಾಜಾತನವಿತ್ತು. ಆಸುಪಾಸಿನ ಸಮಸ್ತ ಸೌಂದರ್ಯ, ಆಸುಪಾಸಿನ ಏನೆಲ್ಲ ಬಣ್ಣಗಳು ಹೃದಯದ ಹವಾಮಾನದೊಂದಿಗೆ ಥಳಕು ಹಾಕಲ್ಪಟ್ಟಿರುತ್ತವೆ. ಅದೇ ಸಮಯದಲ್ಲಿ ಸುಷ್ಮಾಳ ಹೃದಯದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿತ್ತು.

ವಿಶಾಲ್ ಟಿ.ವಿಯಲ್ಲಿ ಒಂದು ಸಲ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದರೆ, ಮತ್ತೊಮ್ಮೆ ಸುದ್ದಿ ನೋಡುತ್ತಿದ್ದ, ರಜೆಯಿತ್ತು. ಹೀಗಾಗಿ ಅವನು ನಿಶ್ಚಿಂತನಾಗಿದ್ದ. ಅವನು ಕೇಳಿದ, ``ಸುಷ್ಮಾ, ನಿಂತುಕೊಂಡೇ ಏನು ಯೋಚಿಸುತ್ತಿರುವೆ?''

``ಏನಿಲ್ಲ. ಹಾಗೆಯೇ ಹೊರಗಡೆ ನೋಡುತ್ತಿರುವೆ. ಬಹಳ ಸೊಗಸಾಗಿದೆ.''

``ಯಶ್‌ ಹಾಗೂ ಸಂಜನಾ ಯಾವಾಗ ಬರ್ತಾರಂತೆ.....?''

``ಇನ್ನೇನು ಬಂದೇಬಿಡುತ್ತಾರೆ. ನಾನು ಅವರಿಗಾಗಿ ಏನಾದರೂ ತಿಂಡಿ ತಯಾರಿಸ್ತೀನಿ......'' ಎಂದು ಹೇಳುತ್ತಾ ಸುಷ್ಮಾ ಅಡುಗೆಮನೆಯ ಕಡೆ ಹೊರಟಳು.

ಸುಷ್ಮಾ ಉದ್ದೇಶಪೂರ್ವಕವಾಗಿಯೇ ಅಡುಗೆಮನೆಗೆ ಬಂದಿದ್ದಳು. ಅವಳಿಗೆ ವಿಶಾಲ‌ನ ದೃಷ್ಟಿ ಎದುರಿಸುವ ಧೈರ್ಯವಿರಲಿಲ್ಲ. ಅವಳ ದೃಷ್ಟಿಕೋನದಲ್ಲಿ ರಾಹುಲನ ಆಗಮನದ ನಿರೀಕ್ಷೆಯಷ್ಟೇ ಇತ್ತು.

umar-ke-is-mode-par_2

ಸುಷ್ಮಾ ಹಾಗೂ ವಿಶಾಲ್ ‌ರ ವಿವಾಹವಾಗಿ 20 ವರ್ಷ ಕಳೆದಿತ್ತು. ಮಗ ಯಶ್‌ ಹಾಗೂ ಮಗಳು ಸಂಜನಾ ತಮ್ಮ ತಮ್ಮ ಓದು ಹಾಗೂ ಸ್ನೇಹಿತರಲ್ಲಿ ವ್ಯಸ್ತರಾಗಿಬಿಟ್ಟಾಗ, ಸುಷ್ಮಾಳ ಜೀವನದಲ್ಲಿ ಒಂದು ರೀತಿಯ ಖಾಲಿ ಖಾಲಿತನ ಅನಿಸುತ್ತಿತ್ತು. ಅವಳು ತನ್ನ ಏಕಾಂಗಿತನದ ಬಗ್ಗೆ ವಿಶಾಲ್ ಮುಂದೆ ಪ್ರಸ್ತಾಪಿಸುತ್ತಿದ್ದಳು.

``ವಿಶಾಲ್‌, ನೀ ಕೂಡ ಇತ್ತೀಚಿನ ದಿನಗಳಲ್ಲಿ ಬಹಳ ಬಿಜಿಯಾಗಿಬಿಟ್ಟಿರಿ. ಮಕ್ಕಳು ಕೂಡ ತಮ್ಮ ಕೆಲಸಗಳಲ್ಲಿ ವ್ಯಸ್ತರಾಗಿದ್ದಾರೆ. ನನ್ನ ದೇಹ ಮನೆ ಹಾಗೂ ಹೊರಗಿನ ಕರ್ತವ್ಯಗಳನ್ನೆಲ್ಲ ನಿಭಾಯಿಸುತ್ತದೆ. ಆದರೆ ಮನಸ್ಸಿನಲ್ಲಿ ಒಂದು ರೀತಿಯ ರಿಕ್ತತೆ ಉಂಟಾಗುತ್ತದೆ. ಏನು ಮಾಡಲಿ ಹೇಳಿ?''

ವಿಶಾಲ್ ಅವಳಿಗೆ ತಿಳಿಸಿ ಹೇಳುತ್ತಿದ್ದ, ``ನನಗೆ ನಿನ್ನ ಮನಸ್ಸಿನ ಭಾವನೆ ಅರ್ಥವಾಗುತ್ತೆ. ಆದರೆ ಹುದ್ದೆಯ ಜೊತೆಗೆ ಜವಾಬ್ದಾರಿಗಳು ಕೂಡ ಹೆಚ್ಚುತ್ತಾ ಹೊರಟಿವೆ. ನೀನೂ ಕೂಡ ಯಾವುದಾದರೂ ಹವ್ಯಾಸದಲ್ಲಿ ನಿನ್ನನ್ನು ತೊಡಗಿಸಿಕೊಳ್ಳಬಹುದಲ್ವಾ?''

``ನನಗೆ ಏಕಾಂಗಿತನದ ಅನುಭವ ಬಹಳಷ್ಟು ಕಾಡುತ್ತಿರುತ್ತದೆ. ನನ್ನ ಮಾತನ್ನು ಯಾರಾದರೂ ಕೇಳಿಸಿಕೊಳ್ಳಬೇಕು, ನನ್ನ ಜೊತೆಗೆ ಸಮಯ ಕಳೆಯಬೇಕು ಅನ್ನಿಸುತ್ತಿರುತ್ತದೆ. ಆದರೆ ನೀವು ಮೂವರಂತೂ ನಿಮ್ಮದೇ ಲೋಕದಲ್ಲಿ ಕಳೆದು ಹೋಗಿರುತ್ತೀರಿ.''

``ಸುಷ್ಮಾ, ಇದರಲ್ಲಿ ಒಂಟಿತನದ ಮಾತೆಲ್ಲಿ ಬರುತ್ತದೆ? ಅದೆಲ್ಲ ನಿನ್ನ ಕೈಯಲ್ಲಿಯೇ ಇದೆ. ನೀನು ನಿನ್ನ ಯೋಚನೆಯನ್ನು ಹೇಗೆ ಬೇಕೋ ಹಾಗೆ ಚಲನಶೀಲಗೊಳಿಸಬಹುದು. ಹಾಗೆ ನೋಡಿದರೆ ಒಂಟಿತವೆನ್ನುವುದೇ ಇಲ್ಲ. ಒಬ್ಬರು ವೃದ್ಧರಾದ ಬಳಿಕ ಏಕಾಂಗಿಯಾಗುತ್ತಾರೆ. ಮತ್ತೆ ಕೆಲವರು ಅದಕ್ಕೂ ಮೊದಲೇ ಇಲ್ಲಿನ ವ್ಯತ್ಯಾಸ ಇಷ್ಟೆ, ಈ ಸತ್ಯವನ್ನು ಮನಸ್ಸಿನಿಂದ ಸ್ವೀಕರಿಸಿದಾಗ ಯಾವುದೇ ತೊಂದರೆ, ತಾಪತ್ರಯ ಉಂಟಾಗುವುದಿಲ್ಲ. ನೀನಂತೂ ಓದುಬರಹ ಬಲ್ಲವಳು. ಕಾಲೇಜು ಜೀವನದಲ್ಲಿ ನೀನು ಏನಾದರೂ ಬರೀತಿದ್ದೆ. ಈಗ ನಿನಗೆ ಬಿಡುವಿದೆ ಎನಿಸಿದರೆ, ಏನಾದರೂ ಬರೆಯಲು ಶುರು ಮಾಡು,'' ಆದರೆ ಸುಷ್ಮಾಳಿಗೆ ತನ್ನ ಒಂಟಿತನದಿಂದ ಅಷ್ಟು ಸುಲಭವಾಗಿ ಮುಕ್ತಿ ದೊರೆಯುವ ಲಕ್ಷಣಗಳು ಕಂಡುಬರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ