`ನಾಳೆ ಭಾನುವಾರ. ಆಫೀಸಿಗೆ ರಜೆ. ಅಲಾರ್ಮ್ ಬಂದ್‌ ಮಾಡಿ ಮಲಗುವೆ.' ಎಂದು ಯೋಚಿಸುತ್ತ ಆಶಾ ಮೊಬೈಲಿ‌ನತ್ತ ಹೆಜ್ಜೆ ಹಾಕಿದಳು. ಬಳಿಕ ವಾಟ್ಸ್ ಆ್ಯಪ್‌ನ ಆಕರ್ಷಕ ಹಸಿರು ಗುಂಡಿಯ ಮೇಲೆ ಟಚ್‌ ಮಾಡಿದ್ದಳು. ಸ್ಕ್ರಾಲ್ಪ್ ಮಾಡುತ್ತಾ ಮಾಡುತ್ತಾ ಅನಾಮಧೇಯ ನಂಬರಿನಿಂದ ಬಂದ ಮೆಸೇಜ್‌ ಮೇಲೆ ಬೆರಳು ನಿಂತುಬಿಟ್ಟಿತು.

``ಹೇಗಿದ್ದೀಯಾ ಆಶಾ?'' ಅದನ್ನು ಓದಿ ಅದು ಯಾರ ಸಂದೇಶ ಎಂದು ಅವಳ ಅರಿವಿಗೆ ಬರಲಿಲ್ಲ. ಬಳಿಕ ಅವಳು ಡಿಪಿ ಮೇಲೆ ಕ್ಲಿಕ್‌ ಮಾಡಿದಾಗ ಅದು ಚಿರಪರಿಚಿತ ಎಂಬಂತೆ ಭಾಸವಾಯಿತು.

`ಹೇ! ಅವನು ಅನೂಪ್‌` ಆಶಾಳ ಮೆದುಳು ಆ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

``ಫೈನ್‌,'' ಎಂದು ಟೈಪ್‌ ಮಾಡಿ ಅವಳು ಹೆಬ್ಬೆಟ್ಟಿನ ಎಮೋಜಿಯೊಂದನ್ನು ಅದರ ಜೊತೆಗೆ ರವಾನಿಸಿದಳು.

``ಏನಾಯ್ತು? ಯಾರ ಮೆಸೇಜ್‌?'' ಅಮ್ಮ ಆಕಸ್ಮಿಕವಾಗಿ ಕೇಳಿದಾಗ, ತನ್ನ ಕಳ್ಳತನ ಪತ್ತೆಯಾಯಿತು ಎಂಬಂತೆ ಆಶಾಗೆ ಅನಿಸಿತು.

``ಯಾರದ್ದೋ ಮೆಸೇಜು. ಅಪರಿಚಿತ ನಂಬರಿನಿಂದ ಬಂದಿದೆ,'' ಎಂದು ಹೇಳಿ ಆಶಾ ವಿಷಯವನ್ನು ಬದಿಗಿಡಲು ನೋಡಿದಲು.

``ನೋಡು, ನಾಳೆ ಸೋಮುವನ್ನು 4 ಗಂಟೆಗೆ ಎಬ್ಬಿಸು. ಅವನಿಗೆ ಫೈನ್‌ ಎಗ್ಸಾಮ್ ಪ್ರಾಜೆಕ್ಟ್ ಕೆಲಸ ಮುಗಿಸಬೇಕಂತೆ. ಅವನಿಗೆ 1 ಕಪ್‌ ಚಹಾ ಕೂಡ ಮಾಡಿಕೊಡು. ಏಕೆಂದರೆ ಅವನಿಗೆ ನಿದ್ರೆಯ ಮಂಪರು ಬರದಿರಲಿ,'' ಅಮ್ಮ ಅವಳಿಗೆ ಆದೇಶ ನೀಡುತ್ತಾ ಮಲಗುವ ಕೋಣೆಗೆ ಹೊರಟರು.

ಅಲಾರ್ಮ್ ಬಂದ್‌ ಮಾಡಲು ಅವಳ ಕೈ ಒಮ್ಮೆಲೆ ನಿಂತುಬಿಟ್ಟಿತು. ಅವಳು ಮೊಬೈಲ‌ನ್ನು ಚಾರ್ಜಿಗೆ ಹಾಕಿದಳು. ಬ್ಯಾಟರಿ ಲೋ ಆಗಿ, ಮುಂಜಾನೆ ಸ್ವಿಚ್‌ ಆಫ್‌ ಆಗಿ ಅಲಾರ್ಮ್ ಆಗದಿದ್ದರೆ ಏನು ಮಾಡುವುದು? 4 ಗಂಟೆಗೆ ಅವನನ್ನು ಎಬ್ಬಿಸದಿದ್ದರೆ ಅವನು ಇಡೀ ದಿನ ಮುಖ ಊದಿಸಿಕೊಂಡು ಕೂತಿರುತ್ತಾನೆ. ಅಮ್ಮನೂ ಕೂಡ ಕೋಪ ಮಾಡಿಕೊಳ್ಳುತ್ತಾಳೆ. ಹೀಗೆಲ್ಲ ಯೋಚಿಸಿ ಅವಳಿಗೆ ರಾತ್ರಿಯಿಡೀ ನಿದ್ರೆಯೇ ಬರಲಿಲ್ಲ. ಅವಳಿಗೆ ನಿದ್ರೆ ಬರದೇ ಇರುವ ಕಾರಣ ಅನೂಪ್‌ ನ ಮೆಸೇಜ್‌ ಆಗಿತ್ತು.

ಆಶಾ ರಾತ್ರಿಯಿಡೀ ಅನೂಪ್‌ ಬಗ್ಗೆಯೇ ಯೋಚಿಸುತ್ತಿದ್ದಳು. ಅನೂಪ್‌ ಅವಳ ಕಾಲೇಜ್‌ ಕ್ಲಾಸ್‌ ಮೇಟ್‌ ಆಗಿದ್ದ. ಅವನ ಜೊತೆ ಆಗ ಇನ್ನಷ್ಟು ಸಮಯ ಕಳೆದಿದ್ದರೆ ಆ ಸ್ನೇಹ ಪ್ರೀತಿಯಲ್ಲಿ ಪರಿವರ್ತನೆ ಆಗಿಬಿಡ್ತಿತ್ತೋ ಏನೊ, ಕಾಲೇಜು ಶಿಕ್ಷಣದ ಬಳಿಕ ಅನೂಪ್ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ದೆಹಲಿಗೆ ಹೋದ. ಅವನ ಮುಂದೆ ಪ್ರೀತಿಯನ್ನು ವ್ಯಕ್ತಪಡಿಸಲೂ ಆಗಲಿಲ್ಲ. ಅವನ ಪ್ರತಿಕ್ರಿಯೆಯನ್ನು ಪಡೆಯಲೂ ಆಗಲಿಲ್ಲ. ಮನಸ್ಸಿನಲ್ಲಿದ್ದ ಪ್ರೀತಿ ಅಲ್ಲಿಯೇ ಹತ್ತಿಕ್ಕಲ್ಪಟ್ಟಿತು.

ಈ ಮಧ್ಯೆ ಆಶಾಳ ತಂದೆ ಅಪಘಾತವೊಂದರಲ್ಲಿ ತೀರಿಹೋದರು. ಅಮ್ಮನ ಜೊತೆ ತಮ್ಮ ಜವಾಬ್ದಾರಿಯೂ ಅವಳ ಕೊರಳಿಗೆ ಬಿತ್ತು. ಅಪ್ಪ ಹೋದ ಬಳಿಕ ಅಮ್ಮ ಆಗಾಗ ಅನಾರೋಗ್ಯ ಪೀಡಿತರಾಗತೊಡಗಿದರು. ಸೋಮು ಆಗ 6ನೇ ಕ್ಲಾಸಿನಲ್ಲಿ ಓದುತ್ತಿದ್ದ.

ಆಶಾಳಿಗೆ ತನ್ನ ತಂದೆಯ ನಿಧನಾನಂತರ ಅನುಕಂಪದ ನೌಕರಿ ಸಿಕ್ಕಿತು. ಅವಳು ಜೀವನದ ಜಂಜಾಟದಲ್ಲಿ ಸಿಲುಕುತ್ತಲೇ ಹೋದಳು. 10 ವರ್ಷಗಳ ಬಳಿಕ ಈಗ ಬಂದ ಅನೂಪ್‌ನ ಮೆಸೇಜ್‌ ಅವಳ ಹೃದಯದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ