ನಮ್ಮವರನ್ನು ಮರೆತು ಜೀವಿಸಲು ಕಲಿತುಕೊಳ್ಳಿ. ಕೋವಿಡ್‌ ಮೊದಲು ನಮ್ಮನ್ನು ಮನೆಯೊಳಗೆ ಬಂಧಿಯಾಗಿಸಿತು. ಈಗ ಅಕಾಲಿಕ ಸಾವುಗಳಿಂದ ನಮ್ಮರಲ್ಲಿ ಒಬ್ಬಿಬ್ಬರನ್ನು ಕಳೆದುಕೊಂಡು ಅವರ ಹೊರತಾಗಿ ಜೀವಿಸಲು ಅನಿವಾರ್ಯವಾಗಿಸಿದೆ. ಕೆಲವು ಕೋವಿಡ್‌ ಕಾರಣಗಳಿಂದ, ಮತ್ತೆ ಕೆಲವು ಸಾಮಾಜಿಕ ಕಾರಣಗಳಿಂದ ಈಗ ಸಂಬಂಧಿಕರೇ ಇಲ್ಲವಾದಂತಾಗಿದೆ. ಸ್ನೇಹಿತರು ಇಲ್ಲವಾಗಿದ್ದಾರೆ. ಕೋವಿಡ್‌ನಿಂದಾಗಿ ಯಾರಾದರೂ ಹೋಗಿಬಿಟ್ಟಿದ್ದರೆ ನಾವು ಏಕಾಂಗಿಯಾಗಿಯೇ ಅದನ್ನು ಭರಿಸಿಕೊಳ್ಳಬೇಕಿದೆ. ಭುಜದ ಮೇಲೆ ಯಾರ ಸಾಂತ್ವನದ  ಹಸ್ತ ನೋಡಲಾಗುವುದಿಲ್ಲ.

ಭಯದ ವಾತಾವರಣದಲ್ಲಿ ಜನ ಕಂಗಾಲಾಗುತ್ತಾರೆ. ಆಗ ಯಾರಾದರೂ ಬಂದು ಸಾಂತ್ವನ ತೋರಿದರೆ ಒಂದಿಷ್ಟು ಸಮಾಧಾನವಾಗ್ತಿತ್ತು. ಆದರೆ ಈಗ ಆ ದೃಶ್ಯ ಕಾಣ್ತಿತಲ್ಲ. ಕೋವಿಡ್‌ ಸಮಯದಲ್ಲಿ ಯಾರ ಕಡೆಗಾದರೂ ಹೋದರೆ, ನನಗೂ ಎಲ್ಲಿಯಾದರೂ ಕೋವಿಡ್‌ ತಗುಲಿಬಿಟ್ಟೀತು ಎಂಬ ಆತಂಕ ಕಾಡುತ್ತಿರುತ್ತದೆ. ಈಗ ಯಾರನ್ನೂ ಯಾರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಿಲ್ಲ.

ಭಯ ಎಷ್ಟಿದೆಯೆಂದರೆ, ಸತ್ತ ಬಳಿಕ ಮೃತ ಗೋವಿನಂತೆ ಕಸದ ಗಾಡಿಗೆ ಹಾಕಿಕೊಂಡು ಇತರೆ 4 ಶವಗಳ ಜೊತೆ ಸುಟ್ಟು ಹಾಕುವುದು ದೊಡ್ಡ ವಿಷಯವೇನಲ್ಲ.

`ನೀನು ಏಕಾಂಗಿಯಾಗಿ ಬಂದಿದ್ದೆ, ಏಕಾಂಗಿಯಾಗಿಯೇ ಹೋಗುವೆ,’ ಎಂದು ಸಮಾಜಕ್ಕೆ ಬೋಧಿಸಲಾಗಿದೆ. ಗೀತಾದಲ್ಲಿ ಹೇಳಿರುವ ಪ್ರಕಾರ, ಬಂಧುಬಾಂಧವರು ಎಲ್ಲ ಸುಳ್ಳು. ಅರ್ಜುನನ ಮನಸ್ಸು ಕೂಡ ಗೀತಾ ಪುನರುಚ್ಚರಿಸುವಂತಿದೆ, “ನೀನಿಲ್ಲಿ ಸಾಯುವೆ, ನೀನಂತೂ ಮೊದಲೇ ಸತ್ತು ಹೋಗಿರುವೆ. ನೀನು ಸತ್ತು ಹೋದರೂ ನಿನ್ನ ಆತ್ಮ ಸಾಯುವುದಿಲ್ಲ. ಆತ್ಮ ನಶ್ವರ!”

ಈಗ ದಿನ ಹೇಳಲಾಗುತ್ತಿರುವ ವಿಷಯವೆಂದರೆ ನಿಮ್ಮ ಬಗೆಗಷ್ಟೇ ಯೋಚಿಸಿ, ಬೇರೆಯವರ ಬಗ್ಗೆ ಚಿಂತಿಸದಿರಿ. ಬೇರೆಯವರಿಗೆ ಪ್ರಾಣ ಕೊಡುವ ಬಗ್ಗೆ ಮಾತಾಡಬೇಡಿ. ಗೀತಾದ ಸಾರವೆಂದರೆ, ಸಂಕಷ್ಟ ಬಂದಾಗ ನಮ್ಮ ಬಗೆಗಷ್ಟೇ  ನಾವು ಯೋಚಿಸಬೇಕು.

ಲಾಕ್‌ ಡೌನ್‌ ಕಾರಣದಿಂದ ಜನರು ತಮ್ಮ ಸಂಬಂಧಿಕರು, ಸ್ನೇಹಿತರನ್ನು ಕಳೆದುಕೊಂಡಾಗ ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳಲಾಗದು. ಮೇಲಾಗಿ ಕೋವಿಡ್‌ ಭಯ. ಮೂರನೆಯದು ಕಳೆದ 10 ವರ್ಷಗಳಿಂದ ಬೋಧಿಸಿದ ಧರ್ಮದ ಪಾಠದ ಪರಿಣಾಮ ಏನೆಂದರೆ, ನಾವು ಏಕಾಂಗಿಯಾಗಿದ್ದೇವೆ, ಏನಾದರೂ ಆದರೆ ಏನು ಮಾಡುವುದು, ಅದು ಕೋವಿಡ್‌ಗಿಂತ ಭಯಾನಕ.

ವಾಸ್ತವದಲ್ಲಿ ಏಕಾಂಗಿಯಾದವರನ್ನು ಯಾರು ವಿಚಾರಿಸಿಕೊಳ್ಳಲು ಆಗುತ್ತಿಲ್ಲ. ಒಂದಿಷ್ಟು ಪರಿಚಿತರು ಸೇರಿ ವಾಟ್ಸ್ ಆ್ಯಪ್‌ ಗ್ರೂಪ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ, ಟ್ವೀಟರ್‌ ಖಾತೆ ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೈ ಜೋಡಿಸಿದ ಚಿಹ್ನೆ ಹಾಕಿ ಇತಿಶ್ರೀ ಹಾಡುತ್ತಾರೆ.

ಸತ್ತವರ ಕುಟುಂಬದವರು ತಮ್ಮನ್ನು ತಾವು ಹೇಗೆ ಸಂಭಾಳಿಸಿಕೊಳ್ಳುತ್ತಾರೆ ಎನ್ನುವುದರ ಮಾಹಿತಿಯನ್ನು ಯಾರೂ ಪಡೆಯುತ್ತಿಲ್ಲ. ಫೋನ್‌ನಲ್ಲಿ 2 ಸಾಂತ್ವನದ ಮಾತುಗಳು ಸಿಗುವುದಿಲ್ಲ. ಏಕೆಂದರೆ ಬಂದ ಮೆಸೇಜ್‌ಗಳಿಗೆ ಉತ್ತರಿಸಲು, ಗುಡ್ ಮಾರ್ನಿಂಗ್‌ ಹೇಳಲು, ಮೆಸೇಜ್‌ ಡಿಲೀಟ್‌ ಮಾಡುವುದರಲ್ಲಿಯೇ ಕಳೆದುಹೋಗುತ್ತದೆ. ಫೋನ್‌ ಮಾಡಿದರೆ ಯಾರು ಏನು ಕೆಲಸ ಹೇಳಿಬಿಡುತ್ತಾರೋ? ನಿಮಗಾಗಿ ಜೀವಿಸಿ ಎಂದು ಧರ್ಮ ಹೇಳ್ತಿದೆ.

ನಮ್ಮವರನ್ನು ಬಿಟ್ಟು ಜೀವಿಸುವುದು ಕಷ್ಟಕರ. ಆದರೆ ಅದು ಅನಿವಾರ್ಯ. ಆನ್‌ಲೈನ್‌ ಕ್ಲಾಸ್‌ಗಳಲ್ಲಿ ಗಾರ್ಡನಿಂಗ್‌, ನಿಟ್ಟಿಂಗ್‌, ಕುಕ್ಕಿಂಗ್‌, ಡ್ಯಾನ್ಸಿಂಗ್‌ ಬಗ್ಗೆ ಕಲಿಸಲಾಗುತ್ತದೆ. ಅದರ ವಿವರವನ್ನು ಅನವಶ್ಯಕವಾಗಿ ಫೇಸ್‌ ಬುಕ್‌ನಲ್ಲಿ, ವಾಟ್ಸ್ ಆ್ಯಪ್‌ನಲ್ಲಿ ಹಾಕಿ, ಅಪರಿಚಿತರನ್ನು ಪರಿಚಯಿಸಿಕೊಂಡು ಅವರಿಂದ ವಾಹ್…ವಾಹ್….! ಎಂದು ಕರೆಯಿಸಿಕೊಳ್ಳುವುದೇ ನಿಜವಾದ ಸುಖ ಎನಿಸುತ್ತದೆ. ಅದೇ ಜೀವನದ ಉದ್ದೇಶವಾಗಿದೆ.

ಈಗ ನಾವೇ ಸ್ವತಃ  ಗಳಿಸುವ ಸೂತ್ರ ಕಲಿತುಕೊಳ್ಳಬೇಕಿದೆ. ಒಂದೊಳ್ಳೆ ವಿಷಯವೆಂದರೆ, ಆನ್‌ ಲೈನ್‌ನಲ್ಲಿ ಬಹಳಷ್ಟು ವಿಧ, ಬಹಳಷ್ಟು ಕೆಲಸಗಳಿವೆ. ಉದ್ಯಮಿಗಳಿಗೂ ಇಂಥವರ ಅವಶ್ಯಕತೆ ಇದೆ. ಮನೆಯಲ್ಲಿದ್ದುಕೊಂಡೇ ಅವರ ಕೆಲಸ ಮಾಡಿಕೊಡಬೇಕು. ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ ಮಾಡಲು ಸಿದ್ಧರಿರಿ. ಅದು ನಿಮಗೆ ಒಂದಿಷ್ಟು ಹಣ ದೊರಕಿಸಿಕೊಡುತ್ತದೆ. ಸಮಾಜದೊಂದಿಗೆ ನಿಮ್ಮನ್ನು ಜೋಡಿಸಿರುತ್ತದೆ.

ಕೋವಿಡ್‌ ಮತ್ತು ಆಡಳಿತಾರೂಢರ ಸಂಪ್ರದಾಯವಾದಿಗಳ ಧರ್ಮ ನಮ್ಮನ್ನು ಸ್ಪರ್ಧಿಗಳನ್ನಾಗಿ ಮಾಡುತ್ತಿದೆ. ನಾವು ಇದೇ ಸಮಾಜದಲ್ಲಿ ಇರುವ ಅಭ್ಯಾಸ ಮಾಡಿಕೊಳ್ಳಬೇಕು. ಸಮಾಜ ಬದಲಾಗುವುದಿಲ್ಲ ಎನ್ನುವುದು ಖಚಿತ.

ಚೂರುಚೂರಾಗುತ್ತಿರು ಭವಿಷ್ಯದ ಕನಸುಗಳು

akele-rahana-hoga-2

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 12ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿದೆ ಹಾಗೂ ಸಿಬಿಎಸ್‌ಇಯ ಪರೀಕ್ಷೆಗಳನ್ನು ನಡೆಸದೆಯೇ ವಿದ್ಯಾರ್ಥಿಗಳನ್ನು 12ನೇ ತರಗತಿಗೆ ಕಳಿಸಲಾಯಿತು. ಇದು ಪೋಷಕರಿಗೆ ಸ್ವಲ್ಪ ನಿರಾಳತೆ ಕೊಟ್ಟಿರಬಹುದು. ಆದರೆ ಇದು ಬಹುದೊಡ್ಡ ಹೊರೆ.

12ನೇ ತರಗತಿಗಳನ್ನು ಮುಂದೂಡುವುದರ ಅರ್ಥ ಮುಂದಿನ ಪ್ರವೇಶ ಬಂದ್‌. ಕಾಲೇಜುಗಳು, ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ಗಳು, ವಿದೇಶಿ ಕಾಲೇಜುಗಳಲ್ಲಿ ನೂರಾರು ಅಡ್ಮಿಷನ್‌ಗಳು 12ನೇ ಪರೀಕ್ಷೆಯ ಫಲಿತಾಂಶವನ್ನು ಅವಲಂಬಿಸಿರುತ್ತವೆ. ಈ ಪರೀಕ್ಷೆ ಅವರಿಗಷ್ಟೇ ಅಲ್ಲ, ಅವರ ತಾಯಿತಂದೆಯರಿಗೂ ಅಗ್ನಿಪರೀಕ್ಷೆ, ದೊಡ್ಡ ಖರ್ಚು ಕೂಡ. ಒಂದೆರಡು ತಿಂಗಳಲ್ಲಿ ಪರೀಕ್ಷೆ ನಡೆಯಬಹುದು. ಅಲ್ಲಿಯವರೆಗೆ ಸಿದ್ಧತೆ ಮುಂದುವರಿಸಬೇಕು.

ಈ ಮಧ್ಯೆ ಅದೆಷ್ಟೋ ಕಡೆ ಪ್ರವೇಶ ಪರೀಕ್ಷೆಗಳ ಷೆಡ್ಯೂಲ್ ‌ಇವೆ. ಕೆಲವು ಮುಂದೂಡಲ್ಪಡಬಹುದು, ಮತ್ತೆ ಕೆಲವು ಆಗಲಿಕ್ಕಿಲ್ಲ. ಪ್ರವೇಶ ಪರೀಕ್ಷೆ ಬಂದಾಗ ಕೆಲವು ದಿನಾಂಕಗಳು ಕ್ಲ್ಯಾಶ್‌ ಆಗಬಹುದು. ವಿದ್ಯಾರ್ಥಿಗಳು ಫಾರ್ಮ್ ತುಂಬುವಾಗ ಡೇಟ್‌ ಕ್ಲ್ಯಾಶ್ ಆಗುವುದಿಲ್ಲ ಎಂದು ಅಂದುಕೊಂಡಿರುತ್ತಾರೆ. ಹೊಸದಾಗಿ ದಿನಾಂಕ ನಿಗದಿಪಡಿಸಿದಾಗ ಡೇಟ್ಸ್ ಕ್ಲ್ಯಾಶ್‌ ಆಗುವುದು ಖಚಿತ.

ಶಿಕ್ಷಣ ಈಗ ಉದ್ಯಮ ರೂಪ ಪಡೆದು ಲಾಭದಾಯಕ ಉದ್ಯಮಗಳಲ್ಲಿ ಒಂದೆನಿಸಿದೆ. ಅದು ಅತ್ಯಂತ ಕ್ರೂರ ಹಾಗೂ ಲೂಟಿಕೋರ ಅನಿಸಿಕೊಂಡಿದೆ. ಇಲ್ಲಿ ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ. ಹೀಗಾಗಿ ಇಲ್ಲಿ ತಮ್ಮ ಲಾಭದ ಲೆಕ್ಕಾಚಾರದನ್ವಯ ದಿನಾಂಕ ನಿಗದಿಪಡಿಸುತ್ತಾರೆ. ಕೋವಿಡ್‌ ಕಾರಣದಿಂದ ವಿದ್ಯಾರ್ಥಿಗಳಿಗೆ ಡೇಟ್‌ ಕ್ಲ್ಯಾಶ್‌ನಿಂದಾಗಿ ಸಮಸ್ಯೆ ಆಗಬಹುದು ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಪ್ರತಿಯೊಬ್ಬ ವ್ಯಾಪಾರಿಗೂ ತಮ್ಮದೇ ಲಾಭದ ಚಿಂತೆ. ಇದರಿಂದ ಪೋಷಕರ ಜೇಬು ಖಾಲಿ ಆಗುತ್ತಿದೆ. ಅಷ್ಟೇ ಅಲ್ಲ, 1 ವರ್ಷ ವ್ಯರ್ಥ ಕೂಡ ಆಗಲೇ ಜೀವನವಿಡೀ ದಾರಿ ಮುಚ್ಚಿಹೋಗಬಹುದು. ಪ್ರತಿಯೊಂದು ಸಂಸ್ಥೆ ತನ್ನ ನಿಯಮ ರೂಪಿಸಿಕೊಳ್ಳುತ್ತದೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಅವನ್ನು ಬದಲಿಸಿಕೊಳ್ಳುತ್ತವೆ. ಹಳೆಯ ವೇಳಾಪಟ್ಟಿಯ ಪ್ರಕಾರ, ವಿದ್ಯಾರ್ಥಿಗಳು ಯಾವ ಕೋರ್ಸ್‌ ಆಯ್ದುಕೊಂಡಿದ್ದರೊ ಅದರಲ್ಲಿ ಗೊಂದಲವಾಗುತ್ತದೆ. ಕೋವಿಡ್‌ಗಿಂತಲೂ ಶಿಕ್ಷಣ ಸಂಸ್ಥೆಗಳ ನಿಯಮಗಳ ಭಯ ಅವರನ್ನು ಕಾಡುತ್ತದೆ. ಕೋವಿಡ್‌ನಿಂದ ಅವರು ಬದುಕುಳಿಯುತ್ತಾರೆ. ಆದರೆ ಶಿಕ್ಷಣ ಸಂಸ್ಥೆಗಳ ದ್ವಂದ್ವ ಅವರನ್ನು ಮುಳುಗಿಸುತ್ತದೆ.

ಶಿಕ್ಷಣ ಸಂಸ್ಥೆಗಳ ಸೀಟುಗಳು ಬೇಡಿಕೆಗಿಂತ ಕಡಿಮೆ ಇವೆ. ಶಿಕ್ಷಣ ಸಂಸ್ಥೆಗಳು ಒಂದಿಷ್ಟು ಧಾರಾಳತನ ತೋರಿಸಬೇಕೆಂಬ ಆದೇಶ ಬಂದರೆ, ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ತಮ್ಮಿಷ್ಟದ ಸೀಟುಗಳನ್ನು ಕಳೆದುಕೊಳ್ಳುತ್ತಾರೆ. ಯುವ ಜನಾಂಗದ ಪ್ರೀತಿ ಪ್ರೇಮ ಕೂಡ ಹೊಡೆತ ಅನುಭವಿಸುತ್ತಿದೆ. ಒಂದೆಡೆ ಕೋವಿಡ್‌ನ ಕಾರಣದಿಂದ ಭೇಟಿಗೆ ಕೊಕ್ಕೆ ಬೀಳುತ್ತಿದೆ. ಮೇಲಾಗಿ 12ನೇ ತರಗತಿಗಳಷ್ಟೇ ಅಲ್ಲ, ಬಿ.ಎ., ಎಂ.ಎ. ಮುಂತಾದ ಪರೀಕ್ಷೆಗಳು ಮುಂದೂಡಲ್ಪಡುವ ಕಾರಣದಿಂದ ನೌಕರಿ ಮಾಡಿ ಮನೆ ನಡೆಸಬೇಕೆಂಬ ಕನಸು ಚೂರು ಚೂರಾಗುತ್ತಿದೆ.

ಕೋವಿಡ್‌ನ ಒಂದು ಹೊಡೆತ ಖಾಸಗಿ ಸಂಬಂಧಗಳ ಮೇಲಂತೂ ಉಂಟಾಗುತ್ತಿದೆ. ಅದರ ಮೇಲೆ ಸರ್ಕಾರಿ ಹಸ್ತಕ್ಷೇಪ ನೇರವಾಗಿಯಂತೂ ಇರುವುದಿಲ್ಲ.

ಒಂದು ಚಿಕ್ಕ ರೋಗ ಎಷ್ಟೊಂದು ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಬಹುದು ಎನ್ನುವುದು ಇಂದಿನ ಯುವ ಪೀಳಿಗೆಗೆ ಗೊತ್ತಾಗುತ್ತಿದೆ. ಯೂರೋಪ್‌ ಇದನ್ನು 1939-1945 ರಲ್ಲಿ ವಿಯೆಟ್ನಾಂ ಮತ್ತು ಕಾಂಬೋಡಿಯಾ 60-70 ದಶಕದಲ್ಲಿ ಅನುಭವಿದ್ದ. ಸಿರಿಯಾ ಈಗ ಅದನ್ನು ಅನುಭವಿಸುತ್ತಿದೆ. ಇಲ್ಲಿ ರಕ್ತಪಾತ ಆಗುತ್ತಿಲ್ಲ. ಹಣದ ಲೂಟಿ ಆಗುತ್ತಿದೆ. ಸಾವುಗಳು ಸಂಭವಿಸುತ್ತಿವೆ ಮತ್ತು ಭವಿಷ್ಯದ ಕನಸುಗಳೂ ಚೂರುಚೂರಾಗುತ್ತಿವೆ.

ಇಲ್ಲಿ ಎಲ್ಲ ಪಾಪ ತೊಳೆಯಲ್ಪಡುತ್ತದೆ

ಹೆಂಡತಿ ಹೇಗಿರಬೇಕೆಂದರೆ, ಉತ್ತರ ಪ್ರದೇಶದ ಮಾಜಿ ಶಾಸಕ ಕುಲದೀಪ್‌ ಸಿಂಗ್‌ರ ಪತ್ನಿಯ ಹಾಗೆ, ಗಂಡ ರೇಪ್‌ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲಿಗೆ ಹೋಗಿದ್ದರೂ, ಪತಿಯ ಬಗ್ಗೆ ಸಮರ್ಪಿತರಾಗಿದ್ದಾರೆ ಹಾಗೂ ಅವರ ಪಾರ್ಟಿಯ ಬಗೆಗೂ.

ಭಾಜಪಾ ಆ ವ್ಯಕ್ತಿಯ ಪತ್ನಿಗೆ ಪಂಚಾಯತ್‌ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟಿತ್ತು. ಆ ವ್ಯಕ್ತಿಯ ವಿರುದ್ಧ ಒಂದಕ್ಕಿಂತ ಒಂದು ಗಂಭೀರ ಆರೋಪಗಳಿದ್ದವು. ನ್ಯಾಯಾಲಯ ಶಿಕ್ಷೆ ಕೂಡ ವಿಧಿಸಿತ್ತು.

ಭಾಜಪಾ ತನ್ನನ್ನು ತಾನು ವಾಸ್ತವದಲ್ಲಿ ಅಮೃತದಂತೆ ಭಾವಿಸುತ್ತದೆ. ಅದು ಪ್ರತಿಯೊಂದು ಪಾಪಕ್ಕೂ ಮುಕ್ತಿ ಕೊಡುತ್ತದೆ ಎಂಬಂತೆ ಕುಲದೀಪ್‌ ಸಿಂಗ್‌ರ ಕುಕೃತ್ಯಗಳಿಗೆ ತಕ್ಕ ಶಿಕ್ಷೆ ಕೊಡುವ ಬದಲು, ಆತನ ಪತ್ನಿಗೆ ಟಿಕೆಟ್‌ ಕೊಡುವುದರ ಮೂಲಕ ರೇಪ್ ಹತ್ಯೆಯಂತಹ ವಿಷಯಗಳು ಗಂಭೀರವಲ್ಲ, ಆ ವ್ಯಕ್ತಿ ಬಿಜೆಪಿಯಲ್ಲಿದ್ದರೆ ಎನ್ನುವುದನ್ನು ಸಾಬೀತುಪಡಿಸಿದ.

ಒಬ್ಬ ಪತ್ನಿ ತನ್ನ ಕುಖ್ಯಾತ ಪತಿಯ ಬಗ್ಗೆ ನಿಷ್ಠೆಯಿಂದಿರಬೇಕು. ಜನ್ಮಾಂತರದ ಬಂಧನ ರೇಪ್‌ ಹತ್ಯೆಯಂತಹ ಸಣ್ಣ ಘಟನೆಯಿಂದ ತುಂಡರಿಸಲ್ಪಡಬಾರದು ಎಂದೂ ಪಾರ್ಟಿ ಹೇಳುತ್ತದೆ.

ಅಂದಹಾಗೆ, ಪಾರ್ಟಿ ಮನ್ನಿಸುವುದೆಂದರೆ, ಯಾರು ಧರ್ಮಕ್ಕೆ ಶರಣಾಗುತ್ತಾರೊ, ಅವರು ವಿಭೀಷಣ ಇಲ್ಲಿ ಸುಗ್ರೀವ ಯಾರೇ ಆಗಿರಬಹುದು. ನಮ್ಮವರಾಗಿ ಬಿಡುತ್ತಾರೆ. ಅವರ ಎಲ್ಲ ಪಾಪಗಳೂ ತೊಳೆಯಲ್ಪಡುತ್ತವೆ. ಕುಂತಿ ಹಾಗೂ ದ್ರೌಪದಿಯವರ ಪಾಪ. ಕೃಷ್ಣನಿಗೆ ನಿಕಟರಾದ ಬಳಿಕ ತೊಳೆಯಲ್ಪಟ್ಟಿತ್ತಲ್ಲ…… ಕುಲದೀಪ್‌ ಸಿಂಗ್‌ಗೆ ದೇಶದ ನ್ಯಾಯಾಲಯಗಳು ಅಪರಾಧಿ ಎಂದು ಘೋಷಿಸಿವೆ. ಆದರೆ ಪಾರ್ಟಿಯಾಗಲಿ, ಪತ್ನಿಯಾಗಲಿ ಅಲ್ಲಲ್ಲ.

ಕುಲದೀಪ್‌ ಸಿಂಗ್‌ರನ್ನು ಭೇಟಿಯಾಗಲು ಸಂಸದೆ ಸಾಕ್ಷಿ ಮಹಾರಾಜ್‌ಜೇಲಿಗೆ ಹೋಗಿದ್ದರು. ಸುಖಿಯಾಗಿರಿ, ಶೀಘ್ರ ಮುಕ್ತಿ ದೊರಕುತ್ತದೆ ಎಂದು ಹೇಳಲು ಅವರು ಯಾವುದೇ ದಲಿತ, ಕಾಂಗ್ರೆಸ್‌ ಅಥವಾ ಕಮ್ಯುನಿಸ್ಟ್ ಇಲ್ಲಿ ಲಾಲೂ ಪ್ರಸಾದ್‌ ಅಲ್ಲಲ್ಲ, ವರ್ಷಾನುವರ್ಷ ಜೈಲಿನಲ್ಲೇನೂ ಇರುವುದಿಲ್ಲ.

ಭಾರತೀಯ ಜನತಾ ಪಾರ್ಟಿಗೆ ಕೆಡುಕು ಎನಿಸಿದ್ದೇನೆಂದರೆ, ಭ್ರಷ್ಟಾಚಾರದ ತತ್ವಗಳು ಪತ್ನಿಯ ನಿಷ್ಠೆ ಹಾಗೂ ಸಮರ್ಪಣೆಯನ್ನು ಗೌರವಿಸಲಿಲ್ಲ ಹಾಗೂ ಪಂಚಾಯತ್‌ ಚುನಾವಣೆಯಲ್ಲಿ ಆಕೆಗೆ ಟಿಕೆಟ್‌ ಕೊಡುವುದರ ಬಗ್ಗೆ ಆಕ್ಷೇಪ ಎತ್ತಿತ್ತು. ಈಶ್ವರ್‌ರಂಥ ಸಂರಕ್ಷಕನಿರುವುದರ ಹೊರತಾಗಿಯೂ ಸಂಗೀತಾ ಸಿಂಗ್‌ಗೆ ಟಿಕೆಟ್‌ ಕೊಡಲಾಗಿರಲಿಲ್ಲ. ಆದರೆ ಒಂದು ಖಚಿತ ವಿಷಯವೆಂದರೆ, ಅಪರಾಧಿ ಅಪರಾಧ ಮುಕ್ತನಾಗಿದ್ದಾನೆ. ಹತ್ಯೆ, ಅತ್ಯಚಾರದಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ