ಗಂಡ : ಅಕಸ್ಮಾತ್‌ ನಾನು ತಪ್ಪಿಸಿಕೊಂಡ್ರೆ ಏನು ಮಾಡ್ತೀಯಾ?

ಹೆಂಡತಿ : ಪೇಪರ್‌ನಲ್ಲಿ ಜಾಹೀರಾತು ಕೊಡ್ತೀನಿ.

ಗಂಡ : ವಾವ್‌! ಏನಂತ ಕೊಡ್ತೀಯಾ?

ಹೆಂಡತಿ : ಗಂಡ ಬೇಕಾಗಿದ್ದಾನೆ!

ಪತ್ನಿ : ಏನು ಮಾಡ್ತಿದ್ದೀರಿ?

ಪತಿ : ಸೊಳ್ಳೆ ಹೊಡೆದು ಸಾಯಿಸಿದೆ.

ಪತ್ನಿ : ಇದುವರೆಗೂ ಎಷ್ಟು ಸಾಯಿಸಿದಿರಿ?

ಪತಿ : 3 ಗಂಡು, 2 ಹೆಣ್ಣು ಸೊಳ್ಳೆಗಳು.

ಪತ್ನಿ : ಗಂಡು, ಹೆಣ್ಣು ಅಂತ ಹೇಗೆ ಹೇಳ್ತೀರಿ?

ಪತಿ : 3 ಸೊಳ್ಳೆಗಳು ನನ್ನ ಬಾಟಲ್ ಬಳಿ, 2 ನಿನ್ನ ಡ್ರೆಸ್ಸಿಂಗ್‌ ಟೇಬಲ್ ಬಳಿ ಇದ್ದವು.

ಪತ್ರಕರ್ತ : ನಿಮ್ಮ ಸಾಧನೆಗಳ ಬಗ್ಗೆ ಎಲ್ಲರಿಗೂ ಬಹಳ ಖುಷಿ ಇದೆ, ಹೆಮ್ಮೆ ಇದೆ. ಎಲ್ಲರೂ ನಿಮ್ಮನ್ನು ಭಾರತಮಾತೆಯ ಹೆಮ್ಮೆಯ ಪುತ್ರಿ ಅನ್ನುತ್ತಾರೆ.... ಈ ಬಗ್ಗೆ ನಿಮ್ಮ ಅಭಿಪ್ರಾಯ?

ನವ ನಟಿ : ಛೇ....ಛೇ...! ಈ ಮಾತನ್ನು ನಾನು ಒಪ್ಪೋದಿಲ್ಲ. ನಾನೇನಿದ್ದರೂ ಮಂಗಲಾದೇವಿಯ ಪುತ್ರಿ ಅಂತ ಎಲ್ಲರಿಗೂ ಅರ್ಥ ಆಗೋ ಹಾಗೇ ಬರೆದುಬಿಡಿ!

ರಾಮು : ಪ್ರತಿಭಟನೆ, ಮುಷ್ಕರ ನಡೆದಾಗೆಲ್ಲ ಹಾಲಿನವರು ರಸ್ತೆಗೆ ಲೀಟರ್‌ ಗಟ್ಟಲೆ ಹಾಲು ಸುರೀತಾರೆ!

ಸೋಮು : ಅದೇ ರೀತಿ ಸ್ಟ್ರೈಕ್‌ ನಡೆದಾಗೆಲ್ಲ ಟೊಮೇಟೊ ಬೆಳೆಗಾರರು ರಸ್ತೆಗೆ ಕೇಜಿಗಟ್ಟಲೇ ಟೊಮೇಟೊ ಸುರೀತಾರೆ.

ಗುಂಡ : ಆದರೆ ಪ್ರತಿ ಸಲ ಸ್ಟ್ರೈಕ್‌ ಮಾಡಿದಾಗಲೂ, ಈ ಬ್ಯಾಂಕಿನವರು ಮಾತ್ರ ಹೀಗೇನೂ ಮಾಡೋದಿಲ್ಲವಲ್ಲ.....?

ಗುಂಡ ತನ್ನ ಲವರ್‌ ಗುಂಡಿ ಜೊತೆ ಚಾಟ್‌ ಮಾಡುತ್ತಿದ್ದ.......

ಗುಂಡ : ಪ್ರಿಯೆ.... ಪ್ರಾಣಕಾಂತೆ.... ಮಲಗಿದ್ದರೆ ಕನಸಗಳನ್ನು ಮೆಸೇಜ್‌ ಮಾಡು. ಎಚ್ಚರವಾಗಿದ್ದರೆ ನಮ್ಮ ಪ್ರೇಮದ ಸವಿ ನೆನಪುಗಳನ್ನು ಕಳುಹಿಸು..... ನಗುತ್ತಿದ್ದರೆ ಖುಷಿ ಕಳುಹಿಸು.... ಅಳುತ್ತಿದ್ದರೆ ಕಂಬನಿಯ ಧಾರೆ ಕಳುಹಿಸು.... ಒಟ್ಟಾರೆ...

ಗುಂಡಿ : ಏ ಮಂಗ್ಯಾ.... ನಾನು ಪಾತ್ರೆ ತೊಳೀತಿದ್ದೀನಿ..... ಅದರ ಬಚ್ಚಲು ನೀರು ಕಳುಹಿಸಲೇನು?

ಗುಂಡ ಆಫ್‌ ಲೈನ್‌ ಆಗಿಹೋದ!

ರಂಗ : ಡಿಯರ್‌, ಐ ಲವ್ ಯೂ! ನನ್ನ ಮದುವೆ ಆಗ್ತೀಯಾ?

ರಂಗಿ : ಎಷ್ಟಯ್ಯ ನಿನ್ನ ಸಂಬಳ?

ರಂಗ : 10 ಸಾವಿರ!

ರಂಗಿ : ಛೀ....ಛೀ! ಅದು ನನ್ನ ತಿಂಗಳ ಸೋಪು ಶ್ಯಾಂಪೂ ಖರ್ಚಿಗೂ ಸಾಕಾಗೋಲ್ಲ.

ರಂಗ : ಯಾಕೆ? ನೀನು ಅಷ್ಟೊಂದು ಕೊಳಕಾ?

ಸೀನ : ಮದುವೆಯಲ್ಲಿ ಗಂಡಿಗಿಂತ ಹೆಣ್ಣಿನ ವಯಸ್ಸು ಕಡಿಮೆ ಇರಬೇಕು ಅಂತ ಯಾಕೆ ಹೇಳ್ತಾರೆ ಗೊತ್ತಾ?

ನಾಣಿ : ಚಿಕ್ಕವರು ಹೊಡೆದರೂ ದೊಡ್ಡವರು ಹೊಡೆಯಬಾರದು ಅಂತ....!

ತಿಮ್ಮ : ನಿನ್ನೆ ದಾರೀಲಿ ಬರೋವಾಗ ನನ್ನ ಹೆಂಡತಿ ಕಣ್ಣಿಗೆ ಧೂಳಿನ ಕಣ ಬಿತ್ತು ಕಣೋ.... ಅದನ್ನು ತೆಗೆಸೋಕ್ಕೆ ಆ ಡಾಕ್ಟರ್‌/ ರೂ. ಚಾರ್ಜ್‌ ಮಾಡಿದ್ರು, ಹೊಟ್ಟೆ ಉರಿದು ಹೋಯಿತು ಕಣಯ್ಯ.

ನಿಂಗ : ನೀನೇ ಪುಣ್ಯವಂತ ಬಿಡಯ್ಯ. ನಿನ್ನೆ ದಾರೀಲಿ ಬರೋವಾಗ ಜವಳಿ ಅಂಗಡಿಯ 5000/ ರೂ. ರೇಷ್ಮೆ ಸೀರೆ ನನ್ನ ಹೆಂಡತಿ ಕಣ್ಣಿಗೆ ಬೀಳಬೇಕೇ.......?

ಒಬ್ಬ ಅಜ್ಜಿ ದಿನಾ ಲಾಂಗ್‌ ಡ್ರೈವ್ ‌ಹೊರಡುವ ಬಸ್ಸಿನಲ್ಲಿ ಸ್ಟಾರ್ಟಿಂಗ್‌ ಪಾಯಿಂಟ್‌ ಏರಿ, ಕೊನೆ ಸ್ಟಾಪ್‌ನಲ್ಲಿ ಇಳಿಯುವಾಗ ಮರೆಯದೆ ಕಂಡಕ್ಟರ್‌ ಕೈಗೆ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿ ಕೊಡುತ್ತಿರುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ