ಮೂಢನಂಬಿಕೆಗಳಿಂದ ಹೊರಬಂದು ವಾಸ್ತವ ಜಗತ್ತಿನಲ್ಲಿ ಬದುಕಿ ಎಂದು ವಿಚಾರವಂತರು ಹೇಳಿದ್ದಾರೆ. ಆದರೆ ಇಂದಿನ ಅರ್ಧ ಜನಸಂಖ್ಯೆಯಷ್ಟಿರುವ ಮಹಿಳೆಯರಿಗೆ ಈ ಸಂಗತಿ ಗಮನಕ್ಕೆ ಬರುವುದೇ ಇಲ್ಲ. ಧಾರ್ಮಿಕ ಮೂಢನಂಬಿಕೆಯ ಕಾರಣಗಳಿಂದ ಕಪೋಲಕಲ್ಪಿತ ಶಕ್ತಿಗಳ ಮೇಲೆ ವಿಶ್ವಾಸವಿರಿಸಿ ತಮ್ಮ ಹಣ ಹಾಗೂ ಸಾಮರ್ಥ್ಯವನ್ನು ವ್ಯರ್ಥಗೊಳಿಸಿಕೊಳ್ಳುತ್ತಿದ್ದಾರೆ.
ಎಲ್ಲಕ್ಕೂ ದೊಡ್ಡ ವಿಡಂಬನೆಯೆಂದರೆ, ಓದುಬರಹ ಬಲ್ಲ, ಆರ್ಥಿಕ ಸಾಮರ್ಥ್ಯವುಳ್ಳ ಮಹಿಳೆಯರೇ ಹೆಚ್ಚಾಗಿ ಅದರಲ್ಲಿ ನಂಬಿಕೆಯಿಡುತ್ತಿದ್ದಾರೆ. ಇದರ ಪರಿಣಾಮವೆಂಬಂತೆ ಎಲ್ಲ ವರ್ಗದ ಮಹಿಳೆಯರು ಶೋಷಣೆಗೆ ತುತ್ತಾಗುತ್ತಿದ್ದಾರೆ. ಮತ್ತೆ ಕೆಲವರು ಸ್ವೇಚ್ಛೆಯಿಂದ ತಮಗೆ ತಾವೇ ಹಾನಿ ತಂದುಕೊಳ್ಳುತ್ತಿದ್ದಾರೆ.
ಪರಂಪರೆ ಹಾಗೂ ಆವಸ್ಥೆಯ ಹೆಸರಿನಲ್ಲಿ ಲಕ್ಷ ಲಕ್ಷ ಲೂಟಿಗೊಳಗಾಗಿ ವಾಸ್ತವದಲ್ಲಿದ್ದು ಪರೋಕ್ಷ ಸುಧಾರಣೆಯ ಕರ್ಮದಲ್ಲಿ ತಮ್ಮ ವಾಸ್ತವ ಲೋಕಕ್ಕೆ ಚ್ಯುತಿ ತಂದುಕೊಳ್ಳುತ್ತಿದ್ದಾರೆ.
ಕೆಲವರು ಹೊಟ್ಟೆಪಾಡಿಗಾಗಿ ದೇವರ ಮೂರ್ತಿಗಳ ವ್ಯವಹಾರ ಮಾಡುತ್ತಾರೆ. ಅವರಿಗೆ ಅದರಿಂದ ಅಷ್ಟೇನೂ ಲಾಭ ಬರುವುದಿಲ್ಲ. ಆದರೆ ಆ ಮೂರ್ತಿಗಳ ಹೆಸರಿನಲ್ಲಿ ಸೋಮಾರಿ ವ್ಯಕ್ತಿ ಅದರ ದುರ್ಲಾಭ ಪಡೆದುಕೊಳ್ಳುತ್ತಾನೆ. ಮಹಿಳೆಯರ ಮೂಢನಂಬಿಕೆಯನ್ನು ಗಮನದಲ್ಲಿಟ್ಟುಕೊಂಡು ಸಮಯಸಾಧಕರು ಬಗೆಬಗೆಯ ಶೋಷಣೆಯಲ್ಲಿ ನಿರತರಾಗಿದ್ದಾರೆ. ಅದರಿಂದಾಗಿ ಕೌಟುಂಬಿಕ ಸಂಬಂಧಗಳಲ್ಲಿ ಕಹಿ ಉಂಟಾಗುತ್ತಿದೆ. ಸಂಬಂಧ ಎನ್ನುವುದು ಆಚಾರ ವಿಚಾರಗಳು ಹಾಗೂ ನಂಬಿಕೆಯ ಮೇಲೆ ನಿಂತಿದೆ. ಮನೆಯ ದೈನಂದಿನ ಕಾರ್ಯಗಳನ್ನು ಬದಿಗಿಟ್ಟು, ದೇವರ ಧ್ಯಾನದಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತ ಯಾವುದೊ ಚಮತ್ಕಾರದ ನಿರೀಕ್ಷೆ ಮಾಡುತ್ತಾ ಕೌಟುಂಬಿಕ ಕರ್ತವ್ಯಗಳ ಬಗ್ಗೆ ಮುಖ ತಿರುಗಿಸುವುದರಿಂದ ಮಕ್ಕಳ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ. ಕೌಟುಂಬಿಕ ಕಲಹಗಳಿಂದ ಹೆಚ್ಚಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ಧರ್ಮದ ಬಗ್ಗೆ ಸಮ್ಮೋಹಿತ ಮಹಿಳೆಯರು
ಮಹಿಳೆಯರು ಧರ್ಮದ ಕಂದಾಚಾರ ಹಳೆಯ ಕಾಲ್ಪನಿಕ ವಿಚಾರಗಳಿಗೆ ಬಹುಬೇಗ ತುತ್ತಾಗುತ್ತಾರೆ. ಧರ್ಮಗುರುಗಳ ಪ್ರತಿಯೊಂದು ಮಾತನ್ನು ಬ್ರಹ್ಮವಾಕ್ಯ ಎಂಬಂತೆ ಭಾವಿಸಿ ತಮ್ಮ ಕುಟುಂಬ ಸಮೀಪ, ಸಮಾಜವನ್ನು ಕೂಡ ಅಧಃಪತನಕ್ಕೆ ಕೊಂಡೊಯ್ಯುತ್ತಿದ್ದಾರೆ.
ರಂಜಿತಾ, ಹಿಂದೊಮ್ಮೆ ಉತ್ಸಾಹದಿಂದ ಪುಟಿದೇಳುತ್ತಿದ್ದ ಆತ್ಮವಿಶ್ವಾಸಿ ಮಹಿಳೆಯಾಗಿದ್ದಳು. ಆದರೆ ಈಗ ಏಕಾಂಗಿಯಾಗಿ ಜೀವನ ನಡೆಸುವಂತಾಗಿದೆ. ಯಾವುದೋ ಒಂದು ಆಶ್ರಮದಲ್ಲಿ ಸೇವೆ, ಸತ್ಸಂಗದ ಹೆಸರಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಳು. ಆಕೆ ಎಲ್ಲರಿಗೂ ಕೊಡುತ್ತಿದ್ದ ಸಂದೇಶ ಏನಾಗಿರುತ್ತಿತ್ತೆಂದರೆ, ``ಜೀವನ ಶಾಶ್ವತವಾಗಿದೆ. ಆ ಕುರಿತಾದ ಧ್ಯಾನದಿಂದ ಮನಸ್ಸು ಶುದ್ಧವಾಗುತ್ತದೆ ಹಾಗೂ ಜಾಗೃತಿ ಉಂಟಾಗುತ್ತದೆ. ಅದು ಅಧ್ಯಯನ ಮಾರ್ಗವನ್ನು ಪ್ರಶಸ್ತಗೊಳಿಸುತ್ತದೆ.''
ಹೀಗೆ ಕ್ರಮೇಣ ಆಕೆ ಕುಟುಂಬದಿಂದ ದೂರ ಉಳಿಯುತ್ತ ಬಂದು ಆಶ್ರಮ ವಾಸದಲ್ಲಿ ಮಗ್ನಳಾಗತೊಡಗಿದಳು.
ಕೆಲವು ದಿನಗಳ ಬಳಿಕ ಸನ್ಯಾಸಿನಿಯ ಹಾಗೆ ಗಂಡನಿಂದ ಪ್ರತ್ಯೇಕವಾಗಿ ತನ್ನದೇ ಆದ ಕೋಣೆ ಮಾಡಿಕೊಂಡಳು. ಸಂಬಂಧಿಕರ ಮದುವೆ ಇತ್ಯಾದಿ ಶುಭ ಸಮಾರಂಭಗಳಿಂದಲೂ ದೂರ ಉಳಿಯತೊಡಗಿದಳು. ಏಕೆಂದರೆ ಸಾತ್ವಿಕ ಆಹಾರ ಎಲ್ಲ ಕಡೆ ಸಿಗುವುದಿಲ್ಲ ಎನ್ನುವುದು ಅವಳ ತರ್ಕವಾಗಿತ್ತು.
ಕೆಲವು ದಿನ ತನ್ನದೇ ಆದ ಲೋಟ ತಟ್ಟೆ ಟಿಫನ್ ತೆಗೆದುಕೊಂಡು ಹೋದಳು. ಆದರೆ ಅಲ್ಲೂ ಕೂಡ ಸಮಸ್ಯೆ ಉಂಟಾಯಿತು. ಅವಳು ಅದೆಷ್ಟೋ ಸಲ ತನ್ನ ಮನಸ್ಸಲ್ಲಿ ಇಣುಕಿ ನೋಡಲು ಪ್ರಯತ್ನ ಮಾಡಿದಳು. ಆದರೆ ಅವಳು ಮೂಢನಂಬಿಕೆಯ ದೊಡ್ಡ ಹೊದಿಕೆಯಿಂದ ಹೊರಬರಲು ಆಗಲಿಲ್ಲ.