ನಮ್ಮವರನ್ನು ಮರೆತು ಜೀವಿಸಲು ಕಲಿತುಕೊಳ್ಳಿ. ಕೋವಿಡ್‌ ಮೊದಲು ನಮ್ಮನ್ನು ಮನೆಯೊಳಗೆ ಬಂಧಿಯಾಗಿಸಿತು. ಈಗ ಅಕಾಲಿಕ ಸಾವುಗಳಿಂದ ನಮ್ಮರಲ್ಲಿ ಒಬ್ಬಿಬ್ಬರನ್ನು ಕಳೆದುಕೊಂಡು ಅವರ ಹೊರತಾಗಿ ಜೀವಿಸಲು ಅನಿವಾರ್ಯವಾಗಿಸಿದೆ. ಕೆಲವು ಕೋವಿಡ್‌ ಕಾರಣಗಳಿಂದ, ಮತ್ತೆ ಕೆಲವು ಸಾಮಾಜಿಕ ಕಾರಣಗಳಿಂದ ಈಗ ಸಂಬಂಧಿಕರೇ ಇಲ್ಲವಾದಂತಾಗಿದೆ. ಸ್ನೇಹಿತರು ಇಲ್ಲವಾಗಿದ್ದಾರೆ. ಕೋವಿಡ್‌ನಿಂದಾಗಿ ಯಾರಾದರೂ ಹೋಗಿಬಿಟ್ಟಿದ್ದರೆ ನಾವು ಏಕಾಂಗಿಯಾಗಿಯೇ ಅದನ್ನು ಭರಿಸಿಕೊಳ್ಳಬೇಕಿದೆ. ಭುಜದ ಮೇಲೆ ಯಾರ ಸಾಂತ್ವನದ  ಹಸ್ತ ನೋಡಲಾಗುವುದಿಲ್ಲ.

ಭಯದ ವಾತಾವರಣದಲ್ಲಿ ಜನ ಕಂಗಾಲಾಗುತ್ತಾರೆ. ಆಗ ಯಾರಾದರೂ ಬಂದು ಸಾಂತ್ವನ ತೋರಿದರೆ ಒಂದಿಷ್ಟು ಸಮಾಧಾನವಾಗ್ತಿತ್ತು. ಆದರೆ ಈಗ ಆ ದೃಶ್ಯ ಕಾಣ್ತಿತಲ್ಲ. ಕೋವಿಡ್‌ ಸಮಯದಲ್ಲಿ ಯಾರ ಕಡೆಗಾದರೂ ಹೋದರೆ, ನನಗೂ ಎಲ್ಲಿಯಾದರೂ ಕೋವಿಡ್‌ ತಗುಲಿಬಿಟ್ಟೀತು ಎಂಬ ಆತಂಕ ಕಾಡುತ್ತಿರುತ್ತದೆ. ಈಗ ಯಾರನ್ನೂ ಯಾರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಿಲ್ಲ.

ಭಯ ಎಷ್ಟಿದೆಯೆಂದರೆ, ಸತ್ತ ಬಳಿಕ ಮೃತ ಗೋವಿನಂತೆ ಕಸದ ಗಾಡಿಗೆ ಹಾಕಿಕೊಂಡು ಇತರೆ 4 ಶವಗಳ ಜೊತೆ ಸುಟ್ಟು ಹಾಕುವುದು ದೊಡ್ಡ ವಿಷಯವೇನಲ್ಲ.

`ನೀನು ಏಕಾಂಗಿಯಾಗಿ ಬಂದಿದ್ದೆ, ಏಕಾಂಗಿಯಾಗಿಯೇ ಹೋಗುವೆ,' ಎಂದು ಸಮಾಜಕ್ಕೆ ಬೋಧಿಸಲಾಗಿದೆ. ಗೀತಾದಲ್ಲಿ ಹೇಳಿರುವ ಪ್ರಕಾರ, ಬಂಧುಬಾಂಧವರು ಎಲ್ಲ ಸುಳ್ಳು. ಅರ್ಜುನನ ಮನಸ್ಸು ಕೂಡ ಗೀತಾ ಪುನರುಚ್ಚರಿಸುವಂತಿದೆ, ``ನೀನಿಲ್ಲಿ ಸಾಯುವೆ, ನೀನಂತೂ ಮೊದಲೇ ಸತ್ತು ಹೋಗಿರುವೆ. ನೀನು ಸತ್ತು ಹೋದರೂ ನಿನ್ನ ಆತ್ಮ ಸಾಯುವುದಿಲ್ಲ. ಆತ್ಮ ನಶ್ವರ!''

ಈಗ ದಿನ ಹೇಳಲಾಗುತ್ತಿರುವ ವಿಷಯವೆಂದರೆ ನಿಮ್ಮ ಬಗೆಗಷ್ಟೇ ಯೋಚಿಸಿ, ಬೇರೆಯವರ ಬಗ್ಗೆ ಚಿಂತಿಸದಿರಿ. ಬೇರೆಯವರಿಗೆ ಪ್ರಾಣ ಕೊಡುವ ಬಗ್ಗೆ ಮಾತಾಡಬೇಡಿ. ಗೀತಾದ ಸಾರವೆಂದರೆ, ಸಂಕಷ್ಟ ಬಂದಾಗ ನಮ್ಮ ಬಗೆಗಷ್ಟೇ  ನಾವು ಯೋಚಿಸಬೇಕು.

ಲಾಕ್‌ ಡೌನ್‌ ಕಾರಣದಿಂದ ಜನರು ತಮ್ಮ ಸಂಬಂಧಿಕರು, ಸ್ನೇಹಿತರನ್ನು ಕಳೆದುಕೊಂಡಾಗ ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳಲಾಗದು. ಮೇಲಾಗಿ ಕೋವಿಡ್‌ ಭಯ. ಮೂರನೆಯದು ಕಳೆದ 10 ವರ್ಷಗಳಿಂದ ಬೋಧಿಸಿದ ಧರ್ಮದ ಪಾಠದ ಪರಿಣಾಮ ಏನೆಂದರೆ, ನಾವು ಏಕಾಂಗಿಯಾಗಿದ್ದೇವೆ, ಏನಾದರೂ ಆದರೆ ಏನು ಮಾಡುವುದು, ಅದು ಕೋವಿಡ್‌ಗಿಂತ ಭಯಾನಕ.

ವಾಸ್ತವದಲ್ಲಿ ಏಕಾಂಗಿಯಾದವರನ್ನು ಯಾರು ವಿಚಾರಿಸಿಕೊಳ್ಳಲು ಆಗುತ್ತಿಲ್ಲ. ಒಂದಿಷ್ಟು ಪರಿಚಿತರು ಸೇರಿ ವಾಟ್ಸ್ ಆ್ಯಪ್‌ ಗ್ರೂಪ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ, ಟ್ವೀಟರ್‌ ಖಾತೆ ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೈ ಜೋಡಿಸಿದ ಚಿಹ್ನೆ ಹಾಕಿ ಇತಿಶ್ರೀ ಹಾಡುತ್ತಾರೆ.

ಸತ್ತವರ ಕುಟುಂಬದವರು ತಮ್ಮನ್ನು ತಾವು ಹೇಗೆ ಸಂಭಾಳಿಸಿಕೊಳ್ಳುತ್ತಾರೆ ಎನ್ನುವುದರ ಮಾಹಿತಿಯನ್ನು ಯಾರೂ ಪಡೆಯುತ್ತಿಲ್ಲ. ಫೋನ್‌ನಲ್ಲಿ 2 ಸಾಂತ್ವನದ ಮಾತುಗಳು ಸಿಗುವುದಿಲ್ಲ. ಏಕೆಂದರೆ ಬಂದ ಮೆಸೇಜ್‌ಗಳಿಗೆ ಉತ್ತರಿಸಲು, ಗುಡ್ ಮಾರ್ನಿಂಗ್‌ ಹೇಳಲು, ಮೆಸೇಜ್‌ ಡಿಲೀಟ್‌ ಮಾಡುವುದರಲ್ಲಿಯೇ ಕಳೆದುಹೋಗುತ್ತದೆ. ಫೋನ್‌ ಮಾಡಿದರೆ ಯಾರು ಏನು ಕೆಲಸ ಹೇಳಿಬಿಡುತ್ತಾರೋ? ನಿಮಗಾಗಿ ಜೀವಿಸಿ ಎಂದು ಧರ್ಮ ಹೇಳ್ತಿದೆ.

ನಮ್ಮವರನ್ನು ಬಿಟ್ಟು ಜೀವಿಸುವುದು ಕಷ್ಟಕರ. ಆದರೆ ಅದು ಅನಿವಾರ್ಯ. ಆನ್‌ಲೈನ್‌ ಕ್ಲಾಸ್‌ಗಳಲ್ಲಿ ಗಾರ್ಡನಿಂಗ್‌, ನಿಟ್ಟಿಂಗ್‌, ಕುಕ್ಕಿಂಗ್‌, ಡ್ಯಾನ್ಸಿಂಗ್‌ ಬಗ್ಗೆ ಕಲಿಸಲಾಗುತ್ತದೆ. ಅದರ ವಿವರವನ್ನು ಅನವಶ್ಯಕವಾಗಿ ಫೇಸ್‌ ಬುಕ್‌ನಲ್ಲಿ, ವಾಟ್ಸ್ ಆ್ಯಪ್‌ನಲ್ಲಿ ಹಾಕಿ, ಅಪರಿಚಿತರನ್ನು ಪರಿಚಯಿಸಿಕೊಂಡು ಅವರಿಂದ ವಾಹ್...ವಾಹ್....! ಎಂದು ಕರೆಯಿಸಿಕೊಳ್ಳುವುದೇ ನಿಜವಾದ ಸುಖ ಎನಿಸುತ್ತದೆ. ಅದೇ ಜೀವನದ ಉದ್ದೇಶವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ