ನಾವು ವಾಟ್ಸ್ ಆ್ಯಪ್‌ನಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಹಲವು ಬಗೆಯ ಎಮೋಜಿಗಳನ್ನು ಬಳಸುತ್ತೇವೆ. ಮುಂಜಾನೆಯಿಂದ ರಾತ್ರಿ ಮಲಗುವ ಅಂತಿಮ ಕ್ಷಣದ ತನಕ ನಾವು ವಾಟ್ಸ್ ಆ್ಯಪ್‌ಗೆ ಅಂಟಿಕೊಂಡಿರುತ್ತೇವೆ. ಈ ಅವಧಿಯಲ್ಲಿ ನಾವು ಬಂದ ಸಂದೇಶಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಅದಕ್ಕೆ ಸಂಬಂಧಪಟ್ಟ ಎಮೋಜಿಗಳನ್ನು ರವಾನಿಸುತ್ತೇವೆ. ಆ ಮೂಲಕ ನಾವು ಹೇಳಬೇಕಾದ್ದನ್ನು ಸರಿಯಾಗಿ ಹೇಳಿದೆ ಎಂದು ಭಾವಿಸಿಬಿಡುತ್ತೇವೆ. ಆದರೆ ಸಂದೇಶ ರವಾನೆಯ ಸಂದರ್ಭದಲ್ಲಿ ನೀವು ತಪ್ಪು ಎಮೋಜಿಯನ್ನು ಆಯ್ಕೆ ಮಾಡಿಲ್ಲ ತಾನೇ? ನಿಮ್ಮ ಮಾನಸಿಕತೆ ತಪ್ಪಾಗಿರದೇ ಇರಬಹುದು, ಆದರೆ ನೀವು ಯಾವ ಎಮೋಜಿ ಕಳಿಸಿ ಕೊಡುತ್ತೀರೊ, ಅದರ ಅರ್ಥ ತಪ್ಪಾಗಿರಬಹುದು. ಕೆಲವು ಎಮೋಜಿಗಳ ಬಗ್ಗೆ ತಿಳಿಯೋಣ, ಅಂತಹ ಎಮೋಜಿಗಳ ಅರ್ಥ ಕೊಳಕಾಗಿರಬಹುದು :

ಐ ರೋಲಿಂಗ್‌ : ಈ ಎಮೋಜಿಯ ಅರ್ಥ ಬೇಸರ ಅಥವಾ ಅಸೂಯೆ ವ್ಯಕ್ತಪಡಿಸುವುದು.

ನಮಸ್ತೆ : ಈ ಎಮೋಜಿಯನ್ನು ನಾವು ಹೆಚ್ಚಾಗಿ ವೆದನೆ ಅಥವಾ ಥ್ಯಾಂಕ್ಯೂ ಸೂಚಿಸಲು ಬಳಸುತ್ತೇವೆ. ಆದರೆ ಇದರ ನಿಜವಾದ ಅರ್ಥ `ಹೈಫೈ ಈವ್’ ಎಂದಾಗಿರುತ್ತದೆ.

ಡೋನಟ್‌ : ಜನರು ಇದನ್ನು ಸ್ವೀಟ್‌ ಎಂಬಂತೆ ಬಳಸುತ್ತಿರಬಹುದು. ಆದರೆ ಅಶ್ಲೀಲ ಅರ್ಥದಲ್ಲಿ ಇದನ್ನು ವಜೈನಾದ ಚಿಹ್ನೆ ಎಂದು ಭಾವಿಸಲಾಗುತ್ತದೆ.

ಲವ್ ಹೋಟೆಲ್ ‌: ಈ ಎಮೋಜಿ ವೇಶ್ಯಾಲಯವನ್ನು ಸೂಚಿಸುತ್ತದೆ.

ಗರ್ಲ್ಸ್ ವಿತ್‌ ಬನ್ನಿ ಇಯರ್ಸ್‌ : ಈ ಎಮೋಜಿಯನ್ನು ಜನರು ಬೇರೆ ಬೇರೆ ಅರ್ಥ ಸೂಚಿಸಲು ಬಳಸುತ್ತಾರೆ. ಹಲವು ಜನರು ಇದನ್ನು ವೇಶ್ಯಾವೃತ್ತಿಗಾಗಿಯೂ ಬಳಸುತ್ತಾರೆ. ಜಪಾನ್‌ನಲ್ಲಿ ಇದು ಸೆಕ್ಸ್ ಡಾಲ್ ಚಿಹ್ನೆಯಾಗಿದೆ.

ಸೈಲೆಂಟ್‌ ಫೇಸ್‌ : ಈ ಎಮೋಜಿಯ ಅರ್ಥ `ಬಾಯಿ ಮುಚ್ಚಿಕೊ’ ಎಂದು.

ಸ್ಪ್ಲಾಶ್‌ : ಈ ಎಮೋಜಿಯ ಬಳಕೆಯನ್ನು ಆರ್ಗ್ಯಾಸಂ ಅಂದರೆ ಲೈಂಗಿಕ ಉತ್ತುಂಗತೆಗಾಗಿ ಬಳಸುತ್ತಾರೆ.

ಚೆರ್ರಿನ್‌ : ಈ ಎಮೋಜಿಯು ಸ್ತನಗಳ ಸೂಚಕವಾಗಿದೆ.

ಐಸ್‌ : ಕಣ್ಣುಗಳ ಈ ಭಾವಸೂಚಕ ಎಮೋಜಿಯನ್ನು ಜನರು ಒಮ್ಮೊಮ್ಮೆ ಯಾರಿಗಾದರೂ ಸೆಕ್ಸಿ ಸೆಲ್ಛಿ ಕೇಳಲು ಮಾಡಿರುವ ಕೋರಿಕೆಯಾಗಿರಬಹುದು.

ಮೈಕ್ರೊಫೋನ್‌ : ಅದು ಪುರುಷ ಆರ್ಗನ್‌ನ್ನು ಸೂಚಿಸುತ್ತದೆ.

ಹುಡುಗಿ ತಲೆ ಮೇಲೆ ಕೈ ಇಟ್ಟುಕೊಂಡಿರುವುದು : ಈ ಎಮೋಜಿ ಸ್ತ್ರೀಯರ ಲೈಂಗಿಕ ಉತ್ತುಂಗತೆಯ ಭಾವ ಸೂಚಕವಾಗಿರುತ್ತದೆ.

ಪೀಚ್‌ : ಇದರ ಅರ್ಥ ಸ್ತ್ರೀಯರ ನಿತಂಬವನ್ನು ಸೂಚಿಸುತ್ತದೆ.

ಮೇಲ್ ‌ಬಾಕ್ಸ್ : ಇದರ ಕಳಿಸುವವ ನಿಮ್ಮಿಂದ ಲೈಂಗಿಕ ಅಭಿಲಾಷೆ ಮಾಡುತ್ತಿರಬಹುದು.

ಫೈರ್‌ : ಒಂದು ವೇಳೆ ಯಾರಾದರೂ ನಿಮಗೆ ಈ ಎಮೋಜಿಯನ್ನು ರವಾನಿಸುತ್ತಾರೆಂದರೆ, ನೀವು ಸೆಕ್ಸಿಯಾಗಿ ಕಾಣುತ್ತಿದ್ದೀರಿ ಎಂದರ್ಥ.

ಇಂತಹ ಹಲವು ಎಮೋಜಿಗಳಿದ್ದು, ಅವುಗಳ ಅರ್ಥ ಅತ್ಯಂತ ಕೊಳಕಾಗಿರಬಹುದು. ಅದರ ಅರ್ಥದ ಅರಿವು ನಿಮಗೆ ಇರದೇ ಇರಬಹುದು.

ನಿವು ಎಮೋಜಿಗಳು?

1f351-peach-emoji-vector-icon-1

ಇವು ಎಲೆಕ್ಟ್ರಾನಿಕ್‌ ಚಿತ್ರಗಳ ಸಮೂಹ. ನಾವು ನಮ್ಮ ಭಾವನೆಗಳನ್ನು ಈ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ವ್ಯಕ್ತಗೊಳಿಸುತ್ತೇವೆ. ಎಮೋಜಿಗಳು ಭಾವನೆ, ವಸ್ತುಗಳ ಪ್ರತೀಕ. ಒಂದು ದೃಶ್ಯದ ಪ್ರಸ್ತುತೀಕರಣ ಆಗಿದೆ. ಇವು ಫೋನ್‌ ಅಥವಾ ಸೋಶಿಯಲ್ ನೆಟ್‌ ವರ್ಕಿಂಗ್‌ಗಳಲ್ಲಿ ವಿಭಿನ್ನ ರೀತಿಯಲ್ಲಿ ಇರುತ್ತವೆ.

ಪ್ರಥಮ ವಿನ್ಯಾಸಕಾರ ಯಾರು?

ಶಿಗೆತಾಕಾ ತಮ್ಮ 25ನೇ ವಯಸ್ಸಿನಲ್ಲಿ ಎಮೋಜಿಗಳ ಸಮೂಹವೊಂದನ್ನು ರೂಪಿಸಿದರು. ಅದರಲ್ಲಿ 176 ಎಮೋಜಿಗಳು ಇದ್ದವು. ಕುತೂಹಲಕಾರಿ ಸಂಗತಿಯೆಂದರೆ ಫಾದರ್‌ ಆಫ್‌ ಎಮೋಜಿ ಎಂದು ಕರೆಯಿಸಿಕೊಳ್ಳುವ ಶಿಗೆತಾಕಾ ಎಂಜಿನಿಯರ್‌ ಆಗಿದ್ದರೇ ಹೊರತು ಯಾವುದೇ ಡಿಸೈನರ್‌ ಆಗಿರಲಿಲ್ಲ. ಅವರು ಅರ್ಥಶಾಸ್ತ್ರದ ಅಧ್ಯಯನ ಮಾಡಿದ್ದರು.

ಎಮೋಜಿಗಳ ಆರಂಭ ಎಲ್ಲಿ, ಯಾವಾಗ?

1998-99ರಲ್ಲಿ ಬಣ್ಣ ಬಣ್ಣದ ಎಮೋಜಿಗಳ ಬಳಕೆ ಶುರುವಾಯಿತು. ಜಪಾನಿ ಟೆಲಿಕಾಂ ಕಂಪನಿಯೊಂದರ ಉದ್ಯೋಗಿ ಶಿಗೆತಾಕಾ ಈ ಕಂಪನಿಯ ಮೊಬೈಲ್ ‌ಇಂಟರ್‌ನೆಟ್‌ ಸರ್ವೀಸ್‌ ಗಾಗಿ ಎಮೋಜಿಗಳನ್ನು ರೂಪಿಸಿದ್ದರು. ಈ ಮೊಬೈಲ್ ಇಂಟರ್‌ ನೆಟ್‌ನಲ್ಲಿ ಇಮೇಲ್ ಕಳಿಸಲು ಕ್ಯಾರೆಕ್ಟರ್‌ಗಳ ಸಂಖ್ಯೆ 250 ಆಗಿತ್ತು. ಅದರಲ್ಲಿ ನಗು, ದುಃಖ, ಕ್ರೋಧ, ಆಶ್ಚರ್ಯ ಹಾಗೂ ಗೊಂದಲ ಸೂಚಿಸುವ ಎಮೋಜಿಗಳು ಕೂಡ ಸೇರಿದ್ದವು.

ಜಪಾನ್‌ನಲ್ಲಿ ಎಮೋಜಿಗಳು ಜನಪ್ರಿಯವಾಗುತ್ತಿರುವುದನ್ನು ಕಂಡು 2007ರಲ್ಲಿ ಆ್ಯಪ್‌ ಐಫೋನ್‌ ತನ್ನ ಮೊಬೈಲ್ ಫೋನ್‌ ನಲ್ಲಿ ಎಮೋಜಿಗಳ ಬೋರ್ಡ್‌ಸೇರ್ಪಡೆಗೊಳಿಸಿತು. ಅದರಲ್ಲಿ ಎಸ್‌ಎಂಎಸ್‌ ಚಾಟಿಂಗ್‌ ಮತ್ತು ವಾಟ್ಸ್ ಆ್ಯಪ್‌ ಮೆಸೇಜ್‌ ಮಾಡುವಾಗ ಭಾವನೆ ಅಭಿವ್ಯಕ್ತಿಗೊಳಿಸಲು ಎಮೋಜಿಗಳನ್ನು ಬಳಸಲು ಶುರು ಮಾಡಿದರು. ಅದು ಅತ್ಯಂತ ವೇಗದಲ್ಲಿ ಬಳಕೆಯಾಗತೊಡಗಿದವು.

2013ರಲ್ಲಿ `ಎಮೋಜಿ’ ಶಬ್ದವನ್ನು ಆಕ್ಸ್ ಫರ್ಡ್‌ ಡಿಕ್ಷನರಿಯಲ್ಲಿ ಸೇರ್ಪಡೆಗೊಳಿಸಲಾಯಿತು.

2015ರಲ್ಲಿ `ಎಮೋಜಿ’ಯನ್ನು ವರ್ಕ್‌ ಆಫ್‌ ದಿ ಇಯರ್‌ ಎಂದು ಘೋಷಣೆ ಮಾಡಲಾಯಿತು.

2016ರಲ್ಲಿ ನ್ಯೂಯಾರ್ಕ್‌ನಲ್ಲಿ `ಮ್ಯೂಸಿಯಂ ಆಫ್‌ಆರ್ಟ್‌’ ತನ್ನ ಖಾಯಂ ಸೆಟ್‌ನಲ್ಲಿ ಶಿಗೆತಾಕಾ ಅವರ 176 ಎಮೋಜಿಯ ಮೊದಲ ಸೆಟ್‌ನ್ನು ಸೇರ್ಪಡೆಗೊಳಿಸಲಾಯಿತು. ಹಾಲಿವುಡ್‌ನಲ್ಲಿ ಒಂದು ಆ್ಯನಿಮೆಟೆಡ್‌ ಮೂವಿಯೊಂದನ್ನು ತಯಾರಿಸಲಾಗಿತ್ತು. ಅದರಲ್ಲಿ 250ಕ್ಕೂ ಹೆಚ್ಚು ಎಮೋಜಿಗಳನ್ನು ಬಳಸಿಕೊಳ್ಳಲಾಯಿತು.

ಈವರೆಗಿನ ಎಮೋಜಿಗಳ ಸಂಖ್ಯೆ 2666ಕ್ಕೂ ಹೆಚ್ಚಾಗಿದೆ.

ಯೂನಿಕೋಡ್‌ ಕಮಿಟಿಯ ಪ್ರಕಾರ, ಪ್ರತಿವರ್ಷ ಅದೆಷ್ಟೊ ಹೊಸ ಎಮೋಜಿಗಳನ್ನು ಸೇರ್ಪಡೆಗೊಳಿಸಲು ಅನುಮತಿ ಕೇಳಲಾಗುತ್ತದೆ.

ಎಮೋಜಿ ದಿನ :

301-3015775_abs-are-cool-but-have-you-tried-donuts-clipart-s-of-cute

`ಎಮೋಜಿ ಪಿಡಿಯಾ’ದ ಸಂಸ್ಥಾಪಕ ಜೆರೆಮಿ ಬಜ್‌ರವರು 2014ರಲ್ಲಿ `ವಿಶ್ವ ಎಮೋಜಿ ದಿನ’ವನ್ನು ಆಚರಿಸುವ ನಿರ್ಧಾರ ಕೈಗೊಂಡರು. ಆ ಬಳಿಕ ಜುಲೈ 14ನ್ನು `ವಿಶ್ವ ಎಮೋಜಿ ದಿನ’ವನ್ನಾಗಿ ಆಚರಿಸಲು ಶುರು ಮಾಡಿದರು.

ಇನ್‌ ಸ್ಟೆಂಟ್‌ ಮೆಸೇಜಿಂಗ್‌ ಹಾಗೂ ವಾಟ್ಸ್ ಆ್ಯಪ್‌ನಲ್ಲಿ ಲಭ್ಯವಿರುವ ಎಮೋಜಿಗಳು ಜನರ ನಡುವೆ ಸ್ಪಷ್ಟ ಭಾವನೆಯನ್ನು ಬಿಂಬಿಸುವ ಕೆಲಸ ಮಾಡುತ್ತವೆ. ಆದರೆ ವಾಟ್ಸ್ ಆ್ಯಪ್‌ನ ಒಂದು ಎಮೋಜಿಯ ಬಗ್ಗೆ ಭಾರತೀಯ ವ್ಯಕ್ತಿಯೊಬ್ಬರು ಕಾನೂನು ರೀತ್ಯಾ ನೋಟೀಸ್‌ ನೀಡಿದ್ದಾರೆ. ಗುರ್ಮಿತ್‌ಸಿಂಗ್‌ ಎಂಬ ಭಾರತೀಯ ಅಡ್ವೋಕೇಟ್‌ ಮಿಡಲ್ ಫಿಂಗರ್‌ ಕುರಿತಾದ ಎಮೋಜಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅದು ಅಶ್ಲೀಲತೆಯನ್ನು ಬಿಂಬಿಸುತ್ತದೆ ಎಂದಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಬಳಕೆಯಾಗುವ ಎಮೋಜಿಗಳ ಬಗ್ಗೆ ಬ್ರಿಟನ್‌ ನ್ಯಾಯಾಲಯ ಕೂಡ ತನ್ನ ಕಳವಳ ವ್ಯಕ್ತಪಡಿಸಿದೆ. ದೇಶದ ಕಾನೂನು ವಿವಾದಗಳಲ್ಲಿ ಈ ಎಮೋಜಿಗಳ ಉಪಯೋಗ ಪ್ರಕರಣಗಳನ್ನು ಮತ್ತಷ್ಟು ಕ್ಲಿಷ್ಟಕರಗೊಳಿಸುತ್ತದೆ. ಹೀಗಾಗಿ ವಕೀಲರು ಈ  ಡಿಜಿಟಲ್ ಚಿಹ್ನೆಗಳ ಕುರಿತಂತೆ ಮಾರ್ಗಸೂಚಿ ಸೂತ್ರಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಬ್ರಿಟನ್ನಿನ ನ್ಯಾಯಾಲಯಗಳು ಕೌಟುಂಬಿಕ, ಕ್ರಿಮಿನಲ್, ಕರ್ಮಿಷಿಯಲ್ ಮತ್ತು ಔದ್ಯಮಿಕ ಕಾನೂನು ವಿವಾದಗಳ ವಿಚಾರಣೆ ಸಂಬಂಧದಲ್ಲಿ ಸಲ್ಲಿಸಲಾಗುತ್ತಿರುವ ಪುರಾವೆಗಳಲ್ಲಿ ಇಂತಹ ಎಮೋಜಿಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ.

ಸೆಂಟ್‌ ಕ್ಲಾರಾ ವಿವಿಯ ಕಾನೂನು ವಿಭಾಗದ ಪ್ರೊಫೆಷನಲ್ ಆ್ಯರಿಕ್‌ ಗೋಲ್ಡ್ ವುಮೆನ್‌ ಪ್ರಕಾರ, 2018ರಲ್ಲಿ 53 ಪ್ರಕರಣಗಳಲ್ಲಿ ಎಮೋಜಿಗಳು ಸೇರಿದ್ದವು. 2017ರಲ್ಲಿ 33 ಹಾಗೂ 2016ರಲ್ಲಿ 26ರಷ್ಟು ಪ್ರಕರಣಗಳಿದ್ದವು. ಗೋಲ್ಡ್ ವುಮೆನ್‌ ಅವರ ಪ್ರಕಾರ, ಜನರ ಡಿವೈಸ್‌ ಹಾಗೂ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಒಂದೇ ಎಮೋಜಿಯನ್ನು ಬೇರೆ ಬೇರೆ ಅರ್ಥದಲ್ಲಿ ಬಿಂಬಿಸುತ್ತಾರೆ. ಅದನ್ನು ಪಡೆದವರು ಯಾವುದೇ ಮಾಹಿತಿ ಇಲ್ಲದೆ ವಿವಾದ ಉಂಟಾಗುವ ಸಾಧ್ಯತೆ ಇರುತ್ತದೆ.

ಲೈಂಗಿಕ ಶೋಷಣೆಯ ವಿವಾದದಲ್ಲಿ ಹೆಚ್ಚು ಬಳಕೆ :

emoji-2

ಗೋಲ್ಡ್ ವುಮೆನ್‌ ಅವರ ಸಂಶೋಧನೆಯಿಂದ, ತಿಳಿದುಬಂದ ವಿಷಯವೆಂದರೆ, ಎಮೋಜಿಗಳು ಈಗ ಹೆಚ್ಚಿನ ಕಾನೂನು ಪ್ರಕರಣಗಳಲ್ಲಿ  ಕಂಡುಬರುತ್ತಿವೆ. ಲೈಂಗಿಕ ಶೋಷಣೆಯ ಬಾಬತ್ತಿನಲ್ಲಿ ಇವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗ ಆಗುತ್ತಿವೆ. ಹೆಚ್ಚಿನ ವೇಗದಲ್ಲಿ ಇವುಗಳ ಪ್ರಕರಣಗಳು ಹೆಚ್ಚಿದ್ದರೂ, ಕಾನೂನು ರೀತ್ಯಾ ಅವುಗಳ ಬಗ್ಗೆ ವ್ಯಾಖ್ಯೆ ಮಾಡಲಾಗಿಲ್ಲ, ಆದರೆ ಈಗ ಹೊಸ ಆ್ಯನಿಮೆಟೆಡ್‌ (ಜಿಫ್‌ ಫೈಲ್‌) ಮತ್ತು ಮೊದಲಿಗಿಂತ ಹೆಚ್ಚು ವೈಯಕ್ತಿಕ ಎಮೋಜಿಗಳು ಬಂದಿವೆ, ಅವು ಸವಾಲಾಗಿ ಪರಿಣಮಿಸಿವೆ.

ಕಾರ್ಯಸ್ಥಳದಲ್ಲಿ ಎಮೋಜಿಗಳ ಬಳಕೆ

ನಿಮ್ಮ ಸಹೋದ್ಯೋಗಿಗಳಿಗೆ ಇಮೇಲ್ ‌ಮಾಡುವಾಗ, ನಿಮ್ಮ ಸಂತೋಷವನ್ನು ಪ್ರಕಟಪಡಿಸಲು ಎಮೋಜಿಗಳ ಬಳಕೆ ಮಾಡಿದರೆ, ನೀವು ನಿಮ್ಮ ಪ್ರೊಫೆಶನಲ್ ಲೈಫ್‌ನಲ್ಲಿ ಇಕ್ಕಟ್ಟಿಗೆ ಸಿಲುಕಬಹುದು. ಇಮೇಲ್ ‌ಗಳ ಜೊತೆ ಸ್ಮೈಲಿ ಎಮೋಜಿ ಬಳಸಬೇಡಿ.

ಹೊಸ ಸಂಶೋಧನೆಗಳ ಪ್ರಕಾರ, ಮುಗುಳ್ನಗೆಯ ಬದಲಿಗೆ ಈ ಎಮೋಜಿಗಳನ್ನು ಬಳಸಿ ನಾನು ನನ್ನ ಉತ್ಸಾಹ ತೋರಿಸುತ್ತಿದ್ದೇನೆಂದು ಭಾವಿಸಿದರೆ, ನಿಮ್ಮದು ತಪ್ಪು ಕಲ್ಪನೆ. ಅದರ ಮೂಲಕ ನಿಮ್ಮ ಸಾಮರ್ಥ್ಯದ ಬಗ್ಗೆಯೇ ಸಂದೇಹ ಪಡಬಹುದು. ಬಿಸ್‌ನೆಸ್‌ ಇಮೇಲ್ ‌ಗಳಲ್ಲಿ ಸ್ಮೈಲಿ ಎಮೋಜಿಗಳು ಇರಬಾರದು. 29 ದೇಶಗಳ 54 ಜನರ ಅಭಿಪ್ರಾಯಗಳನ್ನು ಇದರಲ್ಲಿ ದಾಖಲಿಸಲಾಗಿತ್ತು.

ನೀವು ವಾಟ್ಸ್ ಆ್ಯಪ್‌, ಫೇಸ್‌ ಬುಕ್‌ ಅಥವಾ ಯಾವುದೇ ಮೆಸೇಜಿಂಗ್‌ ಸರ್ವೀಸ್‌ನಲ್ಲಿ ಸಂದೇಶವಿಲ್ಲದೆಯೇ ಎಮೋಜಿಗಳನ್ನು ಬಳಸುತ್ತೀರೆಂದರೆ, ನಿಮ್ಮ ಮೇಲೆ ಸೆಕ್ಸ್, ಒಂದಿಷ್ಟು ಆರಿಸಿಕೊಳ್ಳಬಹುದು ಎಂದು `ಡೇಟಿಂಗ್‌ ವೆಬ್‌ ಸೈಟ್‌ ಮ್ಯಾಚ್‌ ಡಾಟ್‌ ಕಾಮ್’ನ ಒಂದು ಸಂಶೋಧನೆ ಹೇಳುತ್ತದೆ.

ಅದೇನು ಹೇಳುತ್ತದೆ?

istockphoto-1097113052-612x612

ಡೇಟಿಂಗ್‌ ವೆಬ್‌ ಸೈಟ್‌ ಮ್ಯಾಚ್‌ ಡಾಟ್‌ ಕಾಮ್ ಸಂಶೋಧನೆಯ ಪ್ರಕಾರ, ಯಾರು ಪ್ರತಿಯೊಂದು ಟೆಕ್ಸ್ಟ್ ಮೆಸೇಜ್‌ ಜೊತೆಗೆ ಎಮೋಜಿಗಳನ್ನು ಬಳಸುತ್ತಾರೊ, ಅವರ ಮೆದುಳು ಹೆಚ್ಚಿನ ಸಮಯ ಸೆಕ್ಸ್ ಬಗ್ಗೆ ಯೋಚಿಸುತ್ತಿರುತ್ತದೆ. ಅದರಲ್ಲಿ ಪಾಲ್ಗೊಂಡ ಹೆಲನ್‌ ಫಿಶರ್‌ರ ಪ್ರಕಾರ, ಎಮೋಜಿಗಳನ್ನು ಬಳಸುವವರು ಹೆಚ್ಚು ಸಲ ಸೆಕ್ಸ್ ಕ್ರಿಯೆಯಲ್ಲಿ ತೊಡಗುತ್ತಾರಲ್ಲದೆ, ಅವರು ಹೆಚ್ಚು ಡೇಟ್‌ಗೂ ತೆರಳುತ್ತಾರೆ.

ಎಂಥವರ ಮೇಲೆ ಸಂಶೋಧನೆ :

25 ದೇಶಗಳಲ್ಲಿ 8 ಬೇರೆ ಬೇರೆ ಭಾಷೆಗಳಲ್ಲಿ ಕಾರ್ಯ ನಿರ್ವಹಿಸುವ ಈ ವೆಬ್‌ ಸೈಟ್‌ ಕೆಲವು ತಿಂಗಳುಗಳ ಹಿಂದೆ ಸಮೀಕ್ಷೆ ನಡೆಸಿತ್ತು. ಅದರ ಪ್ರಕಾರ, ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಧಕ್ಕೂ ಹೆಚ್ಚು ಮಹಿಳೆ ಹಾಗೂ ಪುರುಷರು ತಮ್ಮ ಡೇಟ್‌ ಜೊತೆಗೆ ಫ್ಲರ್ಟ್‌ ಮಾಡುವಾಗ `ವಿಕ್‌’ ಎಮೋಜಿಯನ್ನು ಬಳಸುತ್ತಿದ್ದರು. ಈ ರೀತಿಯ ಮಾತುಕತೆಯಲ್ಲಿ ಬೇರೆಯವರು ಸ್ಮೈಲಿ ಎಮೋಜಿಯನ್ನು ಬಳಸುತ್ತಿದ್ದರು.

5,000 ಜನರ ಮೇಲೆ ನಡೆಸಲಾದ ಈ ಸಂಶೋಧನೆಯಲ್ಲಿ 36-40% ಜನರು ಪ್ರತಿಯೊಂದು ಮೆಸೇಜ್‌ನಲ್ಲೂ 1ಕ್ಕಿಂತ ಹೆಚ್ಚು ಎಮೋಜಿಗಳನ್ನು ಬಸುತ್ತಿದ್ದರು. ದಿನದಲ್ಲಿ ಹಲವು ಸಲ ಅವರು ಸೆಕ್ಸ್ ಬಗ್ಗೆ ಯೋಚಿಸುತ್ತಿದ್ದರು. ಯಾರು ಸೆಕ್ಸ್ ಬಗ್ಗೆ ಯೋಚಿಸುತ್ತಿರಲಿಲ್ಲವೋ, ಅವರು ತಮ್ಮ ಟೆಕ್ಟ್ಸ್ ಮೆಸೇಜ್‌ನಲ್ಲಿ ಎಮೋಜಿಗಳನ್ನು ಬಳಸುತ್ತಿದ್ದರು. ಆದರೆ ಪ್ರತಿಯೊಂದು ಮೆಸೇಜ್‌ ನಲ್ಲೂ ಅಲ್ಲ.

ಈ ಶೋಧದ ಪ್ರಕಾರ, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.54 ಜನರು, ಎಮೋಜಿಯನ್ನು ಬಳಸದೇ ಇರುವವರಿಗೆ ಹೋಲಿಸಿದರೆ ಸೆಕ್ಸ್ ಕ್ರಿಯೆಯಲ್ಲಿ ಹೆಚ್ಚು ತೊಡಗುತ್ತಿದ್ದರು.

ಪೀರಿಯಡ್ಸ್ ಬಗ್ಗೆ ಎಮೋಜಿ :

images (1)

ಮಾರ್ಚ್‌ 2019ರಲ್ಲಿ ಎಮೋಜಿಗಳ ಲಿಸ್ಟ್ ನಲ್ಲಿ ಪೀರಿಯಡ್ಸ್ ಎಮೋಜಿಯು ಕೂಡ ಸೇರ್ಪಡೆಗೊಂಡಿತು. ಅದು ರಕ್ತದ ಕೆಂಪು ಹನಿಯ ಒಂದು ಗುರುತು. ಜನರ ಕಂದಾಚಾರದ ಯೋಚನೆಯ ವ್ಯಾಪ್ತಿಯನ್ನು ದಾಟುವುದು ಹಾಗೂ ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಲು ಈ ಪೀರಿಯಡ್ಸ್ ಎಮೋಜಿಯದು ಒಂದು ದಿಟ್ಟ ಹೆಜ್ಜೆ. ಅದರ ಬೇಡಿಕೆಗಾಗಿ ಬ್ರಿಟನ್‌ನಲ್ಲಿ `ಪ್ಲಾನ್‌ ಇಂಟರ್‌ ನ್ಯಾಷನಲ್ ಯುಕೆ’ ಒಂದು ಕ್ಯಾಂಪೇನ್‌ ನಡೆಸಿತ್ತು.

ಮೆಸೇಜಿಂಗ್‌ ಆ್ಯಪ್‌ ವಾಟ್ಸ್ ಆ್ಯಪ್‌ ತನ್ನ ಬೀಟಾ ಅಪ್‌ ಡೇಟ್‌ ನಲ್ಲಿ ಕೆಲವು ಹೊಸ ಎಮೋಜಿಗಳನ್ನು ತಂದಿದ್ದು, ಅವುಗಳ ಡಿಸೈನ್ ಬದಲಿಸಲಾಗಿದೆ. ಹೊಸ ಆ್ಯಂಡ್ರಾಯ್ಡ್ ಬೀಟಾ ಅಪ್‌ ಡೇಟ್‌ನಲ್ಲಿ ಅಂತಹ 155 ಎಮೋಜಿಗಳಿದ್ದು, ಅವುಗಳ ಡಿಸೈನ್‌ ಬದಲಾಗಿದೆ.

ಆ್ಯಂಡ್ರಾಯ್ಡ್ ಬೀಟಾ ಟೆಸ್ಟರ್

ಹೊಸ ಅಪ್‌ ಡೇಟ್‌ 2.19.139ನಲ್ಲಿ ಈ ಎಮೋಜಿಗಳನ್ನು ನೋಡಬಹುದು. ಈಗ ಸ್ಮಾರ್ಟ್‌ ಫೋನ್‌ಗಳು ನಮ್ಮ ಅವಶ್ಯಕತೆಯಾಗಿವೆ. ಅದರ ಹೊರತಾಗಿ ನಮ್ಮ ಕೆಲಸ ಕಾರ್ಯಗಳು ನಡೆಯುವುದೇ ಇಲ್ಲ. ಪ್ರತಿದಿನ ನಾವು ಟ್ವಿಟರ್‌, ಫೇಸ್‌ ಬುಕ್‌ ಸಹಿತ ಹಲವು ಆ್ಯಪ್‌ ಗಳನ್ನು ಬಳಸುತ್ತೇವೆ. ಅಲ್ಲಿ ವಿಷಯಗಳನ್ನು ಹೆಚ್ಚು ಸಂಕ್ಷಿಪ್ತಗೊಳಿಸಲು, ಅವುಗಳಿಗಾಗಿಯೇ ಸಿದ್ಧಪಡಿಸಿದ ಎಮೋಜಿಗಳನ್ನು ಬಳಸುತ್ತೇವೆ. ಆದರೆ ಅವುಗಳಲ್ಲಿರುವ 1000ಕ್ಕೂ ಹೆಚ್ಚು ಎಮೋಜಿಗಳ ಅರ್ಥ ನಮಗೆ ತಿಳಿದೇ ಇಲ್ಲ, ಆದರೆ ಈಗ ಈ ಎಲ್ಲ ಎಮೋಜಿ ಕ್ಯಾರೆಕ್ಟರ್‌ಗಳನ್ನು ಅರ್ಥ ಮಾಡಿಕೊಳ್ಳಲು ಎಲ್ಲಕ್ಕೂ ಸುಲಭ ಉಪಾಯವೆಂದರೆ ಎಮೋಜಿಪೀಡಿಯಾ. ಅದರಲ್ಲಿ ನಿಮಗೆ ಪ್ರತಿಯೊಂದು ಎಮೋಜಿಗಳ ಅರ್ಥ ಸಿಗುತ್ತದೆ.

– ಶೋಭಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ