ಹಗ್ಗಿಂಗ್‌ ಈಗ ಅತ್ಯಗತ್ಯ :

ಕೊರೋನಾ ಮಹಾಮಾರಿ ವಕ್ರಿಸಿದಾಗಿನಿಂದ ಅಪರೂಪಕ್ಕೆ ಭೇಟಿಯಾದರೂ ಜನ ಹಾರ್ದಿಕವಾಗಿ ಅಪ್ಪಿಕೊಳ್ಳುವಂತಿಲ್ಲ. ಆದರೆ ಆ ಹಳೆಯ ಅಭ್ಯಾಸ ಅಷ್ಟು ಬೇಗ ಬಿಟ್ಟುಹೋಗುವುದೇ? ಇತ್ತೀಚೆಗೆ ನಡೆದ ಮಿಸ್‌ ಯೂನಿವರ್ಸ್ ಸ್ಪರ್ಧೆಯಲ್ಲಿ ಮಿಸ್‌ ಬ್ರೆಝಿಲ್ ‌ಮಿಸ್‌ ಕೊಲಂಬಿಯಾಳಿಗೆ ಮಿಸ್‌ ಯೂನಿವರ್ಸ್‌ ಕಿರೀಟ ತೊಡಿಸಿದಾಗ, ಸಹಜವಾಗಿ ಹಗ್ಗಿಂಗ್‌ ಬಯಕೆ ಹೊಮ್ಮಿತು. ತುಸು ಹಿಂಜರಿಕೆ ಸಹಿತ! ಈ ಮಹಾಮಾರಿ ನಮ್ಮ ಹಳೆಯ ಅಭ್ಯಾಸಗಳಿಗೆ ಇನ್ನೂ ಅದೆಷ್ಟು ದಿನ ಕಂಟಕವಾಗಿರುತ್ತದೋ.....   ?

ಚಪ್ಪಾಳೆ ತಟ್ಟುವುದೇ ಆಗಿಹೋಯ್ತು :

Julia_Gama_and_Laura_Victoria_Olascuaga_in_Hollywood_Welcome_Hug

ಪಾಶ್ಚಿಮಾತ್ಯ ರಾಷ್ಟ್ರಗಳು ಇದೀಗ ಬಹುತೇಕ ಲಾಕ್‌ ಡೌನ್‌ನಿಂದ ಹೊರಬರುತ್ತಿವೆ. ನಮ್ಮ ದೇಶದ ಕೊರೋನಾ ವೈರಸ್‌ ಮ್ಯೂಟೆಂಟ್‌ ಅಲ್ಲಿ ತಲುಪಬಾರದಷ್ಟೆ. ಅಲ್ಲಂತೂ ಬಹುತೇಕ ಮಹಾಮಾರಿ ತೊಲಗಿದೆ ಎನ್ನಬಹುದು, ವ್ಯಾಕ್ಸಿನೇಶನ್‌ ಅಚ್ಚುಕಟ್ಟಾಗಿ ನಡೆದಿದೆ. ನಮ್ಮಲ್ಲಂತೆ ಎಲ್ಲ ಧರ್ಮ ಕ್ಷೇತ್ರಗಳಲ್ಲೂ ಸಭೆ ಸೇರಿಲ್ಲ. ನಮ್ಮಲ್ಲಿ ಇನ್ನೂ ಕಷಾಯ, ಗೋಸೇವೆ, ದೀಪ ಬೆಳಗು, ತಟ್ಟೆ ಬಡಿ, ಚಪ್ಪಾಳೆ ಹೊಡಿ.... ಇದೇ ಆಗಿಹೋಯ್ತು.

ಈ ಸವಾಲು ಸಂಕಟಕರ :

ಈ ಡ್ರೆಸ್‌ ಬೊಂಬಾಟ್‌ ಆಗಿದೆ, ಆದರೆ ಇದನ್ನು ಧರಿಸಿ ಹೋಗಬೇಕು ಎಲ್ಲಿಗೆ? ಇದರಲ್ಲೇನು ಕಷ್ಟ...... ಬಾತ್‌ ರೂಮಿನಲ್ಲಿ ಡ್ರೆಸ್‌ ಬದಲಾಯಿಸಿ, ಹೆವಿ ಮೇಕಪ್‌ ಮುಗಿಸಿ, ಬೆಡ್‌ ರೂಮಿನಿಂದ ಹೊರಟು, ಡ್ರಾಯಿಂಗ್‌ ರೂಂ ದಾಟಿ, ಮತ್ತೆ ಬೆಡ್‌ ರೂಮಿಗೇ ಹೋಗಿ. ನಿಮ್ಮ ಫ್ಯಾಷನ್‌ ಪೆರೇಡ್‌, ಕ್ಯಾಟ್‌ ವಾಕ್‌ ಮುಗಿಸಿಕೊಳ್ಳಿ. ಮೊಬೈಲ್ ‌ನಲ್ಲಿ ಪ್ರೀ ರೆಕಾರ್ಡೆಡ್‌ ಚಪ್ಪಾಳೆ ಇರಲಿ. ಹಿಂದೆಲ್ಲ ಫ್ಯಾಷನ್‌ ಶೋಗಳಲ್ಲಿ ರಾಂಪ್ ನಲ್ಲಿದ್ದ ನಿಮ್ಮನ್ನೇ ಜನ ನೋಡುತ್ತಿದ್ದರೆಂದು ಏನು ಗ್ಯಾರಂಟಿ? ಕೊರೋನಾ ಕೃಪೆಯಿಂದಾಗಿ ಈಗ ನೀವೇ ವೇದಿಕೆಯಲ್ಲಿ ಕ್ಯಾಟ್‌ ವಾಕ್‌ ಮಾಡುತ್ತಾ, ಕನ್ನಡಿಯಿಂದ ಪ್ರೇಕ್ಷಕರಾಗಿ!

ಒಂದಷ್ಟು ಖುಷಿಪಟ್ಟುಕೊಳ್ಳಿ :

Isabella

ಇದೀಗ ಪ್ರೌಢಾವಸ್ಥೆ ತಲುಪಿದ ವೃದ್ಧರಿಗೂ ಡ್ಯಾನ್ಸ್ ಕಲಿಸುವ ಸ್ಕೂಲ್ ‌ತೆರೆಯಲ್ಪಟ್ಟಿದೆ! ಏಕೆಂದರೆ ಇದರಿಂದ ಅಲ್ಲಿ ಕೇವಲ ಉತ್ತಮ ವ್ಯಾಯಾಮ ಮಾತ್ರವಲ್ಲ, ಹೊಸ ಫ್ರೆಂಡ್ಸ್ ಸಿಗುತ್ತಾರೆ. ವಿಶ್ವದೆಲ್ಲೆಡೆ ವಯೋವೃದ್ಧರು ಕಣ್ಣ ಮುಂದೆ ನೋಡ ನೋಡುತ್ತಲೇ ಸಂಗಾತಿ ಕಳೆದುಕೊಂಡಿದ್ದಾರೆ. ಇಂಥವರ ದುಃಖ ಸಮವಯಸ್ಕರಿಗಲ್ಲದೆ ಬೇರಾರಿಗೆ ತಿಳಿದೀತು? ಹಿಂದೆಯೂ ಅಕಾಲಮರಣ ಇತ್ತು, ಆದರೆ ಕಡಿಮೆ. ನಮ್ಮಲ್ಲಿ ರಾಜ್ಯ/ಕೇಂದ್ರ  ಸರ್ಕಾರಗಳ ನಿರ್ಲಕ್ಷ್ಯದಿಂದ ಸಾವು ಹೆಚ್ಚುತ್ತಿದೆ. ಇದಕ್ಕೆ ಅಧಿಕಾರ, ಧರ್ಮ ಅಷ್ಟೇ ಮುಖ್ಯ. ಹೀಗೆ ಫ್ರೆಂಡ್ಸ್ ಜೊತೆ ಕೂಡಿ ಒಂದಷ್ಟು ಖುಷಿ ಹಂಚಿಕೊಳ್ಳಬಹುದಲ್ಲವೇ?

ಮಕ್ಕಳು ಎಲ್ಲಿಗೆ ಹೋಗಬೇಕು? :

NEP9988554

ವಿಚ್ಛೇದನದ ಪ್ರಕರಣಗಳಲ್ಲಿ ಎಲ್ಲಕ್ಕಿಂತ ಕಷ್ಟಕರ ಘಟ್ಟವೆಂದರೆ, ಮಕ್ಕಳ ಕಸ್ಟಡಿ ಯಾರಿಗೆ ಒಪ್ಪಿಸುವುದು ಎನ್ನುವಲ್ಲಿ. ದಾಂಪತ್ಯದಲ್ಲಿ ನೋವುಂಡ ಸಂಗಾತಿ ಮಕ್ಕಳ ಜವಾಬ್ದಾರಿ ತನಗೇ ಬರಬಾರದೇ ಎಂದು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಇಂಥ ಸಮಸ್ಯೆಗಳನ್ನು ಎದುರಿಸುವ ಹೆಂಗಸರಿಗೆಂದೇ ಅಮೆರಿಕಾದಲ್ಲಿ ಬೇಕಾದಷ್ಟು ಸಂಸ್ಥೆಗಳಿವೆ. ಹೀಗೆ ಲೀಜಾಗೆ ತನ್ನ ಮಗಳ ಜೊತೆ ವಾಷಿಂಗ್‌ ಟನ್‌ ನಿಂದ ಶಿಕಾಗೋಗೆ ಶಿಫ್ಟ್ ಆಗಲು ಸಹಕರಿಸಿತು. ಲೀಜಾ ತನ್ನ ವಿಚ್ಛೇದನದ ಪ್ರಕರಣದಲ್ಲಿ ಪತಿ ತನ್ನನ್ನು ಎಷ್ಟು ಹೊಡೆದು ಬಡಿದು ಗೋಳುಗುಟ್ಟಿಸುತ್ತಾನೆಂದು ನಿರೂಪಿಸಿದ್ದಳು. ನಮ್ಮ ದೇಶದಲ್ಲಿ ಇಂಥದ್ದನ್ನು ನಿರೂಪಿಸುವಷ್ಟರಲ್ಲಿ ಮಕ್ಕಳೇ ಮುದುಕರಾಗಿರುತ್ತಾರೆ. ನಮ್ಮಲ್ಲಿ ಭವ್ಯ ಪಾರಂಪರಿಕ ಕೌಟುಂಬಿಕ ಮೌಲ್ಯಗಳಿಗೇನೂ ಕಡಿಮೆ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ