ಅಹಮದಾಬಾದ್‌ನ್ನು ಸ್ಥಳೀಯ ಭಾಷೆಯಲ್ಲಿ `ಅಮ್ದಾಬಾದ್‌' ಎಂದು ಕರೆಯಲಾಗುತ್ತದೆ. ಅದು ಗುಜರಾತಿನ ಮಹತ್ವದ ನಗರ, ಹಿಂದೆ ರಾಜಕೀಯ ರಾಜಧಾನಿಯೂ ಆಗಿತ್ತು. ಭಾರತದ 7ನೇ ಅತಿ ದೊಡ್ಡ ಮಹಾನಗರ. ಪ್ರವಾಸೋದ್ಯಮದ ಸಾರ್ಥಕ ಪ್ರಯತ್ನಗಳಿಂದಾಗಿ ಅದು ಪ್ರಸ್ತುತ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವಾಗಿದೆ.

ನಾವು ನಮ್ಮ ಪ್ರವಾಸವನ್ನು ಗಾಂಧಿ ಆಶ್ರಮದಿಂದ ಆರಂಭಿಸಿದೆ. ನಮ್ಮದೇ ಆದ ಒಂದು ತಂಡವಿತ್ತು. ಹೀಗಾಗಿ ನಾವು ಟ್ರಾವೆಲರ್‌ ಬುಕ್‌ ಮಾಡಿದ್ದೆ. ಆ ಕಾರಣದಿಂದ ನಮಗೆ ಹೆಚ್ಚು ಸಮಯ ವ್ಯರ್ಥ ಮಾಡಬೇಕಾಗಿ ಬರಲಿಲ್ಲ.

ಗಾಂಧಿ ಆಶ್ರಮ : ಗುಜರಾತ್‌ ತನ್ನ ವೇಷಭೂಷಣ ಹಾಗೂ ಸಂಸ್ಕೃತಿ ಕಾರಣದಿಂದ ಪ್ರಸಿದ್ಧಿ ಪಡೆದಿರುವಂತೆ, ಪ್ರವಾಸಿ ತಾಣಗಳಿಂದಲೂ ಪ್ರಸಿದ್ಧಿ ಪಡೆದಿದೆ.

ಪೋರಬಂದರ್‌ ನಲ್ಲಿ ಗಾಂಧೀಜಿಯವರಿಗೆ ಅಹಮದಾಬಾದ್‌ ಬಗ್ಗೆ ವಿಶೇಷ ಒಡನಾಟ ಇತ್ತು. ಇದೇ ಕಾರಣದಿಂದ ಅವರು ಸಬರಮತಿ ಆಶ್ರಮ ತೆರೆದರು. 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದ ಬಳಿಕ ಅದೇ ಅವರ ವಾಸಸ್ಥಳವಾಗಿತ್ತು. ಕಸ್ತೂರ ಬಾ ಗಾಂಧಿ ಕೂಡ ಇಲ್ಲಿಯೇ ನೆಲೆಸಿದ್ದರು. ಇಬ್ಬರ ವಾಸಸ್ಥಳಗಳನ್ನು ಇಲ್ಲಿ ಕಾಣಬಹುದು. ಸಬರಮತಿ ಆಶ್ರಮವನ್ನು ಗಾಂಧಿ ಆಶ್ರಮ ಎಂದೇ ಕರೆಯಲಾಗುತ್ತದೆ. ಅದನ್ನು ನೋಡಿದಾಗ, ಗಾಂಧೀಜಿಯವರು ಇಲ್ಲೇ ಎಲ್ಲೋ ಹತ್ತಿರದಲ್ಲಿ ಇದ್ದಾರೆ ಎಂಬ ಅನುಭವ ಬರುತ್ತದೆ. ಈ ಆಶ್ರಯದಲ್ಲಿ ಗಾಂಧೀಜಿಯವರಿಗೆ ಸಂಬಂಧಿಸಿದ ಸಾಹಿತ್ಯ ಮತ್ತು ಅವರ ಜೀವನಕ್ಕೆ ಸಂಬಂಧಪಟ್ಟ ಅಪರೂಪದ ಚಿತ್ರಗಳು ನೋಡಲು ಸಿಗುತ್ತವೆ.

ಗಾಂಧಿಯವರು ತಮ್ಮ ಮೊದಲ ಆಶ್ರಮವನ್ನು ಅಹಮದಾಬಾದ್‌ನ ಕೋಚಕಾಬ್‌ನಲ್ಲಿ 1915ರಲ್ಲಿ ಸ್ಥಾಪನೆ ಮಾಡಿದರು. ಬಳಿಕ 1917ರಲ್ಲಿ ಅದನ್ನು ಸಬರಮತಿ ದಂಡೆಗೆ ಸ್ಥಳಾಂತರ ಮಾಡಲಾಯಿತು. ಹಾಗಾಗಿಯೇ ಇದನ್ನು `ಸಬರಮತಿ ಆಶ್ರಮ' ಎಂದು ಕರೆಯಲಾಯಿತು.

dandikutir2

1917 ರಿಂದ 1930ರ ತನಕ ಗಾಂಧೀಜಿಯವರು ಇಲ್ಲಿ ವಾಸ್ತವ್ಯ ಹೂಡಿದ್ದರು. ಮಾರ್ಚ್‌, 1930ರಂದು ಗಾಂಧೀಜಿಯವರು ಇಲ್ಲಿಂದಲೇ ಉಪ್ಪಿನ ಸತ್ಯಾಗ್ರಹಕ್ಕಾಗಿ ದಂಡೀ ಸತ್ಯಾಗ್ರಹ ಆರಂಭಿಸಿದ್ದರು.

ಈ ಆಶ್ರಮ 3 ಅದ್ಭುತ ಸ್ಥಳಗಳಿಂದ ಆವರಿಸಿದೆ. ಒಂದೆಡೆ ಸಬರಮತಿ ನದಿ, ಇನ್ನೊಂದೆಡೆ ಸ್ಮಶಾನ ಘಾಟ್‌ ಹಾಗೂ ಮೂರನೇ ಬದಿ ಜೈಲು ಇದೆ. ಇಲ್ಲಿ ಇರುವವರನ್ನು ಗಾಂಧೀಜಿಯವರು ಸತ್ಯಾಗ್ರಹಿಗಳೆಂದು ಕರೆಯುತ್ತಿದ್ದರು. ಅವರ ಪ್ರಕಾರ ಸತ್ಯಾಗ್ರಹಿಗಳ ಬಳಿ 2 ಪರ್ಯಾಯಗಳು ಮಾತ್ರ ಇರುತ್ತಿದ್ದವು. ಜೈಲಿಗೆ ಹೋಗುವುದು ಇಲ್ಲಿ ಜೀವನ ಮುಗಿಸಿ  ಸ್ಮಶಾನಕ್ಕೆ ಹೋಗುವುದು.ಆಶ್ರಮದ ಮುಖ್ಯ ಸ್ಥಳ `ಹೃದಯ ಕುಂಜ' ಅಲ್ಲಿಯೇ ಬಾಪೂಜಿ ವಾಸಿಸುತ್ತಿದ್ದರು. ಅವರು ಬಳಸುತ್ತಿದ್ದ ಪರಿಕರಗಳನ್ನೆಲ್ಲ ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಅವುಗಳಲ್ಲಿ ಅವರು ಬರೆದ ಪತ್ರಗಳು ಮುಖ್ಯವಾಗಿವೆ. ಸಂಗ್ರಹಾಲಯದ ಒಂದು ಸ್ಥಳವನ್ನು `ಮೈ ಲೈಫ್‌ ಈಸ್‌ ಮೈ ಮೆಸೇಜ್‌' ಎಂದು ಕರೆಯಲಾಗುತ್ತದೆ. ಇಲ್ಲಿ ಅವರ ಜೀವನಕ್ಕೆ ಸಂಬಂಧಪಟ್ಟ 8 ವಿಶಾಲ ಪೇಂಟಿಂಗ್‌ ಗಳಿವೆ. ಅವುಗಳಲ್ಲಿ ಅವರ ಜೀವನಗಾಥೆಯನ್ನು ಹತ್ತಿರದಿಂದ ಕಾಣಬಹುದು.

ಸಬರಮತಿ ಆಶ್ರಮದೆದುರು `ತೋರಣ್‌ ರೆಸ್ಟುರಾ'ಗೆ ಹೋಗುವುದರ ಅರ್ಥ ಅದ್ಭುತ. ಗುಜರಾತಿ ಥಾಲಿಯ ಆನಂದ ಅನುಭವಿಸುವುದಾಗಿದೆ. ಗುಜರಾತ್‌ಗೆ ಹೋದರೆ ಅಲ್ಲಿನ ಊಟದ ಮಜವನ್ನು ಅನುಭವಿಸಲೇಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ