ಗುಂಡ : ಇತ್ತು ಎಣ್ಣೆ ಅಂಗಡಿಗೆ ಹೋಗಿ ಬಾಟಲಿ ಹಿಡಿದುಕೊಂಡು ಬರೋವಾಗ ಎದುರಿಗೆ ನಮ್ಮ ತಂದೆ ಬಂದು ಬಿಡುವುದೇ?
ಸೀನ : ಓ.... ಹಾಗಾದರೇ ನಿನಗೆ ಎರ್ರಾಬಿರ್ರಿ ಒದೆ ಬಿತ್ತು ಅನ್ನು.
ಗುಂಡ : ನಾನು ಕಿಲಾಡಿ.... ಹಾಗೆಲ್ಲ ಸಿಕ್ಕಿ ಹಾಕಿಕೊಳ್ತೀನಾ?
ಸೀನ : ಏನು ಮಾಡಿದೆ?
ಗುಂಡ : ರಸ್ತೆ ಮಧ್ಯೆ ಅದನ್ನು ಅವರಿಗೆ ಕೊಟ್ಟು, `ಹ್ಯಾಪಿ ಬರ್ತ್ ಡೇ ಪಪ್ಪ!' ಅಂತ ಅವರ ಪಾದ ಮುಟ್ಟಿ ನಮಸ್ಕಾರ ಮಾಡಿಬಿಟ್ಟೆ.
ನಿಂಗಯ್ಯ ತನ್ನ 10 ಮಕ್ಕಳ ಸಮೇತ ಹಳ್ಳಿ ಬಸ್ಸು ಹತ್ತಿದ. ಕ್ಷಣ ಮಾತ್ರದಲ್ಲಿ ಇಡೀ ಬಸ್ಸು ಅಲ್ಲೋಲ ಕಲ್ಲೋಲ ಆಗುವಷ್ಟು ಅವು ಗಲಾಟೆ ಮಾಡಿದವು. ಎಲ್ಲರೂ ಮುಖ ಕಿವುಚಿದರು.
ಮುಂದಿನ ಸ್ಟಾಪಿನಲ್ಲಿ ಒಬ್ಬ ತಾತಾ ಕೋಲು ಊರಿಕೊಂಡು ಅಂತೂ ಇಂತೂ ಹೇಗೋ ಕಷ್ಟಪಟ್ಟು ಬಸ್ಸೇರಿ ಒಳಗೆ ಬಂದಾಗ, ವಿಧಿಯಿಲ್ಲದೆ ಸಿಡುಕುತ್ತಾ ನಿಂಗಯ್ಯ ಸೀಟು ಬಿಟ್ಟುಕೊಟ್ಟ.
ನಿಂಗ : ಬಸ್ಸಿಗೆ ಬರುವ ಬದಲು ತೆಪ್ಪಗೆ ಒಂದು ಕೋಣೆಯಲ್ಲಿ ಮಲಗಿರಬಾರದೇ ತಾತಾ.....
ತಾತಾ : ಕಳೆದ 10 ವರ್ಷಗಳಿಂದ ನೀನೂ ನಿನ್ನ ಹೆಂಡ್ತಿ ಬೇರೆ ಬೇರೇ ಕೋಣೆಯಲ್ಲಿ ತೆಪ್ಪಗೆ ಮಲಗಿದ್ದಿದ್ದರೆ, ಇಂದು ಈ ಬಸ್ಸು ಎಷ್ಟೋ ಪ್ರಶಾಂತವಾಗಿರುತ್ತಿತ್ತು!
ಮಾಡರ್ನ್ ಮಾಲತಿ ಒಂದು ಬಸ್ಸು ಹತ್ತಿ ಸ್ಟ್ಯಾಂಡಿಂಗ್ ನಲ್ಲಿ ನಿಂತು ಸಾಕಾಗಿ ಕೇಳಿದಳು, ``ಈ ಡಬ್ಬಾ ಯಾವಾಗ ಹೊರಡುತ್ತದೆ?''
ಅವಳತ್ತ ಕೆಕ್ಕರಿಸಿಕೊಂಡು ನೋಡಿದ ಡ್ರೈವರ್, ``ಇನ್ನಷ್ಟು ಕಸ ತುಂಬಿದ ಮೇಲೆ!'' ಎನ್ನುವುದೇ.....?
ಟೀಚರ್ : ಎಲ್ಲಿ, ಯಾರಾದರೂ ಸೀನಿಯರ್ ಮತ್ತು ಜೂನಿಯರ್ ಪದಗಳಿಗಿರುವು ವ್ಯತ್ಯಾಸ ತಿಳಿಸುವಿರಾ?
ಗುಂಡ : ಟೀಚರ್, ಸಮುದ್ರದ ಹತ್ತಿರ ವಾಸ ಮಾಡುವವರಿಗೆ ಸೀನಿಯರ್ ಅಂತಲೂ, (ಮೈಸೂರಿನಂಥ) ಮೃಗಾಲಯದ ಹತ್ತಿರ ವಾಸ ಮಾಡುರಿಗೆ ಜೂನಿಯರ್ ಅಂತಲೂ ಹೇಳಬಹುದು!
ಕಾಲೇಜು ಹುಡುಗ : ನಿನ್ನ ದುಪಟ್ಟಾ ಮೇಲೆ ಎಳೆದುಕೋ...... ನೆಲ ಗುಡಿಸುತ್ತಾ ಹೋಗುತ್ತಿದೆ.
ಕಾಲೇಜು ಕನ್ಯೆ : ಅದು ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ನಾನು ಹೆಜ್ಜೆ ಇಟ್ಟ ಪಾದದ ಗುರುತನ್ನು ಯಾರೂ ಚುಂಬಿಸಬಾರದು ಅಂತ ಅದು ಆ ಜಾಗ ಸವರಿ, ಆ ಗುರುತನ್ನು ಅಳಿಸಿ ನನ್ನ ಪಾವಿತ್ರ್ಯ ಎತ್ತಿ ಹಿಡಿಯುತ್ತಿದೆ!
ಹುಡುಗ : ಕರ್ಮಕಾಂಡ.... ಮುಂದಿನ ತಿರುವಿನಲ್ಲಿ ರೈಲ್ವೆ ಬ್ರಿಜ್ ಇದೆ. ರೈಲು ಬಂದಾಗ ನಮ್ಮ ತಲೆ ಮೇಲೆ ಹಾದು ಹೋಗುತ್ತೆ ಅಂತ ಹೇಳಿದ್ದು!
ಹುಡುಗಿ : ಅಯ್ಯೋ........! `ನನ್ನನ್ನು ಪ್ರೇಮಿಸುವೆಯಾ?' ತನಗೆ ಗೊತ್ತಿದ್ದ ಹುಡುಗಿ ವಾಟ್ಸ್ ಆ್ಯಪ್ ಮೆಸೇಜಿನಲ್ಲಿ ಕೇಳಿದಾಗ, ಆಕಾಶಕ್ಕೆ ಏಣಿ ಹಾಕಿದ ಕಿಟ್ಟಿ, `ಹೌದು, ಹೌದು, ಹೌದು....' ಎಂದು 10 ಸಲ ರಿಪ್ಲೈ ಕೊಟ್ಟರೂ ಸುಡಾಗಾಡು ನೆಟ್ ವರ್ಕ್ ಅದನ್ನು ಮುಂದಕ್ಕೆ ಕಳುಹಿಸದೆ ತಡೆಹಿಡಿಯಿತು. (ಸೆಂಡ್ ಬಟನ್ ಒತ್ತಿ ಒತ್ತಿ ಕಿಟ್ಟಿಗೆ ಕೈ ನೋವು ಬಂತು) ಕಾದೂ ಕಾದೂ ಸಾಕಾದ ಆ ಹುಡುಗಿ ಅರ್ಧ ಗಂಟೆ ಬಿಟ್ಟು, `ಹಾಗಾದರೆ ನಿನಗೆ ರಾಖಿ ಕಟ್ಟಿಬಿಡುವೆ. ನನ್ನನ್ನು ತಂಗಿಯಾಗಿ ಒಪ್ಪಿಕೋ,' ಎಂದಾಗ, ಕಿಟ್ಟಿ ಬೇರೇನೋ ಟೈಪ್ ಮಾಡು ಮೊದಲು, ನೆಟ್ ವರ್ಕ್ ಕ್ಷಣಾರ್ಧದಲ್ಲಿ ಸರಿ ಹೋಗಿ ಎಲ್ಲಾ ಮೆಸೇಜುಗಳೂ ಸರ ಸರ ಹೋಗಿಬಿಡುವುದೇ.....?