ಸರಿಯಾದ ರೀತಿಯಲ್ಲಿ ಮೇಕಪ್ ಮಾಡಿಕೊಳ್ಳುವುದೂ ಒಂದು ಕಲೆ. ತಾನು ಮೇಕಪ್ ಕಲೆಯಲ್ಲಿ ಹೆಚ್ಚು ಪರಿಣಿತಗಳಾಗಬೇಕು ಎಂದು ಯಾವ ಹೆಣ್ಣು ತಾನೇ ಬಯಸುವುದಿಲ್ಲ? ಸರಿಯಾದ ರೀತಿಯಲ್ಲಿ ಮಾಡಿದ ಮೇಕಪ್ ನಿಂದ ಮುಖ ಎಷ್ಟು ಆಕರ್ಷಕ ಆಗಬಲ್ಲದೋ ಅದೇ ರೀತಿ ಕೆಟ್ಟದಾಗಿ ಮಾಡಿದ ಮೇಕಪ್ ನಿಂದ ಉತ್ತಮ ಆಗಬಹುದಿದ್ದ ಮುಖ ಕೆಟ್ಟು ಹಾಳಾಗುತ್ತದೆ.
ಮೇಕಪ್ ಕಲೆಯಲ್ಲಿ ನಿಪುಣತೆ ಹೊಂದುವುದು ಸುಲಭದ ಮಾತಲ್ಲ. ಕಾಲಕ್ಕೆ ತಕ್ಕಂತೆ ಮೇಕಪ್ ಮಾಡುವ ವಿಧಾನಗಳಲ್ಲೂ ಸಾಕಷ್ಟು ಸುಧಾರಣೆಗಳಾಗಿವೆ. ಹೀಗಾಗಿ ಲೇಟೆಸ್ಟ್ ಮೇಕಪ್ ಟ್ರೆಂಡಿನಲ್ಲಿ ಏರ್ ಬ್ರಶ್ ಮೇಕಪ್ ತನ್ನದೇ ಆದ ಮಹತ್ವ ಹೊಂದಿದೆ.
ಇತ್ತೀಚೆಗಂತೂ ಏರ್ ಬ್ರಶ್ ಮೇಕಪ್ ವಿಧಾನ ಬಹಳ ಹಿಟ್ ಎನಿಸಿದೆ. ಬನ್ನಿ, ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ :
ಏರ್ ಬ್ರಶ್ ಮೇಕಪ್ ಎಂದರೇನು?
ಇದುವರೆಗೂ ಸೌಂದರ್ಯ ತಜ್ಞೆಯರ ಬೆರಳುಗಳು ಮಾತ್ರವೇ ಮೇಕಪ್ ಜಾದೂ ಮಾಡುತ್ತಿದ್ದ. ಅವರಿಗೆ ಸ್ಪಂಜ್ ಮತ್ತು ಹಲವು ಬಗೆಯ ಬ್ರಶ್ ಗಳು ನೆರವಾಗುತ್ತಿದ್ದವು. ಆದರೆ ಈಗ ಬಂದಿರುವ ಹೊಸ ಬಗೆಯ ಏರ್ ಬ್ರಶ್ ಮೇಕಪ್ ಒಂದು ಯೂನಿಕ್ ವಿಧಾನವಾಗಿದ್ದು, ಇದರಿಂದ ಮೇಕಪ್ ನ್ನು ಮುಖದ ಮೇಲೆ ಸ್ಪ್ರೇ ವಿಧಾನದಿಂದ ಮಾಡಲಾಗುತ್ತದೆ. ಇದರ ಬಳಕೆಯನ್ನು ಸಾಮಾನ್ಯವಾಗಿ ನವ ವಧು ಶೃಂಗಾರ, ಮಾಡೆಲ್ಸ್ ಅಥವಾ ನಟಿಯರಿಗೆ ಮಾತ್ರ ಮಾಡಲಾಗುತ್ತದೆ. ಸಾಂಪ್ರದಾಯಿಕ ಮೇಕಪ್ ಗೆ ವಿರುದ್ಧವಾಗಿ ಏರ್ ಬ್ರಶ್ ಮೇಕಪ್ ನಲ್ಲಿ ನ್ಯಾಚುರಲ್ ಲುಕ್ಸ್ ಉಳಿಸಿಕೊಳ್ಳುವುದು ಸುಲಭವೆನಿಸುತ್ತದೆ. ಇದು ಚರ್ಮದಲ್ಲಿ ಮೇಕಪ್ ವಿಲೀನವಾಗಲು ಸಹಕಾರಿ. ಅದು ಎಷ್ಟು ಪರ್ಫೆಕ್ಟ್ ಆಗಿರುತ್ತದೆಂದರೆ, ನೋಡಿದವರು ಸಹಜವಾಗಿಯೇ ಚರ್ಮ ಅಂಥ ಚೆಲುವು ಪಡೆದಿದೆ ಎಂದು ಭಾವಿಸಬೇಕು.
ಇದನ್ನು ಹೇಗೆ ಮಾಡುತ್ತಾರೆ?
ಏರ್ ಬ್ರಶ್ ಮೇಕಪ್ ಮಾಡಲು ನಿಮ್ಮ ಬಳಿ ಸಮರ್ಪಕ ಟೂಲ್ಸ್ ಇರಬೇಕು, ಜೊತೆಗೆ ಸಾಕಷ್ಟು ಪರಿಣಿತಿ, ಅಭ್ಯಾಸ ಇರಬೇಕು.
ಏರ್ ಬ್ರಶ್ ಮೇಕಪ್‌ನ ಟೂಲ್ಸ್ ಯಾವ ಕಿಟ್ ಆನ್ ಲೈನ್ ನಲ್ಲೂ ಸಿಗುತ್ತದೆ. ಇದು ವಾರಂಟಿ ಪೀರಿಯಡ್ ಜೊತೆ ಬರುತ್ತದೆ. ಟೂಲ್ಸ್ ನಲ್ಲಿ ಒಂದು ಸಣ್ಣ ಕಂಪ್ರೆಸರ್, ಏರ್ ಬ್ರಶ್ ಗನ್, ಕ್ಲೀನ್ ಮಾಡಲು ಬ್ರಶ್, ಹಾಸ್ ಪೈಪ್, ಫೌಂಡೇಶನ್ ಕಲರ್, ಹೈಲೈಟರ್ ಇತ್ಯಾದಿ ಇರುತ್ತದೆ.
ನಿಮಗೆ ಏರ್ ಬ್ರಶ್ ಬಳಸುವುದು ಗೊತ್ತಿಲ್ಲದಿರಬಹುದು, ಮೇಕಪ್‌ಬೇಸಿಕ್ ತಿಳಿವಳಿಕೆ ಇದ್ದು, ಈ ಕಿಟ್ ನಲ್ಲಿ ನಮೂದಿಸಿದಂತೆ ಅನುಸರಿಸಿದರೆ ಬೇಕಾದಷ್ಟಾಯಿತು. ಜೊತೆಗೆ ಆನ್ ಲೈನ್ ವಿಡಿಯೋ ಸಹಾಯವನ್ನೂ ಪಡೆಯಬಹುದು. ಬಳಸುತ್ತಾ ಹೋದಂತೆ ತಂತಾನೇ ಅಭ್ಯಾಸ ಕೈಗೂಡುತ್ತದೆ.
ಮೇಕಪ್ ವಿಧಿವಿಧಾನ
ಏರ್ ಬ್ರಶ್ ಮೇಕಪನ್ನು ನೇರ ಕೈಗಳಿಂದಲೇ ಮಾಡಬೇಕಾಗುತ್ತದೆ. ಹೀಗಾಗಿ ಏರ್ ಬ್ರಶ್ ಗನ್ನಿನ ನಳಿಕೆಯಿಂದ ಮುಖ ಎಷ್ಟು ದೂರ ಇರಬೇಕು, ಎಷ್ಟು ಪ್ರೆಶರ್ ಬಳಸಬೇಕು ಇತ್ಯಾದಿ….. ಕಿಟ್ ನೋಡಿ ಗುರುತಿಸಿಕೊಳ್ಳಿ. ನಿಮಗೆಂಥ ಸಂದರ್ಭ, ಹೊತ್ತಿಗೆ ಮೇಕಪ್ ಬೇಕು ಹಾಗೂ ನೀವೆಷ್ಟು ಇದರಲ್ಲಿ ಪಳಗಿದ್ದೀರಿ ಎಂಬುದರ ಮೇಲೆ ಮೇಕಪ್‌ನ ರಿಸ್ಟ್ ನಿಂತಿದೆ. ಮೇಕಪ್‌ನ ಎಂಥ ಎಫೆಕ್ಟ್ ನೀಡಬೇಕು, ಇಡೀ ಮುಖಕ್ಕೆ ಅನ್ವಯಿಸುವಂತೆ ಕೊಡಬೇಕಾ ಅಥವಾ ಯಾವುದಾದರೂ ಒಂದು ಭಾಗವನ್ನಷ್ಟೇ ಹೈಲೈಟ್ ಮಾಡಬೇಕಾ, ನ್ಯೂಡ್ ಲುಕ್ಸ್ ಬೇಕಾ, ಕಂಟೂರಿಂಗ್ ಇರಾ ಇತ್ಯಾದಿ ಮೊದಲೇ ಗಮನಿಸತಕ್ಕದ್ದು. ಮೇಕಪ್ ಮಾಡುವಾಗ ಲುಕ್ಸ್ ಅನುಸಾರ ಏರ್ ಪ್ರೆಶರ್‌ನ್ನು ಬ್ಯಾಲೆನ್ಸ್ ಮಾಡಬೇಕಾದುದು ಬಲು ಮುಖ್ಯ.
ಏರ್ ಬ್ರಶ್ ಮೇಕಪ್ ವಿಧಾನವನ್ನು ನೀವೇ ಕಲಿಯಬಹುದು. ಸತತ ಅಭ್ಯಾಸದಿಂದ ಮಾತ್ರ ನೀವು ಇದರಲ್ಲಿ ಪರಿಣಿತಿ ಪಡೆಯಲು ಸಾಧ್ಯ. ಇದರಿಂದ ಮುಖದ ಮೇಲೆ ಹೊಳೆ ಹೊಳೆಯುವ ಕಾಂತಿ ಹೊಮ್ಮುತ್ತದೆ. ಜೊತೆಗೆ ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ, ಯಾರ ಮುಖದ ಮೇಲೆ ಅನಗತ್ಯ ಕೂದಲಿದೆಯೋ, ಅವರು ಅದನ್ನು ಮೊದಲು ನಿವಾರಿಸಿಕೊಳ್ಳಬೇಕು.
– ಬಿ. ಪ್ರಾರ್ಥನಾ
ಏರ್ ಬ್ರಶ್ ಮೇಕಪ್ ನ ಲಾಭಗಳು
ಇದರಲ್ಲಿ ದಿ ಬೆಸ್ಟ್ ಫೈನ್ ಲುಕ್ಸ್ ಲಭಿಸುತ್ತದೆ. ಕೈ, ಸ್ಪಂಜ್, ಬ್ರಶ್ ನಿಂದ ಮಾಡಿದ ಮೇಕಪ್ ನಲ್ಲಿ ಚರ್ಮದ ರೋಮರಂಧ್ರ ಮತ್ತು ಸುಕ್ಕುಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಆದರೆ ಏರ್ ಬ್ರಶ್ ಮೇಕಪ್ ಇವನ್ನೆಲ್ಲ ಒಂದಾಗಿಸಿ. ಈವೆನ್ ಸ್ಕಿನ್ ಟೋನ್ ಅನುಭವ ನೀಡುತ್ತದೆ.
ಇದರಿಂದ ಕಂಗಳು, ಚೀಕ್ ಬೋನ್ಸ್ ಮತ್ತು ತುಟಿಗಳನ್ನು ತುಸು ಉಬ್ಬರಿಸಿದಂತೆ ತೋರಿಸುವುದು ಸುಲಭ. ಜೊತೆಗೆ ಸಾಂಪ್ರದಾಯಿಕ ಮೇಕಪ್ ತರಹ ಇದರಲ್ಲಿ ಕಂಟೂರಿಂಗ್ ಮಾಡುವುದೂ ಸುಲಭ.
ಏರ್ ಬ್ರಶ್ ಮೇಕಪ್ ನಿಂದ ಚರ್ಮ ಒಂದೇ ಸಮನಾಗಿ, ಸ್ಮೂತ್ ಮತ್ತು ನ್ಯಾಚುರಲ್ ಎನಿಸುತ್ತದೆ.
ಇದು ಬಹಳ ಹೊತ್ತು ಉಳಿದುಕೊಳ್ಳುತ್ತದೆ. ಭಾರತೀಯ ಋತುಮಾನ ಹಾಗೂ ಹಲವು ಗಂಟೆಗಳ ಕಾಲ ನಡೆಯುವಂಥ ನಮ್ಮ ಹಬ್ಬ, ಶುಭ ಸಮಾರಂಭಗಳಲ್ಲಿ ಬಹಳ ಕಾಲ ನಿಲ್ಲುವಂಥ ಇಂಥ ಮೇಕಪ್ ನಮಗೆ ಹೆಚ್ಚು ಇಷ್ಟವಾಗುತ್ತದೆ, ಹಣ ಉಳಿಸುತ್ತದೆ. ಅದರಲ್ಲೂ ಮುಖ್ಯವಾಗಿ ನವ ವಧುವಿಗೆ. ಮದುವೆಯ ಇಡೀ ದಿನದ ಕಾರ್ಯಕ್ರಮಗಳನ್ನು ಅವಳು ಈ ಒಂದು ಮೇಕಪ್ ನಿಂದಲೇ ನಿಭಾಯಿಸಬಹುದು.
ವಾಟರ್ ಪ್ರೂಫ್ ಮೇಕಪ್ ಗಿಂತಲೂ ಏರ್ ಬ್ರಶ್ ಮೇಕಪ್ ಬೆಟರ್ ಎನಿಸಿದೆ.
ಹೈಜೀನ್‌ಹೆಲ್ತ್ ದೃಷ್ಟಿಯಿಂದಲೂ, ಸ್ವಚ್ಛತೆ ಮಾಡುವಾಗಲೂ ಏರ್ ಬ್ರಶ್ ಮೇಕಪ್ ಬೆಸ್ಟ್ ಎನಿಸುತ್ತದೆ. ಏಕೆಂದರೆ ಇದರಲ್ಲಿ ನೇರವಾಗಿ ಕೈಗಳನ್ನು ಬಳಸುವ ಬದಲು ಟೂಲ್ಸ್ ಬಳಕೆಯೇ ಪ್ರಧಾನ!
ಬ್ರೈಡಲ್ ಮೇಕಪ್ ನಲ್ಲಿ ಇದರಿಂದ ಹಾನಿ ನವ ವಧುವಿನ ಮೇಕಪ್‌ಗೆ ಇತ್ತೀಚೆಗೆ ಏರ್ ಬ್ರಶ್ ಮೇಕಪ್ ಬಳಸುವುದೇ ವಾಡಿಕೆ. ಆದರೆ ಇದರಿಂದ ತುಸು ಹಾನಿಯೂ ಉಂಟು. ಅವೆಂದರೆ :
ನವ ವಧುವಿನ ಕಂಗಳಿಂದ ಅಕಸ್ಮಾತ್ ಕಣ್ಣೀರು ಕೆನ್ನೆ ಮೇಲೆ ಇಳಿದರೆ, ಈ ಮೇಕಪ್ ಕೆಟ್ಟಂತೆಯೇ ಸರಿ. ನಂತರ ಅದನ್ನು ಸರಿಪಡಿಸಲು ಬಹಳ ಕಷ್ಟ ಪಡಬೇಕಾಗುತ್ತದೆ.
ವಾಟರ್ ಪ್ರೂಫ್ ಆದಕಾರಣ ಇದು ಅಗತ್ಯಕ್ಕಿಂತ ತುಸು ಹೆಚ್ಚು ಡ್ರೈ ಸ್ಕಿನ್ ಹೊಂದಿರುವ ವಧುಗಳಿಗೆ ಖಂಡಿತಾ ಒಪ್ಪುವುದಿಲ್ಲ.
ಇದರ ಬ್ರಾಂಡ್ಸ್ ಶೇಡ್ಸ್ ಹುಡುಕುತ್ತಾ ಹೊರಟರೆ ನಿಮಗೆ ಹೆಚ್ಚಿನ ಆಯ್ಕೆ ಸಿಗದು.
ಬಜೆಟ್ ನಲ್ಲೇ ಮೇಕಪ್ ಮುಗಿಸಬೇಕು ಎಂದು ಬಯಸುವ ವಧುವಿಗೆ ಇದು ಸೂಕ್ತವಲ್ಲ, ಏಕೆಂದರೆ ಇದು ತುಸು ದುಬಾರಿ!