ಸೌಂದರ್ಯ ತಜ್ಞೆಯರು ಈ ಕುರಿತಾಗಿ ಅನೇಕ ಸಲಹೆಗಳನ್ನು ನೀಡುತ್ತಾರೆ. ಬೇಸಿಗೆ ಅಥವಾ ಮಳೆಗಾಲವಿರಲಿ, ಹೊರಗೆ ಹೋದಾಗ ಬಿಸಿಲಿನ ತಾಪ ಕಾಡದೆ ಇರದು. ಹಾಗಾಗಿ ಸೂರ್ಯನ UV ಕಿರಣಗಳ ಬಾಧೆಯಿಂದ ತಪ್ಪಿಸಿಕೊಳ್ಳಲು ಪ್ರತಿದಿನ ಹೊರಗೆ ಹೊರಡುವಾಗ ಹಾಗೂ ಮನೆಯಲ್ಲಿ ಇರುವಾಗಲೂ ಸಹ 40+ನ SPF ಯುಕ್ತ ಸನ್‌ ಸ್ಕ್ರೀನ್‌ ಲೋಶನ್‌ ಹಚ್ಚಿರಿ. ಆಗ ಸೂರ್ಯನ UV ಕಿರಣಗಳು ನಿಮ್ಮ ಚರ್ಮಕ್ಕೆ ಯಾb ಹಾನಿಯನ್ನೂ ಮಾಡುವುದಿಲ್ಲ.

ಹೊರಗಿನ ಓಡಾಟದ ಮಧ್ಯೆ ಅವಕಾಶ ಸಿಕ್ಕಿದಾಗ ನೀವು 2 ಅಥವಾ 3 ಸಲ ಫೇಸ್‌ ವಾಶ್‌ ಬಳಸಿ ಮುಖ ತೊಳೆಯಿರಿ. ನಂತರ ಸನ್‌ ಸ್ಕ್ರೀನ್‌ ಹಚ್ಚಿರಿ. ಮೃದು ಕೋಮಲ ತುಟಿಗಳನ್ನು ಬಿಸಿಲಿನಿಂದ ರಕ್ಷಿಸಲು ಪ್ರತಿದಿನ ಅದರ ಮೇಲೆ ಲಿಪ್‌ ಬಾಮ್ ಹಚ್ಚಿರಿ.

ಇಂಥ ತೀವ್ರ ಬಿಸಿಲಲ್ಲಿ ಚರ್ಮದ ಆರ್ದ್ರತೆ ಕಡಿಮೆ ಆಗುದರಿಂದ ಅದು ಶುಷ್ಕ ಮತ್ತು ನಿರ್ಜೀವ ಆಗುತ್ತದೆ. ಹೀಗಾದಾಗ ಚರ್ಮವನ್ನು ಹೈಡ್ರೇಟ್‌ ಗೊಳಿಸಲು ಧಾರಾಳವಾಗಿ ನೀರು ಕುಡಿಯಿರಿ. ಇದರಿಂದ ಚರ್ಮ ಆರ್ದ್ರತೆ ಗಳಿಸಿ, ಕೋಮಲವಾಗುತ್ತದೆ.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೂ ಬಿಸಿಲು ತೀವ್ರ ತೆರನಾಗಿರುತ್ತದೆ. ಆದ್ದರಿಂದ ಸಾಧ್ಯವಿದ್ದಷ್ಟೂ ಈ ಹೊತ್ತಿನಲ್ಲಿ ಹೊರಗೆ ಓಡಾಡಬೇಡಿ.

ಬೇಸಿಗೆಯಲ್ಲಿ ಯಂಗ್‌ಫ್ರೆಶ್‌ ಸ್ಕಿನ್‌ ಗಾಗಿ ನಿಮ್ಮ ಡಯೆಟ್‌ ಸದಾ ಲೈಟ್‌ ಆಗಿರುವಂತೆ ನೋಡಿಕೊಳ್ಳಿ. ನಿಮ್ಮ ಮೆನು ಹೆಚ್ಚು ಹಸಿ ತರಕಾರಿ, ಹಣ್ಣು, ಅದರ ರಸದಿಂದ ಕೂಡಿರಲಿ.ಆರೋಗ್ಯಕರ ತ್ವಚೆಗಾಗಿ ಉತ್ತಮ  ನಿದ್ದೆಯೂ ಅವಶ್ಯಕ. ಆದ್ದರಿಂದ ಪ್ರತಿದಿನ 8 ಗಂಟೆಗೆ ಕಡಿಮೆ ಇಲ್ಲದಂತೆ ನಿದ್ರಿಸಿ.

- ಪ್ರತಿನಿಧಿ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ