ಸರಿಯಾದ ರೀತಿಯಲ್ಲಿ ಮೇಕಪ್‌ ಮಾಡಿಕೊಳ್ಳುವುದೂ ಒಂದು ಕಲೆ. ತಾನು ಮೇಕಪ್‌ ಕಲೆಯಲ್ಲಿ ಹೆಚ್ಚು ಪರಿಣಿತಗಳಾಗಬೇಕು ಎಂದು ಯಾವ ಹೆಣ್ಣು ತಾನೇ ಬಯಸುವುದಿಲ್ಲ? ಸರಿಯಾದ ರೀತಿಯಲ್ಲಿ ಮಾಡಿದ ಮೇಕಪ್‌ ನಿಂದ ಮುಖ ಎಷ್ಟು ಆಕರ್ಷಕ ಆಗಬಲ್ಲದೋ ಅದೇ ರೀತಿ ಕೆಟ್ಟದಾಗಿ ಮಾಡಿದ ಮೇಕಪ್‌ ನಿಂದ ಉತ್ತಮ ಆಗಬಹುದಿದ್ದ ಮುಖ ಕೆಟ್ಟು ಹಾಳಾಗುತ್ತದೆ.

ಮೇಕಪ್‌ ಕಲೆಯಲ್ಲಿ ನಿಪುಣತೆ ಹೊಂದುವುದು ಸುಲಭದ ಮಾತಲ್ಲ. ಕಾಲಕ್ಕೆ ತಕ್ಕಂತೆ ಮೇಕಪ್‌ ಮಾಡುವ ವಿಧಾನಗಳಲ್ಲೂ ಸಾಕಷ್ಟು ಸುಧಾರಣೆಗಳಾಗಿವೆ. ಹೀಗಾಗಿ ಲೇಟೆಸ್ಟ್ ಮೇಕಪ್‌ ಟ್ರೆಂಡಿನಲ್ಲಿ ಏರ್‌ ಬ್ರಶ್‌ ಮೇಕಪ್‌ ತನ್ನದೇ ಆದ ಮಹತ್ವ ಹೊಂದಿದೆ.

ಇತ್ತೀಚೆಗಂತೂ ಏರ್‌ ಬ್ರಶ್‌ ಮೇಕಪ್‌ ವಿಧಾನ ಬಹಳ ಹಿಟ್‌ ಎನಿಸಿದೆ. ಬನ್ನಿ, ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ :

ಏರ್ ಬ್ರಶ್‌ ಮೇಕಪ್‌ ಎಂದರೇನು?

ಇದುವರೆಗೂ ಸೌಂದರ್ಯ ತಜ್ಞೆಯರ ಬೆರಳುಗಳು ಮಾತ್ರವೇ ಮೇಕಪ್‌ ಜಾದೂ ಮಾಡುತ್ತಿದ್ದ. ಅವರಿಗೆ ಸ್ಪಂಜ್‌ ಮತ್ತು ಹಲವು ಬಗೆಯ ಬ್ರಶ್‌ ಗಳು ನೆರವಾಗುತ್ತಿದ್ದವು. ಆದರೆ ಈಗ ಬಂದಿರುವ ಹೊಸ ಬಗೆಯ ಏರ್‌ ಬ್ರಶ್‌ ಮೇಕಪ್‌ ಒಂದು ಯೂನಿಕ್ ವಿಧಾನವಾಗಿದ್ದು, ಇದರಿಂದ ಮೇಕಪ್‌ ನ್ನು ಮುಖದ ಮೇಲೆ ಸ್ಪ್ರೇ ವಿಧಾನದಿಂದ ಮಾಡಲಾಗುತ್ತದೆ. ಇದರ ಬಳಕೆಯನ್ನು ಸಾಮಾನ್ಯವಾಗಿ ನವ ವಧು ಶೃಂಗಾರ, ಮಾಡೆಲ್ಸ್ ಅಥವಾ ನಟಿಯರಿಗೆ ಮಾತ್ರ ಮಾಡಲಾಗುತ್ತದೆ. ಸಾಂಪ್ರದಾಯಿಕ ಮೇಕಪ್‌ ಗೆ ವಿರುದ್ಧವಾಗಿ ಏರ್‌ ಬ್ರಶ್‌ ಮೇಕಪ್‌ ನಲ್ಲಿ ನ್ಯಾಚುರಲ್ ಲುಕ್ಸ್ ಉಳಿಸಿಕೊಳ್ಳುವುದು ಸುಲಭವೆನಿಸುತ್ತದೆ. ಇದು ಚರ್ಮದಲ್ಲಿ ಮೇಕಪ್‌ ವಿಲೀನವಾಗಲು ಸಹಕಾರಿ. ಅದು ಎಷ್ಟು ಪರ್ಫೆಕ್ಟ್ ಆಗಿರುತ್ತದೆಂದರೆ, ನೋಡಿದವರು ಸಹಜವಾಗಿಯೇ ಚರ್ಮ ಅಂಥ ಚೆಲುವು ಪಡೆದಿದೆ ಎಂದು ಭಾವಿಸಬೇಕು.

ಇದನ್ನು ಹೇಗೆ ಮಾಡುತ್ತಾರೆ?

ಏರ್‌ ಬ್ರಶ್‌ ಮೇಕಪ್‌ ಮಾಡಲು ನಿಮ್ಮ ಬಳಿ ಸಮರ್ಪಕ ಟೂಲ್ಸ್ ‌ಇರಬೇಕು, ಜೊತೆಗೆ ಸಾಕಷ್ಟು ಪರಿಣಿತಿ, ಅಭ್ಯಾಸ ಇರಬೇಕು.

ಏರ್‌ ಬ್ರಶ್‌ ಮೇಕಪ್‌ನ ಟೂಲ್ಸ್ ‌ಯಾವ ಕಿಟ್‌ ಆನ್‌ ಲೈನ್‌ ನಲ್ಲೂ ಸಿಗುತ್ತದೆ. ಇದು ವಾರಂಟಿ ಪೀರಿಯಡ್‌ ಜೊತೆ ಬರುತ್ತದೆ. ಟೂಲ್ಸ್ ನಲ್ಲಿ ಒಂದು ಸಣ್ಣ ಕಂಪ್ರೆಸರ್‌, ಏರ್‌ ಬ್ರಶ್‌ ಗನ್‌, ಕ್ಲೀನ್‌ ಮಾಡಲು ಬ್ರಶ್‌, ಹಾಸ್‌ ಪೈಪ್‌, ಫೌಂಡೇಶನ್‌ ಕಲರ್‌, ಹೈಲೈಟರ್‌ ಇತ್ಯಾದಿ ಇರುತ್ತದೆ.

ನಿಮಗೆ ಏರ್‌ ಬ್ರಶ್‌ ಬಳಸುವುದು ಗೊತ್ತಿಲ್ಲದಿರಬಹುದು, ಮೇಕಪ್‌ಬೇಸಿಕ್‌ ತಿಳಿವಳಿಕೆ ಇದ್ದು, ಈ ಕಿಟ್‌ ನಲ್ಲಿ ನಮೂದಿಸಿದಂತೆ ಅನುಸರಿಸಿದರೆ ಬೇಕಾದಷ್ಟಾಯಿತು. ಜೊತೆಗೆ ಆನ್‌ ಲೈನ್‌ ವಿಡಿಯೋ ಸಹಾಯವನ್ನೂ ಪಡೆಯಬಹುದು. ಬಳಸುತ್ತಾ ಹೋದಂತೆ ತಂತಾನೇ ಅಭ್ಯಾಸ ಕೈಗೂಡುತ್ತದೆ.

ಮೇಕಪ್‌ ವಿಧಿವಿಧಾನ

ಏರ್‌ ಬ್ರಶ್‌ ಮೇಕಪನ್ನು ನೇರ ಕೈಗಳಿಂದಲೇ ಮಾಡಬೇಕಾಗುತ್ತದೆ. ಹೀಗಾಗಿ ಏರ್‌ ಬ್ರಶ್‌ ಗನ್ನಿನ ನಳಿಕೆಯಿಂದ ಮುಖ ಎಷ್ಟು ದೂರ ಇರಬೇಕು, ಎಷ್ಟು ಪ್ರೆಶರ್‌ ಬಳಸಬೇಕು ಇತ್ಯಾದಿ..... ಕಿಟ್‌ ನೋಡಿ ಗುರುತಿಸಿಕೊಳ್ಳಿ. ನಿಮಗೆಂಥ ಸಂದರ್ಭ, ಹೊತ್ತಿಗೆ ಮೇಕಪ್‌ ಬೇಕು ಹಾಗೂ ನೀವೆಷ್ಟು ಇದರಲ್ಲಿ ಪಳಗಿದ್ದೀರಿ ಎಂಬುದರ ಮೇಲೆ ಮೇಕಪ್‌ನ ರಿಸ್ಟ್‌ ನಿಂತಿದೆ. ಮೇಕಪ್‌ನ ಎಂಥ ಎಫೆಕ್ಟ್ ನೀಡಬೇಕು, ಇಡೀ ಮುಖಕ್ಕೆ ಅನ್ವಯಿಸುವಂತೆ ಕೊಡಬೇಕಾ ಅಥವಾ ಯಾವುದಾದರೂ ಒಂದು ಭಾಗವನ್ನಷ್ಟೇ ಹೈಲೈಟ್ ಮಾಡಬೇಕಾ, ನ್ಯೂಡ್‌ ಲುಕ್ಸ್ ಬೇಕಾ, ಕಂಟೂರಿಂಗ್‌ ಇರಾ ಇತ್ಯಾದಿ ಮೊದಲೇ ಗಮನಿಸತಕ್ಕದ್ದು. ಮೇಕಪ್‌ ಮಾಡುವಾಗ ಲುಕ್ಸ್ ಅನುಸಾರ ಏರ್‌ ಪ್ರೆಶರ್‌ನ್ನು ಬ್ಯಾಲೆನ್ಸ್ ಮಾಡಬೇಕಾದುದು ಬಲು ಮುಖ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ