ವಿಶ್ವಸಂಸ್ಥೆಯ ಒಂದು ಅಂತಾರಾಷ್ಟ್ರೀಯ ಅಂಗಸಂಸ್ಥೆಯ ಅಧ್ಯಕ್ಷರ ಹುದ್ದೆಗೆ ಸಂದರ್ಶನ ನಡೆಯುತ್ತಿತ್ತು.

ಪ್ರಶ್ನೆ : 5ರ ಮಧ್ಯೆ 4ನ್ನು ಬರೆದು ತೋರಿಸಿ.

ಚೀನೀ : ಇದು ಸಾಧ್ಯವೇ ಇಲ್ಲ ಬಿಡಿ!

ಜಪಾನಿ : ಇದನ್ನು ನಾವು ಒಪ್ಪುವುದೇ ಇಲ್ಲ!

ಅಮೆರಿಕನ್‌ : ಈ ಪ್ರಶ್ನೆಯೇ ತಪ್ಪು!

ಬ್ರಿಟನ್‌ : ಗೂಗಲ್ ನಲ್ಲಿ ಇದಕ್ಕೆ ಉತ್ತರ ಇಲ್ಲ!

ಭಾರತೀಯ : ವೆರಿ ಸಿಂಪಲ್ IV

ಭಾರತೀಯರಲ್ಲದೆ ಬೇರಾರು ಹೀಗೆ ಉತ್ತರಿಸಬಲ್ಲರು.

ಟೀಚರ್‌ : ರಾತ್ರಿ ಹೊತ್ತು  ಸೊಳ್ಳೆಗಳು ಬಂದು ಕಚ್ಚಿದರೆ ಏನು ಮಾಡುವುದು?

ಗುಂಡ : ನಿದ್ದೆಯಿಂದ ಎದ್ದು ಅದನ್ನು ಬಡಿದುಹಾಕಿ ಮತ್ತೆ ಮಲಗುವುದು, ಅದಕ್ಕಿಂತ ಹೆಚ್ಚಿಗೆ ಏನು ಮಾಡುವುದು? ಅದನ್ನು ಎಡಗೈಲಿ ಹಿಡಿದು ಸಾರಿ ಹೇಳಿಸಲು ನಾವೇನು ರಜನೀಕಾಂತಾ?

ಒಳ್ಳೆ ಮೂಡ್‌ ನಲ್ಲಿದ್ದ ಕಲ್ಲೇಶಿ ಆಫೀಸ್‌ ಮಧ್ಯೆ ಬಿಡುವು ಮಾಡಿಕೊಂಡು, “ಹಾರಲೇ… ನಾ ಹಾಡಲೇ?” ಎಂದು ಖುಷಿಯ ಎಮೋಜಿ ಹಾಕಿದ್ದ.

ಹತ್ತೇ ನಿಮಿಷಗಳಲ್ಲಿ ಉಗ್ರರೂಪಿಣಿ ಹೆಂಡತಿ ಕಮೆಂಟ್‌ ಮಾಡಿದ್ದಳು, “ಹೇಗಾದರೂ ಸರಿ, ಮನೆಗೆ ಬರುವಾಗ ಮರ್ಯಾದೆಯಾಗಿ ತರಕಾರಿ ತಗೊಂಡು ಬನ್ನಿ!”

ನಮ್ಮ ನಾಡಿನ ವೈದ್ಯರು ಬಿಡುವಾಗಿದ್ದಾಗ ಎಂಥ ಚಿತ್ರ ತಯಾರಿಸಬಹುದು?

ಎದುರು ಮನೇಲಿ ಡಾಕ್ಟರ್‌ ಪಕ್ಕದ್ಮನೇಲಿ ನರ್ಸು

ಒಂದೇ ಬೆಡ್ಡು ಇಬ್ಬರು ಪೇಶೆಂಟ್‌!

ರಕ್ತದಾನಿ ಇರಲಿ ಎಲ್ಲೆಲ್ಲೂ

ಕೊರೋನಾಗೊಂದು ಕಾಲ ಡೆಲ್ಟಾಗೆ ಈಗ ಕಾಲ

ಕಿಡ್ನಿ ದಾನಕ್ಕಿಂತ ದೇವರಿಲ್ಲ

ಆಪರೇಶನ್‌ ಕಿಡ್ನಿ ರಾಕೆಟ್‌

ನೆಗಡಿ ಇರಲಿ ಕೆಮ್ಮೂ ಬರಲಿ

ಸೀನ ಗೆಳೆಯರ ಜೊತೆ ಪಾರ್ಟಿ ಮುಗಿಸಿ ಮನೆಗೆ ಬಂದ. ಹಿರಿಯರಿಗೆ ತನ್ನ ಕರಾಮತ್ತು ಗೊತ್ತಾಗಬಾರದೆಂದು, ಗಂಭೀರವಾಗಿ ವ್ಯಾಪ್‌ ಟಾಪ್‌ ತೆರೆದು ಓದಲು ಕುಳಿತ.

ತಂದೆ : ಯಾಕೋ ಸೀನ, ಇವತ್ತೂ ಕುಡ್ಕೊಂಡು ಬಂದೆಯಾ……?

ಸೀನ : ಖಂಡಿತಾ ಇಲ್ಲ ಅಪ್ಪ….? ಇವತ್ತಂತೂ ಕುಡಿದೇ? ಇಲ್ಲ!

ತಂದೆ : ಮತ್ಯಾಕೋ ಓದೋದಿಕ್ಕೆ ಅಂತ ಸೂಟ್‌ಕೇಸ್‌ ತೆರೆದು ಮುಂದೆ ಇಟ್ಕೊಂಡು ಅದನ್ನೇ ನೋಡ್ತಿದ್ದೀಯಾ?

ರಾಮಯ್ಯ : ಈ ವಯಸ್ಸಿನಲ್ಲಿ ಆ ಹೆಂಗಸು ಹೀಗಾ ಹೇಳುವುದು?

ಸೋಮಯ್ಯ : ಅಂಥಾದ್ದು ಏನಾಯಿತು?

ರಾಮಯ್ಯ : ನಮ್ಮ ಪಕ್ಕದ ಮನೆಗೆ ಹೊಸದಾಗಿ ಬಂದ ಹೆಂಗಸನ್ನು ಠುಸ್‌ ಪುಸ್‌ ಅಂತ ನಾಜೂಕಾಗಿದ್ದಾಳಲ್ಲ ಅಂತ `ಐ ಲವ್ ಯೂ’ ಅಂದ್ರೇನು? ಅಂತ ಕೇಳಿದರೆ, `ನಾನು ನಿನ್ನನ್ನು ಪ್ರೇಮಿಸುವೆ` ಅನ್ನುವುದೇ?

ಈ ವಯಸ್ಸಿನಲ್ಲಿ ಆಕೆ ಹೀಗೆ ಆಡಬಾರದಿತ್ತು ಅನಿಸಿತು, ಸೋಮಯ್ಯ, ನೀನೇನು ಹೇಳ್ತೀಯಾ?

ಸನ್ಯಾಸಿ : ಬಹಳ ದಿನ ಮಾತನಾಡದೆ ಇರುವುದಕ್ಕೆ ನಾವು ಮೌನ ವ್ರತ ಅನ್ನುತ್ತೇವೆ.

ಸಂಸಾರಿ : ಅಂಥ ಗಂಡಸನ್ನು ನಾವು ವಿವಾಹಿತ ಅಂತೀವಿ!

ರೋಗಿ : ಡಾಕ್ಟರ್‌, ನನಗೊಂದು ವಿಚಿತ್ರ ಕಾಯಿಲೆ, ಸಹಾಯ ಮಾಡಿ.

ಡಾಕ್ಟರ್‌ : ಏನಪ್ಪಾ ನಿನಗೆ ಅಂಥ ಕಾಯಿಲೆ!

ರೋಗಿ : ನಾನು ನಿದ್ದೆ  ಮಾಡಿದ 10 ನಿಮಿಷಕ್ಕೇ ಕೋತಿಗಳು ಬಂದು ಕನಸಿನಲ್ಲಿ ಫುಟ್‌ ಬಾಲ್ ‌ಆಡುತ್ತವೆ.

ಡಾಕ್ಟರ್‌ : ಹೌದಾ….? ಒಳ್ಳೆ ಸ್ಲೀಪಿಂಗ್‌ ಟ್ಯಾಬ್ಲೆಟ್ಸ್ ಕೊಡ್ತೀನಿ, ಇವತ್ತು ರಾತ್ರಿಯಿಂದ ತಗೋ.

ರೋಗಿ : ಆದರೆ ಇವತ್ತು ಬೇಡ, ನಾಳೆಯಿಂದ ತಗೋತೀನಿ.

ಡಾಕ್ಟರ್‌ : ಇವತ್ತು ಯಾಕೆ ಬೇಡ?

ರೋಗಿ : ಇಷ್ಟು ದಿನ ಲೀಗ್‌ ಮ್ಯಾಚ್‌ ನೋಡ್ತಿದ್ದೀನ್ರಿ. ಇವತ್ತೇ ಫೈನಲ್ಸ್ ಅಂತೆ… ಬಿಡಕ್ಕಾಗುತ್ತಾ…..?

ಮೊಮ್ಮಗು : ಅಜ್ಜಿ….ಅಜ್ಜಿ…. ಎಲ್ಲಿ ಕಣ್ಣು ಮುಚ್ಚಿಕೋ ನೋಡೋಣ.

ಅಜ್ಜಿ : ಇಗೋ…. ಕಣ್ಣು ಮುಚ್ಚಿದೆ, ಇದ್ಯಾಕೆ ಹೀಗೆ ಕೇಳಿದೆ?

ಮಗು : ಏನಿಲ್ಲ, ಅಮ್ಮ ಪಕ್ಕದ್ಮನೆ ಆಂಟಿಗೆ ಹೇಳ್ತಿದ್ದರು, ನಮ್ಮತ್ತೆ ಬೇಗ ಕಣ್ಣು ಮುಚ್ಚಿದರೆ ಸಾಕಾಗಿದೆ ಅಂತ!

ತಾತಾ : ಈಗೇನೋ ನೀವೆಲ್ಲ ಒಂದೇ ಕಡೆ ಓದ್ತಿದ್ದೀರಿ ಕ್ಲಾಸ್‌ ಮೇಟ್ಸ್ ಸರಿ. ಮುಂದೆ ಕಾಲೇಜಿಗೆ ಎಲ್ಲೆಲ್ಲಿಗೆ ಹೋಗಿಬಿಡ್ತೀರೋ ಏನೋ?

ಹೈಸ್ಕೂಲ್ ‌ತರಲೆಗಳು : ಎಲ್ಲಿದ್ದರೇನು ತಾತಾ? ವೀಕೆಂಡ್‌ನಲ್ಲಿ ಎಲ್ಲರೂ ಪಕ್ಕಾ ಗ್ಲಾಸ್‌ ಮೇಟ್ಸ್!

ಗುಂಡ : ಹೈಸ್ಕೂಲು, ಕಾಲೇಜು…. ಯಾಕೋ ಎಲ್ಲೂ ನಮಗೆ ನೆಮ್ಮದಿಯೇ ಇಲ್ಲ!

ನಾಣಿ : ಹೌದು, ಹೈಸ್ಕೂಲಿನ ಲವ್, ಪಿಯುಸಿ ಮಾರ್ಕ್ಸ್….. ಯಾವುದಕ್ಕೂ ಪ್ರಯೋಜನ ಇಲ್ಲ ನೋಡು.

ಗಿರೀಶ್‌ : ಪತ್ನಿಯರು ಮಹಾ ಬುದ್ಧಿವಂತೆಯರಂತೆ!

ಸುರೇಶ್‌ : ಹೀಗೇಕೆ ಹೇಳ್ತಿದ್ದೀಯಾ?

ಗಿರೀಶ್‌ : ಗೆಳತಿಯರ ಮುಂದೆ ಗಂಡನ್ನ ಡೈರೆಕ್ಟ್ ಆಗಿ ಮುಠ್ಠಾಳ ಅನ್ನಲ್ಲ…. ಆದರೆ, ಇವರಿಗಂತೂ ಏನೂ ಗೊತ್ತಾಗೋದೇ ಇಲ್ಲ ಬಿಡಿ. ಬಲು ಸಾದಾಸೀದಾ ಮನುಷ್ಯ, ವ್ಯವಹಾರ ಜ್ಞಾನ ಇಲ್ಲ ಅಷ್ಟೆ, ಅಂತಿರ್ತಾರೆ.

ತಂದೆ : ಎಷ್ಟು ದಿನಗಳಿಂದ ನೀನು ನನ್ನ ಮಗಳನ್ನು ಪ್ರೇಮಿಸುತ್ತಿದ್ದೀಯಾ?

ವೆಂಕಿ : ಕಳೆದ 7 ತಿಂಗಳಿನಿಂದ ಸಾರ್‌.

ತಂದೆ : ಆದರೆ….. ಇದನ್ನು ನಾನು ಹೇಗೆ ನಂಬಲಿ?

ವೆಂಕಿ : ಇನ್ನೂ 2 ತಿಂಗಳು ತಡೆಯಿರಿ, ನಿಮಗೇ ಗೊತ್ತಾಗುತ್ತೆ.

ಸತೀಶ್‌ : ಇತಿಹಾಸದ ಯಾವ ಘಟನೆ ಎಡವಟ್ಟಾಗಲಿಲ್ಲ ಅಂತೀಯಾ….?

ಮಹೇಶ್‌ : ಗಾಂಧೀಜಿ ಡಿಸೆಂಬರ್‌ 31ನೇ ದಿನಾಂಕ ಹುಟ್ಟದೇ ಇದ್ದದ್ದು!

ಬೇಸಿಗೆಯಲ್ಲಿ ಫ್ರಿಜ್‌ ನೀರು ಕುಡಿಯುವವರು ಹುಷಾರಿಗಿರಿ. ಬಾಟಲ್ ಖಾಲಿ ಆದಾಗ ಮತ್ತೆ ತುಂಬಿಸಿ ಇಡಿ.

ಆಮೇಲೆ ಬಂದರು ಖಾಲಿ ಬಾಟಲ್ ನೋಡ್ರಿ, ನಿಮ್ಮ ಮುಂದೆ ನೀರು, ಮೊಬೈಲ್‌, ಇಂದಿನ ಕಲಿಕೆ, ನಿರುದ್ಯೋಗ ಅಂತ 108 ಭಾಷಣ ಶುರುವಾಗುತ್ತದೆ!

ಹುಡುಗಿಯರು ಮೊದಲಿನಿಂದ ಎಲ್ಲದಕ್ಕೂ ಹೆದರುತ್ತಾರೆ. ಒಂಟಿ ಆಗಿರಲು ಭಯ, ತುಂಬಾ ರಶ್‌ ಇದ್ದರೆ ನೂಕುನುಗ್ಗಲಿನ ಭಯ, ಜೋರಾಗಿ ಗಾಳಿ ಬೀಸಿದರೆ ದುಪಟ್ಟಾ ಹಾರೀತೆಂಬ ಭಯ, ಯಾರಾದರೂ ದಿಟ್ಟಿಸಿ ನೋಡಿದರೆ ಆ ಕಂಗಳ ಭಯ, ಬಾಲ್ಯದಲ್ಲಿ ತಾಯಿ ತಂದೆಯರ ಭಯ, ಕಾಲೇಜಿಗೆ ಹೋದರೆ ಪುಂಡಪೋಕರಿಗಳ ಭಯ…. ಹೀಗಾಗಿ ಮದುವೆ ಆಗಿ ಕೈ ಹಿಡಿದವನ ಮೇಲೆ ಒಟ್ಟಿಗೆ ಎಲ್ಲಾ ಸೇಡು ತೀರಿಸಿಕೊಳ್ಳುತ್ತಾರಂತೆ!

ಟೀಚರ್‌ : `ಸತ್ಯಸ್ವರೂಪ ಕೊರೋನಾ ತಗುಲಿ ಆಸ್ಪತ್ರೆ ಸೇರಿದ, ಫಲಸ್ವರೂಪ ಸತ್ತೇಹೋದ.’ ಇದನ್ನು ಎಲ್ಲರೂ ಆಂಗ್ಲ ಭಾಷೆಯಲ್ಲಿ ಬರೆಯಿರಿ.

ಗುಂಡ : ಸತ್ಯಸ್ವರೂಪನಿಗೆ ಕೊರೋನಾ ಆದರೆ, ಫಲಸ್ವರೂಪ ಯಾಕೆ ಸಾಯಬೇಕು?

ಟೀಚರ್‌ : ಅಯ್ಯೋ ಮುಠ್ಠಾಳ! ಅದರರ್ಥ ಪರಿಣಾಮಸ್ವರೂಪ ಅಂತ…..

ಸೀನ : ಏನು ಕರ್ಮ! ಈಗ ಬೇರೆ ಇನ್ನಾವನೋ ಸತ್ತ. ಕೊರೋನಾ ಬಂದವನು ಏನಾದ?

ಬೆಕ್ಕು : ನಿನಗೀಗ ಎಷ್ಟು ವಯಸ್ಸು?

ಆನೆ : ನನಗೆ ಈಗ 5 ವರ್ಷ.

ಬೆಕ್ಕು : ಆದರೆ ನೀನಂತೂ ಈಗಲೇ ಭಾರಿ ಕಾಣ್ತಿದ್ದೀಯಾ ಬಿಡು.

ಆನೆ :  ಹೌದು, ಐ ಆ್ಯಮ್ ಎ ಕಾಂಪ್ಲಾನ್‌ ಬಾಯ್‌! ನಿನಗೆಷ್ಟು ವಯಸ್ಸು?

ಬೆಕ್ಕು : 30 ವರ್ಷ

ಆನೆ : ಆದರೆ ನಿನಗೆ ಎಷ್ಟು ವಯಸ್ಸು ಅಂತ ಗೊತ್ತೇ ಆಗಲ್ಲ ಬಿಡು.

ಬೆಕ್ಕು : ಜಂಡು ಕೇಸರಿ ಜೀನ್‌ ಸೇವಿಸಿ…. ನಿಮ್ಮ ವಯಸ್ಸಿಗಿಂತ ಬಲು ಯಂಗ್‌ ಆಗಿ ಕಾಣುವಿರಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ