ತಮ್ಮನ್ನು ತಾವು ಪುರುಷರೆದುರು ಸಮರ್ಥ ಎಂದು ಸಾಬೀತುಪಡಿಸಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ ಅರ್ಧದಷ್ಟು ಜನಸಂಖ್ಯೆಯ ಮಹಿಳೆಯರಿಗೆ ತಾವಿನ್ನೂ ಅರ್ಧ ದಾರಿಯನ್ನಷ್ಟೇ ಸವೆಸಿದ್ದೇವೆ ಎಂದೆನಿಸಿದ್ದರೆ, ಇದನ್ನೇ ಹೊಸ ಆರಂಭ ಎಂದು ಭಾವಿಸಬೇಕು.
ವಿಶ್ವಸಂಸ್ಥೆ ಇತ್ತೀಚೆಗಷ್ಟೇ ಒಂದು ವರದಿ ಜಾರಿಗೊಳಿಸಿತು. ಇದರಲ್ಲಿ ವಿಶ್ವದ 75 ದೇಶಗಳ ವಿವಿಧ ಕ್ಷೇತ್ರಗಳು ಅದರಲ್ಲೂ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಲೈಂಗಿಕ ಅಸಮಾನತೆಯ ಬಗ್ಗೆ ವಿಶ್ಲೇಷಣೆ ಮಾಡಲಾಯಿತು.
ಈ ವರದಿಯಲ್ಲಿ ಸ್ಪಷ್ಟಪಡಿಸಲಾದ ಒಂದು ವಿಷಯವೆಂದರೆ, ಜಗತ್ತಿನ ಯಾವುದೇ ದೇಶದಲ್ಲೂ ಲೈಂಗಿಕ ಸಮಾನತೆ ಇಲ್ಲ. ವರದಿಯ ಪ್ರಕಾರ, ಶೇ.86ರಷ್ಟು ಮಹಿಳೆಯರು ಹಾಗೂ ಶೇ.90ರಷ್ಟು ಪುರುಷರು ಮಹಿಳೆಯರ ಬಗ್ಗೆ ಯಾವುದಾದರೊಂದು ರೀತಿಯಲ್ಲಿ ಭೇದಭಾವ ತೋರಿಸುತ್ತಾರೆ.
ವರದಿಯಿಂದ ಗೊತ್ತಾಗುವ ವಿಷಯವೆಂದರೆ, ಜಗತ್ತಿನ ಅರ್ಧದಷ್ಟು ಪುರುಷರು ಹಾಗೂ ಮಹಿಳೆಯರು ಒಪ್ಪಿಕೊಳ್ಳುವ ಸಂಗತಿಯೆಂದರೆ ಪುರುಷರು ಅತ್ಯುತ್ತಮ ರಾಜಕೀಯ ಮುಖಂಡರಾಗುತ್ತಾರೆ ಎಂದು. ಅಷ್ಟೇ ಅಲ್ಲ ಶೇ.40ರಷ್ಟು ಜನರಿಗೆ ಅನಿಸುವುದೇನೆಂದರೆ, ಪುರುಷರು ಅತ್ಯುತ್ತಮ ವಹಿವಾಟು ಹಾಗೂ ಅಧಿಕಾರ ನಡೆಸುವ ಅರ್ಹತೆ ಪಡೆದಿರುತ್ತಾರೆ.
ಇದೇ ಕಾರಣದಿಂದ ಜಗತ್ತಿನ ಕೇವಲ ಶೇ.24ರಷ್ಟು ಸಂಸದೀಯ ಸೀಟುಗಳು ಮಾತ್ರ ಮಹಿಳೆಯರಿಗೆ ದಕ್ಕಿವೆ. ಅಷ್ಟೇ ಅಲ್ಲ, ಸರ್ಕಾರದ ಸಂಭಾವ್ಯ 193 ಮಹಿಳಾ ಪ್ರಮುಖರಲ್ಲಿ 10 ಮಂದಿ ಮಾತ್ರ ಮಹಿಳೆಯರಿದ್ದಾರೆ.
ರಾಜಕೀಯದಲ್ಲಿ ಪಾಲುದಾರಿಕೆ ಅಮೆರಿಕದಂತಹ ದೊಡ್ಡ ದೇಶದ ಬಗ್ಗೆ ಹೇಳಬೇಕೆಂದರೆ, ಅತ್ಯುತ್ತಮ ಸಾಮರ್ಥ್ಯ ಹೊಂದಿದಾಗ್ಯೂ ಅಮೆರಿಕದ ಪ್ರಥಮ ಮಹಿಳೆ ಹಿಲರಿ ಕ್ಲಿಂಟನ್‌ಗೆ ಆ ಸ್ಥಾನ ದಕ್ಕಲಿಲ್ಲ.
ಯಾರು ಈ ಹಿಲರಿ ಕ್ಲಿಂಟನ್? : ಹಿಲರಿಯರು ಅಮೆರಿಕದ ನ್ಯೂಯಾರ್ಕ್ ಪ್ರಾಂತ್ಯದ ಸೆನೆಟರ್. ಅಮೆರಿಕದ 42ನೇ ರಾಷ್ಟ್ರಾಧ್ಯಕ್ಷ ಬಿಲ್ ಕ್ಲಿಂಟನ್‌ರ ಪತ್ನಿ. 1993 ರಿಂದ 2001ರತನಕ ಅಮೆರಿಕದ ಪ್ರಥಮ ಮಹಿಳೆಯೆನಿಸಿಕೊಂಡಿದ್ದರು. ಬರಾಕ್ ಒಬಾಮಾರ ಕಾರ್ಯಾವಧಿಯಲ್ಲಿ ಹಿಲರಿ ವಿದೇಶಾಂಗ ಸಚಿವೆಯಾಗಿದ್ದರು. 2016ರ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಅವರು ಡೆಮಾಕ್ರೆಟಿಕ್ ಪಾರ್ಟಿಯ ಉಮೇದುವಾರರಾಗಲು ತಮ್ಮ ಹಕ್ಕು ಮಂಡಿಸಿದ್ದರು. ತಾವು ಅಮೆರಿಕದ ಜನರ ಚಾಂಪಿಯನ್ ಆಗಲು ಇಚ್ಛಿಸುವುದಾಗಿ ಹೇಳಿದ್ದರು. ಆದರೆ ಅವರು ಟ್ರಂಪ್ ಎದುರು ಸೋತರು. 2008ರಲ್ಲೂ ಅವರು ಡೆಮಾಕ್ರೆಟಿಕ್ ಪಾರ್ಟಿಯಿಂದ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ್ದರು. ಆದರೆ ಬರಾಕ್ ಒಬಾಮಾರಿಂದಲೂ ಸೋತಿದ್ದರು.
ರಾಷ್ಟ್ರಪತಿ ಚುನಾವಣೆಯಲ್ಲಿನ ತಮ್ಮ ಸೋಲಿಗೆ ಅವರು ರಷ್ಯಾದ ರಾಷ್ಟ್ರಾಧ್ಯಕ್ಷ ಪುಟಿನ್ ಕಾರಣ ಎಂದು ಆಪಾದಿಸಿದ್ದರು. ಟ್ರಂಪ್ ರಾಷ್ಟ್ರಧ್ಯಕ್ಷರಾಗುವುದನ್ನು ತಡೆಯಲು ನನ್ನಿಂದ ಆಗಲಿಲ್ಲ ಎಂದೂ ಅವರು ಹೇಳಿದ್ದರು.
ಹಿಲರಿ ಎಡವಿದ್ದು ಎಲ್ಲಿ? ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಸಾಧಾರಣ ಚುನಾವಣೆಯೆಂದರೆ ಅದು 2016ರ ರಾಷ್ಟ್ರಾಧ್ಯಕ್ಷರ ಚುನಾವಣೆ. ಅಂದಹಾಗೆ ಅದು ರಾಜಕೀಯ ವ್ಯವಸ್ಥೆಯ ವಿರುದ್ಧದ ಬಂಡುಕೋರತನವಾಗಿತ್ತು ಮತ್ತು ಈ ರಾಜಕೀಯ ವ್ಯವಸ್ಥೆಯ ಅತಿ ದೊಡ್ಡ ಪ್ರತೀಕ ಬೇರಾರೂ ಅಲ್ಲ, ಸ್ವತಃ ಹಿಲರಿ ಕ್ಲಿಂಟನ್ ಆಗಿದ್ದರು. ಚುನಾವಣೆಯ ಪ್ರಚಾರದ ಅವಧಿಯಲ್ಲಿ ಕೋಪಗೊಂಡಿದ್ದ ಕೋಟ್ಯಂತರ ಮತದಾರರಿಗೆ ಅವರು ಅಮೆರಿಕದ `ಬ್ರೋಕನ್ ಪಾಲಿಟಿಕ್ಸ್’ನ ಮುಖವಾಣಿಯಾಗಿ ಹೊರಹೊಮ್ಮಿದ್ದರು.
ಇನ್ನೊಂದೆಡೆ, ಡೊನಾಲ್ಡ್ ಟ್ರಂಪ್ ಹಲವು ಪ್ರಾಂತ್ಯಗಳಲ್ಲಿ ಸಾಕಷ್ಟು ಮತದಾರರಿಗೆ ಎಂತಹ ವ್ಯಕ್ತಿಯಾಗಿ ಹೊರಹೊಮ್ಮಿದರೆಂದರೆ, ಅವರು ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದರು ಎಂದೇ ತೋರಿಸಿಕೊಂಡರು. ಅವರು ಒಬ್ಬ ಆಂತರಿಕ ವ್ಯಕ್ತಿಯ ವಿರುದ್ಧ ಬಾಹ್ಯ ವ್ಯಕ್ತಿಯ ರೂಪದಲ್ಲಿ ಹೊರಹೊಮ್ಮುವಲ್ಲಿ ಯಶಸ್ವಿಯಾದರು.
ಹಿಲರಿ ಕ್ಲಿಂಟನ್ ತಮ್ಮನ್ನು ತಾವು ರಾಷ್ಟ್ರಾಧ್ಯಕ್ಷ ಹುದ್ದೆಗೆ ಅತ್ಯಂತ ಸಮರ್ಥ ವ್ಯಕ್ತಿ ಎಂದು ಪ್ರತಿಪಾದಿಸುತ್ತ ಬಂದರು. ಅವರು ತಮ್ಮ ಅನುಭವ, ನ್ಯೂಯಾರ್ಕ್ ಸೆನೆಟರ್ ಹಾಗೂ ವಿದೇಶಾಂಗ ಸಚಿವರಾಗಿದ್ದುದನ್ನು ಪ್ಲಸ್ ಪಾಯಿಂಟ್ ಎಂದು ಹೇಳುತ್ತ ಬಂದರು. ಆದರೆ ಟ್ರಂಪ್‌ನ ಸಮರ್ಥಕರು ಹಾಗೂ ಅಲ್ಲಿನ ಸಮಸ್ತ ಜನತೆ ಅವರ ಅರ್ಹತೆ ಮತ್ತು ಅನುಭವನ್ನು ನಕಾರಾತ್ಮಕ ಎಂದೇ ಪರಿಗಣಿಸಿದರು. ವೈಟ್ ಹೌಸ್ ನಲ್ಲಿ ಪಾರಂಪರಿಕ ರಾಜಕಾರಣಿಯನ್ನಲ್ಲ, ಒಬ್ಬ ಉದ್ಯಮಿಯನ್ನು ಕಾಣಲು ಬಯಸಿದ್ದರು.
ಕ್ಲಿಂಟನ್ ಬಗ್ಗೆ ಕೂಡ ಜನರ ಮನಸ್ಸಿನಲ್ಲಿ ದ್ವೇಷವಿತ್ತು, ಅವರ ಬಗ್ಗೆ ಅಸೂಯೆ ಇನ್ನಷ್ಟು ವೇಗದಲ್ಲಿ ಪಸರಿಸಿ ಮಧ್ಯ ವಯಸ್ಸಿನ ನಮ್ರ ಮಹಿಳೆಯರು ಕೂಡ ಹಿಲರಿ ಕ್ಲಿಂಟನ್ ಹೆಸರು ಕೇಳುತ್ತಿದ್ದಂತೆ ಅವರು ತಿರುಗಿಬಿದ್ದರು.
ಹಿಲರಿ ಕ್ಲಿಂಟನ್‌ಗೆ ಮೊದಲಿನಿಂದಲೇ ನಂಬಿಕೆಯ ಸಮಸ್ಯೆ ಇತ್ತು. ಇದೇ ಕಾರಣದಿಂದ ಇಮೇಲ್ ಸ್ಕ್ಯಾಂಡ್ ಎಷ್ಟೊಂದು ದೊಡ್ಡ ಪ್ರಕರಣವಾಯಿತೆಂದರೆ, ಅವರು ಕಾರ್ಮಿಕ ವರ್ಗವನ್ನು ತುಚ್ಛವಾಗಿ ಕಾಣುತ್ತಾರೆ ಎಂಬಂತೆ ಬಿಂಬಿಸಲಾಯಿತು. ಕಾರ್ಮಿಕ ವರ್ಗದಿಂದ ಅವರು ಎಷ್ಟೊಂದು ದೂರ ಆಗುತ್ತಾ ಹೋದರೆಂದರೆ, ಕಾರ್ಮಿಕ ವರ್ಗ ಕೋಟ್ಯಧಿಪತಿ ವ್ಯಕ್ತಿಗೆ ಖುಷಿ ಖುಷಿಯಿಂದ ವೋಟು ಹಾಕಿ ಗೆಲ್ಲಿಸಿತು.
ಅಮೆರಿಕದ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ 10 ಲಕ್ಷದಷ್ಟು ಹೆಚ್ಚಿಗೆ ಇದೆ. ಹಿಲರಿಗೆ ಇದರಿಂದ ಲಾಭ ಆಗುತ್ತದೆ ಎಂದು ಭಾವಿಸಲಾಗುತ್ತಿತ್ತು. ಆದರೆ ವಾಸ್ತವದಲ್ಲಿ ಹೀಗೇನೂ ಆಗಲಿಲ್ಲ. ಏಕೆಂದರೆ ಆರಂಭಿಕ ಹಂತದಲ್ಲಿಯೇ ದೇಶದ ಮೊದಲ ಮಹಿಳಾ ರಾಷ್ಟ್ರಪತಿಗೆ ಒಮ್ಮತ ಸಾಧಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದೆಷ್ಟೋ ಮಹಿಳೆಯರು ಅವರ ಬಗ್ಗೆ ಸಹಜತೆ ಹೊಂದಲಿಲ್ಲ.
ಒಳ್ಳೆಯ ವಕ್ತಾರರಾಗಲಿಲ್ಲ
ಹಿಲರಿ ಕ್ಲಿಂಟನ್ ಸ್ವಾಭಾವಿಕ ಪ್ರಚಾರಕರಲ್ಲ. ಅವರ ಭಾಷಣ ಸಾಮಾನ್ಯವಾಗಿ ಸಾಧಾರಣವಾಗಿರುತ್ತದೆ. ಕೆಲಮೊಮ್ಮೆಯಂತೂ ರೊಬೋಟ್ ಮಾತಾಡಿದಂತೆ ಭಾಸವಾಗುತ್ತಿತ್ತು. ಅವರ ಅದೆಷ್ಟೋ ಮಾತುಗಳು ಕೃತಕ ಎನಿಸುತ್ತವೆ. ಕೆಲವರಂತೂ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ.
ಹಿಲರಿ ಕ್ಲಿಂಟನ್ ಬಗ್ಗೆ ಡೊನಾಲ್ಡ್ ಟ್ರಂಪ್ ಒಂದು ಆರೋಪ ಮಾಡಿದ್ದರು. ಅವರು ತಮ್ಮ ಪತಿಗೆ ಪ್ರೇಮ ಸಂಬಂಧಕ್ಕೆ ನೆರವು ನೀಡಿದ್ದರು ಎನ್ನುವುದೇ ಆ ಆರೋಪ ಆಗಿತ್ತು. ಯಾವ ಮಹಿಳೆಯರು ಬಿಲ್ ಕ್ಲಿಂಟನ್ ಬಗ್ಗೆ ಆರೋಪ ಮಾಡಿದ್ದರೊ, ಅವರನ್ನು ಹಿಲರಿ ಕ್ಲಿಂಟನ್ ನಿಂದಿಸಿದ್ದರು. ಟ್ರಂಪ್ ಇದೆಲ್ಲವನ್ನು ಹೇಳುತ್ತಿರುವಾಗ, ಅವರ ಮಾತುಗಳ ಬಗ್ಗೆ ಅದೆಷ್ಟೋ ಮಹಿಳೆಯರು ತಮ್ಮ ಒಪ್ಪಿಗೆ ಸೂಚಿಸುತ್ತಿದ್ದರು.
ಹಿಲರಿ ಕ್ಲಿಂಟನ್ ಕೊಟ್ಟ ಘೋಷಣೆ ಕೂಡ ಅಮೆರಿಕಾದಲ್ಲಿ ಸದ್ದು ಮಾಡಲಿಲ್ಲ. ಅಮೆರಿಕಾದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಅತ್ಯಂತ ಉತ್ಸಾಹದಿಂದ ಪ್ರಸ್ತತಪಡಿಸಬೇಕಾಗುತ್ತದೆ. `ಸ್ಟ್ರಾಂಗರ್ ಟು ಗೆದರ್’ ಎಂಬ ಅವರ ಘೋಷಣೆಯಲ್ಲಿ ಅಷ್ಟೊಂದು ಬಲ ಇರಲಿಲ್ಲ. `ಮೇಕ್ ಅಮೆರಿಕ ಗ್ರೇಟ್ ಅಗೇನ್’ ಘೋಷಣೆ ಅಲ್ಲಿನ ನಾಗರಿಕರ ಗಮನ ಸೆಳೆದಿತ್ತು.
ಹಿಲರಿಯರ ಪ್ರಕಾರ ಅಭಿಯಾನದಲ್ಲಿ ಕೆಲವು ತಪ್ಪುಗಳು ಕೂಡ ಆದ. ಅವರು ಉತ್ತರ ಕೆರೊಲಿನಾ ಹಾಗೂ ಒಹಿಯಾದಂತಹ ರಾಜ್ಯಗಳಲ್ಲಿ ಸಮಯ ಹಾಗೂ ಸಂಪನ್ಮೂಲ ಹಾಳು ಮಾಡಿಕೊಳ್ಳಬಾರದಿತ್ತು. ಏಕೆಂದರೆ ಡೆಮಾಕ್ರೆಟಿಕ್ ಪಕ್ಷ ಅಲ್ಲಿ ಮೊದಲೇ ಪ್ರಬಲವಾಗಿತ್ತು. ಅವನ್ನು `ನೀಲಿಗೋಡೆ’ಗಳೆಂದು ಕರೆಯಲಾಗುತ್ತದೆ. ಅವು ಎಂತಹ 18 ರಾಜ್ಯಗಳಾಗಿದ್ದವೆಂದರೆ, ಕಳೆದ 16 ಚುನಾವಣೆಗಳಲ್ಲಿ ಅವರ ಪಾರ್ಟಿಗೆ ಬಹುಮತ ತಂದುಕೊಡುತ್ತಿದ್ದ.
ಟ್ರಂಪ್ ಬಿಳಿಯರ ಕಾರ್ಮಿಕರ ವರ್ಗದ ಮತದಾರರ ನೆರವಿನಿಂದ ಪೆನ್ಸಿಲ್ವೇನಿಯಾ ಹಾಗೂ ಬಿಸ್ಕೊನ್ಸಿನ್ ರಾಜ್ಯದಲ್ಲಿ ಗೆದ್ದು ಆ ಬಲಿಷ್ಠ ನೀಲಿಗೋಡೆಯನ್ನು ಮುಳುಗಿಸಿಬಿಟ್ಟರು. 1984 ರಿಂದ ಈವರೆಗೆ ರಿಪಬ್ಲಿಕನ್ ಪಾರ್ಟಿಗೆ ಈ ಎರಡು ಕ್ಷೇತ್ರಗಳಲ್ಲಿ ಜಯ ದಕ್ಕಿರಲಿಲ್ಲ. ಇದು ಕೇವಲ ಹಿಲರಿ ಕ್ಲಿಂಟನ್ ರಷ್ಟೇ ನಿರಾಕರಿಸುವವರಾಗಿರಲಿಲ್ಲ, ದೇಶದ ಅರ್ಧಕ್ಕೂ ಜನ ಬರಾಕ್ ಒಬಾಮಾರ ದೃಷ್ಟಿಕೋನನ್ನು ನಿರಾಕರಿಸಿಬಿಟ್ಟಿದ್ದರು.
ಅಮೆರಿಕಾದಲ್ಲಿ ಒಂದೊಮ್ಮೆ ಹಿಲರಿ ಕ್ಲಿಂಟನ್ ಜಯ ಗಳಿಸಿದ್ದರೆ ಅವರು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾಗುವ ಇತಿಹಾಸ ಸೃಷ್ಟಿಸುತ್ತಿದ್ದರು. ಆದರೆ ಹೀಗಾಗಲಿಲ್ಲ.
ಹಿಲರಿ ಕ್ಲಿಂಟನ್‌ಗೆ ದೀರ್ಘ ಅನುಭವವೇನೋ ಇದೆ. ಆದರೆ ಅಮೆರಿಕಾದ ರಾಜಕಾರಣದಲ್ಲಿ ಅವರನ್ನು ಇಬ್ಭಾಗಿಸಿದ ವ್ಯಕ್ತಿ ಎಂದೇ ಪರಿಗಣಿಸಲಾಗುತ್ತದೆ. ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಕೂಡ ಹಿಲರಿ ಒಬ್ಬ ಅದ್ಭುತ ಪ್ರೆಸಿಡೆಂಟ್ ಆಗುತ್ತಾರೆ ಎಂದು ಹೊಗಳಿದ್ದರು.
ಮಹಿಳಾ ಅಧ್ಯಕ್ಷೆ ಬೇಕಿಲ್ಲ
ಹಳೆಯ ಕಾಲದ ಲೈಂಗಿಕ ಅಸಮಾನತೆ ಚುನಾವಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಅದೆಷ್ಟೋ ಪುರುಷರು ಮಹಿಳೆಯರನ್ನು ರಾಷ್ಟ್ರಾಧ್ಯಕ್ಷರ ಹುದ್ದೆಯಲ್ಲಿ ಕಾಣಲು ಇಷ್ಟಪಡುವುದಿಲ್ಲ.
ಮಿಶೆಲ್ ಒಬಾಮಾ ಅಮೆರಿಕದ ಮಾಜಿ ರಾಷ್ಟ್ರಪತಿ ಒಬಾಮಾರ ಪತ್ನಿ. ಅವರು ಅಮೆರಿಕದ ಮೊದಲ ಮಹಿಳೆ ಕೂಡ ಆಗಿದ್ದರು.
ರಾಷ್ಟ್ರಾಧ್ಯಕ್ಷೆ ಆಗುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಹೀಗೆ ಹೇಳಿದ್ದರು, “ಇಲ್ಲ, ನಾನು ರಾಷ್ಟ್ರಾಧ್ಯಕ್ಷರ ಓಟದ ಸ್ಪರ್ಧೆಯಲ್ಲಿ ಭಾಗಹಿಸಲು ಇಷ್ಟಪಡುವುದಿಲ್ಲ. ಹಿಲರಿ ಕ್ಲಿಂಟನ್‌ರ ದಾರಿಯಲ್ಲಿ ಸಾಗಲು ತಮಗೆ ಒಂದಿಷ್ಟೂ ಆಸಕ್ತಿಯಿಲ್ಲ. ಅಮೆರಿಕದ ಧ್ರುವೀಕರಣಗೊಂಡ ರಾಜಕಾರಣದಿಂದ ನಾನು ದೂರ ಇದ್ದೂ ಕೂಡ ಅಧಿಕ ಪ್ರಭಾವಿ ಎನಿಸಿಕೊಳ್ಳಬಹುದು ಎಂದು ಅವರು ಹೇಳುತ್ತಾರೆ.
ಮಾಜಿ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ ಕೂಡ ಸ್ಪಷ್ಟವಾಗಿ ಮಿಶೆಲ್‌ಗೆ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಇಲ್ಲ ಎಂದು ಹೇಳಿದ್ದರು. ಬರಾಕ್ ಒಬಾಮಾ ರಾಷ್ಟ್ರಾಧ್ಯಾಕ್ಷರಾಗಿದ್ದಾಗ, ಜನರ ಗಮನ ಅವರ ಕಡೆ ಎಷ್ಟು ಪ್ರಮಾಣದಲ್ಲಿತ್ತೊ ಮಿಶೆಲ್ ಕೂಡ ಆಗ ಅಷ್ಟೇ ಸುದ್ದಿಯಲ್ಲಿರುತ್ತಿದ್ದರು.
ನಕಾರಾತ್ಮಕ ವ್ಯಕ್ತಿತ್ವ :
ಆರಂಭದಲ್ಲಿ ಮಿಶೆಲ್‌ರನ್ನು ಬರಾಕ್ ಒಬಾಮಾರ ರಾಜಕೀಯ ಮಹಾತ್ವಾಕಾಂಕ್ಷೆಯ ಬಗ್ಗೆ ಆಕ್ಷೇಪಗಳಿದ್ದವು.
ಆದರೆ `ದಿ ಒಬಾಮಾಸ್’ ಪುಸ್ತಕ ಬರೆದ ಲೇಖಕಿ ಜೋಡಿ ಕಿಂಟ್ ಹೇಳುವುದೇನೆಂದರೆ, ಮಿಶೆಲ್ ಬರಾಕ್ ಒಬಾಮಾರನ್ನು ಸಮರ್ಥನೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾರೊ ಆಗ ಅವರು ಒಬಾಮಾರ ಅತಿದೊಡ್ಡ ಸಮರ್ಥಕರಾಗುತ್ತಾರೆ.
ಯಾರು ಮಿಶೆಲ್ ರನ್ನು ದೀರ್ಘಕಾಲದಿಂದ ಬಲ್ಲವರಾಗಿದ್ದರೊ, ಅವರು ಮಿಶೆಲ್ ಸ್ಪಷ್ಟವಾದಿ, ಹಾರ್ವರ್ಡ್ ನಲ್ಲಿ ಟ್ರೇನಿಂಗ್ ಪಡೆದ ಅವರು ಪತಿಯ ಎದುರು ತರ್ಕ ಮಂಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳುತ್ತಿದ್ದರು. ಆದಾಗ್ಯೂ ಕೂಡ ಅದು ಜನರ ಮೇಲೆ ಉತ್ತಮ ಪ್ರಭಾವ ಬೀರಲಿಲ್ಲ.
ಅದೇ ಕಾರಣದಿಂದಿಲೋ ಏನೊ ರಾಜಕೀಯ ಮುಖಂಡರ ಪತ್ನಿಯರು ಬದಿಗೆ ಉಳಿದುಬಿಡುತ್ತಾರೆ.
2008ರಲ್ಲಿ ಡೆನರ್‌ನಲ್ಲಿ ನಡೆದ ಡೆಮಾಕ್ರೆಟಿಕ್ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಿಶೆಲ್ ಭಾಷಣ ಮಾಡಿ ತಾನು ಒಳ್ಳೆಯ ಪತ್ನಿ, ತಾಯಿ ಹಾಗೂ ಮಗಳಾಗಿರಲು ಬಯಸುತ್ತೇನೆ ಎಂದು ಹೇಳಿದ್ದರು.
ಒಹಿಯೊ ಯೂನಿವರ್ಸಿಟಿಯ ಪ್ರೊ. ಕೆಥೆರಿನ್ ಜೋಲಿಸನ್ ಹೇಳಿದ್ದೇನೆಂದರೆ, ಯಾವ ದಿನ ಒಬಾಮಾ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೊ, ಆಗಿನಿಂದಲೇ ಅವರು ಮೊದಲ ಮಹಿಳೆಯಾಗಿ ಅಮೆರಿಕ ಬಯಸಿದ ರೀತಿಯಲ್ಲಿಯೇ ಸಮರ್ಪಿತ ಪತ್ನಿ ಹಾಗೂ ತಾಯಿಯ ರೂಪದಲ್ಲಿ ಕಂಡುಬಂದರು.
ರಾಷ್ಟ್ರಪತಿಯಾದ ಬಳಿಕ ಬರಾಕ್ ಒಬಾಮಾರ ರೇಟಿಂಗ್ ಕುಸಿಯುತ್ತ ಹೋಗುತ್ತಿದ್ದರೆ, ಮಿಶೆಲ್ ಒಬಾಮಾರ ರೇಟಿಂಗ್ ಹೆಚ್ಚುತ್ತಾ ಸಾಗಿತ್ತು. 2012ರ ಗ್ಯಾಲಪ್‌ನ ಸರ್ವೆಯಲ್ಲಿ ಒಬಾಮಾರ ರೇಟಿಂಗ್ 52 ಇದ್ದರೆ, ಮಿಶೆಲ್ರ ರೇಟಿಂಗ್ 60% ಇತ್ತು.
ಬದಿಗಿರುವುದನ್ನೇ ಇಷ್ಟಪಟ್ಟರು
ಪ್ರೊ. ಬೋನಿರವರ ಪ್ರಕಾರ, `ಮೊದಲ ಮಹಿಳೆ ಎನಿಸಿಕೊಂಡ ಬಳಿಕ ಮಿಶೆಲ್ ಅವರ ಮಕ್ಕಳು ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿದರು. ಅವರು ವೈಟ್ ಹೌಸ್ ನಲ್ಲಿ ತರಕಾರಿಗಳ ತೋಟ ಮಾಡಿದ್ದಾರೆ. ತೂಕ ಕುಗ್ಗಿಸುವ ಲಾಭದ ಬಗ್ಗೆ ಹೇಳಲು ರಿಯಾಲಿಟಿ ಶೋಗಳಿಗೂ ಬಂದಿದ್ದರು. ಅಷ್ಟೇ ಅಲ್ಲ, ತೋಟಗಾರಿಕೆ ಬಗ್ಗೆ ಪುಸ್ತಕ ಕೂಡ ಬರೆದಿದ್ದಾರೆ.
ನ್ಯೂಸ್ ವೀಕ್‌ನ ಹಿರಿಯ ಲೇಖಕ ಎಲಿಸನ್ ಸ್ಯಾಮ್ಯುವೆಲ್ ಹೇಳುವುದೇನೆಂದರೆ, “ಮಿಶೆಲ್‌ಗೆ ಒಂದು ವಿಷಯ ತಿಳಿದಿತ್ತು. ವೈಟ್ ಹೌಸ್ ನಲ್ಲಿ ಎಲ್ಲ ಒಬಾಮಾರ ಸುತ್ತ ತಿರುಗುತ್ತಿರುತ್ತದೆ. ಹೀಗಾಗಿ ಅವರು ಎಂತಹ ವಿಷಯಗಳ ಬಗ್ಗೆ ಗಮನ ಕೊಡಲು ಶುರು ಮಾಡಿದರೆಂದರೆ ತಾನು ಯಾವಾಗಲೂ ಹಿನ್ನೆಲೆಯಲ್ಲಿಯೇ ಇರಬೇಕು ಹಾಗೂ ಒಬಾಮಾರನ್ನು ಆರಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದರು.”
ರಿಪಬ್ಲಿಕನ್ ಪಾರ್ಟಿಯ ಅದೆಷ್ಟೋ ಸದಸ್ಯರು ಕೂಡ ಅವರ ಪ್ರಶಂಸಕರಾಗಿದ್ದರು. ಕೆಲವರು ಟೀಕಾಕಾರರು ಕೂಡ ಇದ್ದರು. ಅವರು ಅವರ ಯೋಜನೆಗಳು, ವಿಚಾರಗಳನ್ನು ಹಾಗೂ ಕೊರತೆಗಳನ್ನು ಪಟ್ಟಿ ಮಾಡುತ್ತಾರೆ.
ಪತ್ರಕರ್ತ ಹಾಗೂ ಲೇಖಕ ಕೆಂಟರ್ ಅವರು “ಮಿಶೆಲ್ ಹೇಗೆ ಕಂಡು ಬರುತ್ತಾರೆಂದರೆ, ಅವರು ಚುನಾವಣೆಗಾಗಿ ಪ್ರಚಾರ ಕೂಡ ನಡೆಸುತ್ತಾರೆ. ಹಣವನ್ನು ಕ್ರೋಢೀಕರಿಸುತ್ತಾರೆ. ಹೀಗಾಗಿ ಅವರು ಜನಪ್ರಿಯ ರಾಜಕೀಯ ಮುಖಂಡರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುತ್ತಾರೆ.
ಫಸ್ಟ್ ಲೇಡಿ ಆಗಿರುವುದರ ವಿರೋಧಾಭಾಸ ಏನೆಂದರೆ ಮಹಿಳೆ ಎಷ್ಟು ರಾಜಕೀಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಜಕೀಯ ಮಟ್ಟದಲ್ಲೂ ಅವರು ಅಷ್ಟೇ ಪ್ರಭಾವಶಾಲಿ ಎಂದು ಸಾಬೀತಾಗುತ್ತಾರೆ.
ವಿಶ್ಲೇಷಣೆಕಾರರ ಪ್ರಕಾರ, ಮಿಶೆಲ್ ರಾಜಕೀಯ ಆಕರ್ಷಣೆ ಈಗಲೂ ಹಾಗೆಯೇ ಇದೆ. 2012ರ ಚುನಾವಣೆಯಲ್ಲಿ ಮಿಶೆಲ್ ತಮ್ಮ ಜನಪ್ರಿಯತೆಯನ್ನು ಗಂಡನ ಗೆಲುವಿಗಾಗಿ ಬಳಸಿಕೊಂಡಿದ್ದರು.
ಹೋಮ್ ಮೇಕರ್ ಪಾತ್ರಕ್ಕೆ ಸೀಮಿತ ಮಹಿಳೆಯರಲ್ಲಿ ನೇತೃತ್ವದ ಗುಣಗಳು ಕಣಕಣಗಳಲ್ಲಿ ತುಂಬಿವೆ. ಆದರೆ ಆ ನೇತೃತ್ವದ ವ್ಯಾಪ್ತಿಯನ್ನು ಆಕೆಯ ಹೋಮ್ ಮೇಕರ್ ಪಾತ್ರಕ್ಕಷ್ಟೇ ಸೀಮಿತಗೊಳಿಸಲಾಗುತ್ತದೆ. ಮಹಿಳೆಯರ ಗಡಿರೇಖೆ ಈಗಲೂ ಕೂಡ ಮನೆ ಕುಟುಂಬದ ಹೊಸ್ತಿಲಿಗೆ ಸೀಮಿತಗೊಳಿಸಲಾಗಿದೆ. ಮಹಿಳೆ ಅಪರಾಧಿ ಸಮಾಜವನ್ನು ಎದುರಿಸುವಲ್ಲಿ ಸಮರ್ಥಳಾಗಿದ್ದಾಳೆ. ಆದರೆ ರಾಜಕೀಯದಲ್ಲೇಕೆ ಬೇಡ? ಆದರೆ ಈ ವಿಷಯವನ್ನು ಪುರುಷ ವರ್ಗ ಅರ್ಥ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.
ಭಾರತದಲ್ಲೂ (2014-15) 95ರಷ್ಟು ಮಹಿಳೆಯರು ಹಾಗೂ 99ರಷ್ಟು ಪುರುಷರು ಮಹಿಳೆಯರ ಬಗ್ಗೆ ಭೇದಭಾವ ಮಾಡುತ್ತಾರೆ. 5 ವರ್ಷದಲ್ಲಿ ಮಹಿಳಾ ರಾಷ್ಟ್ರಾಧ್ಯಕ್ಷರ ಸಂಖ್ಯೆ ಕೇವಲ 10 ಮಾತ್ರ ಆಗಿದೆ. 2014ರಲ್ಲಿ ಈ ಸಂಖ್ಯೆ 25 ಆಗಿತ್ತು.
ಭಾರತದಲ್ಲಿ ಕಾಂಗ್ರೆಸ್ ಪಕ್ಷ ಇಂದಿರಾ ಹಾಗೂ ಸೋನಿಯಾರಿಗೆ ಸ್ಥಾನ ಕೊಟ್ಟಿತು. ಆದರೆ ಭಾಜಪಾ ಒಬ್ಬ ಮಹಿಳೆಗೂ ಈ ರೀತಿಯ ಸ್ಥಾನ ಕೊಡಲಿಲ್ಲ. ಕೇವಲ ಸುಷ್ಮಾ ಸ್ವರಾಜ್ ಅವರಷ್ಟೇ ಅಲ್ಲ, ಉಮಾ, ಅನುಪ್ರಿಯಾ, ಮೇನಕಾ ಗಾಂಧಿರವರಿಗೆ ಭಾಜಪಾ ಸರ್ಕಾರ ಹೆಚ್ಚಿನ ಮಹತ್ವ ಕೊಟ್ಟಿರಲಿಲ್ಲ.
ಪ್ರಮಾಣ ವಚನದ ಬಳಿಕ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುತ್ತಾ ಹೀಗೆ ಹೇಳಿದ್ದರು, “ಪ್ರಧಾನ ಮಂತ್ರಿಗಳೇ, ನೀವು ನನಗೆ ವಿದೇಶ ಮಂತ್ರಿಯಾಗುವ ಅವಕಾಶ ನೀಡಿ ದೇಶ ಸೇವೆಗೆ ಅವಕಾಶ ಕಲಿಸಿಕೊಟ್ಟಿರಿ. ಹೀಗಾಗಿ ನಾನು ನಿಮಗೆ ಋಣಿಯಾಗಿರುವೆ ಎಂದಿದ್ದರು. ಸುಷ್ಮಾ ಸ್ವರಾಜ್ ತಮ್ಮನ್ನು ತಾವು ಸರ್ಕಾರದಲ್ಲಿ ಸೇರ್ಪಡೆ ಮಾಡದೇ ಇರುವುದನ್ನು ಸಹಜವಾಗಿಯೇ ಸ್ವೀಕರಿಸಿದ್ದರು. ಆದರೆ ಒಳಗೊಳಗೆ ಅವರಿಗೆ ದುಃಖವಾಗುತ್ತಿದ್ದಿರಬಹುದು. ಅವರು ಸರ್ಕಾರದಲ್ಲಿದ್ದು ಏನೆಲ್ಲ ಮಾಡಿದ್ದರು.
ಸುಷ್ಮಾ ಸ್ವರಾಜ್ ಹಲವು ಸಂದಿಗ್ಧ ಸಮಯದಲ್ಲಿ ದೇಶದ ಗೌರವವನ್ನು ಹೆಚ್ಚಿಸಿದರು. ಆದರೆ ಎಲ್ಲ ವ್ಯರ್ಥ. ಏಕೆಂದರೆ ಅವರು ಅಡ್ವಾಣಿಯವರ ಹಿತೈಷಿಯಾಗಿದ್ದರು. ಇದೇ ಕಾರಣದಿಂದ ಅವರು ಬೆಲೆ ತೆರಬೇಕಾಗಿ ಬಂತು. ಸುಷ್ಮಾ ರಾಜಕೀಯಕ್ಕೆ ಬಂದಾಗ ಅವರಿಗೆ 25 ವರ್ಷ ವಯಸ್ಸಾಗಿತ್ತು. ಅವರ ರಾಜಕೀಯ ಗುರು ಲಾಲಕೃಷ್ಣ ಅಡ್ವಾಣಿ.
ಸುಷ್ಮಾ ಸ್ವರಾಜ್ ಅದ್ಭುತ ವಾಗ್ಮಿ, ಪ್ರಭಾವಿ ಸಂಸದೆ, ಕುಶಲ ಆಡಳಿತಗಾರ್ತಿ ಎನ್ನಲಾಗುತ್ತಿತ್ತು. ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ, 2013ನೇ ಸಾಲಿನಲ್ಲಿ ನರೇಂದ್ರ ಮೋದಿಯರನ್ನು ಪ್ರಧಾನಮಂತ್ರಿ ಆಗದಂತೆ ತಡೆಯುವ ಉಪಾಯ ಯೋಜನೆ ಮಾಡುತ್ತಿದ್ದರು. ಸುಷ್ಮಾ ಅವರಿಗೆ ಕೊನೆಯವರೆಗೂ ಸಾಥ್ ನೀಡಿದ್ದರು. 2014ರಲ್ಲಿ ಮೋದಿಯರ ಗೆಲುವಿನ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ.
ತಜ್ಞರ ಪ್ರಕಾರ, ಈ ಅಪರಾಧದ ಶಿಕ್ಷೆ ಸುಷ್ಮಾ ಸ್ವರಾಜ್ ಅವರ ರಾಜಕೀಯ ಭವಿಷ್ಯದ ಮೇಲಾಯಿತು. ಇಂದಿರಾಗಾಂಧಿಯವರ ಬಳಿಕ ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವೆಯಾದ ಏಕೈಕ ಮಹಿಳೆ.
ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಗವಾಧಾರಿಗಳು ಬಗೆಬಗೆಯ ಜೋಕ್ಸ್ ಹಾಕಿದ್ದರು. ಆದರೆ ಅವರ ಮೇಲೆ ಯಾವುದೇ ಮೊಕದ್ದಮೆ ಹೂಡಲಾಗಲಿಲ್ಲ. ಭಾಜಪಾ ಮುಖಂಡ ದಯಾಶಂಕರ್ ಮಾಯಾವತಿ ಬಗ್ಗೆ ಅವಹೇಳನಕಾರಿ ಸಂದೇಶ ಹಾಕಿ, ಅವರನ್ನು ಲೈಂಗಿಕ ಕಾರ್ಯಕರ್ತೆಗೆ ಹೋಲಿಸಿದ್ದರಲ್ಲದೆ, ಟಿಕೆಟ್ ಮಾರಾಟದ ಆರೋಪ ಕೂಡ ಹೊರಿಸಿದ್ದರು.
ಸಬಲೀಕರಣದ ಬಳಿಕ ಭೇದಭಾವ
ಮಹಿಳಾ ಸಬಲೀಕರಣದ ಬಗ್ಗೆ ಜಗತ್ತಿನಾದ್ಯಂತ ಹಲವು ಅಭಿಯಾನಗಳು ನಡೆಯುತ್ತವೆ. ಲೈಂಗಿಕ ಸಮಾನತೆಯ ಕ್ಷೇತ್ರದಲ್ಲಿ ಸುಧಾರಣೆಯ ಹೊರತಾಗಿಯೂ, ಈಗಲೂ ಜಗತ್ತಿನಲ್ಲಿ 10 ರಲ್ಲಿ 9 ಜನರು ಮಹಿಳೆಯರ ಬಗ್ಗೆ ಭೇದಭಾವ ಅನುಸರಿಸುತ್ತಾರೆ ಅಥವಾ ಪೂರ್ವಾಗ್ರಹ ಪೀಡಿತರಾಗಿದ್ದಾರೆ.
`ರಾಜಕೀಯ ಪಾಲುದಾರಿಕೆ’ ಈ ಶಬ್ದದ ಉಚ್ಚಾರ ಎಷ್ಟು ಮಹಾನ್ ಹಾಗೂ ವಿಶಾಲವಾಗಿದೆಯೊ ಒಂದು ವೇಳೆ ಮಹಿಳೆಯರ ಬಾಬತ್ತಿನಲ್ಲಿ ನೋಡುವುದಾದರೆ, ಬಹಳಷ್ಟು ಕಡಿಮೆ ಹಾಗೂ ತುಚ್ಛವಾಗಿ ಕಾಣಲಾಗುತ್ತದೆ.
ಏಕೆಂದರೆ ಭಾರತದಂತಹ ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ, ಯಾವುದೇ ದಾರಿ ಕಾಣದೇ ಇದ್ದಾಗ ಮಹಿಳೆಯರ ನೆನಪಾಗುತ್ತದೆ. ಅವರನ್ನು ಅಸ್ತ್ರದ ರೂಪದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಬೇಕು ಎನ್ನುವುದು ಅವರ ಉಪಾಯ ಅವರನ್ನು ರಾಜಕೀಯಕ್ಕಿಳಿಸಿ ಅವರ ಪತಿ ಇಲ್ಲಿ ಸೋದರ ಇಲ್ಲಿ ತಂದೆ ಹಿನ್ನಲೆಯಲ್ಲಿ ತಮ್ಮದೇ ಆಟ ಆಡುತ್ತಾರೆ.
ಮಹಿಳೆಯರಿಗೆ ರಾಜಕೀಯ ಸಂಘರ್ಷ :
ಪ್ರಾಚೀನ ಕಾಲದಿಂದ ತೀರ ಇತ್ತೀಚಿನತನಕ ಭಾರತದಲ್ಲಿ ಸ್ತ್ರೀಯರ ಸ್ಥಿತಿ ಪರಿವರ್ತನಾಶೀಲವಾಗಿದೆ. ನಮ್ಮ ಸಮಾಜ ಪ್ರಾಚೀನ ಕಾಲದಿಂದ ಈವರೆಗೂ ಪುರುಷ ಪ್ರಧಾನವೇ ಆಗಿದೆ. ವಿಶ್ವದ ಇತಿಹಾಸ ಹಾಗೂ ವಿಶ್ವದ ಪ್ರಗತಿಶೀಲ ದೇಶಗಳ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ಆ ದೇಶದ ಮಹಿಳೆಯರ ಪಾಲುದಾರಿಕೆಯನ್ನು ಅವಶ್ಯ ಎಂದು ಭಾವಿಸಲಾಗುತ್ತದೆ. ವಿಶ್ವಸಂಸ್ಥೆ ಘೋಷಿಸಿದ ಅಂತಾರಾಷ್ಟ್ರೀಯ ಮಹಿಳಾ ವರ್ಷ, ಅಂತಾರಾಷ್ಟೀಯ ಮಹಿಳಾ ದಶಕ 1999-2000ದ ಕೊನೆಯ ತನಕ ಭಾರತದ ಸಂಪೂರ್ಣ ಕಾರ್ಯಕಾರಿ ಶಕ್ತಿಯಲ್ಲಿ ಮಹಿಳಾ ಕಾರ್ಯಕರ್ತೆಯರ ಸಂಖ್ಯೆ ಕಡಿಮೆಯೇ ಹೌದು.
ವಿಶ್ವದ ಅರ್ಧ ಜನಸಂಖ್ಯೆ ಹಾಗೂ ಸಾಮರ್ಥ್ಯ ಇದ್ದೂ ಕೂಡ ರಾಜಕೀಯ ಸಾಮಾಜಿಕ ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ, ಅವರ ಕೆಲಸದಲ್ಲಿ ಪಾಲುದಾರಿಕೆ ಹಾಗೂ ದುರ್ಬಲ ಸ್ಥಿತಿ ಮತ್ತು ಸಹಭಾಗಿತ್ವದ ಮೇಲೆ ಪ್ರಶ್ನೆ ಚಿಹ್ನೆ ಯಥಾಸ್ಥಿತಿ ಹಾಗೆಯೇ ಇದೆ. ಭಾರತೀಯ ರಾಜಕಾರಣದಲ್ಲಿ ಯಾವುದೇ ಪ್ರತಿಬಂಧ ಇರದೇ ಇರುವುದರ ಹೊರತಾಗಿ ಅವರು ಭಾರತೀಯ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೊಂದು ವೇಳೆ ಪಾಲ್ಗೊಂಡರೂ ಕೂಡ ಉನ್ನತ ಹುದ್ದೆ ತಲುಪಲು ಬಹಳ ಸಂಕಷ್ಟ ಎದುರಿಸಬೇಕಾಗುತ್ತದೆ. ಅಸಮರ್ಥರೆನಿಸಿಕೊಳ್ಳುವುದೇ ಹೆಚ್ಚು.
ಮಹಿಳೆಯರಿಗೆ ಅವಕಾಶ ಸಿಕ್ಕಾಗೆಲ್ಲ ಅವರು ಎಲ್ಲ ನಿಟ್ಟಿನಲ್ಲೂ ತಮ್ಮ ಅರ್ಹತೆಯನ್ನು ಸಾಬೀತುಪಡಿಸಿ ತೋರಿಸಿದ್ದಾರೆ. ಕೆಲವು ಸಂದರ್ಭದಲ್ಲಿ ಪುರುಷರಿಗಿಂತಲೂ ಮಿಗಿಲು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎನ್ನುವುದು ಇತಿಹಾಸದ ಉದಾಹರಣೆಗಳಿಂದ ತಿಳಿದುಬರುತ್ತದೆ.
ಅತ್ಯಂತ ಹಿಂದೆ ಹೋಗಿ ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀಬಾಯಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ ಅಥವಾ 19ನೇ ಶತಮಾನದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಸೇರಿದಂತೆ ಅನೇಕರ ಉದಾಹರಣೆಗಳು ನಮಗೆ ದೊರೆಯುತ್ತವೆ. ಅವರು ದೇಶದಲ್ಲಷ್ಟೇ ಅಲ್ಲ ಜಗತ್ತಿನಾದ್ಯಂತ ಹೆಸರು ಮಾಡಿದರು.
ಪುರುಷ ಹಾಗೂ ಮಹಿಳೆಯರ ನಡುವಿನ ಭೇದಭಾವವನ್ನು ನಿವಾರಿಸುವಲ್ಲಿ ಯಾವುದೇ ಒಂದು ದೇಶ ಸಂಪೂರ್ಣ ಯಶಸ್ವಿಯಾಗಿಲ್ಲ. ಅದು ಕ್ರೀಡಾ ಕ್ಷೇತ್ರವಾಗಿರಬಹುದು, ಮನರಂಜನಾ ಕ್ಷೇತ್ರವಾಗಿರಬಹುದು ಇಲ್ಲಿ ರಾಜಕೀಯ ಕ್ಷೇತ್ರ ಆಗಿರಬಹುದು. ಇವೆಲ್ಲ ಅಸಮಾನತೆಯನ್ನು ಎದುರಿಸಬೇಕಾಗಿ ಬರುತ್ತದೆ.
ವಿಶ್ವಸಂಸ್ಥೆಯ ಮಹಿಳಾ ಘಟಕ :
ಯುಎನ್‌ನ ಕಾರ್ಯಕಾರಿ ನಿರ್ದೇಶಕ ಪುಮಾಜಿರಿ ಕ್ಲಾಕ್ಯೊ ನಾಕ್ಸುಕಾ ಹೇಳುವುದೇನೆಂದರೆ, ಒಂದಿಷ್ಟು ಪ್ರಗತಿ ಸಾಧಿಸಿದ ಹೊರತಾಗಿಯೂ ಲಿಂಗ ಸಮಾನತೆ ಸಾಧಿಸಲಾಗಿಲ್ಲ ಎಂಬುದನ್ನು ಅಂಕಿಅಂಶಗಳು ತೋರಿಸಿಕೊಡುತ್ತವೆ.
ಸಮಾನತೆಯ ಅರ್ಥ ಕೇವಲ ಒಂದು ನಾಲ್ಕರಲ್ಲಿ ಒಂದಂಶದಷ್ಟು ಸೀಟುಗಳನ್ನು ಮಹಿಳೆಯರಿಗೆ ಕಾಯ್ದಿರಿಸುವುದಲ್ಲ. ಆದರೆ ಜಗತ್ತಿನಾದ್ಯಂತ ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಇದೇ ಸಿತ್ಥಿ ಇದೆ ಎಂದು ಪೂಮಾಜಿಲಿ ಹೇಳುತ್ತಾರೆ.
ಸಂಸತ್ತುಗಳಲ್ಲಿ ಶೇ.75ರಷ್ಟು ಪುರುಷರು ವಿರಾಜಮಾನರಾಗಿದ್ದಾರೆ. ಆಡಳಿತ ಹುದ್ದೆಗಳಲ್ಲಿ ಶೇ.73ರಷ್ಟು ಪುರುಷರ ನಿಯಂತ್ರಣವಿದೆ. ಅಷ್ಟೇ ಅಲ್ಲ, ಜಲವಾಯು ಪರಿವರ್ತನೆಯ ಹುದ್ದೆಗಳಲ್ಲಿ ಶೇ.70 ರಷ್ಟು ಪುರುಷರೇ ಇದ್ದಾರೆ.
ರಾಜಕಾರಣದ ದೀರ್ಘ ಇತಿಹಾಸದಲ್ಲಿ ಮಹಿಳಾ ಮುಖಂಡರ ಸಂಖ್ಯೆ ಬೆರಳೆಣಿಕೆಯಷ್ಟು, ಇಂದಿರಾ ಗಾಂಧಿಯಿಂದ ಹಿಡಿದು, ಸುಚೇತಾ ಕೃಪಾನಿ, ಭಂಡಾರನಾಯಿಕೆಯಿಂದ ಹಿಡಿದು ಮಾರ್ಗರೇಟ್ ಆಳ್ವಾತನಕ ಹೆಚ್ಚಿನವರು ಉನ್ನತ ಹುದ್ದೆಗೇರಿದ್ದರೂ ಮಹಿಳೆಯರ ಉನ್ನತಿಗಾಗಿ ಯಾವುದೇ ದಿಟ್ಟ ಹೆಜ್ಜೆ ಇಡಲು ಆಗಲಿಲ್ಲ. ಮಹಿಳೆಯರಿಗಾಗಿ ಯಾವುದೇ ದೊಡ್ಡ ನಿರ್ಧಾರ ಕೈಗೊಳ್ಳಲು ನಮಗೆ ದಶಕಗಳೇ ಬೇಕಾದವು.
ಇದಕ್ಕೆ ಕಾರಣ ಇಷ್ಟೇ ಅವರ ಧ್ವನಿಯನ್ನು ಕೇಳಿಸಿಕೊಳ್ಳಲೇ ಇಲ್ಲ. ಅವರು ಸುಬಾಷನಿ ಅಲಿ ಇರಬಹುದು ಅಥವಾ ಬೃಂದಾ ಕಾರಟ್. ಇವರು ಉನ್ನತ ಹುದ್ದೆಯನ್ನೇನೊ ಅಲಂಕರಿಸಿದರು. ಆದರೆ ಮಹಿಳೆಯರಿಗಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
ಮಹಿಳೆ ಎಲ್ಲಿಯವರೆಗೆ ವರ್ಗ, ಜಾತಿ ಮತ್ತು ಧರ್ಮದ ಕುಣಿಕೆಯಿಂದ ಹೊರಬರಲು ಆಗುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯದಲ್ಲಷ್ಟೇ ಅಲ್ಲ, ಮನೆಯಲ್ಲೂ ಕೂಡ ಆಕೆಯ ಸಹಭಾಗಿತ್ವ ಸಾರ್ಥಕ ಮತ್ತು ಗೌರದಾಯಕ ಆಗಿರಲಾರದು. ಧರ್ಮದ ಧ್ವಜ ವಾಹಕರಾಗಿರುವುದರಿಂದ ಪುರುಷ ಪ್ರಧಾನ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುತ್ತದೆ.
ಪುರುಷರು ರಾಜಕಾರಣವನ್ನು ತಮ್ಮ ಕುಸ್ತಿ ಮೈದಾನವನ್ನಾಗಿ ಮಾಡಿಕೊಂಡಿದ್ದಾರೆ. ಅಲ್ಲಿ ಮಹಿಳೆಯರು ಉನ್ನತ ಹುದ್ದೆಗೇರಲಾರರು ಅಥವಾ ಅವರ ಮನೆಯ ಮಹಿಳೆಯರನ್ನು ಹೊರತುಪಡಿಸಿ ಬೇರೆ ಸಾಮಾನ್ಯ ಮಹಿಳೆಯರನ್ನು ಅಲ್ಲಿ ನೆಲೆ ನಿಲ್ಲಲು ಅವಕಾಶ ಕೊಡುವುದೇ ಇಲ್ಲ.
ಮಹಿಳಾ ಸಬಲೀಕರಣದ ಹೊರತಾಗಿಯೂ ಈಗಲೂ ಸಂಸತ್ತಿನಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕೇವಲ ಶೇ.12 ಮಾತ್ರ. ಪಂಚಾಯತ್ ನಲ್ಲೂ ಕೇವಲ ಸ್ತ್ರೀಯರು ಪ್ರಾಕ್ಸಿ ಮುಖಂಡರ ಪಾತ್ರ ನಿಭಾಯಿಸುತ್ತಿದ್ದಾರೆ.
ಶಿಕ್ಷಣ, ಕ್ರೀಡೆ, ವೈದ್ಯಕೀಯ, ಮಾಹಿತಿ ತಂತ್ರಜ್ಞಾನ, ಸಿನಿಮಾ, ಬ್ಯಾಂಕಿಂಗ್, ವ್ಯಾಪಾರ, ಅಂತರಿಕ್ಷ, ಸೈನ್ಯ ಅಷ್ಟೇ ಏಕೆ ಭೂಗತ ಚಟುವಟಿಕೆಯಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಎದ್ದು ಕಾಣುತ್ತದೆ. ಯುದ್ಧದ ವರದಿಗಾರಿಕೆಯಲ್ಲೂ ಅವರ ಸಾಹಸ ಗೋಚರಿಸುತ್ತದೆ. ಆದರೆ ರಾಜಕೀಯದಲ್ಲಿ ಮಾತ್ರ ಅವರ ಪಾಲ್ಗೊಳ್ಳುವಿಕೆ ಏಕೆ ಕಡಿಮೆ ಎನ್ನುವುದು ಸಂಶೋಧನೆಯ ವಿಷಯವಾಗಿದೆ.
ಸವಾಲಿನ ಸ್ಥಿತಿ
ಭಾರತ ಸಹಿತ ಜಗತ್ತಿನ ಎಲ್ಲ ದೇಶಗಳು ಅವು ಅಭಿವೃದ್ಧಿ ಹೊಂದಿದ ದೇಶಗಳೇ ಆಗಿರಬಹುದು. ಇಲ್ಲಿ ಅಭಿವೃದ್ಧಿಶೀಲ ದೇಶಗಳೇ ಇರಬಹುದು ಇಲ್ಲೆಲ್ಲ ರಾಜಕೀಯ ಪ್ರವೇಶ, ಅಲ್ಲಿ ಅಸ್ತಿತ್ವ ಕಾಯ್ದುಕೊಂಡು ಹೋಗುವುದು ಸವಾಲಿನ ಸಂಗತಿಯೇ ಆಗಿದೆ.
`ಜನರಲ್ ಆಫ್ ಎಕನಾಮಿಕ್ ಬಿಹೇವಿಯರ್ ಅಂಡ್ ಆರ್ಗನೈಸೇಶನ್’ನಲ್ಲಿ ಶೇಕಡ ಒಂದು ಲೇಖನದಲ್ಲಿ ಹೇಳಲಾದ ವಿಷಯ ಬಹಳ ಆಸಕ್ತಿದಾಯಕವಾಗಿದೆ. ಯಾವ ಸರ್ಕಾರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುತ್ತದೋ, ಅಲ್ಲಿ ಭ್ರಷ್ಟಾಚಾರ ಕಡಿಮೆಯಿರುತ್ತದೆ. ವಿಶ್ವಸಂಸ್ಥೆಯ ಮಾರಿಯಾ ಫನಾದಂರಾ ಅವರ ಪ್ರಕಾರ, ಮಹಿಳೆಯರ ಸ್ಥಿತಿಗತಿಯ ಬಗ್ಗೆ 63ನೇ ಸಮ್ಮೇಳನದಲ್ಲಿ ಚರ್ಚಿಸಿದಾಗ, ಸದ್ಯದ ಆಗುಹೋಗುಗಳನ್ನು ಗಮನಕ್ಕೆ ತೆಗೆದುಕೊಂಡಾಗ ಲೈಂಗಿಕ ಸಮಾನತೆ ಸಾಧಿಸಲು ಇನ್ನು 107 ವರ್ಷ ತಗುಲಬಹುದು ಎಂದು ಅನಿಸಿತು ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಸಂಸ್ಥೆಯೊಂದರ ಅಂಕಿ ಅಂಶಗಳ ಪ್ರಕಾರ, ರಾಜಕೀಯದಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವ ನಿಟ್ಟಿನಲ್ಲಿ ಭಾರತಕ್ಕೆ ವಿಶ್ವದಲ್ಲಿ 98ನೇ ಸ್ಥಾನವಿದೆ. ಭಾರತದ ಲೋಕಸಭೆಯಲ್ಲಿ 545 ಸ್ಥಾನದಲ್ಲಿ 59 ಮಹಿಳೆಯರಿದ್ದಾರೆ. ರಾಜ್ಯಸಭೆಯ 242 ಸ್ಥಾನಗಳಲ್ಲಿ 25 ಮಹಿಳೆಯರಿದ್ದಾರೆ. ಪಾಕಿಸ್ತಾನದ ಸಂಸತ್ತಿನ ಕೆಳಮನೆಯಲ್ಲಿ 22.3 ರಷ್ಟು ಮಹಿಳೆಯರಿದ್ದಾರೆ. ಮೇಲ್ಮನೆಯಲ್ಲಿ ಶೇ17ರಷ್ಟು ಮಹಿಳೆಯರಿದ್ದಾರೆ. ಪಟ್ಟಿಯಲ್ಲಿ ಪಾಕಿಸ್ತಾನ 51ನೇ ಸ್ಥಾನದಲ್ಲಿದೆ. ಚೀನಾ 55 ಹಾಗೂ ಬಾಂಗ್ಲಾ 65ನೇ ಸ್ಥಾನದಲ್ಲಿದೆ.
ಆಫ್ರಿಕಾ ಖಂಡದ ರುವಾಂಡಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಸಂಸತ್ತಿನ ಕೆಳಮನೆಯಲ್ಲಿ 56% ಹಾಗೂ ಮೇಲ್ಪನೆಯಲ್ಲಿ 34% ಮಹಿಳೆಯರಿದ್ದಾರೆ. ಸ್ವೀಡನ್ 45% ರೊಂದಿಗೆ ಎರಡನೇ ಕ್ರಮಾಂಕದಲ್ಲಿದೆ. ದಕ್ಷಿಣ ಆಫ್ರಿಕಾ 3ನೇ ಸ್ಥಾನದಲ್ಲಿದೆ. ನಂಬರ್ 4ನೇ ಸ್ಥಾನದಲ್ಲಿ ಕ್ಯೂಬಾ, ಐಸ್ ಲ್ಯಾಂಡ್, ಫಿನ್ ಲ್ಯಾಂಡ್ ಮತ್ತು ನಾರ್ವೆಗಳಿವೆ.
ಮಹಿಳೆಯರನ್ನು ರಾಜಕೀಯದಲ್ಲಿ ಸೇರ್ಪಡೆಗೊಳಿಸುವ ವಿಷಯದಲ್ಲಿ ಜರ್ಮನಿ ಜಗತ್ತಿನಲ್ಲಿಯೇ 19ನೇ ಸ್ಥಾನದಲ್ಲಿದೆ. ಅಮೆರಿಕ 72ನೇ ಸ್ಥಾನದಲ್ಲಿ. ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಮತ್ತೊಂದು ಮಹತ್ವದ ಸಂಗತಿಯೆಂದರೆ ಸೌದಿ ಅರೇಬಿಯಾ, ಕತಾರ್, ಓಮನ್‌ನ ರಾಜಕೀಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೂನ್ಯವಾಗಿದೆ.
ನಾವಿಂದು ವಿಶ್ವಮಟ್ಟದಲ್ಲಿ ಸತತ ಬೆಳವಣಿಗೆಯಲ್ಲಿ ಲೈಂಗಿಕ ಭೇದಭಾವ ನಿವಾರಿಸುವ ಬಗ್ಗೆ ಮಾತನಾಡುತ್ತಿದ್ದೇವೆ. ಮತ್ತೆ ಇನ್ನೊಂದೆಡೆ ಲೈಂಗಿಕ ಅಸಮಾನತೆಯ ಬೇರುಗಳು ಸಮಾಜ ಹಾಗೂ ರಾಜಕಾರಣದಲ್ಲಿ ಅತ್ಯಂತ ಬಲವಾಗಿ ಬೇರೂರಿವೆ. ಇಂತಹ ಸ್ಥಿತಿಯಲ್ಲಿ ಲೈಂಗಿಕ ಸಮಾನತೆಯ ಗುರಿಯನ್ನು ಹೇಗೆ ತಲುಪಬೇಕೆಂಬ ಬಗ್ಗೆ ಯೋಜಿಸಿ, ವಿಶ್ವದಲ್ಲಿ ಸತತ ವಿಕಾಸದ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ. ಇಲ್ಲದಿದ್ದರೆ ಲೈಂಗಿಕ ಅಸಮಾನತೆ ನಮಗೊಂದು ಸವಾಲಾಗಿ ಪರಿಣಮಿಸಬಹುದು. ಶಾಂತಿಯುತ ಹಾಗೂ ಸುಂದರ ವಿಶ್ವದ ಕಲ್ಪನೆ ಲೈಂಗಿಕ ಸಮಾನತೆ ಸಾಧಿಸದೆ ಪೂರ್ಣಗೊಳ್ಳದು. ಎಲ್ಲಿಯವರೆಗೆ ಲೈಂಗಿಕ ಸಮಾನತೆ ಆಗುವುದಿಲ್ಲವೋ ಅಲ್ಲಿಯವರೆಗೆ `ಅಜೆಂಡಾ 20-30′ ಪೂರ್ಣಗೊಳಿಸುವುದು ಕಷ್ಟಕರ ಅಷ್ಟೇ ಅಲ್ಲ, ಅಸಾಧ್ಯವಾಗಿ ಪರಿಣಮಿಸಬಹುದು.
– ಪ್ರತಿನಿಧಿ
ಲಾಕ್ ಡೌನ್ ನಲ್ಲಿ ಪರಿಸ್ಥಿತಿ ಇನ್ನೂ ಭೀಕರ
ಲೈಂಗಿಕ ಅಸಮಾನತೆಯಿಂದ ತತ್ತರಿಸಿ ಹೋಗಿದ್ದ ಅರ್ಧ ಜನಸಂಖ್ಯೆಗೆ ಕೊರೋನಾ ವೈರಸ್ ನಿಂದಾಗಿ ವಿಧಿಸಲ್ಪಟ್ಟ ಲಾಕ್ ಡೌನ್ ಅವರ ಸ್ಥಿತಿಯನ್ನು ಇನ್ನಷ್ಟು ಭೀಕರಗೊಳಿಸಿತು. ಇಡೀ ವಿಶ್ವದಲ್ಲಿ ಮಹಿಳೆಯರ ಬಗೆಗಿನ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳಲ್ಲಿ ಇನ್ನಷ್ಟು ಹೆಚ್ಚಳವಾಗಿರುವುದು ಕಂಡುಬಂತು. ಫ್ರಾನ್ಸ್ ನಲ್ಲಿ ಅಂತಹ ಪ್ರಕರಣಗಳ ಸಂಖ್ಯೆ ಶೇ.36ರಷ್ಟು ಹೆಚ್ಚಾಗಿತ್ತು. ಇಡೀ ಜಗತ್ತಿನದ್ದು ಈ ಸ್ಥಿತಿಯಾದರೆ, ಧರ್ಮದ ಪ್ರಾಬಲ್ಯ ಹಾಗೂ ಪುರುಷ ಪ್ರಧಾನ ಸಮಾಜವಿರುವ ಭಾರತದಲ್ಲಿ ಅದರ ಸ್ಥಿತಿ ಹೇಗಿರಬಹುದು ನೀವೇ ಯೋಚಿಸಿ. ಇಲ್ಲೂ ಕೂಡ ಎಷ್ಟೊಂದು ಪ್ರಕರಣಗಳು ಹೆಚ್ಚಿದ ಎಂದರೆ ಮಹಿಳಾ ಆಯೋಗ ಮಧ್ಯೆ ಪ್ರವೇಶ ಮಾಡಿ ವಿಶೇಷ ಹೆಲ್ಪ್ ಲೈನ್ ವ್ಯವಸ್ಥೆ ಕಲ್ಪಿಸಬೇಕಾಗಿ ಬಂತು. ಮುಂದಿನ ದಿನಗಳಲ್ಲಿ ಜಗತ್ತು ಕೊರೋನಾ ಕಪಿಮುಷ್ಟಿಯಿಂದ ಹೊರಬರಬಹುದು, ಆದರೆ ಮಹಿಳೆಯರ ಜೊತೆಗೆ ನಡೆಯುತ್ತಿರುವ ವರ್ತನೆ ಮತ್ತು ವ್ಯವಹಾರ ಮಾತ್ರ ಬದಲಾಗದು ಎನಿಸುತ್ತೆ.