ನಮ್ಮಿಂದ ಹೆಚ್ಚು ಅಪೇಕ್ಷೆ ಇಟ್ಟುಕೊಳ್ಳಬೇಡಿ…..

ಆರೋಗ್ಯ ಸಚಿವ ಹರ್ಷವರ್ಧನ್‌ ಅವರನ್ನು ಬದಲಿಸಿ ಕೋವಿಡ್‌ ನಿರ್ವಹಣೆಯ ತಪ್ಪನ್ನು ಒಪ್ಪಿಕೊಂಡಂತೆ. ಆರೋಗ್ಯ ಸಚಿವರು ಏನೇನೋ ಹೇಳುತ್ತ ಹೊರಟಿದ್ದರು ಹಾಗೂ ಕ್ಲೇಮ್ ಮಾಡುತ್ತಿದ್ದರು. ಅದರ ನಿಜವಾದ ಹೊಣೆಗಾರಿಕೆ ಪ್ರಧಾನಿಯವರದ್ದಾಗಿರಬಹುದು, ಅದರ ತಪ್ಪು ಆರೋಗ್ಯ ಸಚಿವರದ್ದೂ ಆಗಿತ್ತು.

ಆಯುರ್ವೇದ ಮುಂತಾದವುಗಳ ಬಗೆಗಿನ ನನ್ನ ಕ್ಲೇಮ್ ತಪ್ಪಾಗಿತ್ತು ಎಂದು ಅವರು ಆಗಲೇ ಒಪ್ಪಿಕೊಳ್ಳಬೇಕಿತ್ತು.

ಹರ್ಷವರ್ಧನ್‌ ಆಲೋಪಥಿ ವೈದ್ಯರಾಗಿದ್ದೂ ಕೂಡ ಕೋವಿಡ್‌ ಸಂಕಷ್ಟದ ಸಮಯದಲ್ಲಿ ಸರ್ಕಾರ ನಿಮ್ಮ ಜೊತೆಗಿರುತ್ತದೆ ಎಂಬ ಭರವಸೆಯ ಮಾತನ್ನು ಹೇಳಲಿಲ್ಲ.

ಜನತೆಗೆ ರೆಮಡೆಸಿರ್‌ ಅಥವಾ ಡಾಕ್ಸಿಯ ಸಂಶೋಧನೆ, ಐಸಿಯು ಬೆಡ್‌, ಆಕ್ಸಿಜನ್‌ ಸಿಲಿಂಡರ್‌ ಗಳದ್ದಲ್ಲ, ಸೀದಾ ಸ್ಮಶಾನದ ವ್ಯವಸ್ಥೆ ಮಾಡಿಕೊಳ್ಳಬೇಕಾಯ್ತು.

ಟ್ವಿಟರ್‌ ಮತ್ತು ಸೋಶಿಯಲ್ ಮೀಡಿಯಾಗಳು ಜೂನ್‌ ನಿಂದಲೇ ಡಾ.ಹರ್ಷವರ್ಧನ್‌ ಅವರನ್ನು ತೆಗೆದುಹಾಕುವ ಬಗ್ಗೆ ಒತ್ತಾಯ ಮಾಡುತ್ತಲೇ ಇದ್ದವು. ಆದರೆ ಟ್ವಿಟರ್‌ ವೀರ ಮಾತ್ರ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಅರೆಬರೆ ಓದಿದ ಒಬ್ಬ ವ್ಯಕ್ತಿ ಇನ್ನೊಬ್ಬ ಅರೆಬರೆ ಓದಿದವನನ್ನು ಹೇಗೆ ತೆಗೆದುಹಾಕಲು ಸಾಧ್ಯ?

ಮೊದಲ ಲಾಕ್‌ ಡೌನಿನ ದಿನಗಳಲ್ಲಿ ಸಚಿವಾಲಯದ ಕೆಲಸ ನೋಡಬೇಕಿದ್ದ ಹರ್ಷವರ್ಧನ್‌ ಮನೆಯಲ್ಲಿ ಬಟಾಣಿ ಸುಲಿಯುತ್ತಿರುವ ಪೋಟೋ ಕ್ಲಿಕ್ಕಿಸಿಕೊಂಡಿದ್ದರು. ನ್ಯಾಷನಲ್ ಡಿಸಾಸ್ಟರ್‌ ಮ್ಯಾನೇಜ್‌ ಮೆಂಟ್‌ ಅಥಾರಿಟಿಗೆ ಚೇರ್‌ಮನ್‌ ಮೋದಿ ಅವರಾಗಿದ್ದು, ಮೊದಲನೇ ಅಲೆಯಲ್ಲಿ ಹರ್ಷವರ್ಧನರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಇಎನ್‌ಟಿ ವೈದ್ಯರಾಗಿರುವ ಡಾ. ಹರ್ಷವರ್ಧನ್ ಮೂಗನ್ನಂತು ಮುಚ್ಚಿಕೊಂಡರು. ಅದರ ಜೊತೆಗೆ ಕಿವಿಯನ್ನು ಕೂಡ. ಕಣ್ಣುಗಳ ಮೇಲಂತೂ ಪಕ್ಕಾ ಭಕ್ತಿಯ ಕನ್ನಡಕ ಏರಿಸಿಕೊಂಡಿದ್ದರು.

ದೇಶದ ಆರೋಗ್ಯ ವ್ಯವಸ್ಥೆ ಪೂಜೆ ಪಾಠದ ಭರವಸೆಯ ಮೇಲೆ ಇತ್ತು. ಉಳಿದರೆ ಸರಿ, ಇಲ್ಲದಿದ್ದರೆ ಸ್ಮಶಾನವೇ ಆಸರೆ.

ಇಡೀ ದೇಶದ ಚಿಂತೆ ಮಾಡಬೇಕಿದ್ದ ಹರ್ಷವರ್ಧನಗೆ ಪಾರ್ಟಿಯ ಚಿಂತೆ ಇತ್ತು. ಹೀಗಾಗಿ ಅವರು ವಿರೋಧ ಪಕ್ಷಗಳ ಸರ್ಕಾರಕ್ಕೆ ಕೋವಿಡ್‌ ಬಗ್ಗೆ ಉಪದೇಶ ನೀಡುತ್ತಾ ಹೋದರು. ಈ ರೋಗ ಎಷ್ಟು ಭಯಂಕರ ರೂಪ ತಾಳಬಹುದು ಎಂಬ ಅಂದಾಜು ಅವರಿಗೆ ಇರಲೇ ಇಲ್ಲ. ಅದಕ್ಕೂ ಮುಂಚೆ ಅಮೆರಿಕ ಹಾಗೂ ಇಟಲಿಯ ಉದಾಹರಣೆಗಳು ಕಣ್ಮುಂದೆ ಇದ್ದವು.

ಅಲ್ಲಿ ಆಸ್ಪತ್ರೆಗಳ ಕೊರತೆ ಇರುವುದು ಗೊತ್ತಿತ್ತು. ಆದರೆ ಹರ್ಷವರ್ಧನ್‌ ಯಾವ ಒಂದು ಟೀಮಿನ ಕಿಂಗ್‌ ಆಗಿದ್ದರೆಂದರೆ, ಅವರು 20 ಮಾರ್ಚ್‌, 2020ರಲ್ಲಿ ಕೋವಿಡ್‌ ವಿಜಯಿ ಎಂದು ಘೋಷಿಸಿದ್ದರು. ಆಗ ಪ್ರಧಾನಿ ಮೋದಿ ನಾವು 21 ದಿನಗಳ ಲಾಕ್‌ ಡೌನ್ ಹಾಗೂ ಚಪ್ಪಾಳೆ ತಟ್ಟಿ, ದೀಪ ಬೆಳಗಿಸಿ ಕೋವಿಡ್‌ ವಿರುದ್ಧ ಗೆಲುವು ಸಾಧಿಸುವುದಾಗಿ ಹೇಳಿದ್ದರು.

ದೇಶದಲ್ಲಿ ಮಂತ್ರಿಗಳ ಮಹತ್ವ ಈಗ ಅಷ್ಟಾಗಿ ಉಳಿದಿಲ್ಲ. ಹಾಗೆಂದೇ ಮನ್‌ ಸುಖಿ ಮಂಡಾನಿ ಯಾರನ್ನು ಆರೋಗ್ಯ ಸಚಿವರೆಂದು ನೇಮಕ ಮಾಡಲಾಗಿದೆ. ಅವರು 2015ರಲ್ಲಿ ಟ್ರೀಟ್‌ ಮಾಡಿ ಆಲೋಪಥಿ ಫೇಸ್‌, ಆಯುರ್ವೇದ ಉತ್ತರ ಎಂದಿದ್ದರು. ಕೋವಿಡ್‌ ನ ಎರಡನೇ ಅಲೆಯ ಸಂದರ್ಭದಲ್ಲಿ ರಾಮದೇವ್ ಅಥವಾ ಹೋಮಿಯೋಪತಿ ತಜ್ಞರಾಗಲಿ ಯಾರೂ ಮುಂದೆ ಬರಲಿಲ್ಲ.

ಜನರು ಆಲೋಪಥಿ ಚಿಕಿತ್ಸಕರ ಬಳಿ ಓಡುತ್ತಿದ್ದರು ಹಾಗೂ ಆಲೋಪಥಿಕ್‌ ಔಷಧಿಗಳನ್ನೇ ಹುಡುಕುತ್ತಿದ್ದರು.

ಭಾರತ ಸರ್ಕಾರ ಸಂದೇಶ ಮನೆ ಮನೆಗಳಿಗೆ ಸ್ಪಷ್ಟವಾಗಿದೆ. ಆರೋಗ್ಯದ ಬಾಬತ್ತಿನಲ್ಲಿ ನಮ್ಮಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಡಿ. ನಾವೀಗ ಎಂತಹ ಆರೋಗ್ಯ ಮಂತ್ರಿಯನ್ನು ಹೊಂದಿದ್ದೇವೆ ಎಂದರೆ ಅವರು ಎಂ.ಎ ರಾಜ್ಯಶಾಸ್ತ್ರ ಓದಿದ್ದಾರೆ. ನಿಮಗೆ ಇಚ್ಛೆ ಇದ್ದರೆ ಆಸ್ಪತ್ರೆಗಳನ್ನು ಹುಡುಕಿ ಇಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿ, ಔಷಧಿಗಳನ್ನು ಖರೀದಿಸಿ ಇಲ್ಲಿ ಸಾವಿಗೀಡಾಗಿ. ಆದರೆ ಸ್ಮಶಾನದಲ್ಲೂ ಜಾಗ ಸಿಗದೇ ಹೋದರೆ, ನಮ್ಮನ್ನು ಕೇಳಬೇಡಿ.

ನಾವು ಆರೋಗ್ಯ ಮಂತ್ರಿಯನ್ನು ಬದಲಿಸಿದ್ದೇವೆ. ಇದೇ ಸಾಕಷ್ಟಾಯ್ತು. ಹಿಂದಿನವರೇ ಕನಿಷ್ಠ ಇಎನ್‌ಟಿ ಡಾಕ್ಟರ್‌ ಆದರೂ ಆಗಿದ್ದರು. ಈಗಿನವರು ಡಾಕ್ಟರ್‌ ಕೂಡ ಅಲ್ಲ.

ಖಾಸಗಿತನ ಅಪಾಯದಲ್ಲಿ…..

ನೀವು ನಿಮ್ಮ ಮನೆಯ 4 ಗೋಡೆಗಳ ನಡುವೆ ಹೇಗಿದ್ದೀರಿ, ಏನು ಓದುತ್ತೀರಿ, ಏನು ಧರಿಸುತ್ತೀರಿ, ಏನು ತಿನ್ನುತ್ತೀರಿ, ಎಷ್ಟು ಜಮೆ ಮಾಡಿದ್ದೀರಿ ಎಂಬುದರ ಬಗ್ಗೆ ಸಮಾಜವಷ್ಟೇ ಅಲ್ಲ, ವಿಜ್ಞಾನಿಗಳು, ಕಾನೂನು ತಜ್ಞರು ಅದು ನಿಮ್ಮ ಹಕ್ಕು ಎನ್ನುತ್ತಾರೆ. ನಿಮ್ಮ ಮನೆ, ಬಾಗಿಲು ಎಷ್ಟೇ ದುರ್ಬಲವಾಗಿದ್ದರೂ ಸರ್ಕಾರ, ಕಾನೂನು ಹಾಗೂ ಸಮಾಜದ ದೃಷ್ಟಿಯಿಂದ ಅಭೇಧ್ಯ ಕೋಟೆ.

medical-2

ಖೇದದ ಸಂಗತಿಯೆಂದರೆ, ಬಹಳಷ್ಟು ಜನರು ಈ ರಹಸ್ಯವನ್ನು ರಹಸ್ಯವಾಗಿಡಲು ಇಷ್ಟಪಡುವುದಿಲ್ಲ. ಪೊಲೀಸರು ಯಾವಾಗ ಬೇಕಾದರೂ ನಿಮ್ಮ ಮನೆಗೆ ನುಗ್ಗಿ ನೀವು ಹೇಗಿರುತ್ತೀರಿ? ಏನು ಮಾಡುತ್ತೀರಿ? ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕು ಹೊಂದಿರುವುದಾಗಿ ಹೇಳಿಕೊಳ್ಳುತ್ತಾರೆ.

ನೀವು ನಿಮ್ಮ ರಹಸ್ಯಗಳ ಬಗ್ಗೆ ಜಾಗೃತರಿರದೇ ಇರುವುದರ ಕಾರಣದಿಂದ ನಿಮ್ಮ ಖಾಸಗಿ ಕ್ಷಣಗಳು, ನಿಮ್ಮ ಕೋಣೆ, ನಿಮ್ಮ ಜೀವನಶೈಲಿಯ ಫೋಟೋಗಳನ್ನು ಫೇಸ್‌ ಬುಕ್‌, ವಾಟ್ಸ್ ಆ್ಯಪ್‌ ನಲ್ಲಿ ಶೇರ್‌ ಮಾಡುತ್ತಿದ್ದೀರಿ. ನೀವು ಏನು ತಿಂದಿರಿ? ಯಾವ ಕ್ರಾಕರಿ ಬಳಸಿದಿರಿ? ಯಾವ ಸೀರೆ ಧರಿಸಿದಿರಿ ಎನ್ನುವುದರ ಬಗ್ಗೆ ಇಂಚಿಂಚು ಮಾಹಿತಿ ಹಂಚಿಕೊಳ್ಳುತ್ತೀರಿ. ಶಾರ್ಟ್‌ ವಿಡಿಯೋ ಪ್ಲಾಟ್‌ ಫಾರ್ಮ್ ಗಳ ಮೇಲಂತೂ ಮನೆಯ ಮುಂದೆ ಮೂಲೆ ಮೂಲೆ ಜಗಜ್ಜಾಹೀರಾಗುತ್ತದೆ. ಜನರಿಗೆ ತಮ್ಮ ವೈಯಕ್ತಿಕ ರಹಸ್ಯಗಳ ಬಗ್ಗೆ ಎಳ್ಳಷ್ಟೂ ಚಿಂತೆ ಇಲ್ಲ. ಸಣ್ಣಪುಟ್ಟ ವಿಷಯಗಳಿಗೂ ಕೂಡ ಹುಡುಗಿಯರು ತಮ್ಮ ಕೋಣೆಯ ಜಾಗ್ರಫಿಯನ್ನು ಜಗತ್ತಿಗೆ ಬಟಾಬಯಲು ಮಾಡುತ್ತಾರೆ. ನಿಮ್ಮ ಕೋಣೆ, ಈಗ ಗಾಜಿನ ಮನೆಯಾಗಿಬಿಟ್ಟಿದೆ.

ನಿಮ್ಮ ಇದೇ ಅಭ್ಯಾಸ, ಹವ್ಯಾಸ ನಿಮ್ಮ ಖಾಸಗಿತನದ ಹಕ್ಕನ್ನು ಕೊನೆಗೊಳಿಸಿಬಿಟ್ಟಿದೆ. ಉತ್ಪಾದಕರಷ್ಟೇ ಅಲ್ಲ, ಸರ್ಕಾರ ಕೂಡ ನಾಗರಿಕರ ಸಂಪೂರ್ಣ ಪ್ರೊಫೈಲ್ ಸಿದ್ಧಗೊಳಿಸುತ್ತಿದೆ. ಜಗತ್ತಿನಾದ್ಯಂತದ ಜನರ ಮುಖದ ಗುರುತನ್ನು ಕಂಡುಹಿಡಿಯಲು ತಂತ್ರಜ್ಞಾನ ಹಿಡಿಯಲ್ಪಡುತ್ತಿದೆ. ಅವರ ಬಾಥ್‌ ರೂಮ್ ತನಕ ಕ್ಯಾಮರಾಗಳ ದೃಷ್ಟಿ ಬೀಳುತ್ತದೆ ಮತ್ತು ಅಮೆರಿಕದ ವಿಶಾಲ ಡೇಟಾ ಸೆಂಟರ್‌ ಗಳಲ್ಲಿ ಜಮೆಗೊಳ್ಳುತ್ತಿದೆ.

ನೀವು ಕಾನೂನುಬದ್ಧ ನಾಗರಿಕರಾಗಿದ್ದರೆ, ನಿಮಗೆ ಯಾವುದೇ ವಿಷಯದ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಆದರೆ ಅದೇ ಉತ್ಪಾದಕರೊಬ್ಬರಿಗೆ ಗೊತ್ತಾದರೆ, ನೀವು ಎಂತಹ ಶ್ಯಾಂಪೂ ಖರೀದಿಸುತ್ತೀರಿ ಎಂದು ತಿಳಿದು, ಅದು ಬೇಡ ಇದನ್ನು ತೆಗೆದುಕೊಳ್ಳಿ ಎಂದು ನಿಮ್ಮ ಸಹನೆಯನ್ನು ಪರೀಕ್ಷಿಸಬಹುದು. ಅದು ನಿಮ್ಮ ಖಾಸಗಿತನದ ಮೇಲಿನ ದಾಳಿಯಾಗಿದೆ.

ಈ ಹಕ್ಕಿನ ಬಗ್ಗೆ ಜಗತ್ತಿನಾದ್ಯಂತ ನ್ಯಾಯಾಲಯಗಳು ದೊಡ್ಡ ದೊಡ್ಡ ತೀರ್ಪು ನೀಡಿವೆ. ಹಾಗೆಂದು ನೀವು ನಿಮ್ಮ ಖಾಸಗಿತನದ ಚಿಂತೆ ಮಾಡುತ್ತಿಲ್ಲ. ಆದರೆ ನಿಮ್ಮ ಒಂದಷ್ಟು ಅಜಾಗರೂಕತೆಯಿಂದ ನಿಮ್ಮ ಇಡೀ ಮನೆಯನ್ನು ಜಾಲಾಡಬಹುದು. ನೂರಾರು ದಾಳಿಗಳಲ್ಲಿ ಕೆಲವು ಮನೆಗಳಲ್ಲಿ ಆಕ್ಷೇಪಾರ್ಹವಾದುದು ಸಿಗುತ್ತದೆ. ಜನರು ತಮ್ಮ ಖಾಸಗಿತನದ ಹಕ್ಕನ್ನು ಕಳೆದುಕೊಂಡಿದ್ದಾರೆ.

ಕೆಲವು ನಾಗರಿಕರು ಹೀಗೂ ಇದ್ದಾರೆ, ಅವರು ಹಕ್ಕುಗಳ ಬಗ್ಗೆ ಜಾಗೃತರಾಗಿದ್ದಾರೆ. ನಿಮ್ಮದೇ ಆದ ವಾಟ್ಸ್ ಆ್ಯಪ್‌ ಗ್ರೂಪ್ ಮಾಡಿಕೊಳ್ಳಿ. ನಿಮಗಾಗಿ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಳ್ಳಿ, ಆದರೆ ನಿಮ್ಮ ರಹಸ್ಯವನ್ನು ಮಾತ್ರ ಬಹಿರಂಗಗೊಳಿಸಬೇಡಿ. ಒಂದು ವಿಷಯ ನೆನಪಿಸಿಕೊಳ್ಳಿ, ಇವರು ನಿಮ್ಮ ಪ್ರತಿಯೊಂದು ವಿಷಯವನ್ನು ಅರಿತುಕೊಳ್ಳುತ್ತಾರೆ. ಅದು ಯಾವುದೇ ಕ್ಷಣದಲ್ಲಿ ನಿಮ್ಮ ವೈರಿಗಳ ಕೈಗೆ ಸಿಗಬಹುದು.

ಪ್ರಾರ್ಥನೆ ಅಲ್ಲ, ಔಷಧೀಯ ಅವಶ್ಯಕತೆ

ನಿನ್ನೆ ತನಕ ಯಾವುದನ್ನು ಸಾಧಾರಣ ಕೆಮ್ಮು ಜ್ವರ ಎಂದು ನಿರ್ಲಕ್ಷ್ಯ ಮಾಡಲಾಗುತ್ತಿತ್ತೋ, ಅದೇ ಕೊರೋನಾ ವೈರಸ್‌ ರೂಪ ಪಡೆದು ಪ್ರತಿಯೊಬ್ಬ ಪತ್ನಿ ಹಾಗೂ ಅಮ್ಮನಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಮನೆಯಲ್ಲಿ ಯಾರಿಗಾದರೂ ಸಾಧಾರಣ ಕೆಮ್ಮು, ಜ್ವರ,  ತಲೆನೋವು, ಉಸಿರಾಟ ತೊಂದರೆ, ಶೀತ, ಸುರಿಯುತ್ತಿರುವ ಮೂಗು ಇವು ಕೋವಿಡ್‌-19ರ ಲಕ್ಷಣಗಳಾಗಿರಬಹುದು. ಯಾರು ಲಸಿಕೆ ಪಡೆದುಕೊಂಡಿದ್ದಾರೊ ಅವರಂತೂ ಅಪಾಯದಿಂದ ದೂರ ಉಳಿದರು. ಯಾರು ಲಸಿಕೆ ಪಡೆದಿಲ್ಲವೋ, ಅವರೂ ಅಪಾಯದಲ್ಲಿರುತ್ತಾರೆ ಹಾಗೂ ಇತರರನ್ನೂ ಅಪಾಯಕ್ಕೆ ದೂಡುತ್ತಾರೆ.

ಈಗ ಪಿಸಿಆರ್‌ಟಿ ಟೆಸ್ಟ್ ಮಾಡಿಸಿಕೊಳ್ಳುವುದು ಒಂದು ಹೊಣೆಗಾರಿಕೆಯಾಗಿದೆ. ಲಸಿಕೆ ಪಡೆದಿದ್ದಾಗ್ಯೂ ಟೆಸ್ಟ್ ರಿಪೋರ್ಟ್‌ ಗಳನ್ನು ಪಡೆಯಬೇಕಾದದ್ದು, ಪಾಸ್‌ ಪೋರ್ಟ್‌ ನಷ್ಟೇ ಅನಿವಾರ್ಯವಾಗುತ್ತಿದೆ. ಮನೆಯ ಹೆಚ್ಚುತ್ತಿರುವ ಖರ್ಚುಗಳಲ್ಲಿ ಈ ಖರ್ಚು ಕೂಡ ಸೇರುತ್ತಿದೆ. ಅಷ್ಟೇ ಅಲ್ಲ, ಅದರ ಉಸ್ತುವಾರಿಯನ್ನು ಹೆಂಡತಿ ಅಥವಾ ಅಮ್ಮನೇ ಮಾಡಬೇಕಾಗಿ ಬರುತ್ತಿದೆ.

ಜಗತ್ತಿನ ಬಹುತೇಕ ದೇಶಗಳು ಲಸಿಕೆಯನ್ನು ಸ್ವಾತಂತ್ರ್ಯ ಎಂದು ಭಾವಿಸಿವೆ. ಒಂದು ವೇಳೆ 60-70% ರಷ್ಟು ಜನರು ಹಾಕಿಸಿಕೊಂಡರೆ ಅವರಿಗೆ ಎಲ್ಲ ಬಗೆಯ ರಿಯಾಯ್ತಿಗಳನ್ನು ಘೋಷಿಸುತ್ತಿವೆ. ಭಾರತದಲ್ಲಿ ಈ ಸಂಖ್ಯೆ ಇನ್ನೂ ಕಡಿಮೆ ಇದೆ. ಹಸಿವಿನಿಂದ ಸಾಯದೇ ಇರಲು ದೇಶದಲ್ಲಿ ಲಾಕ್‌ ಡೌನ್‌ ಹಿಂಪಡೆಯಲು ಶುರು ಮಾಡಿದೆ. ಆದರೆ ಈಗಲೂ ಎಚ್ಚರಿಕೆ ವಹಿಸಬೇಕಾಗಿದೆ ಮತ್ತು ಇದರ ಮೊದಲ ಜವಾಬ್ದಾರಿ ಮಹಿಳೆಯರದ್ದಾಗಿದೆ. ಅವರು ಯಾವುದೇ ಸಡಿಲಿಕೆ ನೀಡುವುದಿಲ್ಲ.

ಈಗ ದೈನಂದಿನ ಪೂಜೆ ನಿಲ್ಲಿಸಿ ಹಾಗೂ ಮನೆಯನ್ನು ಸ್ಯಾನಿಟೈಸ್‌ ಮಾಡಿ ಮತ್ತು ಮನೆಯವರ ಸ್ಥಿತಿ ಬಗ್ಗೆ ಚಿಂತೆ ಮಾಡಿ. ಧರ್ಮದ ಅಂಗಡಿ ಇನ್ನೂ ತೆರೆದಿಲ್ಲ. ಒಂದು ವೇಳೆ ತೆರೆದರೂ ಕೋವಿಡ್‌ ನಿಂದ ಸತ್ತವರ ಹೆಣವನ್ನು ಸ್ವೀಕರಿಸಲು ಗಂಗಾಮಾತೆ ಕೂಡ ಸಿದ್ಧಳಿಲ್ಲ. ಹರಿದು ಬಂದ ಎಷ್ಟೋ ಶವಗಳು ವಾಪಸ್‌ ತೀರಕ್ಕೆ ಬಂದು ಅಪ್ಪಳಿಸಿವೆ.

ಮಂದಿರ ಮಸೀದಿಗಳಿಗೆ ಹೋಗುವ ಜನಜಂಗುಳಿ ಧರ್ಮದ ಅಂಗಡಿಯ ಒಂದು ಭಾಗ ಪುರೋಹಿತರು, ಮೌಲ್ವಿಗಳು ಮನೆ ಮನೆಗೆ ತೆರಳಿ ನಿಮಗೆ ದುಃಖವೇನಾದರೂ ಇದ್ದರೆ ಪ್ರಾರ್ಥಿಸಿ, ಪೂಜಿಸಿ ಎಂದು ಹೇಳುತ್ತಾರೆ. ಆದರೆ ಕೋವಿಡ್‌ ಸಂದರ್ಭದಲ್ಲಿ ಕಂಡಿದ್ದು, ನಿಮಗೆ ತೊಂದರೆ ಇದ್ದರೆ ವೈದ್ಯರನ್ನು ಭೇಟಿಯಾಗಿ, ನರ್ಸ್‌ ಗಳಿಂದ ಸೇವೆ ಪಡೆದುಕೊಳ್ಳಿ. ಔಷಧಿ ಸೇವಿಸಿ, ಕೋವಿಡ್ ಈಗಲೂ ಮೂಲೆ ಮೂಲೆಯಲ್ಲೂ ಅವಿತು ಕುಳಿತಿದೆ. ಅದು ಯಾವಾಗ ಯಾವ ರೂಪದಿಂದ ಪ್ರತ್ಯಕ್ಷವಾಗುತ್ತದೊ ಹೇಳಲಾಗುವುದಿಲ್ಲ. ಆಗ ನಿಮಗೆ ನೆರವಿಗೆ ಬರುವವರು ವೈದ್ಯರು, ನರ್ಸ್‌ ಗಳು, ಔಷಧಿ ಅಂಗಡಿಯವರೇ ಹೊರತು ಮನೆಯ ಮೂರ್ತಿಯ ಎದುರು ಉರಿಯುವ ದೀಪವಲ್ಲ.

ಧರ್ಮದ ಗುತ್ತಿಗೆದಾರರ ಕಪಿಮುಷ್ಟಿಗೆ ಸಿಲುಕುವ ಮಹಿಳೆಯರೇ ಈ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ