ಈಗ ಸ್ಪಾ ಟ್ರೀಟ್ ಮೆಂಟ್ ಕೇವಲ ಬೇಸಿಗೆ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಚಳಿಗಾಲದಲ್ಲೂ ಜನ ಸ್ಕಿನ್ ಕೇರಿಗೆ ಮತ್ತು ರಿಲ್ಯಾಕ್ಸ್ ಪಡೆಯಲು ಸ್ಪಾ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಮೆಟ್ರೋ ಸಿಟಿಗಳಲ್ಲದೆ ಸಣ್ಣ ನಗರಗಳಲ್ಲೂ ಸ್ಪಾ ಟ್ರೀಟ್ ಮೆಂಟ್ ಆರಂಭವಾಗಿದೆ. ಬೇರೆ ಬೇರೆ ರೀತಿಯ ಸ್ಪಾ ಟ್ರೀಟ್ ಮೆಂಟ್ ಗಳಿಗೆ ಬೇರೆ ಬೇರೆ ಬೆಲೆ ಇರುತ್ತದೆ. ಇದಕ್ಕೆ 3-5 ಸಾವಿರ ರೂ.ವರೆಗೆ ಖರ್ಚಾಗುತ್ತದೆ. ಬೇಸಿಗೆಯಲ್ಲಿ ಕೂಲ್ ಮಾಡುವ ಸ್ಪಾ ಟ್ರೀಟ್ ಮೆಂಟ್ ಪಡೆಯುವವರು, ಚಳಿಗಾಲದಲ್ಲಿ ದೇಹವನ್ನು ವಾರ್ಮ್ ಅಪ್ ಮಾಡುವ ಸ್ಪಾ ಟ್ರೀಟ್ ಮೆಂಟ್ ಪಡೆಯಲು ಹೋಗುತ್ತಾರೆ.
ಸ್ಪಾ ಟ್ರೀಟ್ ಮೆಂಟ್ ಬಗ್ಗೆ ನಗರದ ಖ್ಯಾತ ಬ್ಯೂಟಿ ಫಿಟ್ನೆಸ್ ಸೆಂಟರಿನ ಮ್ಯಾನೇಜರ್ ಭಾರತಿ ಶರ್ಮರೊಂದಿಗೆ ನಡೆಸಿದ ಮಾಕುಕಥೆಯ ಮುಖ್ಯ ಅಂಶಗಳು ಇಲ್ಲಿವೆ.
ಸ್ಪಾ ಟ್ರೀಟ್ ಮೆಂಟಿನ ಅಗತ್ಯ ಏನು?
ಸ್ಪಾ ಟ್ರೀಟ್ ಮೆಂಟಿನ ಮೂಲಕ ಡೆಡ್ ಸ್ಕಿನನ್ನು ದೂರ ಮಾಡಬಹುದು. ಅದರಿಂದ ನೆರಿಗೆಗಳು ಮಾಯವಾಗುತ್ತವೆ. ಸ್ಪಾ ಟ್ರೀಟ್ ಮೆಂಟಿನಲ್ಲಿ ದೇಹದೊಂದಿಗೆ ಮನಸ್ಸನ್ನು ಕೂಡ ರಿಲ್ಯಾಕ್ಸ್ ಮಾಡಲು ಪ್ರಯತ್ನಿಸಲಾಗುತ್ತದೆ. ಈಗ ಕೆಲಸದ ಗಂಟೆಗಳು ಒಂದೇ ಸಮನೆ ಹೆಚ್ಚುತ್ತಿವೆ. ಅದರಿಂದ ಇಡೀ ದೇಹದೊಂದಿಗೆ ಮನಸ್ಸನ್ನು ರಿಲ್ಯಾಕ್ಸ್ ಮಾಡುವ ಅಗತ್ಯವಿದೆ. ದೊಡ್ಡ ದೊಡ್ಡ ಕಂಪನಿಗಳ ನೌಕರರು ಕೆಲಸ ಮಾಡಿ ಸುಸ್ತಾದಾಗ ಸ್ಪಾ ಟ್ರೀಟ್ ಮೆಂಟ್ ಮೂಲಕ ತಮ್ಮನ್ನು ತಾವು ಮತ್ತೆ ರೀಚಾರ್ಜ್ ಮಾಡಿಕೊಳ್ಳುತ್ತಾರೆ. ಆಗ ಪೂರ್ಣ ತಾಕತ್ತಿನೊಂದಿಗೆ, ಹೊಸ ಹುರುಪಿನಿಂದ ಮತ್ತೆ ಕೆಲಸ ಮಾಡಬಹುದು. ಈಗ ಎಲ್ಲ ದೊಡ್ಡ ಹೋಟೆಲುಗಳಲ್ಲಿ ಬಾಡಿ ಸ್ಪಾನ ವ್ಯವಸ್ಥೆ ಇರುತ್ತದೆ. ಸ್ಪಾನಲ್ಲಿ ಬೇರೆ ಬೇರೆ ರೀತಿಯ ಟ್ರೀಟ್ ಮೆಂಟ್ ಇದ್ದು ಅದರ ಮೂಲಕ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಮಾಡಲಾಗುತ್ತದೆ.
ಸ್ಪಾ ಟ್ರೀಟ್ ಮೆಂಟಿನಲ್ಲಿ ಏನಿರುತ್ತದೆ?
ಸ್ಪಾ ಟ್ರೀಟ್ ಮೆಂಟಿನಲ್ಲಿ ಹೆಡ್ ಟು ಟೋ ಟ್ರೀಟ್ ಮೆಂಟ್ ಇರುತ್ತದೆ, ಇದನ್ನು ತಲೆಯಿಂದ ಆರಂಭಿಸಲಾಗುತ್ತದೆ. ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡುತ್ತಾ ರಿಲ್ಯಾಕ್ಸ್ ಮಾಡಿಸಲು ಪ್ರಯತ್ನಿಸಲಾಗುತ್ತದೆ. ಮಸಾಜಿಗೆ ಆ್ಯಂಟಿ ಆಕ್ಸಿಡೆಂಟ್ ಎಣ್ಣೆಯನ್ನು ಉಪಯೋಗಿಸಲಾಗುತ್ತದೆ. ದೇಹದ ಪ್ರೆಷರ್ ಪಾಯಿಂಟ್ಸ್ ಮೇಲೆ ಒತ್ತಡ ಹಾಕಿ ಮಸಾಜ್ ಮಾಡಲಾಗುತ್ತದೆ. ಸ್ಪಾ ಟ್ರೀಟ್ ಮೆಂಟಿನಲ್ಲಿ ಎಲ್ಲಕ್ಕೂ ಮೊದಲು ದೇಹವನ್ನು ಕ್ಲೀನ್ ಮಾಡಿ ನಂತರ ಸ್ಕ್ರಬಿಂಗ್ ಮಾಡಲಾಗುತ್ತದೆ. ಸ್ಕ್ರಬರ್ ನಿಂದ ಚರ್ಮವನ್ನು ಕ್ಲೀನ್ ಮಾಡಿ ನಂತರ ಸ್ಕ್ರಬಿಂಗ್ ಮಾಡಲಾಗುತ್ತದೆ. ಸ್ಕ್ರಬರ್‌ನಿಂದ ಚರ್ಮವನ್ನು ಉಜ್ಜಿದಾಗ ದೇಹದ ಮೇಲಿನ ಮೃತ ಚರ್ಮ ದೂರಾಗುತ್ತದೆ, ಮೂರನೇ ಸ್ಟೇಜ್ ಬಾಡಿ ಮಸಾಜ್.
ಮಸಾಜ್‌ನಲ್ಲಿ ಅಪ್ ವರ್ಡ್ ಸ್ಟ್ರೋಕ್, ಜಿಗ್ ಜ್ಯಾಗ್ ಮಸಾಜ್ ಮತ್ತು ಸರ್ಕ್ಯುಲರ್ ಮಸಾಜ್ ಮಾಡಲಾಗುತ್ತದೆ. ನಂತರ ಬಾಡಿ ಪ್ಯಾಕ್ ಹಾಕಲಾಗುತ್ತದೆ. ಆಮೇಲೆ ದೇಹಕ್ಕೆ ಸ್ಟೀಮ್ ಬಾತ್ ಕೊಡಲಾಗುತ್ತದೆ. ಸ್ಟೀಮ್ ಬಾತ್ ನ ಸೌಲಭ್ಯ ಇಲ್ಲದಿದ್ದರೆ ಟವೆಲನ್ನು ಬಿಸಿ ಮಾಡಿ ಅದರಿಂದಲೂ ಕೆಲಸ ಸಾಗಿಸಬಹುದು. ಅದಕ್ಕೆ 2-3 ಗಂಟೆ ಸಮಯ ಬೇಕಾಗುತ್ತದೆ. ಸ್ಪಾ ಟೇಬಲ್ ಬಹಳ ಕೂಲ್ ಹಾಗೂ ಶಾಂತವಾದ ಜಾಗದಲ್ಲಿರುತ್ತದೆ. ಅಲ್ಲಿ ಆ್ಯರೋಮಾ ಆಯಿಲ್ ನ ಸುವಾಸನಾಯುಕ್ತ ದೀಪ ಉರಿಯುತ್ತಿರುತ್ತದೆ. ಕೆಲವರಿಗೆ ಅಲ್ಲಿ ಲೈಟ್ ಮ್ಯೂಸಿಕ್ ಇದ್ದರೆ ಇಷ್ಟ. ಕೆಲವರಿಗೆ ಯಾವುದೇ ಶಬ್ದವಿಲ್ಲದೆ ಸ್ಪಾ ಟ್ರೀಟ್ ಮೆಂಟ್ ಪಡೆಯುವುದು ಇಷ್ಟ.
ಬಾಡಿ ಸ್ಪಾ ಎಷ್ಟು ತರಹ ಇರುತ್ತವೆ?
ಸ್ಪಾನಲ್ಲಿ ಅನೇಕ ವಿಧಾನಗಳಿರುತ್ತವೆ. ಅವುಗಳಲ್ಲಿ ಆ್ಯರೋಮಾ ಸ್ಪಾ ಹೆಚ್ಚು ಪ್ರಚಲಿತವಾಗಿದೆ. ಅದಲ್ಲದೆ ಸ್ಟೋನ್ ಥೆರಪಿ, ಹೈಡ್ರಾ ಸ್ಪಾ, ಮಡ್ ಪ್ಯಾಕ್ ಥೆರಪಿ ಮತ್ತು ಸೀ ಸಾಲ್ಟ್ ಸ್ಪಾ ಕೂಡ ಇರುತ್ತವೆ. ಸ್ಪಾ ಥೆರಪಿಯಲ್ಲಿ ದೇಹದ ಆಕ್ಯುಪ್ರೆಷರ್ ಪಾಯಿಂಟ್ಸ್ ಮೇಲೆ ಒತ್ತಡ ಹಾಕಿ ದೇಹವನ್ನು ರಿಲ್ಯಾಕ್ಸ್ ಮಾಡಲು ಪ್ರಯತ್ನಿಸಲಾಗುತ್ತದೆ. ಹೈಡ್ರಾ ಸ್ಪಾನಲ್ಲಿ ಬಾಥ್ ಟಬ್ ನಲ್ಲಿ ನೀರಿನ ಪ್ರೆಷರ್ ನ್ನು ಉಪಯೋಗಿಸಲಾಗುತ್ತದೆ. ಸೀ ಸಾಲ್ಟ್ ಸ್ಪಾನಲ್ಲಿ ಸಮುದ್ರದ ಉಪ್ಪಿನಿಂದ ದೇಹದ ಮಸಾಜ್ ಮಾಡುತ್ತಾರೆ. ಅನೇಕ ರೀತಿಯ ಮಡ್ ಪ್ಯಾಕ್ ಅನೇಕ ರೋಗಗಳನ್ನು ದೂರ ಮಾಡಲು ಸಹಾಯ ಮಾಡುತ್ತವೆ. ಆದ್ದರಿಂದ ಕೆಲವರು ಮಡ್ ಪ್ಯಾಕ್ ಸ್ಪಾ ಟ್ರೀಟ್ ಮೆಂಟ್ ಪಡೆಯುತ್ತಾರೆ.
ಸೀಜನ್‌ಗೆ ತಕ್ಕಂತೆ ಬೇರೆ ಬೇರೆ ರೀತಿಯ ಸ್ಪಾ ಟ್ರೀಟ್ ಮೆಂಟ್ ಪಡೆಯಲಾಗುತ್ತದೆ. ವಿಂಟರ್‌ನಲ್ಲಿ ಚಾಕಲೇಟ್ ಸ್ಪಾ ಮತ್ತು ಮಿಲ್ಕ್ ಕ್ರೀಂ ರೋಸ್ ಸ್ಪಾ ಹೆಚ್ಚಾಗಿ ಪಡೆಯುತ್ತಾರೆ. ಸ್ಪೈಸ್ ಪ್ಯಾಕೆಟ್ ಸ್ಪಾವನ್ನು ವಿಂಟರಿನಲ್ಲಿ ಮಾಡಿಸುತ್ತಾರೆ. ಅದರಲ್ಲಿ ಸ್ಟೋನ್ ಆಯಿಲಿನಿಂದ ಸ್ಪಾ ಮಾಡಲಾಗುತ್ತದೆ.
ಸ್ಕಿನ್‌ನ ನೇಚರ್‌ಗೆ ತಕ್ಕಂತೆ ಸ್ಪಾ ಟ್ರೀಟ್ ಮೆಂಟ್ ಮಾಡಿಸಬೇಕೇ?
ಖಂಡಿತಾ! ಬೇರೆ ಬೇರೆ ರೀತಿಯ ಚರ್ಮಕ್ಕೆ ಬೇರೆ ಬೇರೆ ರೀತಿಯ ಸ್ಪಾ ಟ್ರೀಟ್ ಮೆಂಟ್ ಇರುತ್ತದೆ. ಸಾಮಾನ್ಯವಾಗಿ ನಮ್ಮ ಚರ್ಮ 4 ರೀತಿ ಇರುತ್ತದೆ. ಆಯ್ಲಿ, ಡ್ರೈ, ನಾರ್ಮಲ್ ಮತ್ತು ಮಿಕ್ಸ್. ಎಲ್ಲಕ್ಕಿಂತ ಹೆಚ್ಚಿನ ಗಮನ ಡ್ರೈ ಸ್ಕಿನ್‌ಗೆ ಕೊಡಬೇಕು. ಸ್ಪಾ ಟ್ರೀಟ್ ಮೆಂಟ್ ಮಾಡಿಸುವಾಗ ಯಾವುದಾದರೂ ಒಳ್ಳೆಯ ಜಾಗದಲ್ಲಿ ಚೆನ್ನಾಗಿ ಪಳಗಿರುವ ಕೈಗಳಿಂದಲೇ ಮಾಡಿಸಿ. ಇಲ್ಲದಿದ್ದರೆ ಇದು ಅನೇಕ ಕಾಯಿಲೆಗಳನ್ನು ತಂದ್ದೊಡುತ್ತದೆ.
ಯಾವ ಏಜ್ ಗ್ರೂಪಿನವರು ಹೆಚ್ಚಾಗಿ ಸ್ಪಾ ಟ್ರೀಟ್ ಮೆಂಟ್ ಮಾಡಿಸಿಕೊಳ್ಳುತ್ತಾರೆ?
ಮಿಡ್ಲ್ ಏಜ್ ನವರು ಹೆಚ್ಚು ಸ್ಪಾ ಟ್ರೀಟ್ ಮೆಂಟ್ ಪಡೆಯುತ್ತಾರೆ. ಇದು ಕೊಂಚ ದುಬಾರಿಯಾದ್ದರಿಂದ ಇದನ್ನು ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ. 15 ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಸ್ಪಾ ಟ್ರೀಟ್ ಮೆಂಟ್ ಪಡೆಯುವುದು ಲಾಭದಾಯಕ. ಈಗ ಕೆಲಸ ಮಾಡುವ ವಿಧಾನಗಳು ಬದಲಾಗಿವೆ. ಅದರ ಪರಿಣಾಮ ವ್ಯಕ್ತಿಯ ಇಡೀ ಶರೀರದ ಮೇಲೆ ಬೀರುತ್ತದೆ. ಇದರಿಂದ ದೇಹದ ನ್ಯಾಚುರಲ್ ಆರ್ದ್ರತೆ ಮತ್ತು ಹೊಳಪು ಕಳೆದುಹೋಗುತ್ತದೆ. ಸ್ಪಾ ಟ್ರೀಟ್ ಮೆಂಟ್ ಮೂಲಕ ಇದನ್ನು ಮತ್ತೆ ಪಡೆಯಬಹುದು. ಸ್ಪಾ ಟ್ರೀಟ್ ಮೆಂಟ್ ಪಡೆದುಕೊಳ್ಳುವವರಿಗೆ ಬಾಡಿ ಪಾಲಿಶಿಂಗಿನ ಅಗತ್ಯವಿಲ್ಲ.
ಈಗೀಗ ಇದರ ಕ್ರೇಜ್ ಹೆಚ್ಚುತ್ತಿದೆ. 25-45 ವಯಸ್ಸಿನೊಳಗಿನ ಮಹಿಳೆಯರು ಬಾಡಿ ಸ್ಪಾ ಹಾಗೂ ಬಾಡಿ ಟ್ರೀಟ್ ಮೆಂಟಿಗೆ ಹೆಚ್ಚು ಬರುತ್ತಾರೆ. ಪಾರ್ಟಿ ಮತ್ತು ಇತರ ಜಾಗಗಳಿಗೆ ಹೋಗುವುದರಿಂದ ತಮ್ಮ ಚರ್ಮ ಅತ್ಯಂತ ಹೊಳಪಿನಿಂದ ಕೂಡಿದ್ದು, ಟೋನ್ ಅಪ್ ಆಗಿ ಕಾಣಿಸಬೇಕು ಎಂದು ಅವರಿಗೆ ಅನ್ನಿಸುತ್ತದೆ. ಅವರು ಬಾಡಿ ಪಾಲಿಶಿಂಗ್ ಮಾಡಿಸಿದ ನಂತರ ಬಹಳ ಖುಷಿಯಾಗುತ್ತಾರೆ. ಈಗ ಪ್ರೈವೇಟ್ ಕಂಪನಿಗಳಲ್ಲಿ ನೌಕರಿಗೆ ಹೋಗುವುದು ಹೆಚ್ಚಾಗಿದ್ದು, ಮಹಿಳೆಯರಿಗೆ ಹೆಚ್ಚು ನೌಕರಿ ಸಿಗುತ್ತಿದೆ. ಇದರಿಂದ ಒಂದು ಕಾರ್ಪೊರೇಟ್ ಕಲ್ಚರ್ ಬಂದಿದ್ದು ಬಾಡಿ ಪಾಲಿಶಿಂಗ್ ತುಂಬಾ ಅಗತ್ಯವಾಗಿದೆ. ಈ ತರಹ ಚರ್ಮಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ದೂರವಾಗುತ್ತವೆ.
– ಛಾಯಾ ನಾಗರಾಜ್.