ಈಗ ಸ್ಪಾ ಟ್ರೀಟ್‌ ಮೆಂಟ್‌ ಕೇವಲ ಬೇಸಿಗೆ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಚಳಿಗಾಲದಲ್ಲೂ ಜನ ಸ್ಕಿನ್‌ ಕೇರಿಗೆ ಮತ್ತು ರಿಲ್ಯಾಕ್ಸ್ ಪಡೆಯಲು ಸ್ಪಾ ಟ್ರೀಟ್‌ ಮೆಂಟ್‌ ತೆಗೆದುಕೊಳ್ಳುತ್ತಿದ್ದಾರೆ. ಮೆಟ್ರೋ ಸಿಟಿಗಳಲ್ಲದೆ ಸಣ್ಣ ನಗರಗಳಲ್ಲೂ ಸ್ಪಾ ಟ್ರೀಟ್ ಮೆಂಟ್‌ ಆರಂಭವಾಗಿದೆ. ಬೇರೆ ಬೇರೆ ರೀತಿಯ ಸ್ಪಾ ಟ್ರೀಟ್‌ ಮೆಂಟ್‌ ಗಳಿಗೆ ಬೇರೆ ಬೇರೆ ಬೆಲೆ ಇರುತ್ತದೆ. ಇದಕ್ಕೆ 3-5 ಸಾವಿರ ರೂ.ವರೆಗೆ ಖರ್ಚಾಗುತ್ತದೆ. ಬೇಸಿಗೆಯಲ್ಲಿ ಕೂಲ್ ‌ಮಾಡುವ ಸ್ಪಾ ಟ್ರೀಟ್‌ ಮೆಂಟ್‌ ಪಡೆಯುವವರು, ಚಳಿಗಾಲದಲ್ಲಿ ದೇಹವನ್ನು ವಾರ್ಮ್ ಅಪ್‌ ಮಾಡುವ ಸ್ಪಾ ಟ್ರೀಟ್‌ ಮೆಂಟ್‌ ಪಡೆಯಲು ಹೋಗುತ್ತಾರೆ.

ಸ್ಪಾ ಟ್ರೀಟ್‌ ಮೆಂಟ್‌ ಬಗ್ಗೆ ನಗರದ ಖ್ಯಾತ ಬ್ಯೂಟಿ ಫಿಟ್ನೆಸ್‌ ಸೆಂಟರಿನ ಮ್ಯಾನೇಜರ್‌ ಭಾರತಿ ಶರ್ಮರೊಂದಿಗೆ ನಡೆಸಿದ ಮಾಕುಕಥೆಯ ಮುಖ್ಯ ಅಂಶಗಳು ಇಲ್ಲಿವೆ.

ಸ್ಪಾ ಟ್ರೀಟ್‌ ಮೆಂಟಿನ ಅಗತ್ಯ ಏನು?

2shutterstock_120568249

ಸ್ಪಾ ಟ್ರೀಟ್‌ ಮೆಂಟಿನ ಮೂಲಕ ಡೆಡ್‌ ಸ್ಕಿನನ್ನು ದೂರ ಮಾಡಬಹುದು. ಅದರಿಂದ ನೆರಿಗೆಗಳು ಮಾಯವಾಗುತ್ತವೆ. ಸ್ಪಾ ಟ್ರೀಟ್ ಮೆಂಟಿನಲ್ಲಿ ದೇಹದೊಂದಿಗೆ ಮನಸ್ಸನ್ನು ಕೂಡ ರಿಲ್ಯಾಕ್ಸ್ ಮಾಡಲು ಪ್ರಯತ್ನಿಸಲಾಗುತ್ತದೆ. ಈಗ ಕೆಲಸದ ಗಂಟೆಗಳು ಒಂದೇ ಸಮನೆ ಹೆಚ್ಚುತ್ತಿವೆ. ಅದರಿಂದ ಇಡೀ ದೇಹದೊಂದಿಗೆ ಮನಸ್ಸನ್ನು ರಿಲ್ಯಾಕ್ಸ್ ಮಾಡುವ ಅಗತ್ಯವಿದೆ. ದೊಡ್ಡ ದೊಡ್ಡ ಕಂಪನಿಗಳ ನೌಕರರು ಕೆಲಸ ಮಾಡಿ ಸುಸ್ತಾದಾಗ ಸ್ಪಾ ಟ್ರೀಟ್‌ ಮೆಂಟ್‌ ಮೂಲಕ ತಮ್ಮನ್ನು ತಾವು ಮತ್ತೆ ರೀಚಾರ್ಜ್‌ ಮಾಡಿಕೊಳ್ಳುತ್ತಾರೆ. ಆಗ ಪೂರ್ಣ ತಾಕತ್ತಿನೊಂದಿಗೆ, ಹೊಸ ಹುರುಪಿನಿಂದ ಮತ್ತೆ ಕೆಲಸ ಮಾಡಬಹುದು. ಈಗ ಎಲ್ಲ ದೊಡ್ಡ ಹೋಟೆಲುಗಳಲ್ಲಿ ಬಾಡಿ ಸ್ಪಾನ ವ್ಯವಸ್ಥೆ ಇರುತ್ತದೆ. ಸ್ಪಾನಲ್ಲಿ ಬೇರೆ ಬೇರೆ ರೀತಿಯ ಟ್ರೀಟ್‌ ಮೆಂಟ್‌ ಇದ್ದು ಅದರ ಮೂಲಕ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಮಾಡಲಾಗುತ್ತದೆ.

ಸ್ಪಾ ಟ್ರೀಟ್‌ ಮೆಂಟಿನಲ್ಲಿ ಏನಿರುತ್ತದೆ?

shutterstock_131903177

ಸ್ಪಾ ಟ್ರೀಟ್‌ ಮೆಂಟಿನಲ್ಲಿ ಹೆಡ್‌ ಟು ಟೋ ಟ್ರೀಟ್‌ ಮೆಂಟ್‌ ಇರುತ್ತದೆ, ಇದನ್ನು ತಲೆಯಿಂದ ಆರಂಭಿಸಲಾಗುತ್ತದೆ. ತಲೆಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡುತ್ತಾ ರಿಲ್ಯಾಕ್ಸ್ ಮಾಡಿಸಲು ಪ್ರಯತ್ನಿಸಲಾಗುತ್ತದೆ. ಮಸಾಜಿಗೆ ಆ್ಯಂಟಿ ಆಕ್ಸಿಡೆಂಟ್‌ ಎಣ್ಣೆಯನ್ನು ಉಪಯೋಗಿಸಲಾಗುತ್ತದೆ. ದೇಹದ ಪ್ರೆಷರ್‌ ಪಾಯಿಂಟ್ಸ್ ಮೇಲೆ ಒತ್ತಡ ಹಾಕಿ ಮಸಾಜ್‌ ಮಾಡಲಾಗುತ್ತದೆ. ಸ್ಪಾ ಟ್ರೀಟ್‌ ಮೆಂಟಿನಲ್ಲಿ ಎಲ್ಲಕ್ಕೂ ಮೊದಲು ದೇಹವನ್ನು ಕ್ಲೀನ್‌ ಮಾಡಿ ನಂತರ ಸ್ಕ್ರಬಿಂಗ್‌ ಮಾಡಲಾಗುತ್ತದೆ. ಸ್ಕ್ರಬರ್‌ ನಿಂದ ಚರ್ಮವನ್ನು ಕ್ಲೀನ್‌ ಮಾಡಿ ನಂತರ ಸ್ಕ್ರಬಿಂಗ್‌ ಮಾಡಲಾಗುತ್ತದೆ. ಸ್ಕ್ರಬರ್‌ನಿಂದ ಚರ್ಮವನ್ನು ಉಜ್ಜಿದಾಗ ದೇಹದ ಮೇಲಿನ ಮೃತ ಚರ್ಮ ದೂರಾಗುತ್ತದೆ, ಮೂರನೇ ಸ್ಟೇಜ್‌ ಬಾಡಿ ಮಸಾಜ್‌.

istock_000007292810large1

 

ಮಸಾಜ್‌ನಲ್ಲಿ ಅಪ್‌ ವರ್ಡ್‌ ಸ್ಟ್ರೋಕ್‌, ಜಿಗ್‌ ಜ್ಯಾಗ್‌ ಮಸಾಜ್‌ ಮತ್ತು ಸರ್ಕ್ಯುಲರ್‌ ಮಸಾಜ್‌ ಮಾಡಲಾಗುತ್ತದೆ. ನಂತರ ಬಾಡಿ ಪ್ಯಾಕ್‌ ಹಾಕಲಾಗುತ್ತದೆ. ಆಮೇಲೆ ದೇಹಕ್ಕೆ ಸ್ಟೀಮ್ ಬಾತ್‌ ಕೊಡಲಾಗುತ್ತದೆ. ಸ್ಟೀಮ್ ಬಾತ್‌ ನ ಸೌಲಭ್ಯ ಇಲ್ಲದಿದ್ದರೆ ಟವೆಲ‌ನ್ನು ಬಿಸಿ ಮಾಡಿ ಅದರಿಂದಲೂ ಕೆಲಸ ಸಾಗಿಸಬಹುದು. ಅದಕ್ಕೆ 2-3 ಗಂಟೆ ಸಮಯ ಬೇಕಾಗುತ್ತದೆ. ಸ್ಪಾ ಟೇಬಲ್ ಬಹಳ ಕೂಲ್ ಹಾಗೂ ಶಾಂತವಾದ ಜಾಗದಲ್ಲಿರುತ್ತದೆ. ಅಲ್ಲಿ ಆ್ಯರೋಮಾ ಆಯಿಲ್ ‌ನ ಸುವಾಸನಾಯುಕ್ತ ದೀಪ ಉರಿಯುತ್ತಿರುತ್ತದೆ. ಕೆಲವರಿಗೆ ಅಲ್ಲಿ ಲೈಟ್‌ ಮ್ಯೂಸಿಕ್‌ ಇದ್ದರೆ ಇಷ್ಟ. ಕೆಲವರಿಗೆ ಯಾವುದೇ ಶಬ್ದವಿಲ್ಲದೆ ಸ್ಪಾ ಟ್ರೀಟ್‌ ಮೆಂಟ್‌ ಪಡೆಯುವುದು ಇಷ್ಟ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ