ಹಬ್ಬಗಳ ಸೀಸನ್‌ ಬಹಳಷ್ಟು ಖುಷಿಯನ್ನು ಹೊತ್ತು ತರುತ್ತದೆ. ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಸಾಮಾನುಗಳ ಖರೀದಿಗಾಗಿ ಎಷ್ಟೊಂದು ವ್ಯಸ್ತರಾಗಿ ಬಿಡತ್ತೇವೆಂದರೆ, ಅವು ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು ಎಂದು ನಾವು ಗಮನಕೊಡಲು ಕೂಡ ಹೋಗುವುದಿಲ್ಲ. ಹೀಗಾಗಿ ನಾವಿಲ್ಲಿ ಮನೆಯನ್ನು ಸಾವಯವಗೊಳಿಸುವ ಅಂದರೆ ಆರ್ಗ್ಯಾನಿಕ್‌ ಆಗಿಸಲು 10 ಉಪಾಯಗಳನ್ನು  ತಿಳಿಸುತ್ತಿದ್ದೇವೆ.

ಮನಸ್ಸನ್ನು ಮುದಗೊಳಿಸುವ ವುಡನ್‌ ಫಿನಿಶ್‌ :

157382191-56a49f315f9b58b7d0d7e127

ವುಡನ್‌ ಎಂತಹ ಒಂದು ಸಲಕರಣೆ ಎಂದರೆ ಅದಕ್ಕೆ ಫಿನಿಶಿಂಗ್‌ ಟಚ್‌ ನೀಡುವುದರ ಮೂಲಕ ಮನೆಯ ಹೊಳಪನ್ನು ಇನ್ನಷ್ಟು ಹೆಚ್ಚಿಸಬಹುದು. ಇದು ಮನೆಯ ಆಂತರಿಕ ಭಾಗದ ಸೌಂದರ್ಯವನ್ನಷ್ಟೇ ಹೆಚ್ಚಿಸದೆ ಮನೆಗೆ ನೈಸರ್ಗಿಕ ಅನುಭವವನ್ನೂ ನೀಡುತ್ತದೆ. ನೆಲದಿಂದ ಹಿಡಿದು ಮೇಲ್ಛಾವಣಿಯ ಬೀಮ್ ತನಕ ವುಡನ್‌ ನಿಂದ ಅಲಂಕರಿಸಬಹುದು. ಹಳೆಯ ಮನೆಗೆ ವುಡನ್‌ ಫಿನಿಶ್‌ ಕೊಡುವುದರ ಮೂಲಕ ಹಲವು ವರ್ಷಗಳ ಕಾಲ ಅದು ಅಂದವಾಗಿ ಕಾಣುವಂತೆ ಮಾಡಬಹುದು.

ಸಸಿಗಳು ಗಿಡಗಳು :

ಮನೆಯ ಕುಂಡದಲ್ಲಿ ನೆಟ್ಟ ಸಸಿಗಳು ನಮಗೆ ಹಸಿರು ಹಾಗೂ ಸ್ವಚ್ಛ ವಾತಾವರಣ ಮನೆಯಿಂದಲೇ ಆರಂಭವಾಗುತ್ತದೆ ಎಂಬುದನ್ನು ಬಿಂಬಿಸುತ್ತವೆ. ಅವು ಕೇವಲ ಆಕರ್ಷಕವಾಗಿ ಅಷ್ಟೇ ಕಂಡುಬರುವುದಿಲ್ಲ. ಆಸುಪಾಸಿನ ವಾತಾವರಣವನ್ನು ಕೂಡ ನಿರ್ಮಲಗೊಳಿಸುತ್ತವೆ. ಸಸಿಗಳು ಮತ್ತು ಗಿಡಗಳು ಒತ್ತಡ ಮತ್ತು ಚಿಂತೆಯಿಂದಲೂ ಮುಕ್ತಗೊಳಿಸಿ. ಒಳ್ಳೆಯ ನಿದ್ರೆಗೆ ಬರಲು ಸಹಾಯ ಮಾಡುತ್ತವೆ. ಮನೆಯಲ್ಲಿ ನೆಡಬಹುದಾದ ಉತ್ತಮ ಸಸ್ಯಗಳೆಂದರೆ ಆ್ಯಲೋವೆರಾ, ಲ್ಯಾವೆಂಡರ್‌, ಜಾಸ್ಮಿನ್‌ ಹಾಗೂ ಸ್ನೇಕ್‌ ಪ್ಲ್ಯಾಂಟ್‌.

ವಿಂಡೋ ಬ್ಲೈಂಡ್ಸ್ :

carpet-1

ನೀವು ಮನೆಯಲ್ಲಿ ವಿಶ್ರಾಂತಿ ಪಡೆಯಲು ಮತ್ತು ಮಲಗಲು ಇಚ್ಛಿವಿರಾದರೆ, ನಿಮಗೆ ಕೋಣೆಯಲ್ಲಿ ಕತ್ತಲಿನ ಅವಶ್ಯಕತೆ ಉಂಟಾಗುತ್ತದೆ. ಅದಕ್ಕಾಗಿ ನೀವು ಬಿದಿರು ಅಥವಾ ಸೆಣಬಿನಿಂದ ತಯಾರಿಸಿದ ನೈಸರ್ಗಿಕ ಬ್ಲೈಂಡ್‌ ಅಥವಾ ಶೇಡ್ಸ್ ಆಯ್ಕೆ ಮಾಡಿಕೊಳ್ಳಿ. ನೀವು ಬಳಸುವ ಪರದೆ ಆರ್ಗ್ಯಾನಿಕ್‌ ಕಾಟನ್‌, ಹ್ಯಾಂಪ್‌ ಅಥವಾ ಲಿನೆನ್‌ ದ್ದಾಗಿರಲಿ. ಆಕರ್ಷಕ ಡಿಸೈನ್‌ ವರ್ಣ ಹಾಗೂ ಡಿಸೈನ್‌ ಆಯ್ಕೆ ಮಾಡಿಕೊಂಡು ನೀವು ನಿಮ್ಮ ಬೆಡ್‌ ರೂಮಿಗೆ ಹೊಸ ಲುಕ್‌ ಕೊಡಬಹುದು.

ಫರ್ನೀಚರ್‌ :

ಫರ್ನೀಚರ್‌ ನ ಸೂಕ್ತ ಆಯ್ಕೆ ಕೂಡ ನಿಮ್ಮ ಡ್ರಾಯಿಂಗ್‌ ರೂಮಿನ ಅಂದ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇದು ಎಂತಹ ಒಂದು ಜಾಗವೆಂದರೆ, ನೀವು ಅಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ನೀವು ಆಯ್ಕೆ ಮಾಡುವು ಫರ್ನೀಚರ್‌ ಹೇಗಿರಬೇಕೆಂದರೆ, ಅವು ವಾತಾವರಣಕ್ಕೆ ಅನುಕೂಲ ಹಾಗೂ ನೈಸರ್ಗಿಕವಾಗಿರಬೇಕು. ಅದು ಮರದಿಂದ ಅಥವಾ ಬಿದಿರಿನಿಂದ ಮಾಡಿದ್ದಾಗಿರಬೇಕು. ನೀವು ಪೇಂಟ್‌ ಮಾಡಿದ ಫರ್ನೀಚರ್‌ ಆಯ್ಕೆ ಮಾಡುತ್ತಿದ್ದರೆ, ಅದರಲ್ಲಿ ವಿಒಸಿ ರಹಿತ ಪೇಂಟ್ ಮಾಡಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಹೊದಿಕೆಗಳು :

eco-friendly-candle--2

ನಿಮ್ಮ ಜೀವನದ ಮೂರನೇ ಒಂದರಷ್ಟು ಭಾಗವನ್ನು ನೀವು ಯಾವ ಹೊದಿಕೆಯೊಂದಿಗೆ ಕಳೆದಿರುತ್ತೀರೋ ಅದನ್ನು ಯಾವುದರಿಂದ ಮಾಡಿರುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ. ನೀವು ಹೊದ್ದುಕೊಳ್ಳುವ ಹೊದಿಕೆ ಕಾಟನ್‌ ದಾಗಿದ್ದರೆ ಒಳ್ಳೆಯದು. ಕೃತಕ ಎಳೆಗಳಿಂದ ತಯಾರಿಸಲ್ಪಟ್ಟ ಹೊದಿಕೆಯಲ್ಲಿ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಅವು ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹತ್ತಿಯಿಂದ ಮಾಡಿದ ಹೊದಿಕೆಗಳು ಮೃದುವಾಗಿರುತ್ತವೆ. ಜೊತೆಗೆ ಅವು ಹಿತಕರವಾಗಿರುತ್ತವೆ.

ಅದರ ಜೊತೆ ಜೊತೆಗೆ ನೈಸರ್ಗಿಕ ಅರಳೆ ಭರ್ತಿ ಮಾಡಿದ ದಿಂಬುಗಳನ್ನೇ ಬಳಸಿ. ಮೆಮೋರಿ ಫೋಮ್ ಹಾಗೂ ಇದೇ ರೀತಿಯ ಇತರೆ ಪೆಟ್ರೊ ರಾಸಾಯನಿಕ ಕೇವಲ ನಿದ್ರೆಯಲ್ಲಷ್ಟೇ ಅಡಚಣೆಯನ್ನುಂಟು ಮಾಡುವುದಿಲ್ಲ, ಆರೋಗ್ಯ ಹಾಗೂ ಪರಿಸರಕ್ಕೂ ಹಾನಿಯುಂಟು ಮಾಡುತ್ತದೆ.

ಹೂಗಳು :

ಹಸಿರಿನ ನೆಪದಲ್ಲಿ ಜನರ ಮನೆಗಳಲ್ಲಿ ಕೃತಕ ಹೂಗಳನ್ನು ಪ್ರದರ್ಶನ ರೂಪದಲ್ಲಿ ಇಡಲಾಗುತ್ತಿತ್ತು. ಆ ಹೂಗಳು ಧೂಳು ಮೆತ್ತಿಕೊಂಡಿರುತ್ತಿದ್ದ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಂಗತಿ. ಈಗ ಜನರು ಮತ್ತೆ ಪರಿಸರದತ್ತ ಮುಖ ಮಾಡಿದ್ದಾರೆ. ಮನೆಯ ಅಲಂಕಾರಕ್ಕಾಗಿ ನೈಜ ಹೂಗಳನ್ನೇ ಬಳಸುತ್ತಿದ್ದಾರೆ.

ಪೇಂಟ್‌ :

flower-decoration-1

ಮನೆಯ ಗೋಡೆಗಳ ಬಣ್ಣವನ್ನು ಬದಲಿಸುವುದು ಮನೆಗೆ ಹೊಸ ಲುಕ್‌ ನೀಡುವ ಅತ್ಯಂತ ಸುಲಭ ವಿಧಾನ. ಮನೆಗೆ ಪೇಂಟ್‌ ಆಯ್ಕೆ ಮಾಡುವ ಮುನ್ನ ವಿಒಸಿ ರಹಿತ ಪೇಂಟ್‌ ಗಳನ್ನೇ ಆಯ್ಕೆ ಮಾಡಿ. ಅಂದರೆ ಅದರಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕ ಬಳಕೆ ಮಾಡಿರಬಾರದು. ಪೇಂಟಿಂಗ್‌ ಮಾಡಿರುವ ಕೋಣೆಯಲ್ಲಿ ಗಾಳಿ ಸುಲಭವಾಗಿ ಸಂಚರಿಸುವಂತಿರಬೇಕು.

ಬೆಳಕು :

Led-blub

ಎಲ್ಇಡಿ ಬಲ್ಬ್ ಗಳು ಬೇರೆ ಬಲ್ಪ್ ಗಳಿಗೆ ಹೋಲಿಸಿದರೆ ಹೆಚ್ಚು ಪ್ರಭಾವಿಯಾಗಿರುತ್ತವೆ. ನೀವು ಬಲ್ಬ್ ಬದಲಾಯಿಸಬೇಕಿದ್ದರೆ, ಅದರ ಬದಲಿಗೆ ಎಲ್ಇಡಿ ಬಲ್ಪ್ ಗಳನ್ನೇ ಹಾಕಿ. ಬೆಳಕು ಹೆಚ್ಚಿಸಿ ಮತ್ತು ವಿದ್ಯುತ್‌ ಉಳಿತಾಯ ಮಾಡಿ.

ಕಾರ್ಪೆಟ್‌ :

ನೀವು ಕೋಣೆಯಲ್ಲಿ ಚಳಿಯಿಂದ ತತ್ತರಿಸಿ ಹೋಗಿದ್ದಲ್ಲಿ, ಬಿಸಿ ವಾತಾವರಣ ಉಂಟು ಮಾಡಬೇಕೆಂದಿದ್ದರೆ ಕೋಣೆಯಲ್ಲಿ ಕಾರ್ಪೆಟ್‌ ಹಾಕಿ. ನೆಲದ ಮೇಲೆ ಹಾಸಿದ ಕಾರ್ಪೆಟ್‌ ರೂಮಿನ ಬಿಸಿಯನ್ನು ಹೊರಹೋಗಲು ಅವಕಾಶ ಕೊಡುವುದಿಲ್ಲ. ಅದು ಹಲವು ವರ್ಣಗಳಲ್ಲಿ ಡಿಸೈನ್‌ ಗಳಲ್ಲಿ ದೊರೆಯುತ್ತದೆ.

ಪರಿಸರಸ್ನೇಹಿ ಮೇಣದಬತ್ತಿ :

furniture-2

ಮೇಣದಬತ್ತಿ ತಯಾರಿಸಲು ದೊಡ್ಡ ಪ್ರಮಾಣದಲ್ಲಿ ಪ್ಯಾರಾಫಿನ್‌ ಬಳಸಲಾಗುತ್ತದೆ. ಅದು ಪೆಟ್ರೋಲಿಯಂ ಮೇಣವಾಗಿದೆ. ಅದು ನೈಸರ್ಗಿಕಲ್ಲ. ಅದು ಪರಿಸರಕ್ಕೆ ಅನುಕೂಲಕರಲ್ಲ. ಮೇಣದಬತ್ತಿ ತಯಾರಿಸುವ ಪರಿಸರಸ್ನೇಹಿ ವಿಧಾನವೆಂದರೆ ಗ್ರೀನ್‌ ಕ್ಯಾಂಡ್‌ ಲ್ಯಾಕ್ಸ್ ನ ಆಯ್ಕೆ. ಬೀ ಲ್ಯಾಕ್ಸ್ 100% ನೈಸರ್ಗಿಕವಾದುದಾಗಿದೆ. ಅದನ್ನು ನೀವು ಕರಗಿಸದೆಯೇ ಮೇಣದ ಬತ್ತಿ ತಯಾರಿಸಬಹುದು. ಬೀ ಲ್ಯಾಕ್ಸ್ ಶೀಟ್ಸ್ ಸುಲಭ ಮತ್ತು ಪರಿಸರಕ್ಕೆ ಅನುಕೂಲಕರ ಉಪಾಯವಾಗಿದೆ.

– ಉಮಾ ಶಂಕರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ