ಬಜೆಟ್ ನಲ್ಲಿ ಏರುಪೇರು ಮಾಡದೆಯೇ ಮನೆಗೆ ಹೊಸ ಲುಕ್ಸ್ ಕೊಡಬೇಕೆಂದಿದ್ದರೆ, ಅದರ ಉಪಾಯಗಳನ್ನು ನಾವು ನಿಮಗೆ ತಿಳಿಸುತ್ತೇವೆ.
ವರ್ಷವಿಡೀ ವ್ಯಸ್ತರಾಗಿರುವ ಕಾರಣದಿಂದ ನಾವು ಅಪೇಕ್ಷೆಪಟ್ಟು ಕೂಡ ಮನೆಯ ಒಳಾಂಗಣ ಅಲಂಕಾರದಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ಅದನ್ನೇ ನೋಡಿ ನೋಡಿ ನಾವು ಬೇಸತ್ತು ಹೋಗುತ್ತೇವೆ. ನೀವು ಕೂಡ ಅಂಥವರಲ್ಲಿ ಸೇರಿದ್ದರೆ ಈ ದೀಪಾವಳಿಗೆ ನೀವು ನಿಮ್ಮ ಮನೆಯಲ್ಲಿ ಈ 5 ಸಂಗತಿಗಳನ್ನು ಸೇರ್ಪಡೆಗೊಳಿಸಿ ಮನೆಗೆ ಹೊಸ ಲುಕ್ ಕೊಡಬಹುದು.
ಪ್ರವೇಶ ದ್ವಾರದಲ್ಲಿರಲಿ ಹಬ್ಬದ ಕಲರವ
ದೀಪಾವಳಿಯ ಹಬ್ಬದ ವಾತಾವರಣದಲ್ಲಿ ಪ್ರವೇಶ ದ್ವಾರದ ಅಲಂಕಾರ ಸಪ್ಪೆ ಎನಿಸಬಾರದು. ಏಕೆಂದರೆ ಅದು ನಮ್ಮವರನ್ನು ಆಹ್ವಾನಿಸಲು ಅಷ್ಟು ಉತ್ಸುಕತೆ ತೋರಿಸುವುದಿಲ್ಲ ಹಾಗೂ ಬಾಂಧವ್ಯದಲ್ಲಿ ಬಂಧಿಸುವುದೂ ಇಲ್ಲ. ಹೀಗಾಗಿ ಪ್ರವೇಶ ದ್ವಾರಕ್ಕೆ ವಿಶೇಷ ಅಲಂಕಾರವಿರಲಿ, ನೀವು ಅದಕ್ಕೆ ಪೇಂಟ್ ಮುಖಾಂತರ ಹೊಸತನ ಕೊಡಬಹುದು. ಜೊತೆಗೆ ತೋರಣ ಮತ್ತಿತರ ಅಲಂಕಾರ ಇರಲಿ. ಏಕೆಂದರೆ ಅವುಗಳ ಹೊರತು ಹಬ್ಬದ ಅಲಂಕಾರ ಅಪೂರ್ಣ ಎನಿಸುತ್ತದೆ.
ಹೂವಿನಿಂದಲೂ ಕೂಡ ನೀವು ಅದನ್ನು ಅಲಂಕರಿಸಬಹುದು. ಇಲ್ಲಿ ಗಂಟೆಗಳು, ರಿಬ್ಬನ್, ಮಿರರ್ ವರ್ಕ್ಸ್ ನಿಂದಲೂ ಅಲಂಕಾರ ಮಾಡಬಹುದು. ಇವೆಲ್ಲ ಹೆಬ್ಬಾಗಿಲ ಸೊಬಗನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಬಾಗಿಲಿಗೆ ಅಳವಡಿಸಿದ ಡೆಕೋರೆಟಿವ್ ರಿಂಗಿಂಗ್ ಬೆಲ್ಸ್ ನಿಂದ ಹೊರಹೊಮ್ಮುವ ಮಂಜುಳ ಧ್ವನಿ ಕಿವಿಯಲ್ಲಿ ಗುನುಗಿ ಮನಸ್ಸನ್ನು ಖುಷಿಯಿಂದ ಕುಣಿಯುವಂತೆ ಮಾಡುತ್ತದೆ.
ಅಷ್ಟಿಷ್ಟು ರೀ ಅರೇಂಜ್‌ಮೆಂಟ್/ ರೀಲುಕ್ಸ್
ಒಂದೇ ರೀತಿಯ ಲುಕ್ಸ್ ಒಂದೇ ರೀತಿಯ ಸ್ಟೈಲ್ ಯಾರಿಗೇ ಆದರೂ ಮತ್ತೆ ಮತ್ತೆ ನೋಡಬೇಕೆನಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ಹಬ್ಬದ ದಿನಗಳಲ್ಲಿ ಈ ಅವಧಿಯಲ್ಲಿ ಮನಸ್ಸು ಏನನ್ನಾದರೂ ವಿಶೇಷ ಮಾಡಬೇಕೆಂದು ಯೋಚಿಸುತ್ತಿರುತ್ತದೆ. ಇಲ್ಲಿ ಎಲ್ಲವನ್ನು ಬದಲಿಸುವ ಅಗತ್ಯ ಇಲ್ಲ. ಒಂದಿಷ್ಟು ರೀ ಅರೇಂಜ್ ಮತ್ತು ಒಂದಿಷ್ಟು ರೀಲುಕ್ಸ್ ನಿಂದ ನಿಮ್ಮ ಲಿವಿಂಗ್ ರೂಮಿಗೆ ನಿಮಗಿಷ್ಟವಾದ ಲುಕ್ಸ್ ಕೊಡಬಹುದು.
ಅದಕ್ಕಾಗಿ ನೀವು ಎಲ್ಲಕ್ಕೂ ಮೊದಲು ಲಿವಿಂಗ್ ರೂಮಿನ ಸ್ಥಳಾವಕಾಶ ಎಷ್ಟಿದೆ ಎನ್ನುವುದನ್ನು ಗಮನಿಸಿ. ಹಾಗೊಮ್ಮೆ ರೂಮ್ ಕಷ್ಟು ವಿಶಾಲವಾಗಿದ್ದರೆ, ನೀವು ಸೈಡ್ ಕಾರ್ನರ್ಸ್ ಹಾಕಿ ಅದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು. ಅದರ ಹೊರತಾಗಿ ಯಾವುದಾದರೂ ಸುಂದರ ಇಂಡೋರ್ ಪ್ಲಾಂಟ್ ಹಾಕಿಯೂ ಅದರ ಸೌಂದರ್ಯ ಹೆಚ್ಚಿಸಬಹುದು. ಒಂದು ವೇಳೆ ನಿಮ್ಮ ಒಳಾಂಗಣ ಸ್ಥಳಾವಕಾಶ ಕಡಿಮೆ ಇದ್ದರೆ, 2 ನೀವು ನಿಮ್ಮ ಸೋಫಾದ ಸೆಟ್ಟಿಂಗ್‌ನ್ನು ಅಷ್ಟಿಷ್ಟು ಬದಲಿಸಿ ರೂಮನ್ನು ವಿಶಾಲವೆಂಬಂತೆ ಬಿಂಬಿಸಬಹುದು. ಸೋಫಾದ ಜೊತೆಗೆ ದೊಡ್ಡ ಟೇಬಲ್ ಹಾಕುವ ಬದಲು, ಚಿಕ್ಕ ಟೇಬಲ್ ಹಾಕಿ. ಅದು ವಿಭಿನ್ನವಾಗಿ ಕಾಣುವುದರ ಜೊತೆಗೆ ಜಾಗವನ್ನು ಕಡಿಮೆ ವ್ಯಾಪಿಸುತ್ತದೆ.
ಕೋಣೆಯಲ್ಲಿ ಬದಲಾವಣೆ ತರಲು ಗೋಡೆಗಳಿಗೆ ಪೇಂಟ್ ಮಾಡುವ ಬದಲು ವಾಲೆ ಪೇಪರ್ ಟ್ರೈ ಮಾಡಿ. ಇದು ಗೋಡೆಗಳಿಗಷ್ಟೇ ಅಲ್ಲ, ಮನೆಗೂ ಹೊಸ ಲುಕ್ ಕೊಡುತ್ತದೆ, ನೋಡುವವರು ನೋಡುತ್ತಲೇ ಇರುವಂತೆ ಮಾಡುತ್ತದೆ.