ಯಾವ ರೀತಿ ಹಿರಿಯರು ತಮ್ಮ ಪ್ರೈವೆಸಿ ಉಳಿಸಿಕೊಳ್ಳಲು ಹಾಗೂ ದಿನವಿಡಿಯ ಕೆಲಸ ಕಾರ್ಯದ ನಂತರ ರಾತ್ರಿ ನೆಮ್ಮದಿಯಾಗಿ ಮಲಗಲು ತಮ್ಮದೇ ಆದ ಒಂದು ಕೋಣೆ ಬಯಸುವಂತೆ, ಇಂದಿನ ಆಧುನಿಕ ಮಕ್ಕಳು ಸಹ ತಮ್ಮದೇ ಆದ ಕೋಣೆ ಉತ್ತಮ ಲುಕ್ಸ್ ಹೊಂದಿರಬೇಕೆಂದು ಬಯಸುತ್ತಾರೆ. ಶಾಲೆಯ ಪಾಠ ಪ್ರವಚನ, ಆಟೋಟದ ನಂತರ ಮನೆಗೆ ಬಂದು ಹೋಂವರ್ಕ್‌, ರೆಕಾರ್ಡ್ಸ್ ಕೆಲಸ ಮುಗಿಸಿ ಆರಾಮವಾಗಿ ಮಲಗಲು ಒಂದು ಕೋಣೆ ಇರಬೇಕು ಎನ್ನುತ್ತಾರೆ.

ಹೀಗಾಗಿ ಮಗುವಿನ ಕೋಣೆ ಅಲಂಕರಿಸುವ ಮೊದಲು, ಈ ಸಲಹೆಗಳನ್ನು ಅಗತ್ಯ ಅನುಸರಿಸಿ :

ಕೋಣೆ ಹೇಗಿರಬೇಕು? : ಮಕ್ಕಳು ಮಲಗಲು ಹಾಗೂ ಅಭ್ಯಾಸ ಮಾಡಲು ಒಂದೇ ಕೋಣೆ ಇರಬೇಕೇ ಅಥವಾ ಸ್ಟಡಿ ರೂಂ ಮತ್ತು ಬೆಡ್‌ ರೂಂ ಬೇರೆ ಬೇರೆ ಇರಬೇಕೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ. ಇಬ್ಬರು ಮಕ್ಕಳಿದ್ದರೆ ಅವರಿಬ್ಬರಿಗೂ ಬೇರೆ ಬೇರೆ ಕೋಣೆ ಇರುತ್ತದೋ ಅಥವಾ ಒಂದೇ ಕೋಣೆಯಲ್ಲಿ ಇಬ್ಬರೂ ಇರುತ್ತಾರೋ ಎಂಬುದನ್ನು ಗಮನಿಸಿ. ನಂತರ ಮುಂದಿನ ವಿಷಯ ಪ್ಲಾನಿಂಗ್‌ ಮಾಡಿ. ಮಹಾನಗರಗಳಲ್ಲಿ ದಿನೇದಿನೇ ಹೆಚ್ಚುತ್ತಿರುವ ಮನೆಗಳ ದುಬಾರಿ ಬೆಲೆಯಿಂದಾಗಿ, ಮಕ್ಕಳ ಮಲಗುವ ಮತ್ತು ಸ್ಟಡಿ ರೂಂ ಬೇರೆ ಇರಿಸುವುದು ಕಷ್ಟದ ಮಾತು.

ಬಜೆಟ್‌ : ನಿಮ್ಮ ಬಜೆಟ್‌ಗೆ ಅನುಸಾರವಾಗಿ, ಮಕ್ಕಳ ಕೋಣೆ ಸೆಟ್‌ ಅಪ್‌ ಮಾಡಿ, ಇಂಟೀರಿಯರ್ಸ್ ಪಾಕೆಟ್‌ ಫ್ರೆಂಡ್ಲಿ ಆಗಿರಲಿ.

ಬೆಡ್‌ : ಬೆಡ್‌ ಎಷ್ಟಿರಬೇಕು… 1 ಅಥವಾ ಹೆಚ್ಚು? ಇಬ್ಬರು ಮಕ್ಕಳಿದ್ದರೂ ಒಂದೇ ಬೆಡ್‌ ನಡೆಯುತ್ತದೆ, ಆದರೆ ಅವರು ತೀರಾ ಕಿತ್ತಾಡುವ ಸ್ವಭಾವದರಾಗಿರಬಾರದು. ದೊಡ್ಡ ಸೈಜ್‌ ಬೆಡ್‌ ಮೇಲೆ ಇಬ್ಬರು ಮಕ್ಕಳು ಹಾಯಾಗಿ ಮಲಗಬಹುದು. ಕೋಣೆ ಸ್ಥಳಾವಕಾಶ ನೀಡುತ್ತದೆ ಎಂದರೆ 2 ಸಿಂಗಲ್ ಬೆಡ್‌ ಬೇರೇ ಬೇರೆ ಇರಲಿ. ಇದರ ನಡುವೆ 1 ಸೈಡ್‌ ಟೇಬಲ್ ಇರಲಿ ಅಥವಾ ಚಿಕ್ಕ ಬುಕ್‌ ರಾಕ್‌. ತೀರಾ ಬೇಕೆನಿಸಿದರೆ ಒಂದು ತೆರೆ ಬಿಡಬಹುದು. ಒಬ್ಬರು ಮಲಗಿ, ಒಬ್ಬರು ಓದಬೇಕಾದಾಗ, ಪರದೆ ಇಳಿ ಬಿಡುವುದರಿಂದ ಅಲ್ಲಿ 2 ಕೋಣೆಗಳ ಅನುಭವ ಆಗುತ್ತದೆ.

ಓಪನ್‌ ಸ್ಪೇಸ್‌ : ಮಕ್ಕಳು ಮನೆಯಲ್ಲಿ ಸದಾ ಕುಣಿಯುತ್ತಿರುತ್ತಾರೆ, ಓಡಾಡುತ್ತಾ ಇರುತ್ತಾರೆ. ಹೀಗಾಗಿ ಅವರಿಗೆ ಆಟಾಡಲು ಒಂದಿಷ್ಟು ಖಾಲಿ ಸ್ಪೇಸ್‌ ಬೇಕು. ಬೆಡ್‌ ಗೋಡೆ ಬದಿಗೆ ಅಂಟಿದಂತಿರಲಿ, ಆಗ ಉಳಿದ ಜಾಗ ಮಕ್ಕಳ ಆಟಕ್ಕೆ ಅನುಕೂಲಕರ.

ಬಂಕ್‌ ಬೆಡ್‌ : ಕೋಣೆ ಚಿಕ್ಕದಾಗಿದ್ದರೆ, ನೀವು 2 ಸೆಪರೇಟ್‌ ಬೆಡ್‌ ಇಡಲಾಗದಿದ್ದರೆ, ಆಗ ಬಂಕ್‌ ಬೆಡ್‌ ಅರೇಂಜ್‌ ಮಾಡಬಹುದು. ಬಂಕ್‌ ಬೆಡ್‌ ಸಹ ವಿಭಿನ್ನ ರೀತಿಯಲ್ಲಿ ಲಭ್ಯವಿವೆ.

ಒಂದು ಬಂಕ್‌ ಬೆಡ್‌ ನಲ್ಲಿ ಸ್ಲೀಪರ್‌ ಕೋಚ್‌ ತರಹ ಮೇಲೆ ಕೆಳಗೆ ಮಲಗುವ ಅವಕಾಶವಿರುತ್ತದೆ, ಇದಕ್ಕೆ ಮೇಲೆ ಹತ್ತಲು ಏಣಿ ಸಹ ಲಭ್ಯ.

ಮತ್ತೊಂದು ಬಗೆಯಲ್ಲಿ ಒಂದು ಮೆಯ್ನ್ ಬೆಡ್‌ ಇದ್ದು, ಅದರ ಕೆಳಗೆ ಒಂದು ಫುಲ್ ‌ಓವರ್‌ ಬೆಡ್‌ ಇರುತ್ತದೆ. ಇದನ್ನು ರಾಕ್‌ ತರಹ ಹೊರತೆಗೆದು ಬೇಕಾದಾಗ ಬಳಸಿಕೊಳ್ಳಬಹುದು, ಬೇಡವಾದಾಗ ಹಿಂದಕ್ಕೆ ತಳ್ಳಬಹುದು. ಇದನ್ನು ಟುಂಡ್ರೆಲ್ ಬೆಡ್‌ ಬಂಕ್‌ ಎಂದೂ ಹೇಳುತ್ತಾರೆ.

ಮೂರನೆಯದು, ಇವೆರಡರ ಮಿಶ್ರಣ. ಇದರಲ್ಲಿ ಮೇಲೆಯೂ ಬೆಡ್‌ ಇದ್ದು, ಕೆಳಗಡೆಯೂ ಫುಲ್ ‌ಓವರ್‌ ಇರುತ್ತದೆ. ಇದರಲ್ಲಿ ಒಂದು ಹೆಚ್ಚುವರಿ ಬೆಡ್‌ ಸದಾ ಲಭ್ಯವಿದ್ದು, ಮನೆಗೆ ಅತಿಥಿ ಮಗು ಬಂದಾಗ ಬಳಸಿಕೊಳ್ಳಬಹುದು.

ಗೋಡೆಗಳ ಬಣ್ಣ : ಮಕ್ಕಳ ಕೋಣೆಯ ಬಣ್ಣ ಬೆಳ್ಳಗೆ ಇರದಿದ್ದರೇನೇ ಒಳ್ಳೆಯದು. ಹಳದಿ, ನೀಲಿ, ಗುಲಾಬಿ, ತಿಳಿಹಸಿರು… ಹೀಗೆ ಮಕ್ಕಳು ಮೆಚ್ಚುವ ಬಣ್ಣ ಆರಿಸಿ.

ಗೋಡೆಗಳಿಗೆ ಫೋಟೋ ಯಾ ಸ್ಟಿಕರ್ಸ್‌ : ಇದೂ ಸಹ ಮಕ್ಕಳ ಲಿಂಗ, ಆಯ್ಕೆ ಆಧರಿಸಿದೆ. ಹುಡುಗರು ಕ್ರಿಕೆಟಿಗರ, ಫುಟ್‌ಬಾಲ್‌ಪಟುಗಳ ಫೋಟೋ ಬಯಸಿದರೆ ಹುಡುಗಿಯರು ಸೈನಾ ನೇವಾಲ್‌, ಸಿಂಗರ್‌, ನೇಚರ್‌ ಇತ್ಯಾದಿಗಳ ಪೋಟೋ ಬಯಸುತ್ತಾರೆ.

ವಾರ್ಡ್‌ ರೋಬ್‌ : ಇಬ್ಬರು ಮಕ್ಕಳಿದ್ದರೆ ಅವರಿಗೆ ಬೇರೆ ಬೇರೆ ವಾರ್ಡ್‌ ರೋಬ್‌ ಕೊಡಿ. ಜೊತೆಗೆ ಕೆಲವು ಸ್ಟೋರೇಜ್‌ ಬ್ಯಾಲೆನ್ಸ್ ಯಾ ಬಾಸ್ಕೆಟ್‌ ಇರಲಿ. ಇದರಲ್ಲಿ ಅವರು ತಮ್ಮ ಆಟಿಕೆ ಇಟ್ಟುಕೊಳ್ಳಬಹುದು.

ಟೇಬಲ್ : ಇಬ್ಬರೂ ಒಂದೇ ಕೋಣೆಯಲ್ಲಿ ಓದುವುರಾದರೆ, ಅವರ ಸ್ಟಡಿ ಟೇಬಲ್ ಗೋಡೆ ಕಡೆ ಬಂದು ಧಾರಾಳ ಲೈಟ್ ಸಿಗುವಂತಿರಲಿ.

ಆಟಿಕೆಗಳು : ಮಕ್ಕಳಿಗಂತೂ ಎಷ್ಟು ಆಟಿಕೆಗಳಿದ್ದರೂ ಸಾಲದು. ಗಂಡು ಹುಡುಗರಿಗಂತೂ ಕ್ರಿಕೆಟ್‌ ಸೆಟ್‌ಮೊದಲ ಆದ್ಯತೆ. ರೋಬೋಟ್‌, ರಿವೋಟ್‌ ಕಾರ್‌ ಸಹ. ಹುಡುಗಿಯರಿಗೆ ಬಾರ್ಬಿ ಡಾಲ್‌, ಟೆಡ್ಡಿ ಬೇರ್‌, ಬ್ಯಾಡ್ಮಿಂಟನ್‌ ರಾಕೆಟ್‌ ಇತ್ಯಾದಿ. ಇಬ್ಬರಿಗೂ ಸಾಫ್ಟ್ ಟಾಯ್ಸ್ ಬಲು ಇಷ್ಟ.

ಲೆಟ್‌ ದೆಮ್ ಎಂಜಾಯ್‌! : ಎಲ್ಲಕ್ಕೂ ಮುಖ್ಯ ವಿಷಯ ಎಂದರೆ ಮಕ್ಕಳ ಕೋಣೆಯ ಬಣ್ಣ, ಫೋಟೋ, ಸೆಟ್‌ ಅಪ್‌, ಪರದೆಗಳೆಲ್ಲ 100% ಮಕ್ಕಳ ಓದು ಮತ್ತು ಮನರಂಜನೆಗೆ ಒತ್ತು ನೀಡುವಂತಿರಲಿ.

– ಎಸ್‌. ಶಕುಂತುಲಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ