ಏನೇ ಇರಲಿ, ಹೆಣ್ಣು ಗೌರವರ್ಣ ಹೊಂದಿದ್ದರೆ ಸೌಂದರ್ಯವತಿ ಎನಿಸುವಲ್ಲಿ ಒಂದು ಕೈ ಮಿಗಿಲು ಎಂಬುದು ಅನಾದಿ ಕಾಲದಿಂದಲೂ ವಿಶ್ವಾದ್ಯಂತ ಬೆಳೆದು ಬಂದಿರುವ ನಂಬಿಕೆ. ಆದರೆ ಇದು ಹೆಣ್ಣಿನ  ವ್ಯಕ್ತಿತ್ವದ ಒಂದು ಮುಖ ಮಾತ್ರ. ಇಂದಿನ ಕಾಲದಲ್ಲಿ ಗೌರವರ್ಣಕ್ಕಿಂತ ಹೆಚ್ಚಾಗಿ ಫ್ಯಾಷನ್‌ ಸೆನ್ಸ್, ಸ್ಮಾರ್ಟ್‌ ನೆಸ್‌, ಕಾನ್ಛಿಡೆನ್ಸ್, ಮೇಕಪ್‌, ಓವರಾಲ್ ‌ಆ್ಯಟಿಟ್ಯೂಡ್ ಇತ್ಯಾದಿಗಳನ್ನೇ ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ನಿಮ್ಮ ಸ್ಕಿನ್‌ ಟೋನ್‌ ಡಸ್ಕಿ ಆಗಿದ್ದರೆ, ನಿಮ್ಮ ಇತರ ರೂಪಗಳು ಹೊಳೆಯುವಂತೆ ಮಾಡಿ. ನಿಮ್ಮದು ತುಸು ಕಪ್ಪು ಬಣ್ಣ ಎಂದು ನಿರಾಶರಾಗಬೇಡಿ. ನಿಮ್ಮ ಪರ್ಸನಾಲಿಟಿ ಈ ರೀತಿ ಮಿರಿಮಿರಿ ಮಿಂಚಬೇಕೆಂದು ನಿರ್ಧರಿಸಿ:

ಬೋಲ್ಡ್ ಆಗಿರಿ

ನಿಮ್ಮ ವ್ಯಕ್ತಿತ್ವದಲ್ಲಿ ಸದಾ ಬೋಲ್ಡ್ ನೆಸ್‌ಸ್ಮಾರ್ಟ್‌ನೆಸ್‌ ಇರುವಂತೆ ನೋಡಿಕೊಳ್ಳಿ. ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹಿಂಜರಿಯದಿರಿ, ಉತ್ಸಾಹದಿಂದ ಪೈಪೋಟಿ ಎದುರಿಸಿ. ಯಾವುದೇ ಚಾಲೆಂಜ್‌ ಇರಲಿ, ಕೂಡಲೇ ಸ್ವೀಕರಿಸಿ. ಒಂದು ಕೋಣೆಯ ಮೂಲೆಯಲ್ಲಿ ಅಳುತ್ತಾ ಮುದುರಿ ಕೂರುವ ಕರಿ ಹುಡುಗಿ ಎನಿಸಿಕೊಳ್ಳುವ ಬದಲು, ಸದಾ ಮುನ್ನುಗ್ಗುವ ಲೀಡರ್‌ ಗುಣ ಬೆಳೆಸಿಕೊಳ್ಳಿ. ಯಾರೂ ತಾವಾಗಿ ನಿಮ್ಮನ್ನು ಮುಂದೆ ಬರಲು ಆಹ್ವಾನಿಸುವುದಿಲ್ಲ, ಹೀಗಾಗಿ ನೀವಾಗಿಯೇ ಅವಕಾಶ ಬಳಸಿಕೊಂಡು ಮುನ್ನುಗ್ಗುವಂತಿರಬೇಕು, ಪ್ರತಿಯೊಂದು ಮಹತ್ವಪೂರ್ಣ ಕೆಲಸಕ್ಕೂ ಜನ ನಿಮ್ಮತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾದರೆ, ನೀವು 50% ಯುದ್ಧ ಗೆದ್ದಂತೆ!

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ

ಯಾರೊಂದಿಗೇ ಮಾತನಾಡಲಿ, ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ. ಅತ್ತ ಇತ್ತ ಎತ್ತಲೋ ನೋಡುತ್ತಾ, ಮಾತನಾಡುವವರನ್ನು ಯಾರೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ದೃಷ್ಟಿ ತಗ್ಗಿಸಿ ಮಾತನಾಡುವವರು ಸದಾ ಹಿಂದುಳಿಯುತ್ತಾರೆ. ಹೀಗಾಗಿ ನೀವು ಆತ್ಮವಿಶ್ವಾಸದಿಂದ ಎದುರಿಗಿರುವವರನ್ನು ಮಾತನಾಡಿಸಿ.

ಇತರರೊಂದಿಗೆ ಹೋಲಿಸಿಕೊಳ್ಳಬೇಡಿ

ಬೇರೆಯವರ ಜೊತೆ ಸದಾ ನಿಮ್ಮನ್ನು ಹೋಲಿಸಿ ನೋಡಿಕೊಳ್ಳುತ್ತಿದ್ದರೆ, ನಿಮ್ಮ ಆತ್ಮವಿಶ್ವಾಸ ಸಹಜವಾಗಿ ಕುಗ್ಗುತ್ತದೆ. ನೀವು ಸದಾ ನಿಮ್ಮ + ಪಾಯಿಂಟ್ಸ್ ಬಗ್ಗೆ ಯೋಚಿಸಬೇಕೇ ಹೊರತು, ನಿಮ್ಮ ಎದುರಿಗಿರುವವರು ನಿಮಗಿಂತ ಎಷ್ಟು ಬೆಟರ್ ಅಂದುಕೊಳ್ಳುತ್ತಿರಬೇಡಿ. ನಿಮ್ಮನ್ನು ನೀವು ದುರ್ಬಲರು ಅಂತ ಅಂದುಕೊಳ್ಳಲೇಬೇಡಿ.

ಭಯದ ಮೇಲೆ ಜಯ

ಯಾವ ವಿಷಯದಿಂದ ನಮಗೆ ಭಯ ಎನಿಸುತ್ತದೋ ಅದನ್ನು ಮತ್ತೆ ಮತ್ತೆ ಎದುರಿಸುತ್ತಾ ಅದರಿಂದ ಹೊರ ಬರುವ ಪ್ರಯತ್ನ ಮಾಡಬೇಕು. ಅದನ್ನು ಕಂಡು ದೂರದಿಂದಲೇ ನಮಸ್ಕಾರ ಹಾಕಿ ಓಡಿಹೋಗಬಾರದು. ಇನ್ನೂ ಕೆಲವರಿಗೆ ಸಭಾಕಂಪನದ ಭಯ ತಪ್ಪದು. ಕೆಲವರಿಗೆ ಈಜು, ಅತಿ ಎತ್ತರದ ಕಟ್ಟಡದ ಮಹಡಿ ಮೇಲೆ ನಿಲ್ಲುವುದು, ಕತ್ತಲೆಯಲ್ಲಿ ಇರುವುದು, ಒಬ್ಬಂಟಿ ಪ್ರಯಾಣ…. ಹೀಗೆ ಅನೇಕ ಬಗೆಯ ಭಯಗಳಿರುತ್ತವೆ. ಹೀಗಾಗಿ ನೀವು ಇಂಥ ಭಯದ ವಿರುದ್ಧ ಗೆಲ್ಲಬೇಕು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ, ಆಗ ನೀವು ಹೆಚ್ಚು ಬೋಲ್ಡ್ ಕಾನ್ಛಿಡೆಂಟ್‌ ಲುಕ್ಸ್ ಗಳಿಸುವಿರಿ.

ನಿಮ್ಮ ಸ್ಟ್ರೆಂತ್ನತ್ತ ಫೋಕಸ್

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವುದೋ ಒಂದು ಕೆಲಸದಲ್ಲಿ ನಿಪುಣರಾಗಿರುತ್ತಾರೆ. ಯಾರೋ ಅಂದ ಚಂದ, ಸಂಗೀತ, ನೃತ್ಯ, ಕಲೆ, ಅಡುಗೆ, ಕುಶಲ ಕೆಲಸ….  ಹೀಗೆ ನಾನಾ ರಂಗಗಳಲ್ಲಿ ತಮ್ಮ ಹಿರಿಮೆ ಸಾಧಿಸಿರುತ್ತಾರೆ. ನಿಮ್ಮ ಬಣ್ಣ ಕಪ್ಪಾಗಿದ್ದ ಮಾತ್ರಕ್ಕೆ ನೀವು ಈ ಮೇಲಿನ ವಿಷಯಗಳಲ್ಲಿ ಮಿಂಚಬಾರದು ಎಂದೇನಿಲ್ಲ. ಹೀಗಾಗಿ ಯಾವ ಒಂದು ವಿಷಯದಲ್ಲಿ ನಿಮಗೆ ಹೆಚ್ಚಿನ ನೈಪುಣ್ಯತೆ ಇದೆಯೋ, ಅದನ್ನು ನಾಲ್ವರು ಗುರುತಿಸಿ ಹೊಗಳುವಂತೆ ನಡೆದುಕೊಳ್ಳಿ. ನಿಮ್ಮಲ್ಲಿರುವ ಈ ಜಾಣ್ಮೆ ಬೇರೆಯವರಲ್ಲಿ ಇಲ್ಲದಿರಬಹುದು, ಆದ್ದರಿಂದ ಅದಕ್ಕೆ ಹೆಚ್ಚಿನ ಮೆರುಗು ಕೊಡಿ. ನಿಮ್ಮ ಸ್ಮಾರ್ಟ್‌ನೆಸ್‌, ಸಾಮರ್ಥ್ಯ, ಉತ್ತಮ ನಡವಳಿಕೆಯಿಂದ ಬೇರೆಯವರ ದೃಷ್ಟಿಯಲ್ಲಿ ಮೇಲೇರಿ.

ಆಂತರಿಕ ಸೌಂದರ್ಯಕ್ಕೆ ಪ್ರಾಧಾನ್ಯತೆ

ನೀವು ಆಂತರಿಕವಾಗಿ ಹೆಚ್ಚಿನ ಅಂದ ಹಾಗೂ ಇತರರಿಗಿಂತ ಬೆಟರ್‌ ಎಂದು ನಿಮಗೇ ಫೀಲಾದಾಗ ಮಾತ್ರ, ಬಾಹ್ಯವಾಗಿಯೂ ನೀವು ಹೆಚ್ಚು ಸ್ಮಾರ್ಟ್‌ಬ್ಯೂಟಿಫುಲ್ ಎನಿಸುವಿರಿ. ನಿಮ್ಮ ಮನದಲ್ಲಿ ಸದಾ ಬೇಸರ, ದುಃಖ, ಹೀನಭಾವನೆ, ಸಂತಾಪ, ಅಸೂಯೆ, ದುರಾಸೆಗಳು ಅಡಗಿಕೊಂಡಿದ್ದರೆ ಇವೆಲ್ಲ ಮುಖದಲ್ಲಿ ಖಂಡಿತಾ ಪ್ರತಿಫಲಿಸುತ್ತವೆ. ಮನಸ್ಸಿನ ಸ್ಥಿತಿಯೊಂದಿಗೆ ಚರ್ಮದ ಹೊಳಪಿಗೆ ನೇರ ಸಂಬಂಧವಿದೆ. ಶ್ಯಾಮಲ ಸೌಂದರ್ಯವುಳ್ಳವರು ಆರೋಗ್ಯವಾಗಿ ಕಳಕಳೆಯಿಂದ ಕೂಡಿದ್ದು, ಸದಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೆ ಅದಕ್ಕಿಂತ ಹೆಚ್ಚಿನ ಬ್ಯೂಟಿ ಏಕೆ ಬೇಕು? ಕೇವಲ ಬಿಳಿ ತೊಗಲೊಂದೇ ಸೌಂದರ್ಯದ ಮಾನದಂಡವಲ್ಲ.

ಹಳೆಯದನ್ನು ಮರೆಯಬೇಡಿ

ಜೀವನದಲ್ಲಿ ನಿಮಗೆ ಯಾವಾಗ ಯಶಸ್ಸು ಸಿಕ್ಕಿದರೂ ಸರಿ, ಅದನ್ನು ಮನದಲ್ಲಿ ಸದಾ ನೆನಪಿರಿಸಿಕೊಂಡು ಸ್ಛೂರ್ತಿ, ಸಕಾರಾತ್ಮಕತೆ, ಉತ್ಸಾಹಗಳನ್ನು ಹೆಚ್ಚಿಸಿಕೊಳ್ಳಿ. ಈ ರೀತಿ ನಿಮ್ಮ ಕಾನ್ಛಿಡೆನ್ಸ್ ಲೆವೆಲ್ ‌ಉಚ್ಚಮಟ್ಟದಲ್ಲಿರಲಿ. ವ್ಯಕ್ತಿತ್ವವನ್ನು ಆಕರ್ಷಕಗೊಳಿಸುವಲ್ಲಿ ನಿಮ್ಮ ಉಡುಗೆಯ ಪಾತ್ರ ಹಿರಿದು. ಡ್ರೆಸ್‌ ನ ಬಣ್ಣ, ಪ್ಯಾಟರ್ನ್‌, ಫ್ಯಾಬ್ರಿಕ್ಸ್, ಸ್ಟೈಲ್ ‌ಇತ್ಯಾದಿಗಳೆಲ್ಲ ನಿಮ್ಮ ಪರ್ಸನಾಲಿಟಿಗೆ ಹೆಚ್ಚು ಪೂರಕವಾಗಿರಲಿ, ಸ್ಮಾರ್ಟ್‌ ಲುಕ್ಸ್ ಕೊಡುವಂತಿರಲಿ. ನಿಮ್ಮ ಡ್ರೆಸ್‌ ಆರಿಸಿಕೊಳ್ಳುವಾಗ ಈ ವಿಷಯಗಳನ್ನು ಮರೆಯದಿರಿ :

ಅತಿ ಹೊಳೆಹೊಳೆಯುವ ಗಾಡಿ ಬಣ್ಣಗಳು ಬೇಡ. ಯೆಲ್ಲೋ, ಆರೆಂಜ್‌, ನಿಯಾನ್‌ ನಂಥ ಬಣ್ಣಗಳನ್ನು ಆದಷ್ಟೂ ಧರಿಸದಿರಿ. ಮುಖಕ್ಕೆ ರಾಚುವ ಈ ಬಣ್ಣಗಳು ಶ್ಯಾಮಲ ಬಣ್ಣದವರಿಗೆ ಖಂಡಿತಾ ಸೂಟ್‌ ಆಗಲ್ಲ. ಲೈಟ್‌ ಆಗಿರುವಂಥ, ಸ್ಕಿನ್‌ ಟೋನ್‌ ಗೆ ಮ್ಯಾಚ್‌ ಆಗುವಂಥ ಬಣ್ಣ ಮಾತ್ರವೇ ನಿಮ್ಮ ಮೈ ಮೇಲೆ ಚಂದ ಕಾಣಲು ಸಾಧ್ಯ. ನೀವು ಪ್ಲಮ್, ಬ್ರೌನ್‌, ಲೈಟ್‌ ಪಿಂಕ್‌, ರೆಡ್‌ಮುಂತಾದ ಬಣ್ಣಗಳನ್ನು ಟ್ರೈ ಮಾಡಿ.

ಫಾರ್ಮ್‌ ಲುಕ್ಸ್ ವಿಷಯಕ್ಕೆ ಬಂದಾಗ, ಬೇಜ್‌ ಕಲರ್‌ನ ಸಿಂಪಲ್ ಶಾರ್ಟ್‌ ಡ್ರೆಸ್‌ ಧರಿಸಿರಿ, ಅದರಲ್ಲಿ ಪ್ರಿಂಟ್ಸ್ ಡಿಸೈನ್‌ ಇದ್ದರೆ ಒಳ್ಳೆಯದು. ಇಂಥ ಶಾರ್ಟ್‌ ಡ್ರೆಸೆಸ್‌ ಜೊತೆ ಹೈ ಹೀಲ್ಸ್, ಸ್ಮಾರ್ಟ್‌ ವಾಚ್‌, ಕೋಟ್‌ ಧರಿಸಿ ನೀವು ಆಫೀಸಿಗೆ ಹೊರಟರೆ ಚೆನ್ನಾಗಿರುತ್ತದೆ. ಸಾಲ್ಮನ್‌ ಪಿಂಕ್‌ ಕಲರ್ಸ್ ಪ್ರಾಪರ್‌ ಫಾರ್ಮಲ್ ಔಟ್‌ ಫಿಟ್‌ ವೆರಿ ಪರ್ಫೆಕ್ಟ್ ಎನಿಸುತ್ತದೆ.

ಡಸ್ಕಿ ಬ್ಯೂಟಿ ಡ್ರೆಸ್ಸಿಂಗ್ಸ್ಚೈಲ್

ನಿಮ್ಮ ಸ್ಕಿನ್‌ ಟೋನ್‌ ಡಸ್ಕಿ ಆಗಿದ್ದರೆ ನೀವು ಈ ಕೆಳಗಿನ ಸಲಹೆ ನೆನಪಿಡಿ :

ಡೆನಿಂ ಕಲರ್‌ನ ಡ್ರೆಸ್‌ ಧರಿಸಿ….. ಅಂದ್ರೆ ಡೆನಿಂ ಜೀನ್ಸ್, ಪ್ಲಾಜೋ, ಡೆನಿಂ ಶರ್ಟ್‌ ಇತ್ಯಾದಿ.

ನಿಮ್ಮ ಉಡುಗೆಯ ಫ್ಯಾಬ್ರಿಕ್ಸ್ ಕುರಿತಾಗಿ ಚೂಸಿ ಆದಾಗ ಮಾತ್ರ, ನೀವು ಫ್ಯಾಬುಲಸ್‌ ಲುಕ್ಸ್ ಹೊಂದಲು ಸಾಧ್ಯ. ನೀವು ಬ್ಲ್ಯಾಕ್ ಬಣ್ಣದ ಶಾರ್ಟ್‌ ಡ್ರೆಸ್‌ ಧರಿಸುತ್ತಿದ್ದು, ಅದರಲ್ಲಿ ನೆಟ್‌, ಶಿಫಾನ್‌ನಂಥ ಫ್ಯಾಬ್ರಿಕ್ಸ್ ಇದ್ದರೆ ಆಗ ನಿಮ್ಮ ಲುಕ್ಸ್ ಸುಧಾರಿಸುತ್ತವೆ.

ಬ್ಲಿಂಗಿ ಗೋಲ್ಡ್ ನಿಮಗೆ ಸಾಕಷ್ಟು ಉನ್ನತ ಸ್ಟೈಲ್ ‌ನೀಡುತ್ತದೆ. ನಿಮಗೆ ಈವ್ನಿಂಗ್‌ ಗೌನ್‌ ಧರಿಸುವುದು ಇಷ್ಟವಾದರೆ, ನೀವು ಕೆಂಪು ಬಣ್ಣದ ಫ್ಲೋರ್‌ ಲೆಂತ್‌ ಧರಿಸಬಹುದು. ಆಫ್‌ ಶೋಲ್ಡರ್ಡ್‌, ಶೋಲ್ಡರ್‌ ಲೆಸ್‌, ಸಿಂಗಲ್ ಶೋಲ್ಡರ್ಡ್‌ ಗೌನ್‌ ನಿಮಗೆ ಉತ್ತಮ ಎನಿಸುತ್ತದೆ. ಇವನ್ನು ಧರಿಸಿದಾಗ ನಿಮ್ಮ ಕೂದಲು ಸ್ಟ್ರೇಟ್‌ ಆಗಿದ್ದರೆ ಲೇಸು.

ಫಾರ್ಮಲ್ಸ್ ವಿಷಯಕ್ಕೆ ಬಂದಾಗ, ನೀವು ಬೇಕಾದ್ದನ್ನು ಧರಿಸಬಹುದು. ಹೈ ವೇಯಸ್ಟ್ ಜೀನ್ಸ್ ನ್ನು ನೀವು ಸಾಲಿಡ್‌ ಟ್ವಿಸ್ಟ್ ಟಾಪ್ ಜೊತೆ ಧರಿಸಬಹುದು. ಈ ತರಹದ ಲುಕ್ಸ್ ಗಾಗಿ ನೀವು ಕೂದಲನ್ನು ಕಟ್ಟಿರಬೇಕು, ಓಪನ್‌ ಬಿಡಬಾರದು.

ಪೆನ್ಸಿಲ್ ‌ಸ್ಕರ್ಟ್‌ ಜೊತೆ ಲೈಟ್‌ ಮಿಂಟ್‌ ಕಲರ್‌ನಲ್ಲಿ ರೂಫ್‌ ಸ್ಟ್ರಿಪ್ಡ್ ಟಾಪ್‌ ಧರಿಸಿರಿ, ಕೂದಲನ್ನು ಓಪನ್‌ ಆಗಿಡಿ, ಸಿಂಪಲ್ ಇಯರ್ ರಿಂಗ್‌ ಧರಿಸಿರಿ.

ಡಸ್ಕಿ ಸ್ಕಿನ್ಮೇಕಪ್ಟಿಪ್ಸ್

ಬ್ಯೂಟಿಫುಲ್ ಆಗಿ ಕಂಡುಬರಲು ಎಲ್ಲಕ್ಕೂ ಅತಿ ಮುಖ್ಯವಾದುದು ಸ್ವಸ್ಥ, ಹೊಳೆಯುವ ಚರ್ಮವೇ ಹೊರತು ಬಿಳಿ ತೊಗಲಲ್ಲ. ಹೊಳೆಯುವ ಚರ್ಮಕ್ಕಾಗಿ ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ, ಉತ್ತಮ ಚಟುವಟಿಕೆ, ಒಂದಿಷ್ಟು ವ್ಯಾಯಾಮ, ಸುಖಕರ ನಿದ್ದೆ, ಮನಶ್ಶಾಂತಿ ಬಲು ಮುಖ್ಯ.

ಎಲ್ಲಕ್ಕೂ ಮೊದಲು ನಿಮ್ಮ ಮುಖದಲ್ಲಿ ಅನಗತ್ಯ ಕೂದಲು ಇಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಐ ಬ್ರೋಸ್‌, ಅಪ್ಪರ್‌ ಲಿಪ್ಸ್, ಲೋಯರ್‌ ಲಿಪ್ಸ್, ಹಣೆ, ಚೀಕ್‌ ಬೋನ್ಸ್ ನಂಥ ಕಡೆ ಕಾಣಿಸಿಕೊಳ್ಳುವ ಅನಗತ್ಯ ಕೂದಲನ್ನು ನಿವಾರಿಸಿ. ಅಗತ್ಯವೆನಿಸಿದರೆ ಅವನ್ನು ಕನ್ಸೀಲ್ ‌ಮಾಡಿ, ಆಗ ನಿಮ್ಮ ಲುಕ್ಸ್ ಎದ್ದು ಕಾಣುತ್ತದೆ.

ಇದೀಗ ಮೇಕಪ್‌ ಶುರು ಮಾಡಿ. ಸ್ಕಿನ್‌ ಟೋನ್‌ ಜೊತೆ ಸ್ಕಿನ್‌ ಟೆಕ್ಸ್ ಚರ್‌ ಸಹ ಅಷ್ಟೇ ಮುಖ್ಯ. ಎಲ್ಲಕ್ಕೂ ಮೊದಲು ಒಂದು ಉತ್ತಮ ಪ್ರೈಮರ್‌ನಿಂದ ಆರಂಭಿಸಿ. ನಿಮ್ಮ ಚರ್ಮದಲ್ಲಿ ಡ್ರೈನೆಸ್‌, ಪ್ಯಾಚಿನೆಸ್‌, ಅನ್‌ ಈವೆನ್‌ನೆಸ್‌ ಇದ್ದರೆ ಬ್ಯೂಟಿ ಬಾಮ್ ಬಳಸಿಕೊಳ್ಳಿ.

ಗಿರಿಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ