ಸ್ವಾತಿ ಅತೀ ಉತ್ಸಾಹದಿಂದ ಕೂಡಿದ್ದಳು. ಅವಳು ಅವಿನಾಶ್‌ ನೊಂದಿಗೆ ಫಸ್ಟ್ ಡೇಟ್‌ ಗೆ ಹೋಗುವವಳಿದ್ದಳು. ಕಳೆದ 1 ವಾರದಿಂದ ಅವಳಿಗೆ ಯಾವ ಡ್ರೆಸ್‌ ತೊಡಲಿ, ಹೇಗೆ ಸಿದ್ಧವಾಗಲಿ ಎಂಬುದೇ ಚಿಂತೆ. ತಾನು ಸ್ಮಾರ್ಟ್‌ ಆಗಿ ಕಾಣಬೇಕು. ಅವಿನಾಶ್‌ ನ ದೃಷ್ಟಿ ತನ್ನಿಂದ ದೂರ ಸರಿಯಲೇಬಾರದು ಎನ್ನುವುದು ಅವಳ ಆಲೋಚನೆ. ಬಹಳ ದಿನಗಳ ಒಡನಾಟದ ನಂತರ ವಿಷಯ ಫಸ್ಟ್ ಡೇಟ್‌ ನ್ನು ತಲುಪಿತ್ತು. ಭಾನುವಾರ ಇಬ್ಬರಿಗೂ ರಜೆ ಇತ್ತು. ಅವಿನಾಶ್‌ ನಗರದ ಒಂದು ಪ್ರಖ್ಯಾತ ಹೋಟೆಲ್ ‌ಗೆ ಅವಳನ್ನು ಆಹ್ವಾನಿಸಿದ್ದ. ಇಬ್ಬರೂ ಲಂಚ್‌ ಗಾಗಿ ಅಲ್ಲಿ ಭೇಟಿ ಮಾಡಲಿದ್ದರು.

ಸ್ವಾತಿ ಒಂದು ಹೊಸ ಡ್ರೆಸ್‌ ಕೊಳ್ಳಲು ತೀರ್ಮಾನಿಸಿದಳು. ಮಾಲ್ ಗೆ ಹೋಗಿ ಒಂದು ಆಧುನಿಕ, ರಿವೀಲಿಂಗ್‌ ಡ್ರೆಸ್‌ ಕೊಂಡು ತಂದಳು. ಮಂಡಿಯವರೆಗಿದ್ದ ಆ ಸ್ಲೀವ್ ಲೆಸ್‌, ಆಫ್‌ ಶೋಲ್ಡರ್‌ ಒನ್‌ ಪೀಸ್‌ ಧರಿಸಿ ಅವಿನಾಶ್‌ ನನ್ನು ಭೇಟಿ ಮಾಡಿದಳು.

ಅವಿನಾಶ್‌ ಅವಳನ್ನು ಹಾರ್ದಿಕವಾಗಿ ಸ್ವಾಗತಿಸಿದ. ಇಬ್ಬರೂ ಎದುರು ಬದುರು ಕುಳಿತಾಗ ಸ್ವಾತಿಗೆ ತನ್ನ ಡ್ರೆಸ್‌ ಕಡೆಗೇ ಗಮನ.  ಇದು ಎಷ್ಟು ತೆರೆದಂತೆ ಇತ್ತೆಂದರೆ ಅವಳು ಮತ್ತೆ ಮತ್ತೆ ಅದನ್ನು ಸರಿ ಮಾಡಿಕೊಳ್ಳುತ್ತಿದ್ದಳು. ಒಮ್ಮೆ ಕತ್ತಿನ ಹತ್ತಿರ ಮೇಲಕ್ಕೆಳೆದುಕೊಂಡರೆ, ಇನ್ನೊಮ್ಮೆ ಮಂಡಿಯಿಂದ ಕೆಳಕ್ಕೆ ಎಳೆಯುತ್ತಿದ್ದಳು. ಮೆನು ಆರ್ಡರ್‌ ಮಾಡುವ ಕಡೆಗೂ ಅವಳಿಗೆ ಆಸಕ್ತಿ ಇರಲಿಲ್ಲ.

ಹೊರಡುವಾಗ ತುಂಬಿದ್ದ ಸ್ವಾತಿಯ ಆತುರ ಕಾತುರಗಳು ಹಿಂದಿರುಗುವಾಗ ಬರಿದಾಗಿದ್ದವು. ಅವಳು ನಿರೀಕ್ಷಿಸಿದ್ದಂತೆ ಏನೂ ಆಗಲಿಲ್ಲ. ಅವಿನಾಶ್‌ ನಿಂದ ಸೆಕೆಂಡ್‌ ಡೇಟ್‌ ಗೆ ಆಹ್ವಾನ ಬರಲಿಲ್ಲ. `ಫಸ್ಟ್ ಡೇಟ್‌ ಹೇಗಿತ್ತು?’ ಎಂದು ಕೇಳಿದ ಗೆಳೆಯರಿಗೆ, `ಅವಳ ಗಮನವೆಲ್ಲ ಡ್ರೆಸ್‌ ಕಡೆಗೇ ಇತ್ತು. ಹಾಗೆ ಅಂಗ ಪ್ರದರ್ಶನ ಮಾಡುವ ಅವಶ್ಯಕತೆ ಏನಿತ್ತು?’ ಎಂದು ಅವಿನಾಶ್‌ ಹೇಳಿದ.

ಈ ವಿಷಯ ಸ್ವಾತಿಯ ಕಿವಿಗೆ ಬಿದ್ದಾಗ ಅವಳಿಗೆ ತನ್ನ ಮೇಲೆಯೇ ಬೇಸರವಾಯಿತು.

ನೀವು ಫಸ್ಟ್ ಡೇಟ್‌ ಗೆ ಹೋಗುವವರಿದ್ದರೆ ಎಚ್ಚರಿಕೆಯಿಂದ ನಿಮ್ಮ ಡ್ರೆಸ್‌ ಆಯ್ಕೆ ಮಾಡಿ. ನಿಮ್ಮ ಬಟ್ಟೆ ಆಧುನಿಕ ಫ್ಯಾಷನ್ ದಾಗಿರಲಿ. ಆದರೆ ಮರ್ಯದಾಪೂರ್ವಕವಾಗಿರಬೇಕು. ನಿಮ್ಮ ಸ್ವಭಾವ, ವ್ಯವಹಾರ, ವ್ಯಕ್ತಿತ್ವದಿಂದ ನಿಮ್ಮ ಗೆಳೆಯ ಪ್ರಭಾವಿತನಾದರೆ ಒಳ್ಳೆಯದು. ಮುಂದೆ ನೀವು ಬಗೆಬಗೆಯ ಡ್ರೆಸೆಸ್‌ ಧರಿಸಿ ಅವನನ್ನು ಮೋಹಗೊಳಿಸುವ ಅವಕಾಶ ಸಿಗುತ್ತದೆ. ಆದರೆ ಫಸ್ಟ್ ಡೇಟ್‌ ನಲ್ಲಿ ನಿಮ್ಮ ಗೌರವವನ್ನು ಕಾಪಾಡಿಕೊಳ್ಳಿ.

ಜಾಗರೂಕರಾಗಿರಿ

ಅನನ್ಯಾ ಮತ್ತು ಸ್ವರೂಪ್‌ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ವರ್ಷದಿಂದಲೂ ಪರಿಚಿತರಾಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ, ಸ್ವರೂಪ್‌ ಫಸ್ಟ್ ಡೇಟ್‌ ಗೆ ಅನನ್ಯಾಳನ್ನು ಆಹ್ವಾನಿಸಿದ. ಸಾಯಂಕಾಲ ಅನನ್ಯಾ ಯಾರಿಗೂ ತಿಳಿಸದೆ ಅನೊಡನೆ ನಗರದ ಹೊರಲಯದ ಹೋಟೆಲ್ ‌ಗೆ ಹೋದಳು.

ಅವಳು ಸ್ವರೂಪನನ್ನು ಬಹಳವಾಗಿ ಮೆಚ್ಚಿಕೊಂಡಿದ್ದಳು. ಅವನ ಮಾತಿನ ಮೋಡಿಗೆ ಅವಳು ಮರುಳಾಗಿದ್ದಳು. ಹೋಟೆಲ್ ‌ನಲ್ಲಿ ಅವನು ಪಕ್ಕಕ್ಕೇ ಬಂದು ಕುಳಿತಾಗ ಅವಳಿಗೆ ಹಿತವೆನಿಸಿತು. ಆದರೆ ನಿಧಾನವಾಗಿ ಅವನ ನಡವಳಿಕೆ ಮರ್ಯಾದೆ ಮೀರತೊಡಗಿದಾಗ ಅವಳು ಅಡ್ಡಿಪಡಿಸಿದಳು.

ಸ್ವರೂಪ್‌ ನಗುತ್ತಾ, “ಅರೆ, ಡೇಟ್‌ ಗೆ ಬಂದಿದ್ದೇವಲ್ಲ. ಇಷ್ಟಕ್ಕೆ ನರ್ವಸ್ ಆದರೆ ಹೇಗೆ? ಇನ್ನೂ ಏನೇನೋ ಆಗಬೇಕಾಗಿದೆ,” ಎಂದ.

“ಅಂದರೆ….?”

“ಅಂದರೆ….. ಇಲ್ಲಿಂದ ನನ್ನ ಫ್ಲಾಟ್‌ ಗೆ ಹೋಗೋಣ. ಮನೆಯಲ್ಲಿ ಯಾರೂ ಇಲ್ಲ, ಚೆನ್ನಾಗಿ ಮಜಾ ಮಾಡೋಣ. ಆಮೇಲೆ ನಿನ್ನನ್ನು ಮನೆಗೆ ಬಿಡುತ್ತೇನೆ.”

“ಬೇಡ…. ಬೇಡ…. ನಾವೀಗಲೇ ಮನೆಯಿಂದ 14 ಕಿ.ಮೀ. ದೂರ ಬಂದಿದ್ದೇವೆ. ಇಲ್ಲಿಂದ ಮನೆಗೆ ಹೋಗೋಣ.”

“ನೋ ಛಾನ್ಸ್. ಇಲ್ಲಿಂದ ನನ್ನ ಫ್ಲಾಟ್‌ಗೆ,” ಎನ್ನುವಾಗ ಸ್ವರೂಪನ ಮುಖಭಾವವೇ ಬದಲಾಗಿದ್ದನ್ನು ಕಂಡು ಅನನ್ಯಾಳಿಗೆ ತಾನು ತಪ್ಪು ಮಾಡಿದ್ದೇನೆ ಎನ್ನಿಸಿತು.

ಅನನ್ಯಾಳ ಲೆಕ್ಕದಲ್ಲಿ ಫಸ್ಟ್ ಡೇಟ್‌ ಎಂದರೆ ಕುಳಿತು ಮಾತನಾಡುವುದು, ತಿಂಡಿ ತಿನ್ನುವುದು, ಹಾಗೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಎಂದಿತ್ತು, ಆದರೆ ಸ್ವರೂಪ್‌ ನ ವಿಚಾರಧಾರೆ ಸರಿಯೆನಿಸಲಿಲ್ಲ.

IB150646-150646151342660-SM194428

ಅವಳು ಮನೆಗೆ ಹೇಗೆ ಹೋಗುವುದು ಎಂದು ಯೋಚಿಸುತ್ತಿರುವಾಗ ಸ್ವರೂಪ್‌, “ಮನೆಯಲ್ಲಿ ಯಾರಿಗೂ ಹೇಳಿ ಬಂದಿಲ್ಲ ತಾನೇ?” ಎಂದು ಕೇಳಿದ.

ಅನನ್ಯಾಳ ಬಾಯಿಂದ ನಿಜ ಹೊರಬಂದಿತು, “ಇಲ್ಲ.”

“ಗುಡ್‌,” ಎಂದು ಸ್ವರೂಪ್‌ ನಕ್ಕ ರೀತಿ ಅವಳಿಗೆ ಇಷ್ಟವಾಗಲಿಲ್ಲ. ಸ್ವರೂಪನ ಬೈಕ್‌ ನಲ್ಲಿ ಕುಳಿತು ಅನನ್ಯಾ ಬೇಡವೆನ್ನುತ್ತಿದ್ದರೂ ಅವನು ತನ್ನ ಅಪಾರ್ಟ್‌ ಮೆಂಟ್‌ ತಲುಪಿದ. ಅಲ್ಲಿ ಯಾರೋ ಇಬ್ಬರು ಹುಡುಗರು ನಿಂತಿದ್ದರು.

“ಎಷ್ಟು ತಡ? ನಾವು ಬಹಳ ಹೊತ್ತಿನಿಂದ ಕಾಯುತ್ತಿದ್ದೇವೆ…..” ಸ್ವರೂಪನನ್ನು ಕಂಡ ಕೂಡಲೇ ಆ ಹುಡುಗರು ಹೇಳಿದರು.

ಸ್ವರೂಪ್‌ ಬೈಕ್‌ ಗೆ ಸ್ಟಾಂಡ್‌ ಹಾಕಿ ನಿಲ್ಲಿಸುತ್ತಾ, “ಮೊದಲು ಪರಿಚಯ ಆಗಲಿ. ಅನನ್ಯಾ, ಇವರು ನನ್ನ ಸ್ನೇಹಿತರು. ರವಿ ಮತ್ತು ಅನೂಪ್‌,” ಎಂದ.

ಅವರಿಬ್ಬರೂ ನೋಡಿದ ರೀತಿಯಿಂದ ಅವಳಿಗೆ ಮೈ ನಡುಗಿತು. ಅವರ ಮನದಿಂಗಿತ ಸರಿಯಾಗಿಲ್ಲವೆನಿಸಿತು.

“ನಾನು ಮನೆಗೆ ಹೋಗುತ್ತೇನೆ,”  ಅನನ್ಯಾ ಹೇಳಿದಳು.

ಮೂವರೂ, “ಬೇಡ, ಮೇಲೆ ನಡಿ….” ಎಂದರು.

ಪಕ್ಕದಲ್ಲೇ 3-4 ಜನ ಹೋಗುತ್ತಿದ್ದರು. ಅನನ್ಯಾ ಅವರ ಜೊತೆಗೇ ನಡೆದು ರಸ್ತೆ ಬಂದ ಕೂಡಲೇ ಅಲ್ಲಿದ್ದ ಆಟೋ ಹಿಡಿದಳು. ಎಂತಹ ದುರ್ಘಟನೆಯಿಂದ ತಾನು ಪಾರಾದೆ ಎಂದು ದಾರಿಯುದ್ದಕ್ಕೂ ಕಣ್ಣೀರು ಒರೆಸಿಕೊಳ್ಳುತ್ತಾ ಕುಳಿತಿದ್ದಳು. ನಿಜಕ್ಕೂ ಅಂದು ಅವಳು ಪಾರಾಗಿ ಭದ್ರವಾಗಿ ಮನೆ ಸೇರಿದಳು.

ಡೇಟ್ಕಹಿಯಾಗದಿರಲಿ

ನೀವು ಫಸ್ಟ್ ಡೇಟ್‌ ಗೆ ಹೋಗುವಾಗ ಯಾರಿಗೂ ವಿಷಯ ತಿಳಸದಿರುವ ತಪ್ಪನ್ನು ಮಾಡಬೇಡಿ. ನಿಮ್ಮ ಗೆಳಯನ ಹೆಸರು, ಫೋನ್‌ ನಂಬರ್‌ ಮತ್ತು ವಿಳಾಸ ತಿಳಿಸಿರಿ. ನೀವು ಎಲ್ಲಿ ಮತ್ತು ಯಾರೊಡನೆ ಇರುವಿರಿ ಎಂಬುದು ಯಾರೊಬ್ಬರಿಗಾದರೂ ತಿಳಿದಿರಬೇಕು. ಮಾತನಾಡುವಾಗ ನಿಮ್ಮ ಗೆಳೆಯನಿಗೆ ನೀವು ತಿಳಿಸಿ ಬಂದಿರುವ ವಿಷಯವನ್ನು ಹೇಳಿ. ನಿಮ್ಮ ಫಸ್ಟ ಡೇಟ್‌ ಕೆಟ್ಟ ಅನುಭವದ ನೆನಪನ್ನು ಉಳಿಸದಂತೆ ಎಚ್ಚರ ವಹಿಸಿ. ಸಾಮಾನ್ಯವಾಗಿ ಫಸ್ಟ್ ಡೇಟ್‌ ನಂದು ಹುಡುಗನೇ ಬಿಲ್ ‌ಪಾವತಿಸುವ ಅಭ್ಯಾಸವಿದೆ. ಆದರೆ ಈಗ ಕಾಲ ಬದಲಾಗಿದೆ. ಹುಡುಗಿಗೂ ಆರ್ಥಿಕ ಸಬಲತೆ ಇರುವುದರಿಂದ ಬಿಲ್ ‌ಬಂದ ಕೂಡಲೇ ತನ್ನ ಪಾಲನ್ನು ಕೊಡುವ ಆಫರ್‌ ಮಾಡಬಹುದು.

ಫಸ್ಟ್ ಡೇಟ್‌ ಗೆ ಯಾ ಗಿಫ್ಟ್ ಕೊಡಬೇಕೆನ್ನುವುದು ಚಿಂತೆಯಾಗುತ್ತದೆ. ಗಿಫ್ಟ್ ಯಾವುದೇ ಆಗಲಿ ಚಿಕ್ಕದಾಗಲಿ, ಚೊಕ್ಕವಾಗಿರಲಿ. ಅತಿ ಹೆಚ್ಚು ಬೆಲೆ ತೆತ್ತು ತರಬೇಡಿ. ಓದುವ ಆಸಕ್ತಿಯುಳ್ಳವರಾದರೆ, ಪುಸ್ತಕ ಕೊಂಡೊಯ್ಯಬಹುದು ಅಥವಾ ಇಬ್ಬರೂ ಜೊತೆಯಾಗಿ ಶೇರ್‌ ಮಾಡುವಂತೆ ಯಾವುದಾದರೂ ಕನ್ಸರ್ಟ್‌, ಶೋ ಅಥವಾ ಪ್ಲೇ ಟಿಕೆಟ್‌ ಕೊಡಬಹುದು.

ಜಿ. ಪೂರ್ಣಿಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ