ಸಮರ್ಪಕ ಮೇಕಪ್ ಗಾಗಿ ಚರ್ಮದ ಬಣ್ಣದ ದೃಷ್ಟಿಯಿಂದ ಸರಿಯಾದ ಕಲರ್ ನ ಕಾಸ್ಮೆಟಿಕ್ಸ್ ಆರಿಸಿ. ನಿಮ್ಮ ಚರ್ಮಕ್ಕೆ ಅತ್ಯುತ್ತಮ ಗ್ಲೋ ಬರಲು ಇದನ್ನು ಹೇಗೆ ಬಳಸಬೇಕು? ಈ ಸಲಹೆ ಅನುಸರಿಸಿ :
ಮೇಕಪ್ ಮಾಡು ಹಂತಗಳು
ಪ್ರೈಮರ್, ಕನ್ಸೀಲರ್, ಫೌಂಡೇಶನ್, ಕಂಟೂರಿಂಗ್, ಹೈಲೈಟಿಂಗ್, ಕಣ್ಣಿನ ರೆಪ್ಪೆಗಳಿಗೆ ಬಣ್ಣ, ಐ ಶ್ಯಾಡೋ, ಮಸ್ಕರಾ, ಐ ಬ್ರೋಸ್, ಕೆನ್ನೆಗೆ ರಂಗು, ತುಟಿಗೆ ಬಣ್ಣ.
ವಾಟರ್ ಪ್ರೂಫ್ಮೇಕಪ್
ಬೇಸಿಗೆ ಅಥವಾ ಬಿಸಿಲು ದಟ್ಟವಾಗಿರುವ ದಿನಗಳಲ್ಲಿ ಮುಖದ ಬೆವರು ಹಾಗೂ ವಾತಾವರಣದ ಹ್ಯುಮಿಡಿಟಿ ಗಮನದಲ್ಲಿಟ್ಟು ಕೊಂಡು ಮೇಕಪ್ ಮಾಡಬೇಕಾಗುತ್ತದೆ. ಈ ಸೀಸನ್ ನಲ್ಲಿ ವಾಟರ್ ಪ್ರೂಫ್ ಮೇಕಪ್ ಮಾಡಿಕೊಳ್ಳುವುದೇ ಲೇಸು. ಆಗ ಇದು ಬಹಳ ಹೊತ್ತು ನಿಮ್ಮ ಮುಖದಲ್ಲಿ ಉಳಿಯುತ್ತದೆ ಹಾಗೂ ದಿನವಿಡೀ ನೀವು ಫ್ರೆಶ್ ಆಗಿರುತ್ತೀರಿ.
ಇದನ್ನು ಮಾಡಿಕೊಳ್ಳುವುದು ಹೇಗೆ?
ಮುಖ್ಯವಾಗಿ ಇದು ಡ್ರೈ ಸ್ಕಿನ್ ಗೆ ಬಹಳ ಹೊತ್ತಿನವರೆಗೂ ಉಳಿಯುತ್ತದೆ. ಏಕೆಂದರೆ ಇದು ಮುಖದಲ್ಲಿನ ಜಿಡ್ಡಿನಾಂಶವನ್ನು ಬೇಗ ಹೀರಿ ಕೊಳ್ಳುತ್ತದೆ. ಆದರೆ ಇದೇ ಮೇಕಪ್ ಆಯ್ಲಿ ಸ್ಕಿನ್ ಮೇಲೆ ಬಹಳ ಹೊತ್ತು ಉಳಿಯದು, ಗರಿಷ್ಠ 3-4 ಗಂಟೆ ಕಾಲ ಇರುತ್ತದೆ. ಬೇಸಿಗೆ ದಿನಗಳಲ್ಲಿ ಡ್ರೈ ಸ್ಕಿನ್ ನವರು ವಾಟರ್ ಪ್ರೂಫ್ ಮೇಕಪ್ ಮಾಡಿಕೊಂಡರೆ ಯಾವುದೇ ತೊಂದರೆ ಇರದು. ಆದರೆ ಚರ್ಮ ಜಿಡ್ಡಾಗಿದ್ದರೆ, ಆಗ ಮೇಕಪ್ ಮಾಡಲು ಈ ವಿಷಯಗಳತ್ತ ಗಮನ ಕೊಡಿ :
ನಿಮ್ಮ ಚರ್ಮ ಆಯ್ಲಿ ಆಗಿದ್ದರೆ, ಮೇಕಪ್ ಮಾಡುವ ಮೊದಲು ಹೀಟ್ ಸ್ವೆಟಿಂಗ್ ಕಡಿಮೆ ಮಾಡಲು ಐಸ್ ಉಜ್ಜಬೇಕು.
ಫೌಂಡೇಶನ್ ನ್ನು ಆದಷ್ಟು ಕಡಿಮೆ ಬಳಸಿ. ಇದರಿಂದ ಆಟೋಮೆಟಿಕಲಿ ಸ್ವೆಟಿಂಗ್ ಕಡಿಮೆ ಆಗುತ್ತದೆ, ಮೇಕಪ್ ಹೆಚ್ಚು ಹೊತ್ತಿರುತ್ತದೆ.
ಲಿಪ್ ಸ್ಟಿಕ್‌ಐ ಶ್ಯಾಡೋಗಾಗಿ ನ್ಯೂಡ್ ಶೇಡ್ಸ್ ಬಳಸಿಕೊಳ್ಳಿ. ಇದರಿಂದ ಮೇಕಪ್ ಚೆನ್ನಾಗಿ ಕಾಣಿಸುತ್ತದೆ. ಪಾರ್ಟಿಗಾಗಿ ಮೇಕಪ್ ಟಿಪ್ಸ್ ಪಾರ್ಟಿಗಾಗಿ ಡ್ರೆಸ್ ಮಾತ್ರವಲ್ಲದೆ ಮೇಕಪ್ ಕುರಿತಾಗಿಯೂ ವಿಶೇಷ ಗಮನಕೊಡಬೇಕು. ಪಾರ್ಟಿಗೆ ಹೋಗಲು ಅವಸರದಲ್ಲಿ ಧಾವಿಸಬೇಡಿ. ಒಂದು ಮೇಕಪ್ ಪ್ರಾಡಕ್ಟ್ ಸಂಪೂರ್ಣ ಒಣಗಿದ ನಂತರವೇ ಇನ್ನೊಂದನ್ನು ಹಚ್ಚಬೇಕು. ಮೇಕಪ್ ಮಾಡಿಕೊಳ್ಳುವಾಗ ಎಲ್ಲಕ್ಕಿಂತಲೂ ಮೊದಲು ಪ್ರೈಮರ್ ಹಚ್ಚಿಕೊಳ್ಳಿ. ಇದರಿಂದ ಮುಖದ ಕಲೆ ಗುರುತು ಮರೆಯಾಗುತ್ತದೆ, ಬೊಕ್ಕೆಗಳು ತುಂಬಿಕೊಳ್ಳುತ್ತವೆ, ಮೇಕಪ್ ಚೆನ್ನಾಗಿ ಹೊಳೆ ಹೊಳೆದು ಕಾಂತಿ ತುಂಬಿಕೊಳ್ಳುತ್ತದೆ.
ಪ್ರೈಮರ್ ನಂತರ ಕನ್ಸೀಲರ್ ಬಳಸಿರಿ. ಇದರಿಂದ ಮುಖದಲ್ಲಿನ ಎಲ್ಲಾ ಕೊರತೆಗಳೂ ಮರೆಯಾಗುತ್ತವೆ. ಮೇಕಪ್ ಗೆ ಒಂದು ಹೆಚ್ಚಿನ ಸ್ಟಾಂಡರ್ಡ್ ನೀಡಲು ಮುಖದ ಮೇಲೆ ಪ್ಲೆಕ್ಸಿ ಡಸ್ಟ್ ಸಿಂಪಡಿಸಿ. ಹುಬ್ಬು, ಕೆನ್ನೆಗಳ ಮೇಲೆ ಹೆಚ್ಚು ಸಿಂಪಡಿಸಿ. ಮೇಕಪ್ ಕಂಪ್ಲೀಟ್ ಆದನಂತರ ಆಗಾಗ ಅದಕ್ಕೆ ಟಚ್ ಅಪ್ ನೀಡುತ್ತಿರಿ.
ಆಫೀಸ್ ಗೆ ಹೊರಡುವ ಮುನ್ನ
ಎಷ್ಟೋ ಹೆಂಗಸರು ಆಫೀಸಿಗೆ ಹೊರಡುವಾಗ ಮೇಕಪ್ ಏಕೆ ಎನ್ನುತ್ತಾರೆ. ಕೆಲವರು ಅಗತ್ಯಕ್ಕಿಂತ ಹೆಚ್ಚಿಗೇ ಮೇಕಪ್ ಮಾಡಿಕೊಳ್ಳುತ್ತಾರೆ. ಹೀಗಾಗಿ ಆಫೀಸಿಗೆ ಹೊರಡುವಾಗ ಲೈಟ್ ಮೇಕಪ್ ಮಾಡಿಕೊಳ್ಳುವುದರಿಂದ, ನೀವು ಹೆಚ್ಚು ಆಕರ್ಷಕವಾಗಿ ಕಂಗೊಳಿಸುವಿರಿ, ಜೊತೆಗೆ ಟ್ರೆಂಡಿ ಎನಿಸುವಿರಿ. ಇದಕ್ಕಾಗಿ ಕೆಲವು ಟಿಪ್ಸ್ :
ಸದಾ ಲೈಟ್ ಮೇಕಪ್ ಇರಲಿ.
ಹೆಚ್ಚು ಥಳುಕು ಬಳುಕಿನ ಲಿಪ್ ಸ್ಟಿಕ್ ಬೇಡ.
ಐಶ್ಯಾಡೋ ಬೇಡ. ಕಾಡಿಗೆ, ಐ ಲೈನರ್ ಹಚ್ಚಿರಿ.
ಗ್ಲಿಟರ್ಸ್ ಯಾ ಸ್ಪಾರ್ಕ್ಸ್ ಬಳಸದಿರಿ.
ಕಲೆ ಗುರುತು ಮರೆಮಾಚಲು ಕನ್ಸೀಲರ್ ಹಚ್ಚಿ.
ಹೈ ಡೆಫ್ ನೇಶನ್ ಮೇಕಪ್
ಇತ್ತೀಚೆಗೆ ಹೈ ಡೆಫ್ ನೇಶನ್ ಕ್ಯಾಮೆರಾಗಳು ಹೆಚ್ಚು ಚಾಲ್ತಿಯಲ್ಲಿವೆ. ಇದರ ನೆರವಿನಿಂದ ಅತಿ ಸೂಕ್ಷ್ಮ ವಿವರಗಳು ಅಂದ್ರೆ ಸಣ್ಣ ಗೆರೆ, ಚುಕ್ಕೆ, ಸುಕ್ಕು ಇತ್ಯಾದಿ ಸಹ ಎಲ್ಲಿವೆ ಅಂತ ಗೊತ್ತಾಗಿಬಿಡುತ್ತವೆ, ಅಡಗಿಸಲಾಗದು. ಆದ್ದರಿಂದ ಇಂಥ ಮೇಕಪ್ ತೀರಾ ಅತ್ಯಗತ್ಯವಾಗಿದೆ. ಸೆಲೆಬ್ರಿಟೀಸ್ ಮಾತ್ರವಲ್ಲದೆ, ಸಾಧಾರಣ ಮಹಿಳೆಯರೂ ಸಹ ಈಗ ಈ ಮೇಕಪ್ ಗೆ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈಗ ಎಲ್ಲಾ ಖ್ಯಾತ ಕಂಪನಿಗಳ ಮೇಕಪ್ ಉತ್ಪನ್ನಗಳು ಲಭ್ಯ. ಇದರಲ್ಲಿ ಮೈಕಾ, ಸಿಲಿಕಾನ್, ಕ್ರಿಸ್ಟಲ್, ಕ್ವಾರ್ಟ್ಝ್ ಗಳಲ್ಲಿ ಯಾವುದಾದರೂ ಒಂದಾಗಿರುತ್ತದೆ. ಈ ಕಣಗಳು ಚರ್ಮದ ಅತಿ ಮೇಲು ಪದರದಲ್ಲಿ ಜಮೆಗೊಳ್ಳುತ್ತವೆ. ಹೀಗಾಗಿ ಲೈಟ್ ಕಿರಣಗಳನ್ನು ಅತಿ ಸೂಕ್ಷ್ಮವಾಗಿ ಪ್ರತಿಫಲಿಸುತ್ತವೆ. ಕೆಲವು ಮೇಕಪ್ ಉತ್ಪನ್ನಗಳಲ್ಲಿ ಮ್ಯಾಟಿಫೈಯಿಂಗ್ ಏಜೆಂಟ್ಸ್ ಕೂಡ ಇರುತ್ತವೆ. ಇದು ಆಯ್ಲಿ ಸ್ಕಿನ್ ನಲ್ಲಿ ಹೊಳಪನ್ನು ತಡೆಯುತ್ತದೆ ಹಾಗೂ ಗ್ಲೇರ್ ನಿಂದ ರಕ್ಷಿಸುತ್ತದೆ. ನಿಮ್ಮ ಚರ್ಮ ಕ್ಲಿಯರ್ ಆಗಿದ್ದರೆ ಲಿಕ್ವಿಡ್ ಫೌಂಡೇಶನ್ ಬಳಸಿರಿ. ಅಕಸ್ಮಾತ್ ಸ್ಕಿನ್ ತುಸು ಸರಿಯಿಲ್ಲ ಎನಿಸಿದರೆ ಮ್ಯಾಟ್ ಫಿನಿಶಿಂಗ್ ಬಳಸಿರಿ, ಏಕೆಂದರೆ ಇದು ತುಸು ದಪ್ಪನೆ ಪದರ ನೀಡುತ್ತದೆ.
– ಸೌರಭಾ ಕಶ್ಯಪ್
ಫೌಂಡೇಶನ್ ಬಳಕೆಯಲ್ಲಿ ಸಾಮಾನ್ಯವಾಗಿ ಜನ ತಪ್ಪು ಮಾಡುತ್ತಾರೆ. ಹೀಗಾಗಿ ಫೌಂಡೇಶನ್ ಬಳಸುವಾಗ ನಿಮ್ಮ ಸ್ಕಿನ್ ಟೋನ್ ಗೆ ತಕ್ಕಂತೆ ಆರಿಸಿ, ಆಗ ಮೇಕಪ್ ತಪ್ಪು ಆಗುವ ಸಂಭವ ತಪ್ಪುತ್ತದೆ.
ಐ ಲೈನರ್ ಗೆ ಲೈಟ್ ಸಾಫ್ಟ್ ಟಚ್ ನೀಡಿ.
ಐ ಶ್ಯಾಡೋದಲ್ಲಿ ಶಿಮರಿ ಟಚ್ ನ ಬಳಕೆ ಸಹ ಮೇಕಪ್ ಲುಕ್ಸ್ ನಲ್ಲಿ ತಾಜಾತನ ತರುತ್ತದೆ.
ನಿಮ್ಮ ಕಂಗಳು, ತುಟಿಗಳ ಮೇಕಪ್ ಗಾಗಿ ಕಾಸ್ಮೆಟಿಕ್ಸ್ ಆರಿಸುವಾಗ ಈ 3 ವಿಷಯಗಳನ್ನು ಮರೆಯದೆ ನೆನಪಿಡಿ. ಅಂದ್ರೆ ನಿಮ್ಮ ಡ್ರೆಸ್, ಸಮಯ, ಸೀಸನ್.
ಹಗಲಿನಲ್ಲಿ ಹೆಚ್ಚು ಗ್ಲಿಟರ್ ಬಳಸುವುದನ್ನು ತಪ್ಪಿಸಿ.
ಕಲರ್ಡ್ ಕಾಸ್ಮೆಟಿಕ್ಸ್ ಬಳಸುವ ಮೊದಲು ಮುಖದ ಮೇಲೆ ಫೌಂಡೇಶನ್ನಿನ ಬೇಸ್ ಸಿದ್ಧಪಡಿಸಿ.
ಲಿಪ್ ಸ್ಟಿಕ್ ಹರಡದಿರಲು ಲಿಪ್ ಪೆನ್ಸಿಲ್ ಬಳಸಿರಿ.
ಲಿಪ್ ಸ್ಟಿಕ್ ಹೆಚ್ಚು ಹೊತ್ತು ಉಳಿಯಲು ಅದನ್ನು ಬ್ರಶ್ ನಿಂದ ಹಚ್ಚಿರಿ.
ವಾಟರ್ ಪ್ರೂಫ್ ಮೇಕಪ್ ಪ್ರಾಡಕ್ಟ್ಸ್ ಬಳಸಿ ನೀವು ಹೆಚ್ಚು ಹೊತ್ತು ಬ್ಯೂಟಿಯಾಗಿ ಕಾಣಬಲ್ಲಿರಿ.