ಪ್ರ : ನಾನು 25ರ ಯುವತಿ. ನನ್ನ ಮುಖದ ಮೇಲೆ ಅಲ್ಲಲ್ಲಿ ಬಿಳಿ ಕಲೆಗಳಾಗಿವೆ. ಇವನ್ನು ಲೇಸರ್ ಕಿರಣಗಳಿಂದ ಶಾಶ್ವತವಾಗಿ ಸರಿಪಡಿಸಲು ಸಾಧ್ಯವೇ?
ಉ : ನಿಮ್ಮ ಪತ್ರದಲ್ಲಿ ನೀವು ಬಿಳಿಯ ಕಲೆಗಳು ಯಾವ ಪ್ರಕಾರದ್ದು ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ ನನ್ನ ಸಲಹೆ ಎಂದರೆ, ನಿಮ್ಮ ಈ ಕಲೆಗಳು ಲ್ಯೂಕೋಡರ್ಮಾ (ತೊನ್ನು)ಗೆ ಸಂಬಂಧಿಸಿದ್ದರೆ, ಅದರ ಸ್ಪೆಷಲಿಸ್ಟ್ ಬಳಿ ತೋರಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ. ಅದಾದ ಮೇಲೆ ನೀವು ಆ ಕಲೆಗಳನ್ನು ಪರ್ಮನೆಂಟ್ ಮೇಕಪ್ ನಿಂದ ಕಲರ್ ಮಾಡಿಸಬಹುದು.
ಅಕಸ್ಮಾತ್ ನಿಮ್ಮ ಈ ಕಲೆಗಳು ಪೆಟ್ಟಿನ ಕಾರಣ ಅಥವಾ ಸುಟ್ಟ ಗಾಯದಿಂದಾಗಿದ್ದರೆ, ಲೇಸರ್ ಕಿರಣದ ಥೆರಪಿ ಯಶಸ್ವಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಲೇಸರ್ ಟೆಕ್ನಿಕ್ ನಿಂದ ಪ್ರಭಾವಿತ ಭಾಗದ ಮೇಲೆ ಮೆಲೆನಿನ್ ಪಿಗ್ಮೆಂಟ್ ಕಲ್ಚರ್ ಮಾಡಲಾಗುತ್ತದೆ, ಹಾಗಾಗಿ ಆ ಭಾಗದ ಚರ್ಮ ಡಾರ್ಕ್ ಆಗುತ್ತದೆ. ಲೇಸರ್ ಚಿಕಿತ್ಸೆ ಪಡೆದ 4 ವಾರಗಳ ಒಳಗೆ ಚರ್ಮದಲ್ಲಿ ವಾಸ್ತವಿಕ ಬಣ್ಣ ಬರಲು ಆರಂಭಿಸುತ್ತದೆ ಹಾಗೂ ಇಡೀ ಬಿಳಿ ಭಾಗಗಳನ್ನು ಸರಿಪಡಿಸಲು 3-4 ತಿಂಗಳು ಬೇಕಾಗುತ್ತದೆ.
ಪ್ರ : ನಾನು 21 ವರ್ಷದ ಯುವತಿ. ನನ್ನ ದೇಹದಲ್ಲಿ ಅಲ್ಲಲ್ಲಿ ಗಂಟುಗಳಾಗಿವೆ. ಹೋಮಿಯೋಪತಿ ಹಾಗೂ ಆಯುರ್ವೇದಿಕ್ ಎರಡೂ ಬಗೆಯ ಔಷಧಿ ತೆಗೆದುಕೊಂಡರೂ ಏನೂ ಲಾಭವಿಲ್ಲ. ನಾನು ಬಹಳ ಚಿಂತೆಯಲ್ಲಿದ್ದೇನೆ. ದಯವಿಟ್ಟು ಏನಾದರೂ ಪರಿಹಾರ ತಿಳಿಸುವಿರಾ?
ಉ : ದೇಹದ ಯಾವುದೇ ಭಾಗದಲ್ಲಿ ಏಳಬಹುದಾದ ಗಂಟುಗಳು ಒಂದು ಅಸಾಮಾನ್ಯ ಲಕ್ಷಣಗಳಾಗಿವೆ, ಇವನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಹೆಚ್ಚುಕಡಿಮೆ ಎಲ್ಲಾ ಗಂಟುಗಳೂ ಆರಂಭದಲ್ಲಿ ನೋವುರಹಿತ ಆಗಿರುತ್ತವೆ. ಹೀಗಾಗಿ ಹೆಚ್ಚಿನ ಜನ ಇದರ ಬಗ್ಗೆ ಮಾಹಿತಿ ಇಲ್ಲದೆ ಅಥವಾ ಆಪರೇಷನ್ ಭಯದಿಂದಾಗಿ ವೈದ್ಯರ ಬಳಿ ಹೋಗುವುದೇ ಇಲ್ಲ.
ಈ ಗಂಟುಗಳು ಪಸ್ ಯಾ ಟಿಬಿ ಕಾಯಿಲೆಯಿಂದ ಕ್ಯಾನ್ಸರ್ ವರೆಗೆ ಯಾವುದೇ ರೋಗದ ಮುನ್ಸೂಚನೆ ಆಗಿರಬಹುದು. ಹೀಗಾಗಿ ಎಲ್ಲಕ್ಕೂ ಮೊದಲು ಈ ಗಂಟುಗಳನ್ನು ವೈದ್ಯರಿಗೆ ತೋರಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಸಾಧಾರಣ ಗಂಟುಗಳು ಕ್ಯಾನ್ಸರ್‌ಗೆಡ್ಡೆಗಳಾಗದೇ ಇರಬಹುದು, ಆದರೆ ಇವುಗಳ ಚಿಕಿತ್ಸೆಯನ್ನು ಅಗತ್ಯವಾಗಿ ಮಾಡಿಸಲೇಬೇಕು. ಹೀಗಾಗಿ ಉತ್ತಮ ವೈದ್ಯರಿಗೆ ತೋರಿಸಿ, ಅವರ ಸಲಹೆ ಪ್ರಕಾರ ಚಿಕಿತ್ಸೆ ಪಡೆದುಕೊಳ್ಳಿ.
ಪ್ರ : ನಾನು 18ರ ತರುಣಿ. ನಾನು ಯಾವಾಗಲೂ ಕೂದಲಿಗೆ ಹೇರ್ ಜೆಲ್ ಹಚ್ಚುತ್ತೇನೆ. ಈಗ ನನ್ನ ಕೂದಲು ಬಲು ಟೈಟ್ ಆಗಿದೆ, ಸಿಕ್ಕು ಸಿಕ್ಕಾಗಿದೆ. ನನ್ನ ಕೂದಲಿನ ಈ ಡ್ರೈನೆಸ್ ಕಳೆಯಲು ಏನಾದರೂ ಮನೆಮದ್ದು ತಿಳಿಸಿ.
ಉ : ನಿಮ್ಮ ಕೂದಲನ್ನು ತೊಳೆಯಲು ಪ್ರತಿ ಸಲ ಶ್ಯಾಂಪೂ ವಿತ್ ಕಂಡೀಶನರ್ ಬಳಸಿಕೊಳ್ಳಿ. ಜೊತೆಗೆ ಎಕ್ಸ್ ಟ್ರಾ ಕ್ರೀಮೀ ಕಂಡೀಶನರ್ ಸಹ ಬಳಸಿರಿ. 2-3 ನಿಮಿಷಗಳ ನಂತರ ತಲೆ ತೊಳೆಯಿರಿ. ಇದರಿಂದ ಕೂದಲಿನ ಶುಷ್ಕತನ ಎಷ್ಟೋ ಕಡಿಮೆ ಆಗುತ್ತದೆ. ಹೀಗಾಗಿಯೂ ಕೂದಲು ಸಾಫ್ಟ್ ಆಗದಿದ್ದರೆ, ಲಿವೈನ್ ಕಂಡೀಶನರ್ ನ ಕೆಲವು ಹನಿಗಳನ್ನು ಹಚ್ಚಿಕೊಳ್ಳಿ.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಮಾಯಿಶ್ಚರೈಸಿಂಗ್ ಸ್ಪ್ರೇ ಲಭ್ಯವಿದೆ. ಇದನ್ನು ಬಳಸಿ ನೀವು ಕೂದಲನ್ನು ಸ್ಮೂತಾಗಿ ಮಾಡಿಕೊಳ್ಳಬಹುದು. ಮನೆಯಲ್ಲೇ ಕಂಡೀಶನರ್ ತಯಾರಿಸಲು, 1 ಮಾಗಿದ ಬಾಳೆಹಣ್ಣಿಗೆ 3-4 ದೊಡ್ಡ ಚಮಚ ಹಾಲು, ತುಸು ಮೊಸರು ಬೆರೆಸಿ, ಜೊತೆಗೆ 1 ಚಮಚ ಆಲಿವ್ ಆಯಿಲ್, ಜೇನುತುಪ್ಪ ಸಹ ಬೆರೆಸಿ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ. ಇದನ್ನು ತಲೆಗೂದಲಿಗೆ ಹಚ್ಚಿ ಅರ್ಧ ಗಂಟೆ ಒಣಗಲು ಬಿಟ್ಟು, ನಂತರ ತೊಳೆಯಿರಿ.
ಪ್ರ : ನನ್ನ ಕೂದಲು ಕರ್ಲಿ ಕರ್ಲಿ ಆಗಿದೆ. ಇದು ನೋಡಲು ಏನೇನೂ ಚೆನ್ನಾಗಿಲ್ಲ. ಏನಾದರೂ ಹೊಸ ಸ್ಟೈಲ್ ಮಾಡೋಣ ಎಂದರೂ ಆಗುತ್ತಿಲ್ಲ. ಇದನ್ನು ಸ್ಟ್ರೇಟ್ ಮಾಡಿಸುವ ಉಪಾಯ ತಿಳಿಸಿ.
ಉ : ಪರ್ಮನೆಂಟ್ ಸ್ಟ್ರೇಟ್ ನಿಂಗ್ ಮಾಡುವುದೊಂದೇ ನಿಮ್ಮ ಸಮಸ್ಯೆಗೆ ಪರಿಹಾರ. ಕರ್ಲಿ ಕೂದಲನ್ನು ಟೆಂಪರರಿ ಸ್ಟ್ರೇಟ್ ನಿಂಗ್ ಮಾಡಿಸುವುದರಿಂದ, ಅದನ್ನು ಪ್ರತಿದಿನ ಮಾಡಿಸುತ್ತಾ ಇರಬೇಕಾಗುತ್ತದೆ. ಈ ಕಾರಣದಿಂದಾಗಿ ಕೂದಲಿಗೆ ಮತ್ತೆ ಮತ್ತೆ ಹೀಟ್ ತಗುಲುವುದರಿಂದ ಅದು ಹಾಳಾಗಬಹುದು. ಆದರೆ ಪರ್ಮನೆಂಟ್ ಸ್ಟ್ರೇಟ್ ನಿಂಗ್ ನಲ್ಲಿ ಬಳಸುವ ಪ್ರಾಡಕ್ಟ್ ಕೂದಲಿಗೆ ಪೋಷಕಾಂಶ ಒದಗಿಸುತ್ತದೆ. ಕೂದಲು ದೀರ್ಘ ಕಾಲ ಸ್ಟ್ರೇಟ್ ಆಗಿರುವುದರ ಜೊತೆ ಬ್ಯೂಟಿಫುಲ್ ಆಗಿರುತ್ತದೆ.




 
  
         
    




 
                
                
                
                
                
                
               