ಪ್ರ : ನಾನು 23 ವರ್ಷದ ಯುವತಿ. ನಾನು ಮದುವೆಯ ಹಲವು ಕನಸುಗಳನ್ನು ಹೊತ್ತು ಅತ್ತೆ ಮನೆಗೆ ಬಂದೆ. ಆದರೆ ಅತ್ತೆ ಮನೆಯ ವಾತಾವರಣ ನನಗೆ ಸ್ವಲ್ಪ ಇಷ್ಟವಾಗಲಿಲ್ಲ. ಅತ್ತೆ ಮಾತು ಮಾತಿಗೂ ನನ್ನನ್ನು ಟೀಕಿಸುತ್ತಿರುತ್ತಾರೆ. `ನೀನೀಗ ಮದುವೆಯಾಗಿರಿ. ನೀನು ಗಂಡನಿಗೆ ತಕ್ಕಂತೆ ಇರಬೇಕು,' ಎಂದು ಹೇಳುತ್ತಿರುತ್ತಾರೆ. ಹೀಗಾಗಿ ನನಗೆ ಬಹಳ ಬೇಸರವಾಗುತ್ತದೆ. ನಾನೇನು ಮಾಡಬೇಕು ತಿಳಿಸಿ.

ಉ : ನಿಮ್ಮ ಅತ್ತೆಯ ಮೂಡ್‌ ಆಗಾಗ ಬದಲಾಗುತ್ತಿರುತ್ತದೆ ಎಂದಾದರೆ, ಎಲ್ಲಕ್ಕೂ ಮುಂಚೆ ನೀವು ಅವರನ್ನು ತಿಳಿದುಕೊಳ್ಳಲು ಪ್ರಯತ್ನ ಪಡಬೇಕು. ನಿಮ್ಮನ್ನು ನೀವು ಶಪಿಸಿಕೊಳ್ಳುವುದು ಹಾಗೂ ಅತ್ತೆಯ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಸರಿಯಲ್ಲ. ಕುಟುಂಬದ ಜವಾಬ್ದಾರಿಯ ಒತ್ತಡದಲ್ಲಿ ಅವರು ಒಮ್ಮೊಮ್ಮೆ ಹೀಗೆ ಮಾತನಾಡುತ್ತಿರಬಹುದು. ಇದರರ್ಥ ಅವರಿಗೆ ನಿಮ್ಮ ಬಗ್ಗೆ ಪ್ರೀತಿಯೇ ಇಲ್ಲ ಎಂದಲ್ಲ.

ಎರಡನೇ ಸಂಗತಿ, ನಿಮ್ಮ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಹಾಗೂ ಬೇಡಿಕೆ ಈಡೇರಿಸಿಕೊಳ್ಳಲೆಂದೇ ಮದುವೆಯಾಗಿದ್ದೇನೆ ಎಂದು ನೀವು ಯೋಚಿಸುತ್ತಿದ್ದರೆ, ಅದು ತಪ್ಪು ಯೋಚನೆ. ನಿಮ್ಮ ಯಾವುದೊ ಒಂದು ಬೇಡಿಕೆಗೆ ಒಪ್ಪಿಲ್ಲವೆಂದರೆ, ಅವರು ನಿಮ್ಮನ್ನು ಅಮಾನಿಸುತ್ತಿದ್ದಾರೆ ಎಂದಲ್ಲ.

ಇಂದಿನ ಆಧುನಿಕ ಅತ್ತೆಯವರು ಆಧುನಿಕ ವಿಚಾರ ಹಾಗೂ ಕುಟುಂಬ ಜವಾಬ್ದಾರಿಯನ್ನು ಸ್ಮಾರ್ಟ್‌ ಆಗಿ ಬಗೆಹರಿಸುವ ಸಾಮರ್ಥ್ಯ ಹೊಂದಿದ್ದಾರೆ. ಒಬ್ಬ ಸೊಸೆಗೆ ಮಗಳಂತೆ ನೋಡಿಕೊಳ್ಳುತ್ತ ಕುಟುಂಬವನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಲು ಅವರು ಈಗಿನಿಂದಲೇ ನಿಮಗೆ ತರಬೇತಿ ಕೊಡುತ್ತಿರಬಹುದು.

ನೀವು ಆ ಮನೆಗೆ ಸೊಸೆಯಲ್ಲ, ಮಗಳಾಗಿ ನೋಡಿ. ಅವರ ಜೊತೆ ಹೆಚ್ಚೆಚ್ಚು ಸಮಯ ಕಳೆಯಿರಿ. ಅವರೊಂದಿಗೆ ಸುತ್ತಾಡಲು ಹೋಗಿ, ಶಾಪಿಂಗ್‌ ಮಾಡಿಕೊಂಡು ಬನ್ನಿ. ನೀವು ಮನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತೀರಿ ಎಂದು ಖಾತ್ರಿಯಾದರೆ ಅವರು ಮನೆಯ ಜವಾಬ್ದಾರಿಯನ್ನು ನಿಮಗೆ ವಹಿಸಿ ಕೊಡುತ್ತಾರೆ.

ಪ್ರ : ನಾನು ಕಾಲೇಜು ಸಮಯದಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಆದರೆ ಎಂದೂ ಅವನ ಮುಂದೆ ಪ್ರೀತಿಯನ್ನು ಹೇಳಿಕೊಳ್ಳಲು ಆಗಲಿಲ್ಲ. ಬಳಿಕ ನನಗೆ ಮನೆಯವರು ಬೇರೆ ಒಬ್ಬ ಹುಡುಗನನ್ನು ನೋಡಿ ಮದುವೆ ಮಾಡಿದರು. ಗಂಡ ನನ್ನ ಬಗ್ಗೆ ಕೇರ್ಮಾಡುತ್ತಾರೆ. ಹೀಗಾಗಿ ನನ್ನ ಜೀವನದಲ್ಲಿ ನಾನು ಬಹಳ ಖುಷಿಯಿಂದಿದ್ದೆ. ಆದರೆ ಇತ್ತೀಚೆಗೆ ಒಂದು ದಿನ ನನ್ನ ಜೀವನದಲ್ಲಿ ಬಿರುಗಾಳಿ ಎದ್ದಿತು. ಅದೊಂದು ದಿನ ಫೇಸ್ಬುಕ್ನಲ್ಲಿ ಹುಡುಗನ ಮೆಸೇಜ್ಬಂತು. ಅವನು ನನ್ನ ಜೊತೆಗೆ ಮಾತಾಡಲು ಇಚ್ಛಿಸಿದ. ನನಗೆ ನನ್ನ ಮನಸ್ಸಿನಲ್ಲಿ ಹುದುಗಿದ್ದ ಪ್ರೀತಿ ಮತ್ತೆ ಜಾಗೃತಾಯಿತು. ನಾನು ತಕ್ಷಣವೇ ಅವನ ಮೆಸೇಜ್ಗೆ ಉತ್ತರಿಸಿಬಿಟ್ಟೆ. ಫೇಸ್ಬುಕ್ನಲ್ಲಿ ನನ್ನ ಮತ್ತು ಅವನ ಸ್ನೇಹ ಉತ್ತುಂಗಕ್ಕೇರತೊಡಗಿತು. ಬಿಡುವಿನ ವೇಳೆಯಲ್ಲಿ ನಾನು ಅವನ ಜೊತೆಗೆ ಹರಟುತ್ತಿದೆ. ಕ್ರಮೇಣ ನಮ್ಮಿಬ್ಬರ ನಡುವಿನ ಸಂಕೋಚದ ಎಲ್ಲೆಗಳು ಮೀರತೊಡಗಿದ. ಅದೊಂದು ದಿನ ಅವನು ನನಗೆ ಏಕಾಂಗಿಯಾಗಿ ಭೇಟಿಯಾಗಲು ಹೇಳಿದ. ಅವನ ಉಪಾಯ ಏನಿರಬಹುದು? ಎಂದು ನನಗೆ ಗೊತ್ತು. ಆದರೆ ನನ್ನ ಒಳಮನಸ್ಸು ಅವನ ಜೊತೆ ಹೆಜ್ಜೆ ಹಾಕಲು ಪ್ರೇರೇಪಿಸುತ್ತಿದೆ. ನಾನು ಏನು ಮಾಡಬೇಕು ತಿಳಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ