ನನ್ನ ಮದುವೆಗೆ ಮೊದಲಿನಿಂದಲೂ ಅತ್ತೆ ಬಗ್ಗೆ ಏನೇನೋ ಅಂತೆ, ಕಂತೆ ವಿಚಾರಗಳನ್ನು ತುಂಬಿ ತುಂಬಿ, ಅತ್ತೆ ಎಂದರೆ ಸೊಸೆಯ ಎಲ್ಲಾ ಕೆಲಸಗಳಲ್ಲೂ ಸದಾ ಲೋಪದೋಷ ಹುಡುಕುವವರು ಎಂದಾಗಿ ಹೋಗಿತ್ತು. ಆದರೆ ನಾನು ಮದುವೆ ಆಗಿ ಗಂಡನ ಮನೆಗೆ ಹೋದಾಗ ಆದಾಗಲೇ ನನ್ನ ಅತ್ತೆ ತೀರಿಕೊಂಡು 3 ವರ್ಷ ಆಗಿಹೋಗಿತ್ತು. ಹೀಗಾಗಿ ನನಗೆ ಅತ್ತೆ ಮನೆಯಲ್ಲಿ ಜೋರು ಮಾಡುವವರು ಯಾರೂ ಇರಲಿಲ್ಲ.

ಹೀಗೆ ಒಮ್ಮೆ ನಾವು ನನ್ನ ಹಿರಿಯ ನಾದಿನಿಯ ಮನೆಗೆ ಹೋದೆವು. ಅವರದು ಒಟ್ಟು ಕುಟುಂಬದ ಮನೆ. ಅದೇಕೋ ಏನೋ, ಆಕೆ ತುಸು ಟೆನ್ಶನ್‌ ನಲ್ಲಿ ಇರುವಂತೆ ಡಲ್ ಆಗಿದ್ದರು. ಎಲ್ಲೂ ಏನೂ ಎಡವಟ್ಟು ಆಗಬಾರದು ಎಂಬಂತೆ ಎಚ್ಚರಿಕೆಯಿಂದ ಕೆಲಸಗಳು ನಡೆಯುತ್ತಿದ್ದವು.

ಅಲ್ಲಿಗೆ ಹೋದ ಮಾರನೇ ದಿನವೇ ನನಗೆ ತೀವ್ರ ಜ್ವರ ಕಾಡಿತು. ಅದು ಸರಿಹೋಗಲು 2-3 ದಿನ ಬೇಕಾಯಿತು. ನನ್ನ ನಾದಿನಿಯ ಅತ್ತೆ ತಾವೇ ಮುಂದೆ ನಿಂತು, ಮಗಳಂತೆ ನನ್ನನ್ನು ಉಪಚರಿಸುತ್ತಾ, ಹೊತ್ತು ಹೊತ್ತಿಗೆ ಮಾತ್ರೆ, ಔಷಧಿ, ಕಷಾಯ, ಗಂಜಿ ಕೊಟ್ಟು ನೋಡಿಕೊಂಡರು.

ಅಲ್ಲಿಂದ ಹೊರಡುವಾಗ ಅವರ ಕಾಲಿಗೆ ಎರಗಿ ನಮಸ್ಕರಿಸುವಾಗ, ಅರಿಯದೆ ನನ್ನ ಕಣ್ಣಿನಿಂದ ಆನಂದಾಶ್ರು ಉದುರಿತು. ಅತ್ತೆ ಕುರಿತಾಗಿ ನನ್ನ ಮನದಲ್ಲಿದ್ದ ಅಭಿಪ್ರಾಯ ಮರೆಯಾಗಿ, ತಾಯಿ ಇದ್ದರೆ ತವರು, ಅತ್ತೆ ಇದ್ದರೆ ಗಂಡನ ಮನೆ ಹೆಚ್ಚು ಎಂಬ ಭಾವನೆ ಮೂಡಿತು.

- ಪೂರ್ಣಿಮಾ, ಮೈಸೂರು.

ಕಳೆದ ಆಗಸ್ಟ್ 8ನೇ ತಾರೀಕು ನನ್ನ ತಂಗಿಯ ಮದುವೆ ಬೆಂಗಳೂರಿನಲ್ಲಿ ನಡೆಯಿತು. 9ನೇ ತಾರೀಕು ಅವಳನ್ನು ಅತ್ತೆಮನೆಯಲ್ಲಿ ಬಿಟ್ಟು, ಬೀಗರ ಔತಣ ಮುಗಿಸಿಕೊಂಡು ತುಮಕೂರಿನ ನಮ್ಮ ಮನೆಗೆ ಹೊರಟೆ. ದುರಾದೃಷ್ಟವಶಾತ್‌ 10ನೇ ತಾರೀಕು ನನ್ನ ತಂಗಿಯ ಮಾವನವರು ಹೃದಯಾಘಾತದಿಂದ ತೀರಿಕೊಂಡ ಶಾಕಿಂಗ್‌ ನ್ಯೂಸ್‌ ಬಂತು.

ಈ ಘಟನೆಯಿಂದ ಮದುವೆ ಮನೆಯಲ್ಲಿದ್ದ ಎಲ್ಲರ ಉತ್ಸಾಹ, ಸಂತೋಷ ಅಡಗಿಹೋಯಿತು. ಅವರ ಅಂತಿಮ ದರ್ಶನಕ್ಕಾಗಿ ಮತ್ತೆ ನಾವೆಲ್ಲ ತಕ್ಷಣ ಕಾರಿನಲ್ಲಿ ಬೆಂಗಳೂರಿಗೆ ಹೊರಟೆ.

ಮಾನಸಿಕ ಆಘಾತ ಒಂದು ಕಡೆ, ಇದೀಗ ತಾನೇ ತಂಗಿಯನ್ನು ಆ ಮನೆಗೆ ಸೊಸೆಯಾಗಿ ಕಳುಹಿಸಿ ಕೊಟ್ಟಿದ್ದೀವಿ. ಸೊಸೆ ಬಂದ ಘಳಿಗೆ ಸರಿ ಇಲ್ಲ, ಅತ್ತೆಯ ಮುತ್ತೈದೆತನ ಹೋಯಿತು ಎಂದೆಲ್ಲ ಅವಳ ಕಾಲ್ಗುಣದ ಬಗ್ಗೆ ಏನು ಹೇಳುತ್ತಾರೋ ಎಂಬ ಆತಂಕ ನಮ್ಮೆಲ್ಲರನ್ನೂ ಕಾಡುತ್ತಿತ್ತು. ಹೀಗೆಂದು ಆರೋಪ ಹೊರಿಸಲು ಯಾವ ಆಧಾರ ಇಲ್ಲ. ಆದರೆ ಆ ಮನೆಯವರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲ ನಿಂತಿತ್ತು.

ಆದರೆ ನಾವು ಅಲ್ಲಿ ತಲುಪಿದ ಮೇಲೆ ಯಾರೂ ಈ ವಿಚಾರ ಎತ್ತಲೇ ಇಲ್ಲ, ಇದರ ಪ್ರಸ್ತಾಪ ಬರಲೇ ಇಲ್ಲ. ಯಾಕಾದರೂ ಈ ವಿಚಾರ ನಮಗೆ ಹೊಳೆಯಿತೋ ಎಂದು ಬೇಸರ ಪಟ್ಟುಕೊಂಡೆ. ನಮ್ಮ ಮನೆಯವರೊಂದಿಗೆ, ಆ ಮನೆ ಜನ ಯಾರೂ ಒರಟಾಗಿ ನಡೆದುಕೊಳ್ಳಲಿಲ್ಲ, ನಮ್ಮನ್ನು ಅನಾದರಿಸಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ