ಪ್ರೋಟೀನ್‌’ ಇದು ದೇಹದಲ್ಲಿ ಸ್ನಾಯುಗಳು, ಅಂಗಗಳು, ಚರ್ಮ, ಕಿಣ್ವಗಳು ಹಾರ್ಮೋನು ಮುಂತಾದವು ರೂಪುಗೊಳ್ಳಲು ಅತ್ಯವಶ್ಯ. ಈ ಚಿಕ್ಕ ಕಣಗಳು ನಮ್ಮ ದೇಹದಲ್ಲಿ ಮಹತ್ವದ ಕೆಲಸ ಮಾಡುತ್ತವೆ.

ನಮ್ಮ ದೇಹದಲ್ಲಿ ಸುಮಾರು 20 ಪ್ರಕಾರದ ಅಮೈನೊ ಆ್ಯಸಿಡ್‌ ಗಳು ಇರುತ್ತವೆ. ಅವುಗಳಲ್ಲಿ 8 ಅತ್ಯಂತ ಅತ್ಯವಶ್ಯಕ ಅಮೈನೊ ಆ್ಯಸಿಡ್‌ ಗಳೆಂದು ಕರೆಯಲ್ಪಡುತ್ತವೆ. ಹೀಗಾಗಿ ಅವನ್ನು ಆಹಾರದ ಮುಖಾಂತರ ಸೇವಿಸುವುದು ಅತ್ಯವಶ್ಯ. ಉಳಿದವು ಶೇ.12ರಷ್ಟು ಅಮೈನೊ ಆ್ಯಸಿಡ್‌ ಗಳು ಅವಶ್ಯಕವಲ್ಲದ್ದು ಎಂದು ಹೇಳಬಹುದಾಗಿದೆ. ಏಕೆಂದರೆ ನಮ್ಮ ದೇಹ ಸ್ವತಃ ಇನ್ನು ಉತ್ಪಾದಿಸುತ್ತವೆ. ಪ್ರೋಟೀನ್‌ ಚಿಕ್ಕ ಅಣುಗಳಿಂದ ರೂಪುಗೊಳ್ಳುತ್ತದೆ. ಅದನ್ನು `ಅಮೈನೊ ಆ್ಯಸಿಡ್‌’ ಗಳೆಂದು ಕರೆಯಲಾಗುತ್ತದೆ. ಈ ಅಮೈನೊ ಆ್ಯಸಿಡ್‌ ಗಳು ಪರಸ್ಪರ ಸೇರಿಕೊಂಡು ಪ್ರೋಟೀನ್‌ ಸರಪಳಿಯನ್ನು ಸೃಷ್ಟಿಸುತ್ತವೆ.

ಪ್ರೋಟೀನ್‌ ಒಳಗೊಂಡ ಆಹಾರ ಪಚನ ಮಾಡಿಕೊಳ್ಳಲು ದೇಹಕ್ಕೆ ಹೆಚ್ಚಿನ ಎನರ್ಜಿ ಬೇಕಾಗುತ್ತದೆ. ಹೀಗಾಗಿ ಪ್ರೋಟೀನ್‌ ನ್ನು ಪಚನ ಮಾಡುವ ಸಂದರ್ಭದಲ್ಲಿ ದೇಹದಲ್ಲಿ ಜಮೆಗೊಂಡ ಕ್ಯಾಲೋರಿ (ಕೊಬ್ಬು ಹಾಗೂ ಕಾರ್ಬೋಹೈಡ್ರೇಟ್‌) ಬರ್ನ್‌ ಆಗುತ್ತದೆ. ಈ ರೀತಿಯಲ್ಲಿ ಪ್ರೋಟೀನ್‌ ಸೇವನೆ ಮಾಡುವುದರಿಂದ ದೇಹದ ತೂಕ ಸಾಮಾನ್ಯವಾಗಿರುತ್ತದೆ.

ನೀವು ಸಸ್ಯಾಹಾರಿಯಾಗಿದ್ದರೆ ನಿಮಗೆ ಪ್ರೋಟೀನ್‌ ಅವಶ್ಯಕತೆ ಪೂರೈಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಇದೇ ಕಾರಣದಿಂದ ಸಸ್ಯಾಹಾರಿಗಳಲ್ಲಿ ಪ್ರೋಟೀನ್‌ ಕೊರತೆ ಉಂಟಾಗುತ್ತದೆ.

ವ್ಯಕ್ತಿಗೆ ಪ್ರೋಟೀನ್ಎಷ್ಟು ಅಗತ್ಯ?

ಪ್ರತಿಯೊಬ್ಬ ವ್ಯಕ್ತಿಗೂ ತನ್ನ ದೇಹಕ್ಕನುಗುಣವಾಗಿ ಪ್ರೋಟೀನ್‌ ಅವಶ್ಯಕತೆ ಉಂಟಾಗುತ್ತದೆ. ಅದು ವ್ಯಕ್ತಿಯ ಎತ್ತರ ಹಾಗೂ ತೂಕವನ್ನು ಅವಲಂಬಿಸಿರುತ್ತದೆ. ಸೂಕ್ತ ಪ್ರಮಾಣದಲ್ಲಿ ಪ್ರೋಟೀನ್‌ ಸೇವನೆ ಹಲವು ಸಂಗತಿಗಳನ್ನು ಆಧರಿಸಿರುತ್ತದೆ. ನೀವು ಎಷ್ಟು ಕ್ರಿಯಾಶೀಲರಾಗಿದ್ದೀರಿ, ನಿಮ್ಮ ವಯಸ್ಸು ಎಷ್ಟು ಹಾಗೂ ನಿಮ್ಮ ಮಸಲ್ ಮಾಸ್‌ ಎಷ್ಟಿದೆ? ನಿಮ್ಮ ಆರೋಗ್ಯ ಹೇಗಿದೆ? ಈ ಎಲ್ಲ ಸಂಗತಿಗಳನ್ನು ಅವಲಂಬಿಸಿರುತ್ತದೆ.

ನಿಮ್ಮ ತೂಕ ಸಾಮಾನ್ಯವಾಗಿದ್ದರೆ, ನೀವು ಹೆಚ್ಚು ತೂಕ ಎತ್ತುವುದಿಲ್ಲವೆಂದರೆ ನಿಮಗೆ ಸರಾಸರಿ 0.36-0.6 ಗ್ರಾಂ ಪ್ರತಿ ಪೌಂಡ್‌(0.81.3 ಗ್ರಾಂ ಪ್ರತಿ ಕಿಲೋ ತೂಕ) ಪ್ರೋಟೀನ್‌ ಅವಶ್ಯಕತೆ ಇರುತ್ತದೆ. ಸಾಮಾನ್ಯವಾಗಿ ಪುರುಷರಿಗೆ 56-91 ಗ್ರಾಂ ಪ್ರತಿದಿನ ಹಾಗೂ ಮಹಿಳೆಯರಿಗೆ ಸರಾಸರಿ 46-75 ಪ್ರತಿದಿನ.

ಪ್ರೋಟೀನ್ ಕೊರತೆ ಏಕೆ?

ಪ್ರೋಟೀನ್‌ ನ ಕೊರತೆ ಅತಿಯಾಗಿ ಉಂಟಾದರೆ ದೇಹದಲ್ಲಿ ಹಲವು ರೀತಿಯ ಬದಲಾವಣೆ ಉಂಟಾಗುತ್ತದೆ. ಇದರ ಕೊರತೆ ದೇಹದ ಪ್ರತಿಯೊಂದು ಕೆಲಸದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ 13 ಲಕ್ಷಣಗಳು ನೀವು ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್‌ ನ್ನು ಸೇವನೆ ಮಾಡುತ್ತಿಲ್ಲ ಎಂಬುದನ್ನು ತೋರಿಸುತ್ತವೆ.

ತೂಕದಲ್ಲಿ ಕೊರತೆ : ಪ್ರೋಟೀನ್‌ ಕೊರತೆಯಲ್ಲಿ 2 ಪ್ರಕಾರಗಳಿವೆ.

ಮೊದಲನೆಯದು ಕ್ವಾಶಿಯೋರ್‌ ಕೋರ್‌, ನೀವು ಕ್ಯಾಲೋರಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುತ್ತಿದ್ದೀರಿ. ಆದರೆ ನಿಮ್ಮ ಆಹಾರದಲ್ಲಿ ಪ್ರೋಟೀನ್‌ ನ ಕೊರತೆ ಇದೆ.

ಎರಡನೆಯದು ಮರ್ಯಾರ್ಮಸ್‌. ನೀವು ನಿಮ್ಮ ಆಹಾರದಲ್ಲಿ ಕ್ಯಾಲೋರಿ ಮತ್ತು ಪ್ರೋಟೀನ್‌ ಎರಡನ್ನೂ ಸೂಕ್ತ ಪ್ರಮಾಣದಲ್ಲಿ ಸೇವಿಸದೇ ಇದ್ದಾಗ ಈ ಸ್ಥಿತಿ ಉಂಟಾಗುತ್ತದೆ.

ನೀವು ಪ್ರೋಟೀನ್‌ ನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸದೇ ಇರುವುದರ ಅರ್ಥ ನೀವು ಸೇವಿಸುವ ಆಹಾರ ಸಮತೋಲನದಿಂದ ಕೂಡಿಲ್ಲ. ನಿಮ್ಮ ಆಹಾರದಲ್ಲಿ ಕ್ಯಾಲೋರಿ ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಇರಬಹುದು. ಇಲ್ಲದಿದ್ದರೆ, ಅದು ನಿಮ್ಮ ದೇಹದ ಪ್ರೋಟೀನ್‌ ನ್ನು ಎನರ್ಜಿ ಪಡೆದುಕೊಳ್ಳಲು ಬಳಸುತ್ತದೆ ಹೊರತು ಸ್ನಾಯುಗಳನ್ನು ರೂಪಿಸಿಕೊಳ್ಳಲು ಅಲ್ಲ. ಇದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ. ಹೀಗಾಗಿ ಕೆಲವು ಜನರಲ್ಲಿ ತೂಕ ಹೆಚ್ಚುತ್ತದೆ. ಏಕೆಂದರೆ ಅವರ ದೇಹದಲ್ಲಿ ಪ್ರೋಟೀನ್‌ ನ್ನು ಪಚನ ಮಾಡಿಕೊಳ್ಳಲು ಸಾಕಷ್ಟು ಶಕ್ತಿ ಇರುವುದಿಲ್ಲ.

ಕೂದಲು, ತ್ವಚೆ ಹಾಗೂ ಉಗುರುಗಳ ಸಮಸ್ಯೆ : ಪ್ರೋಟೀನ್‌ ನ ಕೊರತೆಯ ಕೆಟ್ಟ ಪರಿಣಾಮ ಚರ್ಮ ಹಾಗೂ ಉಗುರಿನ ಮೇಲೆ ಉಂಟಾಗುತ್ತದೆ. ಏಕೆಂದರೆ ಇವು ಪರಿಪೂರ್ಣವಾಗಿ ರೂಪುಗೊಂಡಿರುವುದು ಪ್ರೋಟೀನ್‌ ನಿಂದಲೇ. ಪ್ರೋಟೀನ್‌ ಕೊರತೆಯಿಂದ ಎಲ್ಲಕ್ಕೂ ಮೊದಲು ಕೂದಲು ತೆಳ್ಳಗಾಗುತ್ತದೆ. ಚರ್ಮದ ಪದರ ಉದುರತೊಡಗುತ್ತದೆ ಹಾಗೂ ಉಗುರಿನಲ್ಲಿ ಸೀಳು ಉಂಟಾಗುತ್ತದೆ.

prayapt-protien

ದಣಿವು ಹಾಗೂ ನಿಶ್ಶಕ್ತಿ : ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಪ್ರೋಟೀನ್‌ ದೊರಕದೇ ಇದ್ದಾಗ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ದೇಹ ಸ್ನಾಯುಗಳಿಂದ ಅಮೈನೊ ಆ್ಯಸಿಡ್‌ ನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತದೆ. ಅದರಿಂದ ಮಸಲ್ ಮಾಸ್‌ ಕಡಿಮೆಯಾಗುತ್ತದೆ. ಚಯಾಪಚಯದ ಪ್ರಕ್ರಿಯೆ ಕೂಡ ಕಡಿಮೆಯಾಗುತ್ತದೆ. ಇದರಿಂದ ಶಕ್ತಿ ಮತ್ತು ಸ್ಛೂರ್ತಿ ಕಡಿಮೆಯಾಗುತ್ತದೆ. ಹಾಗಾಗಿ ಸದಾ ದಣಿವು ಅನಿಸುತ್ತಿರುತ್ತದೆ.

ಸಿಹಿ ತಿನ್ನಬೇಕೆಂಬ ಪ್ರಬಲ ಇಚ್ಛೆ : ಕಾರ್ಬೊಹೈಡ್ರೇಟ್‌ ಗೆ ಹೋಲಿಸಿದಲ್ಲಿ ಪ್ರೋಟೀನ್‌ ಪಚನ ಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ನೀವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ ಯುಕ್ತ ಆಹಾರವನ್ನು ಸೇವಿಸಿದರೆ ರಕ್ತ ಶರ್ಕರ ಒಮ್ಮೆಲೆ ಹೆಚ್ಚುತ್ತದೆ, ಬಳಿಕ ಕಡಿಮೆಯಾಗುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಪ್ರೋಟೀನ್‌ ಮತ್ತು ಕಾರ್ಬೊಹೈಡ್ರೇಟ್ ಎರಡರ ಮಿಶ್ರಣ ಇರಲಿ. ಏಕೆಂದರೆ ನಿಮ್ಮ ದೇಹ ಆಹಾರವನ್ನು ನಿಧಾನವಾಗಿ ಪಚನ ಮಾಡಲಿ ಹಾಗೂ ರಕ್ತ ಶರ್ಕರದ ಮಟ್ಟದಲ್ಲಿ ಆಕಸ್ಮಿಕ ಬದಲಾವಣೆ ಆಗದಿರಲಿ.

ರಕ್ತಹೀನತೆನಿಮ್ಮ ದೇಹದಲ್ಲಿ ಪ್ರೋಟೀನ್‌ ಕೊರತೆ ಇದ್ದರೆ ವಿಟಮಿನ್‌ ಬಿ12 ಮತ್ತು ಫಾಲೆಟ್‌ ಕೊರತೆಯಾಗುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದಾಗಿ ರಕ್ತಹೀನತೆ ಆಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕೂಡ ಕಡಿಮೆಯಾಗುತ್ತದೆ. ಅದರಿಂದಾಗಿ ರಕ್ತದೊತ್ತಡ ಕಡಿಮೆ ಆಗಿ ನಿಮಗೆ ದಣಿವು, ಸುಸ್ತು ಎನಿಸುತ್ತದೆ.

ರೋಗ ನಿರೋಧಕ ಸಾಮರ್ಥ್ಯ : ಪ್ರೋಟೀನ್‌ ಕೊರತೆಯಿಂದ ರೋಗನಿರೋಧಕ ಸಾಮರ್ಥ್ಯ ಕುಗ್ಗುತ್ತದೆ. ಆ ಬಳಿಕ ಮೇಲಿಂದ ಮೇಲೆ ಅನಾರೋಗ್ಯ ಪೀಡಿತರಾಗಬೇಕಾಗಿ ಬರುತ್ತದೆ. ರೋಗ ನಿರೋಧಕ ಸಾಮರ್ಥ್ಯ ಪ್ರೋಟೀನ್‌ ನಿಂದ ರೂಪುಗೊಂಡಿರುತ್ತದೆ. ಒಂದುವೇಳೆ ನಿಮ್ಮ ಆಹಾರ ಸಮತೋಲನದಿಂದ ಕೂಡಿರದಿದ್ದರೆ ನೀವು ಹಲವಾರು ತೊಂದರೆಗಳಿಗೆ ಸಿಲುಕಬಹುದು.

ಬಿಪಿ ಮತ್ತು ಹಾರ್ಟ್ರೇಟ್ಕಡಿಮೆಯಾಗುವುದು : ಪ್ರೋಟೀನ್‌ ಕೊರತೆಯಿಂದ ಬಿ.ಪಿ. ಕಡಿಮೆಯಾಗುವ ಸಾಧ್ಯತೆ ಹೆಚ್ಚುತ್ತದೆ. ಒಂದು ವೇಳೆ ದೇಹಕ್ಕೆ ಸೂಕ್ತ ಪೋಷಣೆ ದೊರಕದೇ ಇದ್ದಲ್ಲಿ ಅದರ ನೇರ ಪರಿಣಾಮ ದೇಹದ ಎಲ್ಲ ಕಾರ್ಯ ಕಲಾಪಗಳ ಮೇಲೂ ಬೀಳುತ್ತದೆ.

ಲಿವರ್ಸಮಸ್ಯೆಗಳು : ಪ್ರೋಟೀನ್‌ ಕೊರತೆ ಮತ್ತು ಲಿವರ್‌ ರೋಗ ಒಂದಕ್ಕೊಂದು ಸಂಬಂಧಪಟ್ಟಿವೆ. ಪ್ರೋಟೀನ್‌ ನ ಹೊರತಾಗಿ ನಿಮ್ಮ ಕರುಳು ಡೀಟಾಕ್ಸಿಫಿಕೇಶನ್‌ ನ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ.

ಸ್ನಾಯು ಕೀಲುಗಳಲ್ಲಿ ನೋವು : ಪ್ರೋಟೀನ್‌ ಕೊರತೆ ಉಂಟಾದರೆ ದೇಹದಲ್ಲಿ ಶಕ್ತಿಯ ಅವಶ್ಯಕತೆಯನ್ನು ನೀಗಿಸಿಕೊಳ್ಳಲು ಸ್ನಾಯುಗಳಿಂದ ಕ್ಯಾಲೋರಿ ಬರ್ನ್‌ ಮಾಡಿಸುತ್ತದೆ. ಇದರಿಂದ ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು, ನಿಶ್ಶಕ್ತಿಯ ಅನುಭವ ಉಂಟಾಗುತ್ತದೆ.

ಸ್ನಾಯುಗಳಲ್ಲಿ ನಿಶ್ಶಕ್ತಿ : ಮಧ್ಯ ವಯಸ್ಸಿನ ಪುರುಷರಲ್ಲಿ ಸಾಮಾನ್ಯವಾಗಿ ವಯಸ್ಸು ಹೆಚ್ಚುತ್ತ ಹೋದಂತೆ `ಸಾರ್ಕೋಪೆನಿಯಾ’ ಆಗುತ್ತದೆ. ಅವರ ಮಸಲ್ ಮಾಸ್‌ ಕಡಿಮೆಯಾಗುತ್ತದೆ. ಒಂದು ವೇಳೆ ಅವರು ಆಹಾರದಲ್ಲಿ ಪ್ರೋಟೀನ್‌ ನ್ನು ಸಾಕಷ್ಟು ಪ್ರಮಾಣದಲ್ಲಿ ಸೇರಿಸಿಕೊಳ್ಳದೇ ಇದ್ದರೆ ಈ ಸಮಸ್ಯೆ ಇನ್ನಷ್ಟು ಹೆಚ್ಚಬಹುದು.

ಊತ : ನಿಮ್ಮ ದೇಹದಲ್ಲಿ ಪ್ರೋಟೀನ್‌ ಕೊರತೆ ಇದ್ದರೆ ನೀವು ಊತದ ಸಮಸ್ಯೆಗೂ ಸಿಲುಕಬಹುದು. ದೇಹದಲ್ಲಿ ನೀರು ತುಂಬಿಕೊಳ್ಳುವುದರಿಂದ ಊತದ ಸಮಸ್ಯೆ ಕಾಣಿಸುತ್ತದೆ. ಪ್ರೋಟೀನ್‌ ಕೆಲಸ ಏನೆಂದರೆ ನಿಮ್ಮ ಕಾಲುಗಳು ಮತ್ತು ಪಾದದಲ್ಲಿ ಊತ ಆಗದಂತೆ ನೋಡಿಕೊಳ್ಳುತ್ತದೆ.

ಗಾಯ ಬೇಗ ವಾಸಿಯಾಗದಿರುವುದು : ಪ್ರೋಟೀನ್‌ ಕೊರತೆಯಿಂದ ದೇಹದ ರೋಗ ನಿರೋಧಕ ಸಾಮರ್ಥ್ಯವಂತೂ ಕಡಿಮೆಯಾಗುತ್ತದೆ. ಜೊತೆಗೆ ಗಾಯ ಮಾಗಲು ಹೊಸ ಜೀವಕೋಶಗಳು ಮತ್ತು ಹೊಸ ಚರ್ಮ ರಚನೆಯಾಗಲು ಪ್ರೋಟೀನ್‌ ಅವಶ್ಯಕತೆಯಿರುತ್ತದೆ.

ಮಕ್ಕಳ ಬೆಳವಣಿಗೆ ಸರಿಯಾಗಿ ಆಗದಿರುವುದು : ಪ್ರೋಟೀನ್‌ ಕೇವಲ ಸ್ನಾಯುಗಳು ಮತ್ತು ಮೂಳೆಗಳ ಆರೋಗ್ಯಕ್ಕಷ್ಟೇ ನೆರವಾಗುವುದಿಲ್ಲ, ಅದು ದೇಹದ ಸಂಪೂರ್ಣ ಬೆಳವಣಿಗೆಗೆ ಅತ್ಯವಶ್ಯಕ. ಹೀಗಾಗಿ ಮಕ್ಕಳಿಗೆ ಪ್ರೋಟೀನ್‌ ಕೊರತೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಪ್ರೋಟೀನ್‌  ಕೊರತೆಯಿಂದ ಅವರ ಬೆಳವಣಿಗೆ ಸಮರ್ಪಕವಾಗಿ ಆಗುವುದಿಲ್ಲ.

ಡಾ. ಶೃತಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ