ಇಂದಿನ ದಿನಗಳಲ್ಲಿ ಮದುಮಗಳು ರಿಸೆಪ್ಶನ್ ಗಾಗಿ ಆಯ್ಕೆ ಮಾಡಿಕೊಳ್ಳುವ ವಿಶೇಷ ಡ್ರೆಸ್ ಎಂದರೆ ಲಹಂಗಾಚೋಲಿ. ಈ ಅಧುನಿಕ ಉಡುಗೆಯಲ್ಲಿ ಕನಸಿನ ರಾಣಿಯಂತೆ ಮೆರೆಯಬೇಕೆಂಬುದು ಅವಳ ಆಸೆ. ಆದರೆ ಲಹಂಗಾದ ಬಗೆಗಿನ ಲೇಟೆಸ್ಟ್ ಟ್ರೆಂಡ್ಸ್ ನ ಅರಿವು ಅವಳಿಗಿದ್ದರೆ ಮಾತ್ರ ಅವಳ ಆಸೆ ನೆರವೇರಲು ಸಾಧ್ಯ. ಅದಕ್ಕಾಗಿ ಬನ್ನಿ, ಲೇಟೆಸ್ಟ್ ಲಹಂಗಾಗಳ ಬಗ್ಗೆ ಮಾಹಿತಿಗಾಗಿ ಫ್ಯಾಷನ್ ಡಿಸೈನರ್ಸ್ ಹೇಳುವುದನ್ನು ತಿಳಿದುಕೊಳ್ಳೋಣ :
ಪ್ರೀಡ್ರೇಪ್ಡ್ ದುಪಟ್ಟಾ : ಈ ಹೊಸದಾದ ಫ್ಯಾಷನ್ ಸ್ಟೈಲ್ ಇಂದು ಸಾಕಷ್ಟು ಟ್ರೆಂಡ್ ನಲ್ಲಿದೆ. ಇದು ಲಹಂಗಾದ ಜೊತೆಗೇ ಹೊಲಿಯಲ್ಪಟ್ಟಿರುವುದರಿಂದ ಮತ್ತೆ ಮತ್ತೆ ದುಪಟ್ಟಾವನ್ನು ಸರಿಪಡಿಸಿಕೊಳ್ಳುವ ಅಗತ್ಯ ಬೀಳುವುದಿಲ್ಲ. ಇದು 2 ರೀತಿಯದಾಗಿರುತ್ತದೆ. ಮೊದಲನೆಯದು ಹೆಡೆಡ್ ಚೋಲಿಯಾಗಿದ್ದು, ಇದರಲ್ಲಿ ದುಪಟ್ಟಾವನ್ನು ತಲೆಯ ಮೇಲೆ ಹೊದ್ದುಕೊಳ್ಳಲು ಬಳಸಬಹುದಾಗಿರುತ್ತದೆ. ಎರಡನೆಯದು ಚುನರೀ ಸೈಡ್, ಇದನ್ನು ಸೆರಗಿಗಾಗಿ ಬಳಸಲಾಗುತ್ತದೆ.
ಸ್ಟೇಟ್ ಮೆಂಟ್ ಸ್ಲೀವ್ಸ್ : ಇದು ಫ್ಯಾಷನ್ ಲಿಸ್ಟ್ ನಲ್ಲಿ ಮೊದಲನೆಯದಾಗಿ ಬರುವ ಡಿಸೈನ್ ಆಗಿದೆ. ಇದರಲ್ಲಿ ಚೋಲಿಯು ಒಂದು ಸೈಡ್ ಚಿಕ್ಕದು. ಮತ್ತೊಂದು ಸೈಡ್ ದೊಡ್ಡದು ಆಗಿರುತ್ತದೆ ಅಥವಾ ಕೇವಲ ಒಂದೇ ಸೈಡ್ ನಲ್ಲಿ ಭುಜ ಹೊಂದಿರುತ್ತದೆ. ಇದು ಅತ್ಯಂತ ವಿಶಿಷ್ಟವಾದ ಉಡುಗೆಯಾಗಿದ್ದು, 18ನೇ ಶತಮಾನದ ಫ್ಯಾಷನ್ ಸ್ಟೇಟ್ ಮೆಂಟ್ ನ ಲುಕ್ ನೀಡುತ್ತದೆ.
ಇಲ್ಯೂಷನ್ ನೆಕ್ ಲೈನ್? : ಇಂದು ಇಲ್ಯೂಷನ್ ನೆಕ್ ಲೈನ್ ನಂತಹ ಡಿಸೈನ್ ಗಳು ಟ್ರೆಂಡ್ ನಲ್ಲಿವೆ. ಇದರಲ್ಲಿ ಕುತ್ತಿಗೆಯ ಹತ್ತಿರದ ಭಾಗದಲ್ಲಿ ಸುಂದರವಾದ ಕಸೂತಿ ಕೆಲಸದಿಂದ ಆ ಡ್ರೆಸ್ ಅನುಪಮವಾಗಿ ಮಿರುಗುವಂತೆ ಮಾಡಲಾಗುತ್ತದೆ. ನೆಕ್ ಲೈನ್ ಡಿಸೈನ್ ಗಾಗಿ ನೆಟ್ ಅಥವಾ ಲೇಸ್ ನ್ನು ಬಳಸಲಾಗುತ್ತದೆ.
ಹೈ ಲೋ ಕುರ್ತಾ ವಿತ್ ಲೆಹಂಗಾ : ಕಳೆದ ವರ್ಷ ಇದು ಹೆಚ್ಚು ಫ್ಯಾಷನ್‌ನಲ್ಲಿತ್ತು. ಈ ವರ್ಷ ಇದು ಅಡ್ವಾನ್ಸ್ ಫಾರ್ಮ್ ನಲ್ಲಿ ಲಭ್ಯವಿದೆ. ಈ ಸಲ ಹೈ ಲೋ ಕುರ್ತಾ ವಿತ್ ಲೆಹಂಗಾ ಕಾಂಬಿನೇಶನ್ ಎಲ್ಲರ ಮೆಚ್ಚುಗೆ ಗಳಿಸಿದೆ. ಈ ರೀತಿಯ ಡಿಸೈನ್ ನಲ್ಲಿ ಕುರ್ತಾ ಮುಂಭಾಗದಲ್ಲಿ ಮಂಡಿಯವರೆಗೆ ಮಾತ್ರ ಇರುತ್ತದೆ. ಹಿಂಭಾಗದಲ್ಲಿ ಫ್ಲೋರ್ ಟಚ್ ಲೆಂತ್ ಇರುತ್ತದೆ. ಇದರಲ್ಲಿ ಮುಂದೆ ಮತ್ತು ಹಿಂದೆ ಸೊಂಟದವರೆಗೆ ಮಾತ್ರ ಡಿಸೈನ್ ಇರುತ್ತದೆ. ಇದನ್ನು ಪೇ ಫ್ಲಮ್ ಡಿಸೈನ್ ಎಂದೂ ಕರೆಯುತ್ತಾರೆ.
ಇಂತಹ ಕುರ್ತಾವನ್ನು ಮ್ಯಾಚಿಂಗ್ ಕಲರ್ ಲೆಹಂಗಾದೊಂದಿಗೆ ಧರಿಸಬಹುದು ಅಥವಾ ಕಾಂಟ್ರಾಸ್ಟ್ ಪ್ಯಾಟರ್ನ್ ಜೊತೆಗೂ ಹಾಕಿಕೊಳ್ಳಬಹುದು. ಈ ಡಿಸೈನ್ ಗೆ ದುಪಟ್ಟಾ ಹಾಕದಿದ್ದರೆ ಚೆನ್ನಾಗಿ ಕಾಣುತ್ತದೆ. ಇದಕ್ಕೆ ಹೈ ನೆಕ್ ಅಥವಾ ಕ್ಲೀವೇಜ್ ಕಟ್ ನೆಕ್ ನ್ನು ಮಾಡಿಸಿಕೊಳ್ಳಬಹುದು.
ಜ್ಯಾಕೆಟ್ : ನಿಮ್ಮ ವಿವಾಹ ಚಳಿಗಾಲದಲ್ಲಿ ನಡೆಯುವಂತಿದ್ದರೆ ನೀವು ಈ ಡಿಸೈನ್ ನ್ನು ಟ್ರೈ ಮಾಡಿ ನೋಡಿ. ಈ ಜ್ಯಾಕೆಟ್ ನ್ನು ವೆಲ್ವೆಟ್ ಬಟ್ಟೆಯಿಂದ ತಯಾರಿಸಲಾಗುತ್ತದೆ. ವೆಲ್ವೆಟ್ ಕೋಟ್ ವಿತ್ ಲಾಂಗ್ ರೂಫೆಲ್ ಜ್ಯಾಕೆಟ್ ನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಚಳಿಗಾಲಕ್ಕೆ ಇದೊಂದು ಪರ್ಫೆಕ್ಟ್ ಆಪ್ಶನ್ ಆಗಿದ್ದು, ನಿಮಗೆ ಬೆಚ್ಚನೆಯ ಅನುಭವ ಒದಗಿಸುತ್ತದೆ. ಈ ಕೋಟ್ ಗೆ ಜರಿ ಕೆಲಸವನ್ನು ಮಾಡಿಸಿ ನಿಮ್ಮ ಇತರೆ ಔಟ್ ಫಿಟ್ ನೊಂದಿಗೆ ಮ್ಯಾಚ್ ಆಗುವಂತೆ ಮಾಡಬಹುದು.
ಪೇಸ್ಟಲ್ ಕಲರ್ : ಈ ವರ್ಷದ ಅತ್ಯಂತ ಹಾಟೆಸ್ಟ್ ಟ್ರೆಂಡ್ ಎಂದರೆ ಪೇಸ್ಟಲ್. ಕೆಲವು ಪ್ರಸಿದ್ಧ ಡಿಸೈನರ್ ಗಳು ತಮ್ಮ ಕಲೆಕ್ಷನ್ ನಲ್ಲಿ ಪೇಸ್ಟಲ್ ಬಳಸುತ್ತಾರೆ. ಮತ್ತೆ ಕೆಲವು ಟಾಪ್ ಡಿಸೈನರ್ ಗಳು ತಮ್ಮದೇ ಆದ ಹೊಸ ಕಲರ್ ಫ್ಯಾಲೆಟ್ಸ್ ನ್ನೂ ಪ್ರಸ್ತುತಪಡಿಸಿದ್ದಾರೆ. ಅವುಗಳೆಂದರೆ ಪೆಟಲ್ ಪಿಂಕ್, ಪೌಡರ್ ಬ್ಲೂ, ಪೇಲ್ ಪೀಚ್, ಲೈಟ್ ಮಿಂಟ್ ಗ್ರೀನ್ ಇತ್ಯಾದಿ.
ಪೇಪ್ಲಮ್ ಮತ್ತು ಎಂಪೈರ್ ವೆಯ್ಸ್ಟ್ : ಇದು ವೆಸ್ಟರ್ನ್ ಇನ್ಸ್ ಪೈರ್ಡ್ ಫ್ಯಾಷನ್ ಟ್ರೆಂಡ್ ಆಗಿದೆ. ಇಂದಿನ ಫ್ಯಾಷನ್ ಶೋಗಳಲ್ಲೂ ಇದನ್ನು ನೋಡಬಹುದಾಗಿದೆ. ಒಂದು ಶೋನಲ್ಲಿ ಚಿಕ್ಕ ಶೋರೂಮ್ ಚೋಲಿ ಮತ್ತು ಎಂಪೈರ್ ವೆಯ್ಸ್ಟ್ ಗೌನ್ ನ ಟಾಪ್ ಪ್ರದರ್ಶನ ಮಾಡಿ, ಈ ಡಿಸೈನ್ ನ್ನು ಕ್ಯಾರಿ ಮಾಡುವ ರೀತಿಯನ್ನೂ ಜನರಿಗೆ ತಿಳಿಸಿಕೊಡಲಾಗಿತ್ತು. ನಿಮ್ಮ ಬ್ರಸ್ಟ್ ಲೈನ್ ನ್ನು ಫ್ಲಾಂಟ್ ಮಾಡಲು ಲೋ ವೆಯ್ಸ್ಟ್ ಲೆಹಂಗಾ ವಿತ್ ಪೇಪ್ಲಮ್ ಟಾಪ್ ಧರಿಸಬಹುದು.
ವಿಶೇಷ ಟಿಪ್ಸ್
ಲೆಹಂಗಾ ವಿತ್ ಬೆಲ್ಟ್ : ಬಟ್ಟೆಯ ಬೆಲ್ಟ್ ನಿಂದ ಹಿಡಿದು ಹೂಗಳ ನಡುಪಟ್ಟಿಯಂತಹ ಬೆಲ್ಟ್ ವರೆಗೂ ಲೆಹಂಗಾವನ್ನು ಸೊಂಟಕ್ಕೆ ಬಿಗಿಯುವುದು ಇಂದು ಹೆಚ್ಚಾಗಿ ಕಂಡುಬರುತ್ತಿದೆ. ಹಾಗೆಯೇ ದುಪಟ್ಟಾವನ್ನು ಬೆಲ್ಟ್ ನಲ್ಲಿ ಸೇರಿಸಿದಾಗ ಡ್ರೆಸ್ ನ ಸೌಂದರ್ಯ ಇಮ್ಮಡಿಯಾಗುತ್ತದೆ. ಲೆಹಂಗಾ ಬೆಲ್ಟ್ ಎಲ್ಲರ ಮೆಚ್ಚುಗೆ ಪಡೆದಿದ್ದು, ಇದರಿಂದ ದುಪಟ್ಟಾವನ್ನು ಸರಿಯಾಗಿ ಇರಿಸುವ ಒಂದು ಉತ್ತಮ ವಿಧಾನವಾಗಿದೆ. ಈ ಬೆಲ್ಟ್ ನ್ನು ಬ್ರೈಡಲ್ ಆ್ಯಕ್ಸೆಸರಿಯಾಗಿಯೂ ಉಪಯೋಗಿಸಲಾಗುತ್ತದೆ. ನೀವು ಲೆಹಂಗಾದ ಬಣ್ಣದ ಬೆಲ್ಟ್ ತೆಗೆದುಕೊಳ್ಳಬಹುದು ಅಥವಾ ಚೋಲಿ ದುಪಟ್ಟಾಗಳೊಂದಿಗೆ ಕಾಂಟ್ರಾಸ್ಟ್ ಮಾಡಬಹುದು.
ಲೆಹಂಗಾದ ಕ್ಯಾನ್ ವಾಸ್ : ಪ್ರತಿ ದಂಪತಿಯೂ ತಮ್ಮ ವಿವಾಹದ ಮಧುರ ಕ್ಷಣಗಳನ್ನು ಸ್ಮೃತಿಯಾಗಿರಿಸಿಕೊಳ್ಳಲು ಬಯಸುತ್ತಾರೆ. ಇದಕ್ಕೆ ವಿವಾಹದ ಲೆಹಂಗಾಗಿಂತ ಉತ್ತಮ ಕ್ಯಾನ್ ವಾಸ್ ಯಾವುದಿದೆ? ಹೌದು, ನಿಮ್ಮ ವಿಶಿಷ್ಟ ಉಡುಗೆಯೇ ನಿಮ್ಮ ಮಧುರ ಸ್ಮೃತಿಯಾಗಬಲ್ಲದು. ನೀವು ಇದಕ್ಕೆ ಕಸೂತಿಯನ್ನು ಮಾಡಿಸಬಹುದು.
ಹೈ ನೆಕ್ : ಹೈ ನೆಕ್ ಒಂದು ರೀತಿಯಲ್ಲಿ ನೆಕ್ ಲೇಸ್ ನಂತಿರುತ್ತದೆ. ಹೈ ನೆಕ್ ಡ್ರೆಸ್ ಧರಿಸಿದಾಗ ಯಾವುದೇ ನೆಕ್ ಪೀಸ್ ನ ಅವಶ್ಯಕತೆ ಇರುವುದಿಲ್ಲ. ಕ್ಲಾಸೀ ಚೋಕರ್ ಬ್ಯಾಂಡ್ ಡಿಸೈನ್ ಹೈ ನೆಕ್ ಚೋಲಿಯು ಹೆಚ್ಚು ಫ್ಯಾಷನ್ ನಲ್ಲಿದೆ. ಈ ಡಿಸೈನ್ ನಿಮಗೆ ಎತ್ತರದ ನಿಲುವಿನ ಲುಕ್ ನೀಡುತ್ತದೆ.
ಫ್ಲೇರ್ ಟಚ್ : ಫ್ಲೇರ್ ಸ್ಟೈಲ್ ಮದುಮಗಳಿಗೆ ಬಹಳ ಮೆಚ್ಚುಗೆಯಾಗುತ್ತದೆ. ಕೆಲವು ಪ್ರಸಿದ್ಧ ಡಿಸೈನರ್ಸ್ ಈ ಸ್ಟೈಲ್ ನ ಪ್ರದರ್ಶನ ಮಾಡಿದ್ದಾರೆ.
– ಪಿ. ಗಿರಿಜಾ ಭಟ್
ಪ್ರತಿ ದಂಪತಿಯೂ ತಮ್ಮ ವಿವಾಹದ ಮಧುರ ಕ್ಷಣಗಳನ್ನು ಸ್ಮೃತಿಯಾಗಿರಿಸಿಕೊಳ್ಳಲು ಬಯಸುತ್ತಾರೆ. ಇದಕ್ಕೆ ವಿವಾಹದ ಲೆಹಂಗಾಗಿಂತ ಉತ್ತಮ ಕ್ಯಾನ್ ವಾಸ್ ಯಾವುದಿದೆ……?
ಪ್ರಿಯಾಂಕಾ ಚೋಪ್ರಾರ ಲೆಹಂಗಾದ ವೈಶಿಷ್ಟ್ಯವೆಂದರೆ ಅದರಲ್ಲಿ ಪ್ರಿಯಾಂಕಾರ ಪತಿ ನಿಕ್ ಜೋನ್ಸ್ ರ ಜೊತೆಗೆ ಅವರ ತಂದೆ ತಾಯಿಯರ ಹೆಸರನ್ನೂ ಬರೆಯಲಾಗಿತ್ತು……
ಬಾಲಿವುಡ್ ಬಾಲೆಯರ ಲೆಹಂಗಾ
ಅನುಷ್ಕಾ ಶರ್ಮ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮರ ವಿವಾಹ ಇಟಲಿಯಲ್ಲಿ ನಡೆಯಿತು ನಿಜ. ಆದರೆ ವೆಡಿಂಗ್ ಡ್ರೆಸ್ ಸಂಪೂರ್ಣವಾಗಿ ಭಾರತೀಯ ಶೈಲಿಯದಾಗಿತ್ತು. ವಿವಾಹ ಸಂದರ್ಭದಲ್ಲಿ ಅನುಷ್ಕಾ ಡಿಸೈನರ್ ಸವ್ಯಸಾಚಿ ತಯಾರಿಸಿದ್ದ ಪಿಂಕ್ ಲೆಹಂಗಾ ಧರಿಸಿದ್ದರು. ಅದರ ಮೇಲೆ ಸಿಲ್ವರ್ ಗೋಲ್ಡ್ ದಾರ ಮತ್ತು ಮುತ್ತುಗಳನ್ನು ಬಳಸಿ ಕಸೂತಿ ಕೆಲಸ ಮಾಡಲಾಗಿತ್ತು. ಆ ಸುಂದರ ಲೆಹಂಗಾದ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬಂದವು. ಅವರು ತೊಟ್ಟಿದ್ದ ಆಭರಣಗಳಲ್ಲಿ ಅನ್ ಕಟ್ ಡೈಮಂಡ್ ಗಳನ್ನೂ ಬಳಸಲಾಗಿತ್ತು. ಇವು ಸಹ ಸವ್ಯಸಾಚಿಯ ಹೆರಿಟೇಜ್ ಕಲೆಕ್ಷನ್ ನ ಭಾಗವಾಗಿದ್ದವು. ಈ ಆಭರಣಗಳಲ್ಲಿ ಜಪಾನ್ ನ ಮುತ್ತುಗಳನ್ನು ಇರಿಸಲಾಗಿತ್ತು.
ದೀಪಿಕಾ ಪಡುಕೋಣೆ ಬಾಲಿವುಡ್ ತಾರೆ
ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ರ ವಿವಾಹ ಇಟಲಿಯ ಲೇಕ್ ಕೋಮೋನಲ್ಲಿರುವ ವಿವಾ ಡೆಲ್ ಬಾಲ್ ಬಿಯನಿಯೊನಲ್ಲಿ ನಡೆಯಿತಷ್ಟೆ. ಕೊಂಕಣಿ ಸಂಪ್ರದಾಯದಂತೆ ಜರುಗಿದ ವಿವಾಹದಲ್ಲಿ ದೀಪಿಕಾ ಗೋಲ್ಡನ್ ರೆಡ್ ಕಲರ್ ನ ಲೆಹಂಗಾ ಧರಿಸಿದ್ದರು. ಪ್ರಸಿದ್ಧ ಡಿಸೈನರ್ ಸವ್ಯಸಾಚಿ ಈ ಔಟ್ ಫಿಟ್ ನ್ನು ಸಿದ್ಧಪಡಿಸಿದ್ದರು. ತಮ್ಮ ಬ್ರೈಡಲ್ ಲೆಹಂಗಾದಲ್ಲಿ ದೀಪಿಕಾ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ಈ ಲೆಹಂಗಾದ ಬೆಲೆ ಸುಮಾರು 8.95 ಲಕ್ಷ ಎಂದು ಹೇಳಲಾಗಿದೆ.
ಸೋನಮ್ ಕಪೂರ್
ಸೋನಮ್ ಕಪೂರ್ ರ ವಿವಾಹ ಬಿಸ್ ನೆಸ್ ವುಮನ್ ಆನಂದ್ ಅಹೂಜಾರೊಡನೆ ಮುಂಬೈನಲ್ಲಿ ನಡೆಯಿತು. ಸೋನಮ್ ಕಪೂರ್ ಕೆಂಪು ಬಣ್ಣದ ಉಡುಗೆಯಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ವಿವಾಹದಲ್ಲಿ ಅತಿಥಿಗಳ ಡ್ರೆಸ್ ಕೋಡ್ ಇಂಡಿಯನ್ ಟ್ರೆಡಿಶನ್ ಸ್ಟೈಲ್ ಎಂದು ನಮೂದಿಸಲಾಗಿತ್ತು. ವಿವಾಹದ ಮುನ್ನಾ ದಿನ ಏರ್ಪಡಿಸಲಾಗಿದ್ದ ಸಂಗೀತ್ ಕಾರ್ಯಕ್ರಮದಂದು ಸೋನಮ್ ಡಿಸೈನರ್ ಲೆಹಂಗಾ ಧರಿಸಿದ್ದರು. ಆ ಲೆಹಂಗಾವನ್ನು ಸಿದ್ಧಪಡಿಸಲು ಸುಮಾರು 18 ತಿಂಗಳ ಸಮಯ ಹಿಡಿಸಿತ್ತು.