ಬಂಗಾರದ ಬಣ್ಣದ ಲೇಸ್ ಹಾಗೂ ಥ್ರೆಡ್ ವರ್ಕ್ ನಿಂದ ಸುಸಜ್ಜಿತಗೊಳಿಸಲಾದ ಈ ಆಫ್ ವೈಟ್ ಸ್ಟ್ರೈಪ್ಡ್ ಸೂಟ್, ಮ್ಯಾಚಿಂಗ್ ಫುಟ್ ವೇರ್ ಹಾಗೂ ತಲೆಗೆ ಸುರುಳಿಯಾದ ಸ್ಟೈಲಿಶ್ ದುಪಟ್ಟಾದಿಂದ ಈ ಬೆಡಗಿ ಮೋಹಕವಾಗಿ ಮುಗುಳ್ನಗುತ್ತಿದ್ದಾಳೆ. ಫ್ಲೋರ್ ಫ್ರಂಟ್ ಟಾಪ್ ಗ್ಲಾಮರಸ್ ಟಚ್ ನೀಡಿದೆ.
ಪಿಸ್ತಾ ಗ್ರೀನ್ ಬಣ್ಣದ ಮೊಗ್ಗಿನ ಸೂಟ್ ಮೇಲೆ ಸಿಲ್ವರ್ ಬೇಸ್ ನ ಚಮಕ್ ಎದ್ದುಕಾಣುತ್ತಿದೆ. ಬಾರ್ಡರ್ ನ ನೆಟ್ ಲೈನಿಂಗ್ ಅದ್ಭುತ ಟಚ್ ನೀಡಿದರೆ, ಅದಕ್ಕೆ ಮ್ಯಾಚಿಂಗ್ ದುಪಟ್ಟಾ ತಲೆಗೆ ಭೂಷಣವಾಗಿದೆ.
ಫ್ರಂಟ್ ನಲ್ಲಿ ಅತ್ಯಾಕರ್ಷಕ ಕಸೂತಿಯುಳ್ಳ ಈ ಕಡು ಕೆಂಪಿನ ಅನಾರ್ಕಲಿ ಸೂಟ್, ತನ್ನ ಫ್ರಂಟ್ ಫ್ರಿಲ್ಸ್, ಮನಮೋಹಕ ಬಾರ್ಡರ್ ಲೈನಿಂಗ್ ಹಾಗೂ ಮ್ಯಾಚಿಂಗ್ ದುಪಟ್ಟಾದಿಂದಾಗಿ ಕಣ್ಮನ ತಣಿಸುವಂತಿದೆ.
ಫ್ರಂಟ್ ನಲ್ಲಿ ಅತ್ಯಾಕರ್ಷಕ ಆಧುನಿಕ ಡಿಸೈನಿನ ಪ್ರಿಂಟ್ ವುಳ್ಳ ಮೆಜಂತಾ, ಗೋಲ್ಡನ್, ಗ್ರೀನ್, ಪರ್ಪಲ್ ಬಣ್ಣಗಳ ಕಾಂಬಿನೇಷನ್ನಿನ ಈ ಸುಮನೋಹರ ಸಲ್ವಾರ್ ಸೂಟ್ ಚೂಡೀದಾರ್ ಪಾಜಾಮದೊಂದಿಗೆ ಕಾಂಟ್ರಾಸ್ಟ್ ದುಪಟ್ಟಾದಿಂದಾಗಿ ನಯನ ಮನೋಹರವಾಗಿದೆ.
ಬೀಡ್ಸ್ ಹಾಗೂ ಮುತ್ತುಗಳಿಂದ ಸುಸಜ್ಜಿತಗೊಳಿಸಲಾದ ಈ ಹಳದಿ ಬಣ್ಣದ ಸೂಟ್, ಪಿಸ್ತಾ ಗ್ರೀನಿನ ಪಟಿಯಾಲಾ ಸಲ್ವಾರ್ ನೊಂದಿಗೆ ಅಚ್ಚುಕಟ್ಟಾಗಿ ಹೊಂದಿಕೊಂಡಿದೆ. ಜೊತೆಗೆ ಅದೇ ಮ್ಯಾಚಿಂಗ್ ಬಣ್ಣಗಳ ದುಪಟ್ಟಾ, ತಲೆಗೆ ಸಿಂಗಾರವಾಗಿ ಭುಜದ ಬಳಿ ಇಳಿಬಿಟ್ಟಿರುವುದು ಹೊಸ ಕಳೆ ನೀಡಿದೆ.