ಇಂದಿನ ದಿನಗಳಲ್ಲಿ ಮದುಮಗಳು ರಿಸೆಪ್ಶನ್‌ ಗಾಗಿ ಆಯ್ಕೆ ಮಾಡಿಕೊಳ್ಳುವ ವಿಶೇಷ ಡ್ರೆಸ್‌ ಎಂದರೆ ಲಹಂಗಾಚೋಲಿ. ಈ ಅಧುನಿಕ ಉಡುಗೆಯಲ್ಲಿ ಕನಸಿನ ರಾಣಿಯಂತೆ ಮೆರೆಯಬೇಕೆಂಬುದು ಅವಳ ಆಸೆ. ಆದರೆ ಲಹಂಗಾದ ಬಗೆಗಿನ ಲೇಟೆಸ್ಟ್ ಟ್ರೆಂಡ್ಸ್ ನ ಅರಿವು ಅವಳಿಗಿದ್ದರೆ ಮಾತ್ರ ಅವಳ ಆಸೆ ನೆರವೇರಲು ಸಾಧ್ಯ. ಅದಕ್ಕಾಗಿ ಬನ್ನಿ, ಲೇಟೆಸ್ಟ್ ಲಹಂಗಾಗಳ ಬಗ್ಗೆ ಮಾಹಿತಿಗಾಗಿ ಫ್ಯಾಷನ್‌ ಡಿಸೈನರ್ಸ್‌ ಹೇಳುವುದನ್ನು ತಿಳಿದುಕೊಳ್ಳೋಣ :

ಪ್ರೀಡ್ರೇಪ್ಡ್ ದುಪಟ್ಟಾ : ಈ ಹೊಸದಾದ ಫ್ಯಾಷನ್‌ ಸ್ಟೈಲ್ ‌ಇಂದು ಸಾಕಷ್ಟು ಟ್ರೆಂಡ್‌ ನಲ್ಲಿದೆ. ಇದು ಲಹಂಗಾದ ಜೊತೆಗೇ ಹೊಲಿಯಲ್ಪಟ್ಟಿರುವುದರಿಂದ ಮತ್ತೆ ಮತ್ತೆ ದುಪಟ್ಟಾವನ್ನು ಸರಿಪಡಿಸಿಕೊಳ್ಳುವ ಅಗತ್ಯ ಬೀಳುವುದಿಲ್ಲ. ಇದು 2 ರೀತಿಯದಾಗಿರುತ್ತದೆ. ಮೊದಲನೆಯದು ಹೆಡೆಡ್‌ ಚೋಲಿಯಾಗಿದ್ದು, ಇದರಲ್ಲಿ ದುಪಟ್ಟಾವನ್ನು ತಲೆಯ ಮೇಲೆ ಹೊದ್ದುಕೊಳ್ಳಲು ಬಳಸಬಹುದಾಗಿರುತ್ತದೆ. ಎರಡನೆಯದು ಚುನರೀ ಸೈಡ್‌, ಇದನ್ನು ಸೆರಗಿಗಾಗಿ ಬಳಸಲಾಗುತ್ತದೆ.

ಸ್ಟೇಟ್ಮೆಂಟ್ಸ್ಲೀವ್ಸ್ :  ಇದು ಫ್ಯಾಷನ್‌ ಲಿಸ್ಟ್ ನಲ್ಲಿ ಮೊದಲನೆಯದಾಗಿ ಬರುವ ಡಿಸೈನ್‌ ಆಗಿದೆ. ಇದರಲ್ಲಿ ಚೋಲಿಯು ಒಂದು  ಸೈಡ್‌ ಚಿಕ್ಕದು. ಮತ್ತೊಂದು ಸೈಡ್‌ ದೊಡ್ಡದು ಆಗಿರುತ್ತದೆ ಅಥವಾ ಕೇವಲ ಒಂದೇ ಸೈಡ್‌ ನಲ್ಲಿ ಭುಜ ಹೊಂದಿರುತ್ತದೆ. ಇದು ಅತ್ಯಂತ ವಿಶಿಷ್ಟವಾದ ಉಡುಗೆಯಾಗಿದ್ದು, 18ನೇ ಶತಮಾನದ ಫ್ಯಾಷನ್‌ ಸ್ಟೇಟ್‌ ಮೆಂಟ್‌ ನ ಲುಕ್‌ ನೀಡುತ್ತದೆ.

ಇಲ್ಯೂಷನ್ನೆಕ್ಲೈನ್‌? : ಇಂದು ಇಲ್ಯೂಷನ್‌ ನೆಕ್‌ ಲೈನ್‌ ನಂತಹ ಡಿಸೈನ್‌ ಗಳು ಟ್ರೆಂಡ್‌ ನಲ್ಲಿವೆ. ಇದರಲ್ಲಿ ಕುತ್ತಿಗೆಯ ಹತ್ತಿರದ ಭಾಗದಲ್ಲಿ ಸುಂದರವಾದ ಕಸೂತಿ ಕೆಲಸದಿಂದ ಆ ಡ್ರೆಸ್‌ ಅನುಪಮವಾಗಿ ಮಿರುಗುವಂತೆ ಮಾಡಲಾಗುತ್ತದೆ. ನೆಕ್‌ ಲೈನ್‌ ಡಿಸೈನ್‌ ಗಾಗಿ ನೆಟ್‌ ಅಥವಾ ಲೇಸ್‌ ನ್ನು ಬಳಸಲಾಗುತ್ತದೆ.

ಹೈ ಲೋ ಕುರ್ತಾ ವಿತ್ಲೆಹಂಗಾ : ಕಳೆದ ವರ್ಷ ಇದು ಹೆಚ್ಚು ಫ್ಯಾಷನ್‌ನಲ್ಲಿತ್ತು. ಈ ವರ್ಷ ಇದು ಅಡ್ವಾನ್ಸ್ ಫಾರ್ಮ್ ನಲ್ಲಿ ಲಭ್ಯವಿದೆ. ಈ ಸಲ ಹೈ ಲೋ ಕುರ್ತಾ ವಿತ್‌ ಲೆಹಂಗಾ ಕಾಂಬಿನೇಶನ್‌ ಎಲ್ಲರ ಮೆಚ್ಚುಗೆ ಗಳಿಸಿದೆ. ಈ ರೀತಿಯ ಡಿಸೈನ್‌ ನಲ್ಲಿ ಕುರ್ತಾ ಮುಂಭಾಗದಲ್ಲಿ ಮಂಡಿಯವರೆಗೆ ಮಾತ್ರ ಇರುತ್ತದೆ. ಹಿಂಭಾಗದಲ್ಲಿ ಫ್ಲೋರ್‌ ಟಚ್‌ ಲೆಂತ್‌ ಇರುತ್ತದೆ. ಇದರಲ್ಲಿ ಮುಂದೆ ಮತ್ತು ಹಿಂದೆ ಸೊಂಟದವರೆಗೆ ಮಾತ್ರ ಡಿಸೈನ್‌ ಇರುತ್ತದೆ. ಇದನ್ನು ಪೇ ಫ್ಲಮ್ ಡಿಸೈನ್‌ ಎಂದೂ ಕರೆಯುತ್ತಾರೆ.

2 (2)

ಇಂತಹ ಕುರ್ತಾವನ್ನು ಮ್ಯಾಚಿಂಗ್‌ ಕಲರ್‌ ಲೆಹಂಗಾದೊಂದಿಗೆ ಧರಿಸಬಹುದು ಅಥವಾ ಕಾಂಟ್ರಾಸ್ಟ್ ಪ್ಯಾಟರ್ನ್‌ ಜೊತೆಗೂ ಹಾಕಿಕೊಳ್ಳಬಹುದು. ಈ ಡಿಸೈನ್‌ ಗೆ ದುಪಟ್ಟಾ ಹಾಕದಿದ್ದರೆ ಚೆನ್ನಾಗಿ ಕಾಣುತ್ತದೆ. ಇದಕ್ಕೆ ಹೈ ನೆಕ್‌ ಅಥವಾ ಕ್ಲೀವೇಜ್‌ ಕಟ್‌ ನೆಕ್ ನ್ನು ಮಾಡಿಸಿಕೊಳ್ಳಬಹುದು.

ಜ್ಯಾಕೆಟ್‌ :  ನಿಮ್ಮ ವಿವಾಹ ಚಳಿಗಾಲದಲ್ಲಿ ನಡೆಯುವಂತಿದ್ದರೆ ನೀವು ಈ ಡಿಸೈನ್‌ ನ್ನು ಟ್ರೈ ಮಾಡಿ ನೋಡಿ. ಈ ಜ್ಯಾಕೆಟ್‌ ನ್ನು ವೆಲ್ವೆಟ್‌ ಬಟ್ಟೆಯಿಂದ ತಯಾರಿಸಲಾಗುತ್ತದೆ. ವೆಲ್ವೆಟ್‌ ಕೋಟ್‌ ವಿತ್‌ ಲಾಂಗ್‌ ರೂಫೆಲ್ ‌ಜ್ಯಾಕೆಟ್‌ ನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಚಳಿಗಾಲಕ್ಕೆ ಇದೊಂದು ಪರ್ಫೆಕ್ಟ್ ಆಪ್ಶನ್‌ ಆಗಿದ್ದು, ನಿಮಗೆ ಬೆಚ್ಚನೆಯ ಅನುಭವ ಒದಗಿಸುತ್ತದೆ. ಈ ಕೋಟ್‌ ಗೆ ಜರಿ ಕೆಲಸವನ್ನು ಮಾಡಿಸಿ ನಿಮ್ಮ ಇತರೆ ಔಟ್‌ ಫಿಟ್‌ ನೊಂದಿಗೆ ಮ್ಯಾಚ್‌ ಆಗುವಂತೆ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ