ಬ್ಯೂಟಿಫುಲ್ ಆಗಿ ಕಂಗೊಳಿಸಲು ನೀವು ಬಗೆ ಬಗೆಯ ಸೌಂದರ್ಯ ಪ್ರಸಾಧನಗಳನ್ನು ಬಳಸುತ್ತಿರುತ್ತೀರಿ,  ಆದರೆ ನಿಮ್ಮ ಮುಖ ಮತ್ತು ಚರ್ಮಕ್ಕೆ ಇವು ಎಷ್ಟು ಸೂಕ್ತ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಒಂದು ಪಕ್ಷ ಇಲ್ಲ ಎಂದಾದರೆ ನೆನಪಿಡಿ, ಏಕೆಂದರೆ ಅಗ್ಗದ ಕಾಸ್ಮೆಟಿಕ್ಸ್ ನಿಮ್ಮ ಚರ್ಮಕ್ಕೆ ಖಂಡಿತಾ ಹಾನಿ ಮಾಡುತ್ತವೆ.

ಕೂದಲು ಮತ್ತು ಚರ್ಮಕ್ಕಾಗಿ ಯಾವ ಬಗೆಯ ಕಾಸ್ಮೆಟಿಕ್ಸ್ ಆರಿಸಬೇಕು ಎಂಬುದನ್ನು ತಜ್ಞರ ಸಲಹೆ ಮೇರೆಗೆ ತಿಳಿಯೋಣ. ನಮ್ಮ ಚರ್ಮಕ್ಕೆ ತಕ್ಕಂತೆ ಕಾಸ್ಮೆಟಿಕ್ಸ್ ಆರಿಸಿಕೊಳ್ಳಬೇಕು. ಆಕರ್ಷಕ ಜಾಹೀರಾತಿಗೆ ಮರುಳಾಗಿ ಇದನ್ನು ಕೊಳ್ಳಬಾರದು. ಇದನ್ನು ಆರಿಸುವಾಗ ಆದಷ್ಟೂ ಎಚ್ಚರಿಕೆಯಿಂದಿರಬೇಕು. ಪ್ರತಿಯೊಬ್ಬರ ಚರ್ಮ ವಿಭಿನ್ನವೇ ಆಗಿರುತ್ತದೆ. ಏಕೆಂದರೆ ಪ್ರತಿಯೊಬ್ಬ ವಯಸ್ಸಿನವರ ಚರ್ಮದ ಅಗತ್ಯ ಬೇರೆ ಬೇರೆಯೇ ಆಗಿರುತ್ತದೆ. ಹೀಗಾಗಿ ನಿಮ್ಮ ವಯಸ್ಸು ಮತ್ತು ಚರ್ಮದ ಟೈಪ್‌ ಪ್ರಕಾರ ಕಾಸ್ಮೆಟಿಕ್ಸ್ ಆರಿಸಿ.

ಬೆಸ್ಟ್ ಹೇರ್ಕೇರ್ಪ್ರಾಡಕ್ಟ್ಸ್

ಕೂದಲಿಗೆ ಸದಾ ಬೆಸ್ಟ್ ಎನಿಸುವ ಕಾಸ್ಮೆಟಿಕ್ಸ್ ನ್ನೇ ಖರೀದಿಸಿ. ಇವು ತುಸು ದುಬಾರಿ ಎನಿಸಬಹುದು. ಆದರೆ ಇದನ್ನು ಬಳಸುವುದರಿಂದ ಕೂದಲಿನ ಆರೈಕೆಯ ಚಿಂತೆ ತಪ್ಪುತ್ತದೆ. ಇದರಿಂದ ಕೂದಲಿಗೆ ಯಾವುದೇ ಬಗೆಯ ಹಾನಿ ಇರುವುದಿಲ್ಲ, ಸೈಡ್ ಎಫೆಕ್ಟ್ಸ್ ಕೂಡ! ಹೇರ್‌ ಸ್ಟೈಲಿಂಗ್‌, ಕರ್ಲಿಂಗ್‌, ಶ್ಯಾಂಪೂ, ಕಂಡೀಶನರ್ಸ್‌ ಗಾಗಿ ನೀವು ಶ್ವಾರ್ರ್‌ ಕೋಫ್‌, ವಾರಿಯಲ್, ಮ್ಯಾಟ್ರಿಸ್‌, ರೆವ್ವಾನ್‌ ಬ್ರಾಂಡ್‌ ನ ಪ್ರಾಡಕ್ಟ್ಸ್ ಖರೀದಿಸಬಹುದು. ಈ ಎಲ್ಲಾ ಬ್ರಾಂಡ್ಸ್ ನ ಹೇರ್‌ ಕಲರ್ಸ್‌ ನಲ್ಲಿ ಅಮೋನಿಯಾ ಅಂಶ ಬಲು ಕನಿಷ್ಠ ಮಟ್ಟದಲ್ಲಿರುತ್ತದೆ. ಇದರಿಂದಾಗಿ ಕೂದಲು ಅತಿ ಡ್ರೈ ಮತ್ತು ನಿರ್ಜೀವ ಆಗುವುದಿಲ್ಲ. ಕಲರ್ಸ್‌ಹೈಲೈಟಿಂಗ್ ನಿಂದಾಗಿ ಕೂದಲ ಮೇಲೆ ತುಸು ಪರಿಣಾಮ ಆಗಬಹುದು. ಆದರೆ ಅದನ್ನು ತೆಗೆಯಬೇಕಾದಾಗ ಉತ್ತಮ ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್ ‌ಬಳಸಲು ಮರೆಯದಿರಿ, ಆಗ ಹಾನಿ ಆಗದು.

ಬೆಸ್ಟ್ ಫೇಸ್ಪ್ರಾಡಕ್ಟ್ಸ್ 

kaise-chune-2

ಫೌಂಡೇಶನ್‌: ನಿಮ್ಮ ಚರ್ಮದ ಬಣ್ಣ, ಟೆಕ್ಸ್ ಚರ್‌ ಅನುಸರಿಸಿಯೇ ಇದನ್ನು ಆರಿಸಬೇಕು. ಆಯ್ಲಿ, ಡ್ರೈ, ಮಿಕ್ಸ್ಡ್, ನಾರ್ಮಲ್, ಸಂವೇದನಾಶೀಲ ಚರ್ಮಗಳಲ್ಲಿ ನಿಮ್ಮದು ಯಾವ ಬಗೆ ಎಂದು ನಿರ್ಧರಿಸಿಕೊಂಡೇ ಕಾಸ್ಮೆಟಿಕ್ಸ್ ಖರೀದಿಸಿ. ಓರಿಫ್ಲೇಮ್ ನ ಲಾಂಗ್‌ ಲಾಸ್ಟಿಂಗ್‌ ಮಿನರಲ್ ಫೌಂಡೇಶನ್‌ ಸುಲಭವಾಗಿ ಮುಖದಲ್ಲಿ ವಿಲೀನಗೊಳ್ಳುತ್ತದೆ. ಇದು ಚರ್ಮಕ್ಕೆ ಗ್ಲೋ ನೀಡುವುದಲ್ಲದೆ, ಚರ್ಮಕ್ಕೆ ಸೂರ್ಯ ಕಿರಣಗಳಿಂದಾಗುವ ಹಾನಿಯನ್ನೂ ತಪ್ಪಿಸುತ್ತದೆ. ಇದರಲ್ಲಿ `ಪ್ರಿಶಿಯಸ್‌ ಇಟಾಲಿಯನ್‌ ಯೂನಿಕ್ ಮಿನರಲ್’ ಅಡಗಿದ್ದು, ಅದು ಚರ್ಮದ ಆರೈಕೆ ಮಾಡುವುದರ ಜೊತೆಗೆ ಆ್ಯಂಟಿ ಏಜಿಂಗ್‌ ಕೆಲಸವನ್ನೂ ಮಾಡುತ್ತದೆ.

ಮ್ಯಾಕ್‌ ಪ್ರೋಲಾಂಗ್‌ ವೇರ್‌ ಸಹ ಒಂದು ಉತ್ತಮ ಫೌಂಡೇಶನ್‌ ಆಗಿದ್ದು, ಚರ್ಮಕ್ಕೆ ಅದ್ಭುತ ಕಾಂತಿ ಒದಗಿಸುತ್ತದೆ. ಓರಿಫ್ಲೇಮ್, ಮ್ಯಾಕ್‌, ಫೇಸಸ್‌, ಬೇರ್‌ ಮಿನರಲ್ಸ್, ಮ್ಯಾಟ್‌ ಫೌಂಡೇಶನ್‌, ಬ್ರಾಂಡ್‌ ಸ್ಪೆಕ್ಟ್ರಂ, SPF 15, ಲಾ ಪ್ರೇರಿ ಸ್ಕಿನ್‌ ಕೆವಿಯರ್‌ ಕನ್ಸೀಲರ್‌ ಫೌಂಡೇಶನ್‌ ಇತ್ಯಾದಿ ಎಲ್ಲ ಉಚ್ಚಕೋಟಿ ಉತ್ಪನ್ನಗಳೆನಿಸಿವೆ.

ಮೇಕಪ್ಕಾಸ್ಮೆಟಿಕ್ಸ್ : ಕಾಜಲ್ ಓರಿಫ್ಲೇಮ್, ಲ್ಯಾಕ್ಮೆ, ಮೆಬಲೀನ್‌, ಮ್ಯಾಕ್‌ ಉತ್ಪನ್ನಗಳಿಂದ ಆರಿಸಿ. ಐ ಶ್ಯಾಡೋವನ್ನು ಜುವಿಯಾಸ್‌ ಪ್ಲೇಸ್‌, ಮೇಕಪ್‌ ರೆವೆಲ್ಯೂಶನ್‌ ಇತ್ಯಾದಿಗಳಿಂದ ಖರೀದಿಸಿ.

ಬೆಸ್ಟ್ ಮೇಕಪ್ಪ್ರಾಡಕ್ಟ್ಸ್

ಸೆಟಿಂಗ್ಪೌಡರ್‌ : ಲ್ಯಾರೋ ಮರ್ಸಿಯರ್‌, ಮ್ಯಾಕ್‌.

ಕನ್ಸೀಲರ್‌ : ಮೇಕಪ್‌ ರೆಲ್ಯೂಶನ್‌, ಫೇಸಸ್‌, ಬಾಬಿ ಬ್ರೌನ್‌.

ಕಂಟೂರ್‌ : ಕಟ್‌ ಲೇನ್‌ ಡೀ ಶೇಡ್‌ ಲೈಟ್‌, ಮ್ಯಾಕ್‌.

ಹೈಲೈಟರ್‌ : ದಿ ಬ್ಲೆಮ್ ಮೇರಿ ಲೆಮನೈಸರ್‌.

ಲಿಪ್ಸ್ಟಿಕ್‌ : ಮ್ಯಾಕ್‌, ಓರಿಫ್ಲೇಮ್,  ಮೆಬಲಿನ್‌.

ಆ್ಯಂಟಿ ಏಜಿಂಗ್ಕ್ರೀಂ : ಓರಿಫ್ಲೇಮ್ ಕಾಸ್ಮೆಟಿಕ್ಸ್ ನ ಆ್ಯಂಟಿ ಏಜಿಂಗ್‌ ಕ್ರೀಮನ್ನು ಭಾರತೀಯ ಹವಾಮಾನವನ್ನು ಗಮನದಲ್ಲಿರಿಸಿಕೊಂಡೇ ನೋ ಏಜ್‌ ನ್ನು 3 ಸರಣಿಗಳಲ್ಲಿ ತರಲಾಗಿದೆ. 30-50ರ ವಯಸ್ಸಿನವರೆಗೂ ಮುಖದ ಮೇಲೆ ಹೆಚ್ಚಬಹುದಾದ ಸುಕ್ಕುಗಳನ್ನು ನಿವಾರಿಸಲು ಈ ಬ್ಯೂಟಿ ಕ್ರೀಂ ನೆರವಾಗುತ್ತದೆ. ಓಲೆ ಆ್ಯಂಟಿ ಏಜಿಂಗ್‌ ಕ್ರೀಮಿಗೆ ಸಹ ಅತ್ಯುತ್ತಮ ಪರಿಣಾಮ ಲಭಿಸಿದೆ.

ಪ್ರೊಕೊಲ್ಯಾಜೆನ್ಮೆರೀನ್

ಕ್ರೀಮ್ ಬಳಸುವ ಹೆಂಗಸರ ಮಾತಿನ ಪ್ರಕಾರ, ಯಾವುದೇ ಸಂದೇಹವಿಲ್ಲದೆ ಈ ಕ್ರೀಂ ಬಳಸಬಹುದು. ಕೇವಲ 15 ದಿನಗಳಲ್ಲೇ ನಿಮಗೆ ಮುಖದಲ್ಲಿ ವ್ಯತ್ಯಾಸ ತಿಳಿಯುತ್ತದೆ. ಬಾಬಿ ಬ್ರೌನ್‌ ಎಕ್ಸ್ ಟ್ರಾ ಐ ರಿಪೇರ್‌ ಕ್ರೀಂ ಸಹ ಅತ್ಯುತ್ತಮ ಎನಿಸಿದೆ.

ಅನಾಮಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ