ವಡೆ ಚಾಕಲೇಟ್ಪುಡಿಂಗ್

ಸಾಮಗ್ರಿ : 150 ಗ್ರಾಂ ಉದ್ದಿನಬೇಳೆ, 100 ಗ್ರಾಂ ಹೆಸರುಬೇಳೆ, 4-5 ಚಮಚ ಸಕ್ಕರೆ, ಎಳ್ಳು, ಅರ್ಧ ಕಪ್‌ ಡ್ರೈಫ್ರೂಟ್ಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, 1 ಕಪ್‌ ಡಾರ್ಕ್‌ ಕುಕಿಂಗ್‌ ಚಾಕಲೇಟ್‌, 2 ಕಪ್‌ ಕ್ರೀಂ, ಅರ್ಧ ಕಪ್‌ತುಂಡರಿಸಿದ ಸ್ಟ್ರಾಬೆರಿ, 2-3 ತುಂಡು ಅನಾನಸ್‌, ಹೆಚ್ಚಿದ 1 ಕಿವೀ ಫ್ರೂಟ್‌, 1-1 ಕಪ್‌ ಗೊಟಾಯಿಸಿದ ಕ್ರೀಂ ಸೀಡ್‌ ಲೆಸ್‌ ದ್ರಾಕ್ಷಿ, 2-3 ಚಾಕಲೇಟ್‌ಕುಕೀಸ್‌, ಕರಿಯಲು ಎಣ್ಣೆ.

ವಿಧಾನ : ನೆನೆಸಿದ ಬೇಳೆಗಳನ್ನು ರುಬ್ಬಿದ ನಂತರ, ಅದಕ್ಕೆ ಸಕ್ಕರೆ, ಎಳ್ಳು, ಉಪ್ಪು, ಮೆಣಸು, ಡ್ರೈಫ್ರೂಟ್ಸ್ ಸೇರಿಸಿ, ಕಾದ ಎಣ್ಣೆಯಲ್ಲಿ ವಡೆ ಕರಿದು ಬೇರೆಯಾಗಿ ಎತ್ತಿಡಿ. ಆಮೇಲೆ ಮೈಕ್ರೋವೇವ್ ‌ನಲ್ಲಿ ಕ್ರೀಂ ಮತ್ತು ಡಾರ್ಕ್‌ ಚಾಕಲೇಟ್ ನ್ನು 30 ಕ್ಷಣಗಳಿರಿಸಿ ಕರಗಿಸಿರಿ. ಹಣ್ಣುಗಳನ್ನು ಹೆಚ್ಚಿಡಿ. ಒಂದು ಸರ್ವಿಂಗ್‌ ಬಟ್ಟಲಲ್ಲಿ ವಡೆ ಹರಡಿಕೊಳ್ಳಿ. ಇದರ ಮೇಲೆ ಚಾಕಲೇಟ್‌ ಮಿಕ್ಸ್ ಹರಡಿ, ಕ್ರೀಂ ಕೂಡ ಸೇರಿಸಿ. ಎಲ್ಲಕ್ಕೂ ಮೇಲೆ ಹಣ್ಣುಗಳಿರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.

ಕ್ಯಾರೆಮಲ್ ಫ್ರೂಟ್ವಡೆ

ಸಾಮಗ್ರಿ : 150 ಗ್ರಾಂ ಉದ್ದಿನಬೇಳೆ, 100 ಗ್ರಾಂ ಹೆಸರುಬೇಳೆ, 2-3 ಮಾಗಿದ ಬಾಳೆಹಣ್ಣು, 4-5 ಚಮಚ ಬೆಣ್ಣೆ, 2-3 ಚಮಚ ಬಿಳಿ ಎಳ್ಳು, 1 ದೊಡ್ಡ ಚಮಚ ಸಣ್ಣಗೆ ಹೆಚ್ಚಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಕ್ಕರೆ, ಅಗತ್ಯವಿದ್ದಷ್ಟು ಹೆಚ್ಚಿದ ಸೇಬು ಸ್ಟ್ರಾಬೆರಿ ಅನಾನಸ್‌ ಕಿವೀ ಫ್ರೂಟ್‌ ಸಪೋಟ, 1 ಕಪ್‌ ಫ್ರೆಶ್‌ ಕ್ರೀಂ, ಕರಿಯಲು ಎಣ್ಣೆ, 1 ಚಮಚ ದಾಲ್ಚಿನ್ನಿ ಚೂರು ಸ್ಟಾರ್‌ ಅನೀಸ್‌.

ವಿಧಾನ : ಉದ್ದಿನಬೇಳೆ ಹಾಗೂ ಹೆಸರುಬೇಳೆಗಳನ್ನು ನೆನೆಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಶುಂಠಿ, ಉಪ್ಪು, ಮೆಣಸು, ಸಕ್ಕರೆ, ಮಸೆದ ಬಾಳೆಹಣ್ಣು, ಎಳ್ಳು ಇತ್ಯಾದಿ ಸೇರಿಸಿ ಚೆನ್ನಾಗಿ ಗೊಟಾಯಿಸಿ, ಇದರಿಂದ ವಡೆ ತಯಾರಿಸಿ ಬೇರೆಯಾಗಿಡಿ. ಒಂದು ಸಣ್ಣ ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿದ ಹಣ್ಣು, ತುಸು ಸಕ್ಕರೆ, ದಾಲ್ಚಿನ್ನಿ, ಸ್ಟಾರ್‌ ಅನೀಸ್‌ ಹಾಕಿ ಕೆದಕಬೇಕು,  (1-2 ನಿಮಿಷ ಸಾಕು, ಹೆಚ್ಚು ಹೊತ್ತು ಬೇಡ, ಇಲ್ಲದಿದ್ದರೆ ಮಸಾಲೆ ಪದಾರ್ಥ ಸೀದ ರುಚಿ ನೀಡುತ್ತದೆ.) ಕೆಳಗಿಳಿಸಿ ಆರಲು ಬಿಡಿ. ಒಂದು ದೊಡ್ಡ ಬಟ್ಟಲಿಗೆ ಹೆಚ್ಚಿದ ಹಣ್ಣು, ನಡುನಡುವೆ ವಡೆಗಳು, ಇದರ ಮೇಲೆ ಬೀಟ್‌ ಮಾಡಿಕೊಂಡ ಫ್ರೆಶ್‌ ಕ್ರೀಂ ಹರಡಿ, ಎಲ್ಲಕ್ಕೂ ಮೇಲೆ ಕಿವೀ ಫ್ರೂಟ್ಸ್ ಬರುವಂತೆ ಅಲಂಕರಿಸಿ ಸವಿಯಲು ಕೊಡಿ.

ವಡೆ ಮಂಚೂರಿಯನ್

ಸಾಮಗ್ರಿ : 500 ಗ್ರಾಂ ಉದ್ದಿನಬೇಳೆ, 1-2 ಈರುಳ್ಳಿ, ಅರ್ಧ ಕಪ್‌ ಹೆಚ್ಚಿದ ಕೊ.ಸೊಪ್ಪು, 3-4 ಹಸಿಮೆಣಸು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸೋಯಾ ಸಾಸ್‌, ವಿನಿಗರ್‌, ಸಕ್ಕರೆ, ಖಾರದಪುಡಿ, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್ ಕಾರ್ನ್‌ ಫ್ಲೋರ್‌, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಸ್ಕೂಪ್‌ ಗೊಳಿಸಿದ ತುಸು ಝುಕೀನಿ, ಹೆಚ್ಚಿದ 1-1 ಹಳದಿ ಕೆಂಪು ಹಸಿರು ಕ್ಯಾಪ್ಸಿಕಂ ಹಾಗೂ ಟೊಮೇಟೊ.

ವಿಧಾನ : ಮೊದಲು ನೆನೆಸಿದ ಬೇಳೆಯ ಹಿಟ್ಟು ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಕೊ.ಸೊಪ್ಪು, ಉಪ್ಪು, ಮೆಣಸು, ಶುಂಠಿ/ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಕದಡಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದರಿಂದ ವಡೆ ಕರೆಯಿರಿ. ಒಂದು ಬಟ್ಟಲಿಗೆ 1 ಕಪ್‌ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಕಾರ್ನ್‌ ಫ್ಲೋರ್‌, ಸೋಯಾಸಾಸ್‌, ವಿನಿಗರ್‌, ಸಕ್ಕರೆ, ಖಾರದ ಪುಡಿ, ಉಪ್ಪು ಸೇರಿಸಿ ಗೊಟಾಯಿಸಿ. ಒಂದು ಸಣ್ಣ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಹೆಚ್ಚಿದ ತರಕಾರಿ ಸೇರಿಸಿ ಬಾಡಿಸಿ. ನಂತರ ಇದಕ್ಕೆ ಕಾರ್ನ್‌ ಫ್ಲೋರ್‌ ಮಿಶ್ರಣ ಬೆರೆಸಿ, ಮಂದ ಉರಿಯಲ್ಲಿ ನಿಧಾನವಾಗಿ ಕೈಯಾಡಿಸಿ. ಕೊನೆಯಲ್ಲಿ ಹುರಿದ ಎಳ್ಳು, ವಡೆ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಲೋಟಸ್ಮಂಚೂರಿಯನ್

ಸಾಮಗ್ರಿ : 150 ಗ್ರಾಂ ಬೆಂದ ಕಮಲದ ದಂಟಿನ ಹೋಳು, 100 ಗ್ರಾಂ ಸ್ಕೂಪ್‌ ಗೊಳಿಸಿದ ಝುಕೀನಿ, 2 ಈರುಳ್ಳಿ, 4 ಚಮಚ ಹೆಚ್ಚಿದ ಕೊ.ಸೊಪ್ಪು, 50 ಗ್ರಾಂ ಹಸಿ ಕಡಲೆಕಾಳು, 1 ಚಮಚ ಹೆಚ್ಚಿದ ಶುಂಠಿ ಚೂರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಜಿನೋಮೋಟೋ, ವಿನಿಗರ್‌, ಕ್ಯಾಪ್ಸಿಕೊ  ಸಾಸ್‌, ಅರ್ಧ ಕಪ್‌ ಮೈದಾ, ಕರಿಯಲು ಎಣ್ಣೆ.

ವಿಧಾನ : ಕಮಲದ ದಂಟಿನ ಹೋಳು ಹೊರತುಪಡಿಸಿ, ಉಳಿದೆಲ್ಲವನ್ನೂ ಬೆರೆಸಿಕೊಂಡು ಪಕೋಡ ಮಿಶ್ರಣದಂತೆ ಕಲಸಿಡಿ. ಇದರಿಂದ ಚಿತ್ರದಲ್ಲಿರುವಂತೆ ಕೋಫ್ತಾ ಆಕಾರದಲ್ಲಿ ಮಾಡಿಕೊಳ್ಳಿ. ಇದರ ಸುತ್ತಲೂ ಕಮಲದ ದಂಟಿನ ಹೋಳುಗಳನ್ನು ಮೆತ್ತಿಕೊಳ್ಳುವಂತೆ ಮಾಡಿ. ಇವನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಹುಳಿ ಸಿಹಿ ಶರಬತ್ತು

ಸಾಮಗ್ರಿ : 100 ಗ್ರಾಂ ಬೆಲ್ಲ, 3-4 ಹಸಿ ಖರ್ಜೂರ, 1 ಸಣ್ಣ ಚಮಚ ಹುರಿದ ಜೀರಿಗೆಯ ಪುಡಿ, 1 ನಿಂಬೆ ಗಾತ್ರದ ಹುಣಿಸೇಹಣ್ಣು, ರುಚಿಗೆ ತಕ್ಕಷ್ಟು ಬ್ಲ್ಯಾಕ್‌ ಸಾಲ್ಟ್ ಸಿಹಿ ಸೋಂಪು.

ವಿಧಾನ : ಮೊದಲು ಹುಣಿಸೇಹಣ್ಣನ್ನು ನೆನೆಹಾಕಿ, ಚೆನ್ನಾಗಿ ಕಿವುಚಿ ಅದರ ರಸ ಸಿದ್ಧಪಡಿಸಿ. ಹಸಿ ಖರ್ಜೂರಕ್ಕೆ ತಣ್ಣೀರು ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಬೆಲ್ಲವನ್ನು 1 ಬಟ್ಟಲು ನೀರಿನಲ್ಲಿ ಚೆನ್ನಾಗಿ ಕರಗಿಸಿದ ನಂತರ, ಇವೆರಡನ್ನೂ ಅದಕ್ಕೆ ಬೆರೆಸಿಕೊಳ್ಳಿ. ಜೊತೆಗೆ ಜೀರಿಗೆ ಪುಡಿ, ಬ್ಲ್ಯಾಕ್‌ ಸಾಲ್ಟ್ ಹಾಕಿ ಚೆನ್ನಾಗಿ ಕದಡಿಕೊಳ್ಳಿ. ಇದನ್ನು 1-2 ತಾಸು ಫ್ರಿಜ್‌ ನಲ್ಲಿರಿಸಿ. ನಂತರ ಸಿಹಿ ಸೋಂಪು ತೇಲಿಬಿಟ್ಟು, ಸವಿಯಲು ಕೊಡಿ.

ಡ್ರೈಫ್ರೂಟ್ಸ್ ಗ್ಲೋರಿ

ಸಾಮಗ್ರಿ : 3 ಕಪ್‌ ಹಾಲು, ಅರ್ಧ ಕಪ್‌ ಕೆನೆ ಮೊಸರು ಅಗತ್ಯವಿದ್ದಷ್ಟು ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಖರ್ಜೂರದ ಚೂರು ಕುಂಬಳ, ಕಲ್ಲಂಗಡಿ, ಕರ್ಬೂಜಾ ಬೀಜ, 2-3 ಚಿಟಕಿ ಉಪ್ಪು, ಮೆಣಸು, ಸೋಯಾ ಪೌಡರ್‌, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ, ಕ್ರೀಂ.

ವಿಧಾನ : ಹಿಂದಿನ ರಾತ್ರಿ ಕಾದಾರಿದ ಹಾಲಿಗೆ ಡ್ರೈಫ್ರೂಟ್ಸ್, ಕುಂಬಳ ಬೀಜ ಇತ್ಯಾದಿಗಳನ್ನು ನೆನೆಹಾಕಿ. ಮಾರನೇ ದಿನ ಉಳಿದೆಲ್ಲ ಸಾಮಗ್ರಿಗಳೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಇದಕ್ಕೆ ಕೊನೆಯಲ್ಲಿ ಕ್ರೀಂ ಸೇರಿಸಿ, ಇನ್ನೊಂದಿಷ್ಟು ಬಾದಾಮಿ ಚೂರು ತೇಲಿಬಿಟ್ಟು, ಪುಡಿಐಸ್‌ ಹಾಕಿ ಸವಿಯಲು ಕೊಡಿ.

ಲೆಮನ್ಜಿಂಜರ್ಜೂಸ್

ಸಾಮಗ್ರಿ : 2 ಕ್ಯಾರೆಟ್‌, 2 ಸೇಬು, 1 ತುಂಡು ಶುಂಠಿ, 1 ನಿಂಬೆಹಣ್ಣು, 2-3 ಐಸ್‌ ಕ್ಯೂಬ್ಸ್, ಚಿಟಕಿ ಉಪ್ಪು.

ವಿಧಾನ : ಕ್ಯಾರೆಟ್‌, ಸೇಬು, ಶುಂಠಿಗಳ ಸಿಪ್ಪೆ ಹೆರೆದು, ಹೋಳು ಮಾಡಿ ಮಿಕ್ಸಿಗೆ ಹಾಕಿ. ಇದಕ್ಕೆ ಉಪ್ಪು, ತುಸು ದಾಲ್ಚಿನ್ನಿ ಪುಡಿ, ನಿಂಬೆಹಣ್ಣು ಹಿಂಡಿಕೊಂಡು ಜೂಸ್‌ ಸಿದ್ಧಪಡಿಸಿ. ಇದನ್ನು ಗ್ಲಾಸಿಗೆ ಬಗ್ಗಿಸಿ, ಐಸ್‌ ಕ್ಯೂಬ್ಸ್ ತೇಲಿಬಿಟ್ಟು ಸವಿಯಲು ಕೊಡಿ.

ಟೊಮೇಟೊ ಗಾರ್ಲಿಕ್ಡ್ರಿಂಕ್

ಸಾಮಗ್ರಿ : 2 ಟೊಮೇಟೊ, 2 ಸೇಬು, 2-3 ಎಸಳು ಬೆಳ್ಳುಳ್ಳಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ (ಸೇಬಿನ ಸಿಪ್ಪೆ ಸುಲಿದಿರಬೇಕು) ಮಿಕ್ಸಿಯಲ್ಲಿ ತಿರುವಿ ಜೂಸ್‌ ಸಿದ್ಧಪಡಿಸಿ. ಇದನ್ನು ಗ್ಲಾಸುಗಳಿಗೆ ಬಗ್ಗಿಸಿ, ಮೇಲೊಂದಿಷ್ಟು ಪುಡಿಐಸ್‌ ಹಾಕಿ ಸವಿಯಲು ಕೊಡಿ.

ಸೌತೆ ಮೂಲಂಗಿ ಸ್ಪೆಷಲ್

ಸಾಮಗ್ರಿ : 1 ಚಿಕ್ಕ ತಾಜಾ ಸೌತೇಕಾಯಿ, 2 ಮೂಲಂಗಿ, 1 ತುಂಡು ಶುಂಠಿ, 1 ನಿಂಬೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಕ್ಕರೆ, ಮೊಸರು.

ವಿಧಾನ : ಸೌತೆ ಮೂಲಂಗಿಯ ಸಿಪ್ಪೆ ಹೆರೆದು, ನೀಟಾಗಿ ತುರಿದು, ಶುಂಠಿ, ಮೊಸರು, ಉಪ್ಪು, ಸಕ್ಕರೆ, ಮೆಣಸು ಇತ್ಯಾದಿ ಬೆರೆಸಿ ಮಿಕ್ಸಿಯಲ್ಲಿ ರಸ ಸಿದ್ಧಪಡಿಸಿ. ಇದನ್ನು ಗ್ಲಾಸುಗಳಿಗೆ ಸುರಿದು, ಪುಡಿಐಸ್‌ ತೇಲಿಬಿಟ್ಟು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಸಿದ್ದೋಟಿ ಪಾನಕ

ಸಾಮಗ್ರಿ : 1 ಮಾಗಿದ ಸಿದ್ದೋಟಿ ಹಣ್ಣು (ಉದ್ದನೆಯ ಕೆಂಪು ಹಳದಿ ಕರ್ಬೂಜ), ಅರ್ಧ ಕಪ್‌ ಪುಡಿ ಮಾಡಿದ ಮುದ್ದೆಬೆಲ್ಲ, ರುಚಿಗೆ ತಕ್ಕಷ್ಟು ನಿಂಬೆರಸ, ಏಲಕ್ಕಿ, ಜೇನುತುಪ್ಪ.

ವಿಧಾನ : ಸಿದ್ದೋಟಿ ಹಣ್ಣಿನ ಸಿಪ್ಪೆ ಹೆರೆದು, ಬೀಜ ಬೇರ್ಪಡಿಸಿ, ಹೋಳು ಮಾಡಿ. ಇದನ್ನು ಇತರ ಸಾಮಗ್ರಿಗಳೊಂದಿಗೆ ಮಿಕ್ಸಿಯಲ್ಲಿ ತಿರುವಿಕೊಂಡು, ಪುಡಿಐಸ್‌ ಸೇರಿಸಿ, ಗ್ಲಾಸುಗಳಿಗೆ ಸುರಿದು, ಅನಾನಸ್‌ ತುಂಡು, ಪುದೀನಾ ಎಸಳಿನಿಂದ ಅಲಂಕರಿಸಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ