ವಡೆ ಚಾಕಲೇಟ್ ಪುಡಿಂಗ್
ಸಾಮಗ್ರಿ : 150 ಗ್ರಾಂ ಉದ್ದಿನಬೇಳೆ, 100 ಗ್ರಾಂ ಹೆಸರುಬೇಳೆ, 4-5 ಚಮಚ ಸಕ್ಕರೆ, ಎಳ್ಳು, ಅರ್ಧ ಕಪ್ ಡ್ರೈಫ್ರೂಟ್ಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, 1 ಕಪ್ ಡಾರ್ಕ್ ಕುಕಿಂಗ್ ಚಾಕಲೇಟ್, 2 ಕಪ್ ಕ್ರೀಂ, ಅರ್ಧ ಕಪ್‌ತುಂಡರಿಸಿದ ಸ್ಟ್ರಾಬೆರಿ, 2-3 ತುಂಡು ಅನಾನಸ್, ಹೆಚ್ಚಿದ 1 ಕಿವೀ ಫ್ರೂಟ್, 1-1 ಕಪ್ ಗೊಟಾಯಿಸಿದ ಕ್ರೀಂ ಸೀಡ್ ಲೆಸ್ ದ್ರಾಕ್ಷಿ, 2-3 ಚಾಕಲೇಟ್‌ಕುಕೀಸ್, ಕರಿಯಲು ಎಣ್ಣೆ.
ವಿಧಾನ : ನೆನೆಸಿದ ಬೇಳೆಗಳನ್ನು ರುಬ್ಬಿದ ನಂತರ, ಅದಕ್ಕೆ ಸಕ್ಕರೆ, ಎಳ್ಳು, ಉಪ್ಪು, ಮೆಣಸು, ಡ್ರೈಫ್ರೂಟ್ಸ್ ಸೇರಿಸಿ, ಕಾದ ಎಣ್ಣೆಯಲ್ಲಿ ವಡೆ ಕರಿದು ಬೇರೆಯಾಗಿ ಎತ್ತಿಡಿ. ಆಮೇಲೆ ಮೈಕ್ರೋವೇವ್ ನಲ್ಲಿ ಕ್ರೀಂ ಮತ್ತು ಡಾರ್ಕ್ ಚಾಕಲೇಟ್ ನ್ನು 30 ಕ್ಷಣಗಳಿರಿಸಿ ಕರಗಿಸಿರಿ. ಹಣ್ಣುಗಳನ್ನು ಹೆಚ್ಚಿಡಿ. ಒಂದು ಸರ್ವಿಂಗ್ ಬಟ್ಟಲಲ್ಲಿ ವಡೆ ಹರಡಿಕೊಳ್ಳಿ. ಇದರ ಮೇಲೆ ಚಾಕಲೇಟ್ ಮಿಕ್ಸ್ ಹರಡಿ, ಕ್ರೀಂ ಕೂಡ ಸೇರಿಸಿ. ಎಲ್ಲಕ್ಕೂ ಮೇಲೆ ಹಣ್ಣುಗಳಿರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಿರಿ.
ಕ್ಯಾರೆಮಲ್ ಫ್ರೂಟ್ ವಡೆ
ಸಾಮಗ್ರಿ : 150 ಗ್ರಾಂ ಉದ್ದಿನಬೇಳೆ, 100 ಗ್ರಾಂ ಹೆಸರುಬೇಳೆ, 2-3 ಮಾಗಿದ ಬಾಳೆಹಣ್ಣು, 4-5 ಚಮಚ ಬೆಣ್ಣೆ, 2-3 ಚಮಚ ಬಿಳಿ ಎಳ್ಳು, 1 ದೊಡ್ಡ ಚಮಚ ಸಣ್ಣಗೆ ಹೆಚ್ಚಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸಕ್ಕರೆ, ಅಗತ್ಯವಿದ್ದಷ್ಟು ಹೆಚ್ಚಿದ ಸೇಬು ಸ್ಟ್ರಾಬೆರಿ ಅನಾನಸ್ ಕಿವೀ ಫ್ರೂಟ್ ಸಪೋಟ, 1 ಕಪ್ ಫ್ರೆಶ್ ಕ್ರೀಂ, ಕರಿಯಲು ಎಣ್ಣೆ, 1 ಚಮಚ ದಾಲ್ಚಿನ್ನಿ ಚೂರು ಸ್ಟಾರ್ ಅನೀಸ್.
ವಿಧಾನ : ಉದ್ದಿನಬೇಳೆ ಹಾಗೂ ಹೆಸರುಬೇಳೆಗಳನ್ನು ನೆನೆಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಶುಂಠಿ, ಉಪ್ಪು, ಮೆಣಸು, ಸಕ್ಕರೆ, ಮಸೆದ ಬಾಳೆಹಣ್ಣು, ಎಳ್ಳು ಇತ್ಯಾದಿ ಸೇರಿಸಿ ಚೆನ್ನಾಗಿ ಗೊಟಾಯಿಸಿ, ಇದರಿಂದ ವಡೆ ತಯಾರಿಸಿ ಬೇರೆಯಾಗಿಡಿ. ಒಂದು ಸಣ್ಣ ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿದ ಹಣ್ಣು, ತುಸು ಸಕ್ಕರೆ, ದಾಲ್ಚಿನ್ನಿ, ಸ್ಟಾರ್ ಅನೀಸ್ ಹಾಕಿ ಕೆದಕಬೇಕು, (1-2 ನಿಮಿಷ ಸಾಕು, ಹೆಚ್ಚು ಹೊತ್ತು ಬೇಡ, ಇಲ್ಲದಿದ್ದರೆ ಮಸಾಲೆ ಪದಾರ್ಥ ಸೀದ ರುಚಿ ನೀಡುತ್ತದೆ.) ಕೆಳಗಿಳಿಸಿ ಆರಲು ಬಿಡಿ. ಒಂದು ದೊಡ್ಡ ಬಟ್ಟಲಿಗೆ ಹೆಚ್ಚಿದ ಹಣ್ಣು, ನಡುನಡುವೆ ವಡೆಗಳು, ಇದರ ಮೇಲೆ ಬೀಟ್ ಮಾಡಿಕೊಂಡ ಫ್ರೆಶ್ ಕ್ರೀಂ ಹರಡಿ, ಎಲ್ಲಕ್ಕೂ ಮೇಲೆ ಕಿವೀ ಫ್ರೂಟ್ಸ್ ಬರುವಂತೆ ಅಲಂಕರಿಸಿ ಸವಿಯಲು ಕೊಡಿ.
ವಡೆ ಮಂಚೂರಿಯನ್
ಸಾಮಗ್ರಿ : 500 ಗ್ರಾಂ ಉದ್ದಿನಬೇಳೆ, 1-2 ಈರುಳ್ಳಿ, ಅರ್ಧ ಕಪ್ ಹೆಚ್ಚಿದ ಕೊ.ಸೊಪ್ಪು, 3-4 ಹಸಿಮೆಣಸು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಸೋಯಾ ಸಾಸ್, ವಿನಿಗರ್, ಸಕ್ಕರೆ, ಖಾರದಪುಡಿ, ಶುಂಠಿ/ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್ ಕಾರ್ನ್ ಫ್ಲೋರ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಸ್ಕೂಪ್ ಗೊಳಿಸಿದ ತುಸು ಝುಕೀನಿ, ಹೆಚ್ಚಿದ 1-1 ಹಳದಿ ಕೆಂಪು ಹಸಿರು ಕ್ಯಾಪ್ಸಿಕಂ ಹಾಗೂ ಟೊಮೇಟೊ.