ಮಿನಿ ಹಾಟ್ಡಾಗ್

ಸಾಮಗ್ರಿ : 1-2 ತುಂಡು ಬೋನ್‌ ಲೆಸ್‌ ಚಿಕನ್‌, 1-2 ಪೀಸ್‌ ಹಾಟ್‌ ಡಾಗ್‌ ಬನ್‌, 300 ಗ್ರಾಂ ಈರುಳ್ಳಿ, ಇಂಗ್ಲಿಷ್‌ ಮಸ್ಟರ್ಡ್‌ ಹೆಚ್ಚಿದ ಲೆಟ್ಯೂಸ್‌ (ತಲಾ 20 ಗ್ರಾಂ), ಫ್ರೆಂಚ್‌ ಫ್ರೈಸ್‌ ಬಾರ್ಬೆಕ್ಯು ಸಾಸ್‌ (ತಲಾ 30 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗಾರ್ಲಿಕ್‌ಬಟರ್‌ ಸ್ಪ್ರೆಡ್‌.

ವಿಧಾನ : ಒಂದು ಬಟ್ಟಲಿಗೆ ಚಿಕನ್‌ ತುಂಡು ಹಾಕಿಟ್ಟು, ಮೇಲೊಂದಿಷ್ಟು ಉಪ್ಪು ಸಾಸ್‌ ಹರಡಿ ಚೆನ್ನಾಗಿ ಬೆರೆಸಿಕೊಳ್ಳಿ. ಈಗ ಹಾಟ್ ಡಾಗ್‌ ಬನ್‌ ಗಳನ್ನು ಉದ್ದಕ್ಕೆ ಕತ್ತರಿಸಿ, ಒಳಭಾಗಕ್ಕೆ ಗಾರ್ಲಿಕ್‌ಬಟರ್‌ ಸ್ಪ್ರೆಡ್‌ ಹಚ್ಚಿಡಿ. ನಂತರ ಇದರ ಮೇಲೆ ಹೆಚ್ಚಿದ ಲೆಟ್ಯೂಸ್‌, ಈರುಳ್ಳಿ ಹಾಗೂ ಬಾರ್ಬೆಕ್ಯುಗೊಳಿಸಲಾದ ಚಿಕನ್‌ ತುಂಡುಗಳಿರಿಸಿ. ಬನ್‌ ಮೇಲೆ ಇಂಗ್ಲಿಷ್‌ ಮಸ್ಟರ್ಡ್‌ ಸವರಿ, ಫ್ರೆಂಚ್‌ ಫ್ರೈಸ್‌ ಜೊತೆ ಸವಿಯಲು ಕೊಡಿ.

ಮೆಲನ್ಮಿಂಟ್ಶೂಟರ್

ಸಾಮಗ್ರಿ : 150 ಗ್ರಾಂ ಕಲ್ಲಂಗಡಿ ಹಣ್ಣಿನ ಹೋಳು, 20 ಗ್ರಾಂ ಪುದೀನಾ ಎಲೆ, 60 ಮಿ.ಲೀ. ಸೇಬಿನ ರಸ, ರುಚಿಗೆ ತಕ್ಕಷ್ಟು ಉಪ್ಪು ಮೆಣಸು ಐಸ್‌ ಕ್ಯೂಬ್ಸ್.

ವಿಧಾನ : ಮೊದಲು ಮಿಕ್ಸಿಗೆ ಬೀಜರಹಿತ ಕಲ್ಲಂಗಡಿ ಹಣ್ಣಿನ ಹೋಳು, ಪುದೀನಾ, ಸೇಬಿನ ರಸ, ಉಪ್ಪು, ಮೆಣಸು ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಇದನ್ನು ಗ್ಲಾಸುಗಳಿಗೆ ಸುರಿದು, ಐಸ್‌ ಕ್ಯೂಬ್ಸ್ ತೇಲಿಬಿಟ್ಟು, ಪುದೀನಾದಿಂದ ಅಲಂಕರಿಸಿ ಸವಿಯಲು ಕೊಡಿ.

ಸ್ಪೈಸ್ಡ್ ಕುಕುಂಬರ್ರಾ ಮ್ಯಾಂಗೊ

ಸಾಮಗ್ರಿ : 100 ಗ್ರಾಂ ಸೌತೆಕಾಯಿ, 50 ಗ್ರಾಂ ಹುಳಿ ಮಾವಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸುಪುಡಿ, ಸಕ್ಕರೆ, ಟೊಬ್ಯಾಸ್ಕೊ ಫ್ರಿಜ್‌ ವಾಟರ್‌.

ವಿಧಾನ : ಸೌತೇಹೋಳಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ತಿರುವಿಕೊಳ್ಳಿ. ಇದಕ್ಕೆ ಅಗತ್ಯವಿದ್ದಷ್ಟು ತಣ್ಣೀರು ಬೆರೆಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಸವಿಯಲು ಕೊಡಿ.

 ರಾಟಿಯೋಲಿ ಬ್ರೂಶೇಟ

ಸಾಮಗ್ರಿ : 2 ತುಂಡು ಫ್ರೆಂಚ್‌ ಬಗೆಟ್‌, 60 ಗ್ರಾಂ ಬೆಣ್ಣೆ, 60 ಗ್ರಾಂ ಹಳದಿ/ಕೆಂಪು ಕ್ಯಾಪ್ಸಿಕಂ, 50 ಗ್ರಾಂ ಝುಕೀನಿ (ಆಸ್ಟ್ರೇಲಿಯನ್‌ಸೌತೇಕಾಯಿ), 40 ಗ್ರಾಂ ಈರುಳ್ಳಿ, 40 ಗ್ರಾಂ ಆಲಿವ್ ‌ಬದನೇಕಾಯಿ, ಅಗತ್ಯವಿದ್ದಷ್ಟು ಉಪ್ಪು, ಮೆಣಸು, ಟೊಮೇಟೊ ಸಾಸ್, ರೀಫೈಂಡ್‌ ಎಣ್ಣೆ, ಪಾರ್ಸ್ಲೆ ಬೆಳ್ಳುಳ್ಳಿ.

ವಿಧಾನ : ಫ್ರೆಂಚ್‌ ಬಗೆಟ್‌ ನ್ನು ಗೋಲಾಕಾರದ ತುಂಡುಗಳಾಗಿಸಿ, ಟೋಸ್ಟ್ ಮಾಡಿಡಿ. 7-8 ಎಸಳು ಬೆಳ್ಳುಳ್ಳಿ, ಹೆಚ್ಚಿದ ಪಾರ್ಸ್ಲೆ, ತುಸು ಬೆಣ್ಣೆ ಬೆರೆಸಿ ಬಾಡಿಸಿ, ನುಣ್ಣಗೆ ತಿರುವಿಕೊಳ್ಳಿ. ಇದೀಗ ಗಾರ್ಲಿಕ್‌ ಬಟರ್‌ ರೆಡಿ. ಟೋಸ್ಟ್ ಗಳ ಮೇಲೆ ಇದನ್ನು ಸವರಬೇಕು. ಒಂದು ಚಿಕ್ಕ ಬಾಣಲೆಯಲ್ಲಿ ತುಸು ರೀಫೈಂಡ್‌ ಎಣ್ಣೆ ಬಿಸಿ ಮಾಡಿ, ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಬದನೆ ಹೋಳು ಬಿಟ್ಟು ಮಿಕ್ಕಿದ್ದೆಲ್ಲ ಸೇರಿಸಿ ಬಾಡಿಸಬೇಕು. ಆಮೇಲೆ ಬದನೆ ಹೋಳು ಸೇರಿಸಿ ಬಾಡಿಸಬೇಕು. ಉಪ್ಪು, ಮೆಣಸು ಹಾಕಿ ಬಾಡಿಸಿ. ನಂತರ ಟೊಮೇಟೊ ಸಾಸ್‌ ಬೆರೆಸಿರಿ. 2 ನಿಮಿಷ ಕೆದಕಿ ಕೆಳಗಿಳಿಸಿ. ಈ ರೆಡಿ ಮಿಶ್ರಣವನ್ನು ಟೋಸ್ಟ್ ಮೇಲೆ ಸಮನಾಗಿ ಹರಡಿ, ಮೇಲೆ ಹೆಚ್ಚಿದ ಆಲಿಲ್ ‌ನಿಂದ ಗಾರ್ನಿಶ್‌ ಮಾಡಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ