ಉಡುಪಿಯ ಶಾಲೆಯಲ್ಲಿ ಕ್ರಿಯೇಟಿವ್ ಕಾಂಟೆಸ್ಟ್ :
ಇತ್ತೀಚೆಗೆ ಚಂಪಕ ತಂಡ ಹಾಗೂ ಕೋಡೂರಿನ `ಆವಿ’ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ವತಿಯಿಂದ `ಚಂಪಕ ಕ್ರಿಯೇಟಿವ್ ಚೈಲ್ಡ್ ಕಾಂಟೆಸ್ಟ್-2013′ ಕಾರ್ಯಕ್ರಮವನ್ನು ಉಡುಪಿಯ ನಂದಿಕೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ನಂದಿಕೂರು ಗ್ರಾಮ ಪಂಚಾಯಿತಿ ಹಾಗೂ ಎಸ್‌ಡಿಎಂಎಲ್ ಸದಸ್ಯರಾದ ವಾಸುದೇವ, ಹೆಡ್ ಮಿಸ್ ಶಕುಂತಲಾ ದೇವಿ ಹಾಗೂ ಶಿಕ್ಷಕರು ಹಾಜರಿದ್ದರು. ಇದರಲ್ಲಿ ಪಾಲ್ಗೊಂಡ ಪುಟಾಣಿಗಳು ಸಂಭ್ರಮದಿಂದ ಬಹುಮಾನ, ಪ್ರಶಸ್ತಿಗಳನ್ನು ಪಡೆದುಕೊಂಡರು. ರಾಷ್ಟ್ರೀಯ ಕನ್ನಡ ಸಮ್ಮೇಳನ ದೆಹಲಿಯಲ್ಲಿ ಈಚೆಗೆ 30ನೇ ರಾಷ್ಟ್ರೀಯ ಕನ್ನಡ ಸಮ್ಮೇಳನ ಜರುಗಿತು. ಬೆಳಗಾವಿಯ ರಾಣಿ ಚೆನ್ನಮ್ಮ ವಿ.ವಿ.ಯ ಕುಲಪತಿ ಪ್ರೊ. ಬಿ.ಆರ್. ಅನಂತನ್‌ದೀಪ ಬೆಳಗಿಸಿ ಸಮ್ಮೇಳನ ಉದ್ಘಾಟಿಸಿದರು. ಬಾ. ಸಾಮಗ, ವೈ.ಸಿ. ಜೈನ್, ಡಾ. ರತಿದೇವಿ, ಡಾ. ಸುಧಾ ರಾವ್, ಡಾ. ಸಿ. ಸೋಮಶೇಖರ್, ಬೈಕೆರೆ ನಾಗೇಶ್, ಡಾ. ಪಿ.ಡಿ. ಶೆಣೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಪ್ತಕ ಸಂಗೀತೋತ್ಸವ :
ಶ್ರೀ ಸಪ್ತಕ ಸಂಗೀತ ಅಕಾಡೆಮಿಯು ಏರ್ಪಡಿಸಿದ್ದ `ಸಪ್ತಕ ಸಂಗೀತೋತ್ಸವ’ ಕಾರ್ಯಕ್ರಮದಲ್ಲಿ ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳು ಜನಪದ ಗೀತೆಗಳನ್ನು ಹಾಡಿ ಕಲಾಸಕ್ತರನ್ನು ರಂಜಿಸಿದರು. ಹಾರ್ಮೋನಿಯಂ ವಾದನ ಪಂಚಾಮೃತ ಸಗಮ ಸಂಗೀತ ಅಕಾಡೆಮಿ ಈಚೆಗೆ ಅಭಿಜಿತ್ ಅವರ ಹಾರ್ಮೋನಿಯಂ ವಾದನದ ಕಾರ್ಯಕ್ರಮ ಏರ್ಪಡಿಸಿತ್ತು. ಬಿ.ವಿ. ಅಭಿಷೇಕ್ ತಬಲಾ ಸಹಕಾರ ನೀಡಿದರು. ಹಿರಿಯ ಹಾರ್ಮೋನಿಯಂ ವಾದಕ ಆರ್. ಪರಮಶಿವನ್ ಅವರು ಉಪಸ್ಥಿತರಿದ್ದರು.
ಮಾತೃವಂದನೆ ಕಾರ್ಯಕ್ರಮ :
ಹೊಂಬಾಳೆ ಪ್ರತಿಭಾರಂಗದ 18ನೇ ಹುಟ್ಟುಹಬ್ಬ ಮಾತೃವಂದನೆ, ಗಾಯನ ಗೌರವ ಕಾರ್ಯಕ್ರಮ ಈಚೆಗೆ ರವೀಂದ್ರ ಕಾಲಕ್ಷೇತ್ರದ ಆವರಣದಲ್ಲಿ ಜರುಗಿತು. ಶ್ಯಾಮಲಾ ಜಿ. ಭಾವೆ, ಎಚ್.ಆರ್. ಲೀಲಾವತಿ, ಶ್ಯಾಮಲಾ ಜಾಗೀರ್‌ದಾರ್ ಮತ್ತು ಪುಟ್ಟ ನಂಜಮ್ಮನರಿಗೆ ಮಾತೃವಂದನೆ ಸಲ್ಲಿಸಲಾಯಿತು. ಶಿವಮೊಗ್ಗ ಸುಬ್ಬಣ್ಣ, ಇಂದೂ ವಿಶ್ವನಾಥ್ ಹೊಂಬಾಳೆ ಫಲ್ಗುಣ, ಜಯಂತಿ, ಪ್ರತಿಭಾ ಫಲ್ಗುಣ ಉಪಸ್ಥಿತರಿದ್ದರು.
ಸಪ್ತಕ ಪ್ರಶಸ್ತಿ ಪ್ರದಾನ :
ಸಪ್ತಕ ಸಂಗೀತ ಅಕಾಡೆಮಿಯ 5ನೇ ವಾರ್ಷಿಕ ಸಮಾರಂಭದಲ್ಲಿ ಹಿರಿಯ ಜನಪದ ಗಾಯಕಿ ಬನ್ನೂರು ಕೆಂಪಮ್ಮ ಅವರಿಗೆ ಸಪ್ತಕ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಗಾಯಕರಾದ ನಾರಾಯಣರಾವ್ ಮಾನೆ ಹಾಗೂ ಲಕ್ಷ್ಮಣ ದಾಸ್ ಅವರಿಗೆ ವಭಿನಂದಿಸಿ ಸನ್ಮಾನಿಸಲಾಯಿತು. ಅಪ್ಪಗೆರೆ ತಿಮ್ಮರಾಜು, ಬಾನಂದೂರು ಕೆಂಪಯ್ಯ, ಹೊಂಬಾಳೆ ಫಲ್ಗುಣ ಎಂ. ಮುನಿಕೃಷ್ಣ, ಎಂ. ಗಂಗಾಧರಯ್ಯ ಉಪಸ್ಥಿತರಿದ್ದರು.
ಪ್ರತಿಭಾ ಅನಾವರಣ ಕಾರ್ಯಕ್ರಮ :
ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯ ಆವರಣದಲ್ಲಿ ಪ್ರಣವ ದತ್ ಅವರು ರಿದಂ ಪ್ಯಾಡ್ ನುಡಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಅಭಿಜಿತ್ ಹಾರ್ಮೋನಿಯಂ ಹಾಗೂ ಗುರುನಂದನ್ ರಾವ್ ತಬಲಾ ವಾದ್ಯ ಸಹಕಾರ ನೀಡಿದರು.
ಕ್ರಿಯೇಟಿವ್ ಚೈಲ್ಡ್ ಕಾಂಟೆಸ್ಟ್ :
ಇತ್ತೀಚೆಗೆ ಚಂಪಕ ತಂಡ ಹಾಗೂ ಕೋಡೂರಿನ `ಆವಿ’ ಗ್ರಾಮೀಣ ಮತ್ತು ನಗರಾಭಿೃದ್ಧಿ ಸಂಸ್ಥೆಯ ವತಿಯಿಂದ `ಚಂಪಕ ಕ್ರಿಯೇಟಿವ್ ಚೈಲ್ಡ್ ಕಾಂಟೆಸ್ಟ್-2013′ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಎಳಗಲ್ಲು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. `ಆವಿ’ಯ ಅಧ್ಯಕ್ಷರಾದ ಡಾ. ಕೆ. ಶಿವರಾಮ್, ಮುಖ್ಯೋಪಾಧ್ಯಯರಾದ ರಾಜು ಹಾಗೂ ಸಹಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇದರಲ್ಲಿ ಪಾಲ್ಗೊಂಡ ಪುಟಾಣಿಗಳು ಸಂಭ್ರಮದಿಂದ ಬಹುಮಾನ, ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡರು.
ಸಿದ್ದರಗಿ ಶಾಲೆಯಲ್ಲಿ ಕಾಂಟೆಸ್ಟ್ :
ಇತ್ತೀಚೆಗೆ ಚಂಪಕ ತಂಡ ಹಾಗೂ ಕೋಡೂರಿನ `ಆವಿ’ ಗ್ರಾಮೀಣ ಮತ್ತು ನಗರಾಭಿೃದ್ಧಿ ಸಂಸ್ಥೆಯ ವತಿಯಿಂದ `ಚಂಪಕ ಕ್ರಿಯೇಟಿವ್ ಚೈಲ್ಡ್ ಕಾಂಟೆಸ್ಟ್-2013′ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಸಿದ್ದರಗಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. `ಆವಿ’ಯ ಅಧ್ಯಕ್ಷರಾದ ಡಾ. ಕೆ. ಶಿವರಾಮ್, ಎಸ್‌ಡಿಎಂಸಿ ಸದಸ್ಯರಾದ ಮಮತಾ, ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇದರಲ್ಲಿ ಪಾಲ್ಗೊಂಡ ಪುಟಾಣಿಗಳು ಸಂಭ್ರಮದಿಂದ ಬಹುಮಾನ, ಪ್ರಶಸ್ತಿಪತ್ರಗಳನ್ನು ಪಡೆದುಕೊಂಡರು.
ರಂಜಿಸಿದ ನೃತ್ಯ ರೂಪಕ :
ದೆಹಲಿ ಕನ್ನಡಿಗ ಏರ್ಪಡಿಸಿದ 30ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಬಾಲೆಯರು ನಡೆಸಿಕೊಟ್ಟ ಕರ್ನಾಟಕ ವೈಭವ ನೃತ್ಯ ರೂಪಕ ಪ್ರೇಕ್ಷಕರನ್ನು ರಂಜಿಸಿತು.
ಬಾಲಗೋಷ್ಠಿ :
ದೆಹಲಿ ಕನ್ನಡಿಗ ಏರ್ಪಡಿಸಿದ್ದ 30ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಬಾಲಗೋಷ್ಠಿಯ ವ್ಯವಸ್ಥೆ ಮಾಡಲಾಗಿತ್ತು. ವೈಷ್ಣವಿ ಸತ್ಯಪ್ರಕಾಶ್ ಇದರ ಅಧ್ಯಕ್ಷತೆ ವಹಿಸಿದ್ದರು.
ಹೊಂಬಾಳೆ ಪ್ರತಿಭೋತ್ಸವ :
ಹೊಂಬಾಳೆ ಪ್ರತಿಭಾರಂಗ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ `ಹೊಂಬಾಳೆ ಪ್ರತಿಭೋತ್ಸವ’ದಲ್ಲಿ ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯ ವಿದ್ಯಾರ್ಥಿಗಳು ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಂಜಿಸಿದ ಕಲಹ ಕುತೂಹಲ :
ಮೈಸೂರಿನ ಅಮರಿಕಾ ಸಂಘದವರ ಸುವರ್ಣ ಮಹೋತ್ಸವದ ವಾರ್ಷಿಕೋತ್ಸವದ ಅಂಗವಾಗಿ ಕಲಾಮಂದಿರದಲ್ಲಿ ವಿವಿಧ ಹವ್ಯಾಸ ಕಲಾ ತಂಡಗಳಿಂದ ವೈವಿಧ್ಯಮಯವಾದ ನಾಟಕಗಳು ಪ್ರದರ್ಶನಗೊಂಡವು. ಡಾ. ನ. ರತ್ನಾರವರ ನಿರ್ದೇಶನದಲ್ಲಿ ಸಂತೆಂತೋ ತಂಡ ಪ್ರದರ್ಶಿಸಿದ `ಕಲಹ ಕುತೂಹಲ’ ನಾಟಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಧ್ವನಿ ಮುದ್ರಿಕೆ ಪುಸ್ತಕ ಬಿಡುಗಡೆ :
ಸಾಹಿತಿ ವಿ.ವಿ. ಗೋಪಾಲ್ ಅವರು ರಚಿಸಿದ `ಮಕ್ಕಳ ಹಾಡು’ ಕಿರುಪುಸ್ತಕ `ಕಲ್ಯಾಣ ಸಂಧ್ಯಾ’ ನಾಟಕ ಹಾಗೂ ಧ್ವನಿಮುದ್ರಿಕೆಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಜರುಗಿತು. ಕಾರ್ಯಕ್ರಮದಲ್ಲಿ ಟಿ.ಜಿ. ನರಸಿಂಹ ಮೂರ್ತಿ, ಆರ್. ನರೇಂದ್ರ ಬಾಬು, ಸುಬ್ಬರಾಮು, ಕೆ.ಎಸ್. ಮಂಜುನಾಥ ಹಾಗೂ ಜೈಶಂಕರ್ ಪಾಲ್ಗೊಂಡಿದ್ದರು.
ರಂಜಿಸಿದ ಸುಗಮ ಸಂಗೀತ ಕಚೇರಿ :
ಧಾರವಾಡ ಪ್ರೀಮಿಯರ್ ಸಿಟಿಜನ್ಸ್ ಕ್ಲಬ್ ಹಮ್ಮಿಕೊಂಡಿದ್ದ ಮಾಸಿಕ ಕುಟುಂಬ ಸಭೆಯಲ್ಲಿ ರಂಜನಿ ಕೆರೂರ ಕುಲಕರ್ಣಿ, ಶರಣರ ವಚನಗಳ ಜೊತೆ ದಾಸರಪದ, ಜಾನಪದ, ಭಾವಗೀತೆಗಳ ಸುಗಮ ಸಂಗೀತ ಕಚೇರಿ ನಡೆಸಿಕೊಟ್ಟರು. ಅನಿಲಮೇತ್ರಿ ಹಾಗೂ ಪರಶುರಾಮ ಕಟ್ಟಿ ತಬಲಾ, ಹಾರ್ಮೋನಿಯಂ ಜೊತೆಗೆ ಸಾಥ್ ನೀಡಿದರು.