ತಿಂಗಳಾನುಗಟ್ಟಲೆ ವಾದ ವಿವಾದ, ಎಳೆದಾಟದ ಬಳಿಕ ಕೊನೆಗೊಮ್ಮೆ ಬಲಾತ್ಕಾರ ತಡೆ ಮಸೂದೆ ಕಾನೂನಿನ ರೂಪವನ್ನೇನೋ ಪಡೆದುಕೊಂಡಿತು. ಆದರೆ ಈ ಕಾನೂನಿನಲ್ಲಿ ಈಗಲೂ ಅನೇಕ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ಕಾನೂನು ಬಿಗಿ ಮಾಡುವ ಹೆಸರಿನಲ್ಲಿ ಸಾಕಷ್ಟು ಗೊಂದಲ ಗಲಾಟೆ ನಡೆದವು. ಅದೆಷ್ಟೋ ವಿಷಯಗಳಲ್ಲಿ ಒಮ್ಮತವೇ ಮೂಡುತ್ತಿರಲಿಲ್ಲ. ಅಂದಹಾಗೆ ಈ ಮಸೂದೆಯಲ್ಲಿ ಕೆಲವು ನೆಮ್ಮದಿ ನೀಡುವ ಸಂಗತಿಗಳೂ ಇವೆ. ಆ್ಯಸಿಡ್‌ ದಾಳಿಯನ್ನು ಅಪರಾಧದ ಶ್ರೇಣಿಯಲ್ಲಿ ತರಲಾಗಿದೆ.

ಅದಕ್ಕೂ ಮುಂಚೆ ಈ ಅಪರಾಧಕ್ಕಾಗಿ ಯಾವುದೇ ವಿಶೇಷ ಕಾನೂನುಗಳು ಇರಲಿಲ್ಲ. ಸೇಡು ತೀರಿಸಿಕೊಳ್ಳಲು ಇಷ್ಟೊಂದು ಗಂಭೀರ ಆರೋಪ ಮಾಡಿಯೂ ಸಾಧಾರಣ ಸಜೆ ಅನುಭವಿಸಿ ಅಪರಾಧಿಗಳು ಎದೆ ಸೆಟೆಸಿಕೊಂಡು ಊರೆಲ್ಲ ಸುತ್ತಾಡುತ್ತಿದ್ದರು. ಆದರೆ ಈಗ ಹೀಗಾಗುವುದಿಲ್ಲ. ಈಗ ಶಿಕ್ಷೆಯ ಕಟ್ಟುಪಾಡುಗಳನ್ನು ಅತ್ಯಂತ ಕಠೋರಗೊಳಿಸಲಾಗಿದೆ.ಈಗ ಎಫ್‌ಐಆರ್‌ ದಾಖಲು ಮಾಡಲು ನಿರಾಕರಿಸುವ ಪೊಲೀಸ್‌ ಸ್ಟೇಷನ್‌ ಹಾಗೂ ಬಲಾತ್ಕಾರಕ್ಕೆ ತುತ್ತಾದ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸುವ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಮಹಿಳೆಯನ್ನು ಬಹಿರಂಗವಾಗಿ ನಿರ್ವಸ್ತ್ರಗೊಳಿಸಿ ಬೀದಿಯಲ್ಲಿ ಸುತ್ತಾಡಿಸುವುದಕ್ಕೂ ಕಡಿವಾಣ ಹೇರಲಾಗಿದೆ. ಈಗ ಕೇವಲ ಹೊರಗಡೆ ನಿರ್ವಸ್ತ್ರಗೊಳಿಸುವುದಷ್ಟೇ ಅಲ್ಲದೆ, ಮುಚ್ಚಿದ ಕೋಣೆಯಲ್ಲಿ ನಿರ್ವಸ್ತ್ರಗೊಳಿಸುವ ಪ್ರಯತ್ನವನ್ನು ಕೂಡ `ಬಲತ್ಕಾರ' ಎಂದೇ ಭಾವಿಸಲಾಗುತ್ತದೆ.

ಇದರ ಹೊರತಾಗಿ ಈ ಕಾನೂನಿನಲ್ಲಿ ಕೆಲವು ಸೆಕ್ಷನ್‌ ಗಳಿದ್ದು, ಅವುಗಳಿಂದ ಕೆಲವರ ನಿದ್ದೆಯೇ ಹಾರಿಹೋಗಿಬಿಟ್ಟಿದೆ. ಯಾವುದೇ ಒಬ್ಬ ಮಹಿಳೆಯನ್ನು ಹಿಂಬಾಲಿಸುವುದು ಅಥವಾ ಕದ್ದುಮುಚ್ಚಿ ಆಕೆಯ ಫೋಟೊ ತೆಗೆದುಕೊಳ್ಳುವುದನ್ನು ಕೂಡ ಇದೇ ಶ್ರೇಣಿಯಲ್ಲಿ ಇಡಲಾಗಿದೆ. ಇಂತಹ ಅಪರಾಧಗಳಿಗೆ ಜಾಮೀನು ಕೂಡ ದೊರಕುವುದಿಲ್ಲ. ಇದೇ ಚಿಂತೆಯ ವಿಷಯ. ನಮ್ಮಲ್ಲಿ ಹುಡುಗಿಯರನ್ನು ದಿಟ್ಟಿಸಿ ನೋಡುವುದು ಹಾಗೂ ಹಿಂಬಾಲಿಸುವುದು ಒಂದು ಸಾಮಾನ್ಯ ಸಂಗತಿ ಎಂಬಂತಾಗಿಬಿಟ್ಟಿದೆ.

ಜನರ ಭಾವನೆಗಳೊಂದಿಗೆ ಚೆಲ್ಲಾಟ

ಬಾಲಾಪರಾಧ ಕಾನೂನಿಗೂ ತಿದ್ದುಪಡಿ ತರುವ ಕುರಿತಂತೆ ಸಾಕಷ್ಟು ಚರ್ಚೆಗಳು ಆದವು. ಒಂದು ಗಮನಾರ್ಹ ಸಂಗತಿಯೆಂದರೆ, ದೆಹಲಿಯ ಚಲಿಸುತ್ತಿರುವ ಬಸ್ಸಿನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಅಪ್ರಾಪ್ತ ವಯಸ್ಸಿನ. ಆತನಿಗೆ 18 ವರ್ಷವಾಗಲು ಇನ್ನು ಕೆಲವು ದಿನಗಳು ಇದ್ದವು. ಇದರ ಆಧಾರದ ಮೇಲೆ ಅವನಿಗೆ ಕಠೋರ ಶಿಕ್ಷೆಯಾಗುವುದಿಲ್ಲ. ಅವನೇ ದಾಮಿನಿಯ ಜೊತೆಗೆ ಅತ್ಯಂತ ಕ್ರೂರವಾಗಿ ನಡೆದುಕೊಂಡಿದ್ದ ಎಂದು ಹೇಳಲಾಗುತ್ತದೆ. ದೆಹಲಿ ಅತ್ಯಾಚಾರ ಪ್ರಕರಣದ ಒಬ್ಬ ಪ್ರಮುಖ ಆರೋಪಿ ಅಪ್ರಾಪ್ತ ವಯಸ್ಸಿನವ ಎಂದು ಗೊತ್ತಾಗುತ್ತಿದ್ದಂತೆ, ಸಮಾಜದ ಎಲ್ಲ ಕಡೆಯಿಂದಲೂ ಬಾಲಾಪರಾಧ ಕಾನೂನಿಗೂ ತಿದ್ದುಪಡಿ ತರುವಂತೆ ಒತ್ತಾಯಗಳು ಕೇಳಿಬಂದವು.

ಈ ಕುರಿತಂತೆ ಜನರು ಹೇಳುವುದೇನೆಂದರೆ, ಅಪರಾಧಿಗೆ ಸಜೆ ಅವನ ಅಪರಾಧದ ಗಂಭೀರತೆಯನ್ನು ಪರಿಗಣಿಸಿ ನಿರ್ಧರಿಸಬೇಕೇ ಹೊರತು, ಅವನ ವಯಸ್ಸು ನೋಡಿ ಅಲ್ಲ. ಆದರೆ ನಮ್ಮಿಂದ ಆರಿಸಿಹೋದ ಪ್ರತಿನಿಧಿಗಳು ಜನಸಾಮಾನ್ಯರ ಭಾವನೆಗಳಿಗೆ ಬೆಲೆ ಕೊಡಲೇ ಇಲ್ಲ. ಹೀಗಾಗಿ ಬಾಲಾಪರಾಧದ ಕಾನೂನಿಗೆ ತಿದ್ದುಪಡಿ ಆಗಲೇ ಇಲ್ಲ. ವರ್ಮಾ ಸಮಿತಿಯ ಶಿಫಾರಸುಗಳನ್ನು ಕೂಡ ಪರಿಪೂರ್ಣವಾಗಿ ಒಪ್ಪಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ