ಪ್ರ : ಎಎಚ್ ಕ್ರೀಮ್ ನಿಂದ ಕಪ್ಪು ವರ್ತುಲಗಳು ಹಾಗೂ ಕಲೆಗಳು ದೂರವಾಗುತ್ತಿಯೇ? ಇದರ ನಿಯಮಿತ ಬಳಕೆಯಿಂದ ಚರ್ಮ ಹೊಳಪುಳ್ಳದ್ದಾಗುತ್ತದೆಯೇ?

ಉ : ಎಎಚ್‌ಎ ಅಂದರೆ ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್‌ ಕ್ರೀಮ್ ನಲ್ಲಿ ಹಣ್ಣಿನಿಂದ ತೆಗೆಯಲಾದ ಉಪಯುಕ್ತ ಆ್ಯಸಿಡ್‌ ಇರುತ್ತದೆ. ಅದು ಚರ್ಮದಲ್ಲಿ ಕೊಲೋಜನ್‌ ಮಟ್ಟವನ್ನು ವೇಗವಾಗಿ ಹೆಚ್ಚಿಸಿ ಅಲ್ಲಿ ಸುಕ್ಕುಗಳು ಉಂಟಾಗದಂತೆ ತಡೆಯುತ್ತದೆ. ಇದು ಕಣ್ಣುಗಳ ಕೆಳಭಾಗದ ಕಪ್ಪು ವಲಯವನ್ನೂ ನಿವಾರಿಸಲು ನೆರವಾಗುತ್ತದೆ.

ಈ ಕ್ರೀಮ್ ಬಳಕೆಯಿಂದ ಎಕ್ಸ್ ಪೋಲಿಯೇಶನ್‌ ಹಾಗೂ ಹೊಸ ಜೀವಕೋಶ ನಿರ್ಮಾಣ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಅದರಿಂದಾಗಿ ಚರ್ಮದಲ್ಲಿ ಹೊಸತನ ಕಂಡುಬರುತ್ತದೆ. ರಾತ್ರಿ ಮುಖ ಸ್ವಚ್ಛಗೊಳಿಸಿಕೊಂಡು ಸ್ವಲ್ಪ ಎಎಚ್‌ಎ ಕ್ರೀಮ್ ತೆಗೆದುಕೊಂಡು ಕಣ್ಣುಗಳ ನಾಲ್ಕೂ ಬದಿ ಗೋಲಾಕಾರದಲ್ಲಿ ಮಸಾಜ್‌ ಮಾಡಿಕೊಳ್ಳಿ. ಇದರಿಂದ ತ್ವಚೆಯಲ್ಲಿ ಹೊಳಪು ಬರುತ್ತದೆ. ಆದರೆ ಆ ಕ್ರೀಮ್ ಕಣ್ಣುಗಳಲ್ಲಿ ಹೋಗದಂತೆ ಎಚ್ಚರವಹಿಸಿ.

ಪ್ರ : ನನ್ನ ಮುಖದ ಮೇಲೆ ಸಣ್ಣ ಸಣ್ಣ ಎಳ್ಳಿನಂಥ ಗಂಧೆಗಳು ಉಂಟಾಗಿವೆ. ಇದರಿಂದ ಮುಖದ ಸೌಂದರ್ಯ ಹಾಳಾಗಿದೆ. ಲೇಸರ್ಚಿಕಿತ್ಸೆ ಪಡೆದು ಇದರಿಂದ ಮುಕ್ತಿ ಹೊಂದಬಹುದೆ?

ಉ : ಎಲ್ಲಕ್ಕೂ ಮೊದಲು ಇಂಥ ಗಂಧೆಗಳು ಆಗಿರುವುದೇಕೆ ಎಂದು ತಿಳಿದುಕೊಳ್ಳಿ. ಇವುಗಳಲ್ಲಿ ಹಲವು ಪ್ರಕಾರಗಳಿವೆ. ಮುಖ್ಯ 2 ಪ್ರಕಾರ ಎಂದರೆ ಹುಟ್ಟಿನಿಂದ ಬಂದುದು, ಎರಡನೆಯದು ತಾನಾಗಿ ಮುಖದ ಮೇಲೆ ಆಗುವಂಥದ್ದು. ಹುಟ್ಟಿನಿಂದ ಬಂದ ಗಂಧೆಗಳನ್ನು ಮನೆಮದ್ದಿನಿಂದ ವಾಸಿ ಮಾಡುವುದು ಕಷ್ಟದ ಕೆಲಸ. ಆದರೆ ತಾನಾಗಿ ಹುಟ್ಟಿಕೊಂಡ ಗಂಧೆಗಳು ನಿಧಾನವಾಗಿ ಮನೆಮದ್ದಿನಿಂದ ವಾಸಿಯಾಗುತ್ತವೆ. ಆದರೆ ಈ ಉಪಾಯಗಳನ್ನು ಅನುಸರಿಸುವ ಮುನ್ನ ನೀವು ತುಸು ಧೈರ್ಯವಹಿಸಿ ಮುನ್ನಡೆಯಬೇಕು. ಈ ಸಮಸ್ಯೆಗೆ ಪರಿಹಾರ ಹೊಸ ಟೆಕ್ನಿಕ್‌, ಆಧರಿಸಿದ ಕಾರ್ಬನ್‌ ಡೈಆಕ್ಸೈಡ್‌ ಫ್ರಾಕ್ಷನ್‌ ಲೇಸರ್‌ ಮೆಶೀನ್‌ ನಿಂದ ಆಗುತ್ತದೆ. ಇದಕ್ಕಾಗಿ ತಿಂಗಳಿಗೆ 1 ಸಿಟಿಂಗ್‌ ಬೇಕಾಗುತ್ತದೆ. 4-5 ತಿಂಗಳಲ್ಲಿ ಇಂಥ ಗುಳ್ಳೆ, ಗಂಧೆಗಳು ದೂರವಾಗುತ್ತವೆ. ಈ ವಿಧಾನದಲ್ಲಿ ಲೇಸರ್‌ ಕಿರಣಗಳು ನಿಮ್ಮ ಗಂಧೆಯ ಭಾಗದ ಚರ್ಮದ ಜೀವಕೋಶಗಳ ತೇವಾಂಶವನ್ನು ಹೀರಿಕೊಂಡು ಡಲ್ ಮಾಡುತ್ತದೆ. ಈ ಕಾರಣದಿಂದಾಗಿ ಜೀವಕೋಶಗಳ ಅಂತರ್ಜಲ ತಾತ್ಕಾಲಿಕವಾಗಿ ಬಾಷ್ಪೀಕೃತಗೊಳ್ಳುತ್ತದೆ ಅಥವಾ ಸ್ವಲ್ಪ ಹೊತ್ತಿನ ನಂತರ ತಾನಾಗಿ ನಷ್ಟವಾಗುತ್ತದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ