ಟ್ರೀ ಸಿಸ್ಟರ್‌ ಎಂದೇ ಪ್ರಸಿದ್ಧಳಾದ ಯಮುನಾಳ ಅಕ್ಕರೆ ಮತ್ತು ಪರಿಶ್ರಮದಿಂದ ಝಾರ್ಖಂಡ್‌ ನ ಕಾಡನ್ನು ಹಸಿರನ್ನಾಗಿ ಮಾಡುವ ಕನಸನ್ನು ನನಸಾಗಿಸುವುದು ಸುಲಭವಾಗಿದೆ. ಕಾಡನ್ನು ನಾಶ ಮಾಡುವವರೇ, ಎಚ್ಚೆತ್ತುಕೊಳ್ಳಿ, ಎಚ್ಚೆತ್ತುಕೊಳ್ಳಿ..... ಯಾರು ಕಾಡನ್ನು ಕತ್ತರಿಸುತ್ತಾರೋ ಅವರ ಕೈಗಳನ್ನು ನಾವು ಕತ್ತರಿಸುತ್ತೇವೆ. ಕಾಡು ಉಳಿದರೆ ನಾವು ಉಳಿಯುತ್ತೇವೆ.... ಎಂಬ ಘೋಷಣೆಗಳೊಂದಿಗೆ ಯಮುನಾ ಟುಡ್ಡೂ ಮತ್ತು ಅವರ ಗೆಳತಿಯರು ಹೂಂಕರಿಸಿದಾಗ ಮುತುರ್‌ ಖಮ್ ಕಾಡಿನ ಪ್ರತಿಯೊಂದು ಮರದ ತುಂಬಾ ಸಂತಸದ ಅಲೆ ತೇಲುತ್ತದೆ ಮತ್ತು ಕಾಡನ್ನು ನಾಶ ಮಾಡುವವರ ಮುಖದಲ್ಲಿ ಭಯದ ವಾತಾವರಣ ಮೂಡುತ್ತದೆ. ಕೈಗಳಲ್ಲಿ ಬಿಲ್ಲು ಬಾಣ, ಮಚ್ಚು, ಕುಡುಗೋಲು, ದೊಣ್ಣೆಗಳನ್ನು ಹಿಡಿದು ಯಮುನಾ ಮತ್ತು ಅವರ ವನರಕ್ಷಣಾ ಸಮಿತಿಯ ಮಹಿಳೆಯರು ದಿನ ಕಾಡಿನಲ್ಲಿ ಗಸ್ತು ಹೊಡೆಯುತ್ತಾರೆ ಮತ್ತು ಮರ ಕಡಿಯುವವರನ್ನು ಫಾರೆಸ್ಟ್ ಆಫೀಸ್‌ ನವರಿಗೆ ಹಿಡಿದುಕೊಡುತ್ತಾರೆ.

`ಟ್ರೀ ಸಿಸ್ಟರ್‌' ಎಂದು ಹೆಸರು ಗಳಿಸಿದ 32 ವರ್ಷದ ಯಮುನಾ 1999ರಲ್ಲಿ ಕಾಡಿನಲ್ಲಿ ಕಾನೂನಿಗೆ ವಿರುದ್ಧವಾಗಿ ಮರ ಕಡಿಯುವವರ ವಿರುದ್ಧ ಏಕಾಂಗಿಯಾಗಿ ಧ್ವನಿ ಎತ್ತಿದರು. ಅವರು ಕಾಡಿನಲ್ಲಿ ಮರ ಬೆಳೆಸಲು ಶುರು ಮಾಡಿದಾಗ ಜನ ಅವರನ್ನು ಹುಚ್ಚಿ ಎಂದು ಗೇಲಿ ಮಾಡಿದರು. ಇಂದು ಸಾಮಾನ್ಯ ಜನರಷ್ಟೇ ಅಲ್ಲ, ಫಾರೆಸ್ಟ್ ಆಫೀಸರ್‌ ಗಳೂ ಸಹ ಅವರನ್ನು ಕಾಡಿನ ಗಾರ್ಡಿಯನ್‌, ಮರಗಳ ತಂಗಿ ಎಂದೆಲ್ಲಾ ಕರೆಯುತ್ತಾರೆ.

ಹೆಚ್ಚಿನ ಸಾಮರ್ಥ್ಯ

ಯಮುನಾರ ಸಾಮರ್ಥ್ಯ ಆಕಾಶಕ್ಕಿಂತಲೂ ಉನ್ನತವಾಗಿದೆ. ಅವರು 10ನೇ ತರಗತಿಯವರೆಗೆ ಮಾತ್ರ ಓದಿದ್ದರೂ ಕಾಡು, ಮರಗಿಡ ಮತ್ತು ಪರಿಸರದ ಮಹತ್ವದ ಬಗ್ಗೆ ಚೆನ್ನಾಗಿ ಓದಿದವರಿಗಿಂತ ಹೆಚ್ಚು ತಿಳಿದುಕೊಂಡಿದ್ದಾರೆ. ರಾಂಚಿಯ ಆಗ್ನೇಯ ಭಾಗದಲ್ಲಿ ಸುಮಾರು 35 ಕಿ.ಮೀ. ದೂರದಲ್ಲಿರುವ ಮುತುರ್‌ ಖಮ್ ಕಾಡಿನಿಂದ ಶುರುವಾಗಿ ದೂರ ದೂರದವರೆಗೆ ಯಮುನಾ ಮತ್ತು ಅವರ ವನ ರಕ್ಷಣಾ ಸಮಿತಿಯ ಕಾರ್ಯ ಚಟುವಟಿಕೆಗಳು ಹಬ್ಬಿವೆ. ಇದರಿಂದಾಗಿ ಕಾಡನ್ನು ನಾಶ ಮಾಡಿ ಕಾನೂನಿಗೆ ವಿರುದ್ಧವಾಗಿ ದಂಧೆ ಮಾಡುವ ಮಾಫಿಯಾದವರಲ್ಲಿ ನಡುಕ ಶುರುವಾಗಿದೆ.

12 ವರ್ಷಗಳ ಹಿಂದೆ ಯಮುನಾ 25 ಗೃಹಿಣಿಯರೊಂದಿಗೆ ವನ ರಕ್ಷಣಾ ಸಮಿತಿ ರಚಿಸಿದರು. ಈಗ ಅದರಲ್ಲಿ 72 ಮಹಿಳೆಯರಿದ್ದಾರೆ. ಫಾರೆಸ್ಟ್ ಡಿಪಾರ್ಟ್‌ ಮೆಂಟ್‌ ನಿಂದ ಸಮಿತಿ ರಿಜಿಸ್ಟರ್‌ ಮಾಡಿಸಿದ ಯಮುನಾ ಅವರ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾರೆ. ಪಾರಂಪರಿಕ ಆದಿವಾಸಿ ಆಯುಧಗಳನ್ನು ಹಿಡಿದ ಮಹಿಳೆಯರು ಯಮುನಾರ ಮುಂದಾಳತ್ವದಲ್ಲಿ ಕಾಡಿನಲ್ಲಿ ಗಸ್ತು ಹೊಡೆಯುವಾಗ ತಾವೆಷ್ಟು ದೊಡ್ಡ ಕೆಲಸದಲ್ಲಿ ಮನಸಾರೆ ತೊಡಗಿಕೊಂಡಿದ್ದೇವೆ ಎಂದು ಅವರ ಮುಖದ ಮೇಲಿನ ಕಾಂತಿಯೇ ಹೇಳುತ್ತದೆ. ರಾತ್ರಿಯ ಗಸ್ತಿನಲ್ಲಿ ಮಹಿಳೆಯರೊಂದಿಗೆ ಅವರ ಮನೆಯ ಪುರುಷರೂ ಜೊತೆ ನೀಡುತ್ತಾರೆ. ಹಳ್ಳಿಯ ನಾಯಿಗಳೂ ಗಸ್ತಿನಲ್ಲಿ ಜೊತೆಗಿರುತ್ತವೆ.

ಯಮುನಾರ ಗುಂಪಿನಲ್ಲಿ 13 ವಯಸ್ಸಿನ ಹುಡುಗಿ ಬಹಾಮಯಿಯಿಂದ ಹಿಡಿದು 71 ವರ್ಷದ ಮಾಲತಿ ಟುಡ್ಡೂರಂತಹ ಮಹಿಳೆಯರು ಇದ್ದಾರೆ. ಮರ ಕಡಿಯುವಾಗ ಸಿಕ್ಕಿಬಿದ್ದರಿಂದ 501 ರೂ. ದಂಡ ವಸೂಲಿ ಮಾಡಲಾಗುತ್ತದೆ ಮತ್ತು ಅವರನ್ನು ಫಾರೆಸ್ಟ್ ಡಿಪಾರ್ಟ್ ಮೆಂಟ್‌ ವಶಕ್ಕೆ ಕೊಡಲಾಗುತ್ತದೆ. ದಂಡದ ರೂಪದಲ್ಲಿ ಬಂದ ಹಣವನ್ನು ಸಮಿತಿಯ ಫಂಡ್‌ ಗೆ ಜಮೆ ಮಾಡಲಾಗುತ್ತದೆ. ಆ ಹಣದಿಂದ ಸಮಿತಿಯ ಸದಸ್ಯರಿಗೆ ಆಯುಧಗಳನ್ನು ಖರೀದಿಸಲಾಗುತ್ತದೆ. ಜೊತೆಗೆ ಕೆರೆ, ಬಾವಿಗಳ ಸ್ವಚ್ಛತೆ, ಜನರೇಟರ್‌ ಮತ್ತು ಕೃಷಿಗೆ ಬೇಕಾದ ಯಂತ್ರಗಳನ್ನು ಖರೀದಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ