ನೀವು ವಿದೇಶ ಪ್ರವಾಸದ ಸಿದ್ಧತೆ ಮಾಡುತ್ತಿದ್ದೀರಿ, ಟಿಕೆಟ್ ಕೂಡ ತೆಗೆದುಕೊಂಡಿದ್ದೀರಿ. ಹೊಸ ಚಪ್ಪಲಿಗಳನ್ನು ಖರೀದಿಸಿದ್ದೀರಿ. ಇದನ್ನು ಬಿಟ್ಟು ಮತ್ತೇನನ್ನಾದರೂ ಮರೆತಿದ್ದೀರಾ? ಕಳೆದ ಹಲವು ವರ್ಷಗಳಲ್ಲಿ ಭಯೋತ್ಪಾದನೆ ಘಟನೆಗಳಿಂದಾಗಿ ಜಗತ್ತಿನಾದ್ಯಂತದ ದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ನಿಮ್ಮ ಪ್ರವಾಸ ಕಾರ್ಯಕ್ರಮಕ್ಕೆ ಯಾವುದೇ ವ್ಯತ್ಯಯ ಉಂಟಾಗಬಾರದು. ಹಾಗಾಗಿ ಕೆಲವು ಸಂಗತಿಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕು.
ನೀವು ನಿಮ್ಮ ಪಾಸ್ ಪೋರ್ಟ್ ನ್ನು ಕೆಲವು ವರ್ಷಗಳ ಹಿಂದೆ ಮಾಡಿಸಿರಬಹುದು. ಪ್ರವಾಸ ಹೋಗುವ 2 ತಿಂಗಳ ಮುಂಚೆಯೇ ಅದು ಎಲ್ಲಿಯವರೆಗೆ ಕಾಲಮಿತಿ ಹೊಂದಿದೆ ಎನ್ನುವುದನ್ನು ಅವಶ್ಯವಾಗಿ ಗಮನಿಸಿ. ಅಷ್ಟೇ ಮಾಡಿದರೆ ಸಾಲದು, ಪ್ರವಾಸ ಮುಗಿಸಿ ಬರುವ ತನಕ ನಿಮ್ಮ ಪಾಸ್ ಪೋರ್ಟ್ ಮಾನ್ಯತೆ ಹೊಂದಿರುತ್ತದೆಯೇ? ಅಷ್ಟೇ ಅಲ್ಲ, ನೀವು ನಿಮ್ಮ ಪ್ರವಾಸದ ಕೊನೆಯಲ್ಲಿ ಯಾವ ದೇಶಕ್ಕೆ ಭೇಟಿ ಕೊಡುತ್ತಿದ್ದೀರೊ, ಆ ದಿನದಿಂದ ಹಿಡಿದು 6 ತಿಂಗಳ ತನಕ ಮಾನ್ಯತೆ ಹೊಂದಿರಬೇಕು ಮತ್ತು ಅದರ ಮೇಲೆ ಮೊಹರು ಹಾಕಲು ಸಾಕಷ್ಟು ಹಾಳೆಗಳು ಕೂಡ ಬಾಕಿ ಇರಬೇಕು.
ಈ ಒಂದು ಕಾರಣದಿಂದಾಗಿ ಅದೆಷ್ಟೊ ಪ್ರಯಾಣಿಕರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಏರ್ ಪೋರ್ಟ್ ನಿಂದಸೇ ವಾಪಸ್ ಆಗಬೇಕಾಗಿ ಬರುತ್ತದೆ. ಅನೇಕರ ಪಾಸ್ ಪೋರ್ಟ್ ಅವಧಿ ಮುಗಿದುಹೋಗಿತ್ತು. ಇಲ್ಲಿ ಮುಗಿಯುವುದರಲ್ಲಿತ್ತು ಅಥವಾ ಅವರ ಪಾಸ್ ಪೋರ್ಟ್ ನಲ್ಲಿ ಮೊಹರು ಹಾಕಲು ಖಾಲಿ ಜಾಗವೇ ಉಳಿದಿರಲಿಲ್ಲ.
ಪಾಸ್ ಪೋರ್ಟ್ ನ ಮಾನ್ಯತೆ
ಒಂದುವೇಳೆ ನಿಮ್ಮ ಪಾಸ್ ಪೋರ್ಟ್ ನ ಅವಧಿ ಮುಗಿದುಹೋಗಿದ್ದಲ್ಲಿ ಅಥವಾ ಇವನ್ನು ಕೆಲವೇ ದಿನಗಳಲ್ಲಿ ಮುಗಿಯುವುದರಲ್ಲಿದ್ದರೆ, ನೀವು ಯಾವುದೇ ತೆರನಾದ ತೊಂದರೆಯಿಂದ ಪಾರಾಗಲು `ತತ್ಕಾಲ ಸೇವಾ' ಮುಖಾಂತರ ಪಾಸ್ ಪೋರ್ಟಿನ ನವೀಕರಣಕ್ಕಾಗಿ ತಕ್ಷಣವೇ ಅರ್ಜಿ ಹಾಕಿ. ಇದಕ್ಕಾಗಿ ನಿಮಗೆ ಹೆಚ್ಚುವರಿಯಾಗಿ 1500 ರೂ. ಶುಲ್ಕ ನೀಡಬೇಕಾಗಬಹುದು.
ಯಾವುದೇ ಒಬ್ಬ ಅರ್ಜಿದಾರ ಅರ್ಜಿ ಸಲ್ಲಿಸಿದ 3 ತಿಂಗಳೊಳಗಾಗಿ ಪಾಸ್ ಪೋರ್ಟ್ ಸಿಗಬೇಕೆನ್ನುವುದು ಸರ್ಕಾರದ ಘೋಷಣೆಯಾಗಿದೆ. ಸಾಮಾನ್ಯ ಪದ್ಧತಿಯಲ್ಲಿ ಅರ್ಜಿ ಸಲ್ಲಿಸುವುದರಿಂದ ನಿಮಗೆ 3 ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಾಗಿ ಬರಬಹುದು.
ಆರೋಗ್ಯ ವಿಮೆ ಪಾಲಿಸಿ
ಟಿಕೆಟ್ ಬುಕ್ ಮಾಡಿಸುವ ಸಮಯದಲ್ಲಿ ಆರೋಗ್ಯ ವಿಮೆಯ ಪಾಲಿಸಿ ಕೂಡ ತೆಗೆದುಕೊಳ್ಳಿ. ಏಕೆಂದರೆ ಅನಾರೋಗ್ಯ ಹಾಗೂ ಅಪಘಾತಗಳು ಹೇಳಿ ಕೇಳಿ ಘಟಿಸುವುದಿಲ್ಲ. ಹೊರದೇಶಕ್ಕೆ ಹೋದಾಗ ನಮಗೆ ಏನೂ ಆಗುವುದಿಲ್ಲ ಎಂದು ಯಾರೂ ಹೇಳಲು ಆಗುವುದಿಲ್ಲ.
ಕೆಲವು ತಿಂಗಳುಗಳ ಹಿಂದಷ್ಟೇ ವಂದನಾ ತಮ್ಮ ಮಗ, ಸೊಸೆ ಹಾಗೂ ಮೊಮ್ಮಗ ಅನೂಪ್ ಜೊತೆಗೆ ಸ್ಪೇನ್ ಗೆ ಹೋಗಿದ್ದರು. ಅಲ್ಲಿ ಹೋಟೆಲ್ ನ ಕೋಣೆಯಲ್ಲಿ ಅನೂಪ್ ಆಟ ಆಡ್ತಾ ಆಡ್ತಾ ಒಮ್ಮೆಲೆ ಬಿದ್ದುಬಿಟ್ಟ. ಮಂಚದ ಅಂಚು ತಗುಲಿ ಅವನ ತಲೆಗೆ ಬಲವಾಗಿಯೇ ಏಟು ತಗುಲಿತು. ಅದರಿಂದ ಸಾಕಷ್ಟು ರಕ್ತ ಹೋಯಿತು. ಅಲ್ಲಿಂದ ಇನ್ನೆರಡು ಕಡೆ ಹೋಗಬೇಕಿದ್ದಾಗಲೇ ಈ ಘಟನೆ ನಡೆದಿದ್ದರಿಂದ ಅವರಿಗೆ ಚಿಂತೆ ಉಂಟಾಗಿತ್ತು.