ಈಗ ಜನ ತಮ್ಮ ಇಷ್ಟದ `ಇಂಟೀರಿಯರ್‌’ ಮಾಡಿಸಲು ಚೆನ್ನಾಗಿ ಹಣ ಖರ್ಚು ಮಾಡಲು ಸಿದ್ಧರಿದ್ದಾರೆ. ಎಲ್ಲರ ಮನದಲ್ಲೂ ತಮ್ಮ ಮನೆಯ ಅಲಂಕಾರದ ಬಗ್ಗೆ ಕೆಲವು ಇಚ್ಛೆಗಳಿರುತ್ತವೆ. ಮನೆಯನ್ನು ಅಲಂಕರಿಸಲು 3 ವಿಷಯಗಳ ಬಗ್ಗೆ ವಿಶೇಷ ಗಮನ ಕೊಡಿ. ಬಜೆಟ್‌, ಅಲಂಕಾರದ ಥೀಮ್ ಮತ್ತು ಮನೆಯ ಆಕಾರ.

ಇಂಟೀರಿಯರ್‌ ನಿಮ್ಮ ಬಜೆಟ್‌ ಹಾಗೂ ಇಷ್ಟವನ್ನು ಗಮನದಲ್ಲಿಟ್ಟುಕೊಂಡು ಮೊದಲು ಇಂಟೀರಿಯರ್‌ ಥೀಮ್ ನ್ನು ಆಯ್ಕೆ ಮಾಡಿ. ಅಂದಹಾಗೆ ಈಗ ಮಾಡರ್ನ್‌ ಲುಕ್‌ ಹೆಚ್ಚು ಪ್ರಚಲಿತದಲ್ಲಿದೆ. ಇದಲ್ಲದೆ, ಕಾಂಟೆಂಪೊರರಿ, ಮಾಡರ್ನ್‌ ಕಾಂಟೆಂಪೊರರಿ, ಎಥ್ನಿಕ್‌, ಫ್ಯೂಷನ್‌ ಇತ್ಯಾದಿ ಥೀಮ್ ಗಳ ಆಧಾರದ ಮೇಲೂ ಮನೆಯ ಇಂಟೀರಿಯರ್‌ ಡಿಸೈನ್‌ ಮಾಡಿಸಲಾಗುತ್ತದೆ.

ಮನೆಯ ಅಲಂಕಾರಕ್ಕೆ ಆಕರ್ಷಕ ಹಾಗೂ ಬಾಳಿಕೆ ಬರುವ ಮತ್ತು ನಿಮ್ಮ ಬಜೆಟ್‌ ಗೆ ತಕ್ಕಂತಹ ವಸ್ತುಗಳನ್ನು ಆಯ್ಕೆ ಮಾಡಿ. ಮನೆಯ ಇಂಟೀರಿಯರ್‌ ನಲ್ಲಿ ಅತ್ಯಂತ ಮಹತ್ವಪೂರ್ಣವಾದುದ್ದು ಫರ್ನೀಚರ್‌. ನೀವು ದುಬಾರಿಯಾದ ಹಾಗೂ ಬ್ರ್ಯಾಂಡೆಡ್ ಫರ್ನೀಚರ್‌ ನೊಂದಿಗೆ ಆಕರ್ಷಕ ಹಾಗೂ ಅಗ್ಗದ ಫರ್ನೀಚರ್‌ ಆರಿಸಬಹುದು. ಈಗ ಬೆತ್ತದಿಂದ ಹಿಡಿದು ಸ್ಟೀಲ್ ಮತ್ತು ಪ್ಲ್ಯಾಸ್ಟಿಕ್ ವರೆಗೆ ಫರ್ನೀಚರ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮನೆಗೆ ಸ್ಟೈಲಿಶ್‌ ಲುಕ್‌ ಕೊಡಲು ತೆಳುವಾದ ಹಾಗೂ ಸುಂದರ ಡೆಕೋರೇಟರ್‌ ಪೀಸ್‌ ಗಳು ಸಿಗುತ್ತವೆ. ಇವುಗಳಿಂದ ನಿಮ್ಮ ಕಲ್ಪನೆಗೆ ತಕ್ಕಂತೆ ಮನೆಯನ್ನು ಅಲಂಕರಿಸಬಹುದು.

ಬೆಡ್‌ ರೂಮ್ ನೀವು ನವವಿವಾಹಿತ ದಂಪತಿಗಳಾಗಿದ್ದರೆ ನಿಮ್ಮ ಬೆಡ್‌ ರೂಮಿನ ಅಲಂಕಾರದ ಬಗ್ಗೆ ವಿಶೇಷ ಗಮನ ಕೊಡಬೇಕು. ಬೆಡ್‌ ರೂಮ್ ನಲ್ಲಿ ಮಂಚ ಆಕರ್ಷಣೆಯ ಮುಖ್ಯ ಕೇಂದ್ರವಾಗಿದೆ. ಮಂಚ ಆರಾಮದಾಯಕವಾಗಿಲ್ಲದಿದ್ದರೆ ನಿಮಗೆ ವಿಶ್ರಾಂತಿಯ ಅನುಭವವಾಗುವುದಿಲ್ಲ ಮತ್ತು ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯೊಡನೆ ವ್ಯವಹರಿಸಲಾಗುವುದಿಲ್ಲ.

ನೀವು ನಿಮ್ಮ ಬೆಡ್‌ ರೂಮನ್ನು ಲಗ್ಝುರಿಯಸ್‌ ಆಗಿ ಮಾಡುತ್ತಿದ್ದರೆ ಕೆನೋಪಿ ಅಂದರೆ ಮೇಲೆ ಆವರಣವಿರುವ ಬೆಡ್‌ ಆರಿಸಬಹುದು. ಇದು ಬೆಡ್‌ ರೂಮಿಗೆ ರಾಯಲ್ ಲುಕ್‌ ಕೊಡುತ್ತದೆ. ಅದರ ಮೇಲೆ ಮಲಗಿದ ಕೂಡಲೇ ರಾಜೋಚಿತ ಠೀವಿಯ ಅನುಭವವಾಗುತ್ತದೆ.

ಈಗೀಗ ಒನ್‌ ಸ್ಟೆಪ್‌ ಬೆಡ್‌ ಕೂಡ ಮಾರ್ಕೆಟ್‌ ನಲ್ಲಿದೆ. ಇದರಲ್ಲಿ ಬೆಡ್‌ ಕೆಳಗೆ 1 ಇಂಚ್‌ ನ ಸ್ಟೆಪ್‌ ಇದ್ದು ಅದರಿಂದ ಬೆಡ್‌ ನ ಸೌಂದರ್ಯ ಹೆಚ್ಚುತ್ತದೆ. ಮಂಚದ ಮೇಲೆ 2 ಬೇರೆ ಬೇರೆ ಹಾಸುಗೆಗಳನ್ನು ಉಪಯೋಗಿಸುವ ಬದಲು ಒಂದೇ ಹಾಸಿಗೆಯನ್ನು ಉಪಯೋಗಿಸಿ.

ಹಾಸಿಗೆಯನ್ನು ಆರಿಸುವಾಗ ಅದರ ಹೆಡ್‌ ಬೋರ್ಡ್‌ ಕಡೆಯೂ ಗಮನಹರಿಸಿ. ಮಂಚ ರೂಮಿನ ಮಧ್ಯದಲ್ಲೇ ಇರಲಿ. ಮಂಚದ ಜೊತೆ ಬೆಡ್‌ ರೂಮಿನ ಇತರ ಫರ್ನೀಚರ್‌ ಗಳಲ್ಲಿ ಸಿಟಿಂಗ್‌ ಫರ್ನೀಚರ್‌, ಚೇರ್ಸ್ ಟಿವಿ ಟ್ರಾಲಿ, ವಾರ್ಡ್‌ ರೋಬ್‌ ಮತ್ತು ಸೈಡ್ ಟೇಬಲ್ ಇತ್ಯಾದಿ ಇರುತ್ತವೆ. ಇನ್ನೂ ಆಯ್ಕೆ ಮಾಡಿದ ಥೀಮ್ ಗೆ ಅನುಸಾರವಾಗಿ ಆರಿಸಿ.

ಬೆಡ್‌ ರೂಮಿನ ಫರ್ನೀಚರ್‌ ಹೆಚ್ಚು ಭಾರ ಇರಬಾರದು. ಅದರಿಂದ ರೂಮಿನ ಸೆಟಿಂಗ್‌ ಬದಲಿಸುವಾಗ ತೊಂದರೆಯಾಗುತ್ತದೆ. ವುಡನ್‌ ಫರ್ನೀಚರ್‌ ಅಗ್ಗ ಹಾಗೂ ಬಾಳಿಕೆ ಬರುತ್ತದೆ.

ಬೆಡ್‌ ರೂಮ್ ಕಲರ್‌ ಇದು ನೀವು ಬೆಡ್‌ ರೂಮನ್ನು ಸಿಂಪಲ್, ಫನೀ, ರೊಮ್ಯಾಂಟಿಕ್‌ ಆಗಿ ಅಥವಾ ಬೇರಾವುದೇ ವಿಧಾನದಿಂದ ಅಲಂಕರಿಸಲು ಇಚ್ಛಿಸುವಿರಿ ಎಂಬುದನ್ನು ಅವಲಂಬಿಸಿದೆ. ಬೆಡ್‌ ರೂಮಿನಲ್ಲಿ ತೆಳುವಾದ ಬಣ್ಣಗಳೊಂದಿಗೆ ಕಾಂಟ್ರಾಸ್ಟ್ ಉಪಯೋಗಿಸಬೇಕು. ಕ್ರೀಮ್ ಮತ್ತು ಲೈಟ್‌ ನೊಂದಿಗೆ ರೆಡ್‌ ಮತ್ತು ಪರ್ಪಲ್ ಉಪಯೋಗಿಸಬಹುದು. ಇದರಲ್ಲಿ ಒಂದು ಗೋಡೆ ಕ್ರೀಮ್ ಹಾಗೂ ಇನ್ನೊಂದು ಗೋಡೆಗೆ ಪರ್ಪಲ್ ಬಣ್ಣ ಇರಬೇಕು. ಬೆಡ್‌ ನ ಹಿಂದಿನ ಗೋಡೆ ರೆಡ್‌, ಪರ್ಪಲ್ ಅಥವ್ ಗ್ರೀನ್‌ ನಲ್ಲಿ ಸುಂದರವಾಗಿ ಕಾಣುತ್ತದೆ.

ಬೆಡ್‌ ಹಿಂದಿನ ಗೋಡೆ ಹಾಗೂ ಟಿವಿ ಹಿಂದಿನ ಭಾಗದಲ್ಲಿ ವಿಶೇಷವಾಗಿ ಬ್ರೈಟ್‌ ಕಲರ್ಸ್ ಉಪಯೋಗಿಸಬಹುದು ಅಥವಾ ಬೆಡ್ ಹಿಂದಿನ ಗೋಡೆಯ ಮೇಲೆ ಹೂಗಳ ಪೇಂಟಿಂಗ್‌ ಹಾಕಿಸಬಹುದು.

ಇತರ ಗೋಡೆಗಳ ಮೇಲೆ ನಾರ್ಮಲ್ ಬಣ್ಣಗಳನ್ನು ಉಪಯೋಗಿಸಬಹುದು. ಈ ಬಣ್ಣ ಸೈಕಾಲಜಿಯ ಮೇಲೆ ಅವಲಂಬಿತವಾಗಿದೆ. ನಿಮಗೆ ಯಾವ ಬಣ್ಣಗಳಿಂದ ಯಾವ ರೀತಿಯ ಅನುಭವ ಉಂಟಾಗುತ್ತದೆಂದು ತಿಳಿದುಕೊಳ್ಳಬೇಕು. ಪೇಂಟ್ ಬದಲು ವಾಲ್ ‌ಪೇಪರ್‌ ಕೂಡ ಉಪಯೋಗಿಸಬಹುದು.

ವಾಲ್ ಪೇಪರ್ಗಳಲ್ಲಿ ಫ್ಯಾಬ್ರಿಕ್

635193_52182_36-PALMS-ONE-(ONE-BEDROOM-SUITE)

ವಾಲ್ ‌ಪೇಪರ್‌, ನಾರ್ಮಲ್ ವಾಲ್ ‌ಪೇಪರ್‌, ಲೆದರ್‌ ವಾಲ್ ‌ಪೇಪರ್‌ ಇತ್ಯಾದಿಗಳಿವೆ. ನಾರ್ಮಲ್ ವಾಲ್ ‌ಪೇಪರ್‌ ಗೆ ಹೋಲಿಸಿದರೆ ಫ್ಯಾಬ್ರಿಕ್‌ ವಾಲ್ ‌ಪೇಪರ್‌ ಅಧಿಕ ಬಾಳಿಕೆ ಬರುತ್ತದೆ. ಆದರೆ ವಾಲ್ ‌ಪೇಪರ್‌ ಗೋಡೆಗಳ ತೇವಾಂಶವನ್ನು ಆಧರಿಸಿರುತ್ತದೆ. ಸಾಮಾನ್ಯವಾಗಿ ವಾಲ್ ‌ಪೇಪರ್‌ ಗಳ ಲೈಫ್‌ 5-6 ವರ್ಷಗಳು. ಇದಲ್ಲದೆ ಲ್ಯಾಮಿಮಿನೇಟ್‌ ಕೂಡ ಉಪಯೋಗಿಸಬಹುದು. ಇದು 1 ಮಿಲಿಮೀಟರ್‌ ದಪ್ಪದ ಶೀಟ್‌ ಆಗಿದ್ದು ಈಗ ಬಹಳ ಇಷ್ಟಪಡಲಾಗುತ್ತಿದೆ.

ಇದಲ್ಲದೆ ಗೋಡೆಗಳ ಮೇಲೆ ವೀನಿಯರ್‌ ಕೂಡ ಉಪಯೋಗಿಸಬಹುದು. ಇದು ಲ್ಯಾಮಿನೇಟ್‌ ತರಹ ಇದ್ದು ಅದರಷ್ಟೇ ಬೆಲೆಯುಳ್ಳದ್ದಾಗಿರುತ್ತದೆ.

ಪರದೆ

ಮಂದ ಗಾಳಿ ಬೀಸಿದಾಗ ಬೆಡ್‌ ರೂಮಿನ ಹಾರಾಡುವ ತೆಳು ಪರದೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಮನೆಗಳಲ್ಲಿ ಸಾಮಾನ್ಯವಾಗಿ ಫ್ಯಾಬ್ರಿಕ್‌ ಪರದೆಗಳನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ.

ಔದ್ಯೋಗಿಕ ಉಪಯೋಗಕ್ಕಾಗಿ ಬ್ಲೈಂಡ್‌ ಪರದೆಗಳನ್ನು ಉಪಯೋಗಿಸಲಾಗುತ್ತದೆ. ಇವುಗಳಲ್ಲಿ ಸ್ಟೀಲ್ ‌ಬ್ಲೈಂಡ್‌, ವುಡನ್‌ ಬ್ಲೈಂಡ್‌ ಇತ್ಯಾದಿ ಸಿಗುತ್ತವೆ. ಸ್ಟೀಲ್ ‌ಬ್ಲೈಂಡ್‌ ಹೆಚ್ಚು ದುಬಾರಿಯಾದ್ದರಿಂದ ಕಡಿಮೆ ಉಪಯೋಗಿಸಲಾಗುತ್ತದೆ.

ಇಂದು ಮಾರುಕಟ್ಟೆಯಲ್ಲಿ ಅನೇಕ ಡಿಸೈನ್‌ ಗಳಲ್ಲಿ ಪರದೆಗಳು ಸಿಗುತ್ತವೆ. ಬೆಡ್‌ ರೂಮಿನಲ್ಲಿ ಹಾಕಿಸುವ ಪರದೆಗಳಲ್ಲಿ ಲೈನ್‌, ಶೀಯರ್‌, ಬಾಕ್ಸ್ ಪ್ಲೇಟೆಡ್‌, ಸ್ವಾಗ್‌, ಜೆಬೋಟ್‌ ಸ್ಟೈಲ್ ಲೇಯರ್ಡ್‌ ಮತ್ತು ಟ್ರಾನ್ಸ್ ಪರೆಂಟ್‌ ಪರದೆಗಳಿವೆ. ಲೈನ್‌ ಸ್ಟೈಲ್ ‌ನಲ್ಲಿ ಮೆರೂನ್‌ ಮತ್ತು ಬ್ಲೂ ಬಣ್ಣದ ಪರದೆಗಳು ಹೆಚ್ಚು ಇಷ್ಟವಾಗುತ್ತವೆ. ಅವು ರೂಮಿನ ಸೌಂದರ್ಯ ಹೆಚ್ಚಿಸುತ್ತವೆ.

ಒಂದು ವೇಳೆ ನಿಮ್ಮ ಬೆಡ್‌ ರೂಮನ್ನು ಆಧುನಿಕ ರೀತಿಯಲ್ಲಿ ಅಲಂಕರಿಸುತ್ತಿದ್ದರೆ ಪರ್ಪಲ್, ಬ್ಲ್ಯಾಕ್‌, ಡಾರ್ಕ್‌ ಬ್ರೌನ್‌ ಮತ್ತು ಕಾಂಬಿನೇಶನ್‌ ನೊಂದಿಗೆ ಗ್ರೇ ನಂತರ ಬೋಲ್ಡ್ ಕಲರ್‌ ಗಳನ್ನೂ ಉಪಯೋಗಿಸಬಹುದು. ಬೆಡ್‌ ರೂಮಿನ ಪರದೆ ಕಿಟಕಿಯವರೆಗೆ ಇದ್ದರೆ ಸರಿಯಾಗಿರುತ್ತದೆ. ಒಂದುವೇಳೆ ತೆಳು ಬಣ್ಣದ ಪರದೆ ಹಾಕಿದರೆ ಅವು ಕೋಣೆಗೆ ಮಾಡರ್ನ್‌ ಲುಕ್ ಕೊಡುತ್ತದೆ. ಕೆಂಪು ಬಣ್ಣ ಪ್ರೀತಿ ಹಾಗೂ ಶಕ್ತಿಯ ಪ್ರತೀಕವಾಗಿದೆ. ಆದರೆ ಬೇಸಿಗೆಯಲ್ಲಿ ಕೆಂಪು ಬಣ್ಣವನ್ನು ನೋಡಿದಾಗ ಉಷ್ಣದ ಅನುಭವ ಹೆಚ್ಚಾಗುತ್ತದೆ. ಬೆಡ್‌ ರೂಮಿನ ಪರದೆ ಕಲಾತ್ಮಕವಾಗಿರುವ ಜೊತೆ ವ್ಯವಹಾರಿಕ ಆಗಿರಬೇಕು. ಅಂದರೆ ಬಿಸಿಲಿನಿಂದ ರಕ್ಷಿಸಬೇಕು ಹಾಗೂ ಕೋಣೆಯಲ್ಲಿ ತನ್ನತನವನ್ನು ಕಾಪಾಡಿಕೊಳ್ಳಬೇಕು.

ಈಗೀಗ ಬೇರೆ ಬೇರೆ ಬಣ್ಣದ ಬಟ್ಟೆಗಳೊಂದಿಗೆ ಡಬಲ್ ಶೇಡ್‌ ಕೊಟ್ಟು ತಯಾರಿಸಲಾಗುವ ಪರದೆಗಳೂ ಇವೆ. ಇದಲ್ಲದೆ ಸ್ಕ್ರೀನಿಂಗ್‌ ಸ್ಟೈಲ್ ನಲ್ಲಿ ಅರ್ಧ ಪರದೆ ದಪ್ಪದ್ದು ಮತ್ತು ಅರ್ಧ ಪರದೆ ತೆಳುವಾದ ಮೆಟೀರಿಯಲ್ ನಿಂದ ತಯಾರಾಗುತ್ತದೆ. ರಾಡ್ ನೊಂದಿಗೆ ಮ್ಯಾಚ್‌ ಆಗುವ ಲೇಸ್‌ ಹಾಕಿ ಪರದೆಗಳಿಗೆ ಸ್ಮಾರ್ಟ್‌ ಲುಕ್‌ ಕೊಡಬಹುದು.

ಪ್ಲೇನ್‌ ಪರದೆಗಳಲ್ಲಿ ಹೆಚ್ಚಾಗಿ ಉಪಯೋಗಿಸುವ ಇಂತಹ ಅನೇಕ ರೀತಿಯ ಆ್ಯಕ್ಸೆಸರೀಸ್‌ ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಿಂದ ಪರದೆಗೆ ರಾಯಲ್ ಲುಕ್‌ ಸಿಗುತ್ತದೆ. ಪರದೆಗಳ ಆ್ಯಕ್ಸೆಸರೀಸ್‌ ನಲ್ಲಿ ವುಡನ್‌ ಕ್ಲಚೆಸ್‌, ದಾರಗಳು, ಆರ್ಟಿಫಿಶಿಯಲ್ ಫ್ಲವರ್‌ ಇತ್ಯಾದಿ ಇವೆ. ಕರ್ಟನ್‌ ಆ್ಯಕ್ಸೆಸರೀಸ್‌ ನಲ್ಲಿ ವುಡನ್‌ ಕ್ಲಚ್‌ ಹೆಚ್ಚು ಇಷ್ಟವಾಗುತ್ತದೆ.

ಪರದೆಯಲ್ಲಿ ಕಾಂಟ್ರಾಸ್ಟ್ ಕಲರ್‌ ನ ಆ್ಯಕ್ಸೆಸರೀಸ್‌ ಹೆಚ್ಚು ಉಪಯೋಗವಾಗುತ್ತದೆ. ಪರದೆಗಳನ್ನು ಎರಡೂ ಕಡೆ ಸೇರಿಸಿ ಮಧ್ಯದಲ್ಲಿ ಒಂದು ಸುಂದರ ಗಂಟು ಹಾಕಿ ದಾರದಿಂದ ಕಟ್ಟಿ. ಬೇಸಿಗೆಯಲ್ಲಿ ಬೀಡ್ಸ್ ಅಥವಾ ಜಾಲರಿಯ ಪರದೆ ಹಾಕಬಹುದು. ಇದರಿಂದ ಕೋಣೆಯಲ್ಲಿ ಪ್ರೈವೆಸಿಯೂ ಇರುತ್ತದೆ ಹಾಗೂ ಬೆಳಕಿನಿಂದ ಕೋಣೆ ಹೊಳೆಯುತ್ತದೆ.

ಫ್ಲೋರಿಂಗ್

ಫ್ಲೋರಿಂಗ್‌ ನಲ್ಲಿ ಅತ್ಯಂತ ಅಗ್ಗದ ಆಯ್ಕೆ ಟೈಲ್ಸ್. ಮಾರ್ಬಲ್ ಮತ್ತು ಗ್ರಾನೈಟ್‌ ನ ಫ್ಲೋರ್‌ ದುಬಾರಿ. ಇವುಗಳಲ್ಲಿ ಇಟಾಲಿಯನ್ ಮಾರ್ಬಲ್ ಅತ್ಯಂತ ದುಬಾರಿ. ವುಡನ್‌ ಫ್ಲೋರಿಂಗ್‌ ಕೂಡ ಮಾರ್ಬಲ್ ಮತ್ತು ಗ್ರಾನೈಟ್‌ ನ ರೇಂಜ್‌ ನಲ್ಲಿ ಬರುತ್ತದೆ. ವುಡನ್ ಫ್ಲೋರಿಂಗ್‌ ನ ಲೈಫ್‌ ಕೂಡ ಅಧಿಕವಾಗಿರುತ್ತದೆ. ಆದರೆ ಅದರ ಮೇಲೆ ನೀರು ಬೀಳಬಾರದು. ಈಗೀಗ ಟೈಲ್ಸ್ ಅನೇಕ ಡಿಸೈನ್ ಗಳಲ್ಲಿ ಸಿಗುತ್ತವೆ. ಮಾರ್ಬಲ್ ಟೈಲ್ಸ್, ಲೆದರ್‌ ಟೈಲ್ಸ್, ಫ್ಯಾಬ್ರಿಕ್‌ ಟೈಲ್ಸ್, ವುಡನ್‌ ಟೆಕ್ಸ್ ಚರ್‌ ನ ಟೈಲ್ಸ್ ಇತ್ಯಾದಿ. ಈ ಟೈಲ್ಸ್ ನೆಲದ ಮೇಲೆ ವುಡನ್‌ ಫ್ಲೋರ್‌ ನದೇ ಅನುಭವ ನೀಡುತ್ತದೆ.

ವುಡನ್‌ ಫ್ಲೋರಿಂಗ್‌ ನ್ನು ಇಡೀ ಮನೆಯಲ್ಲಿ ಬಳಸಬಹುದು. ವುಡನ್‌ ಫ್ಲೋರಿಂಗ್‌ ನೊಂದಿಗೆ ಕಲರ್‌ ಫುಲ್ ಮತ್ತು ಟೆಕ್ಸ್ ಚರ್‌ ಇರುವ ಕಾರ್ಪೆಟ್‌ ನ್ನು ಇಷ್ಟಪಡಲಾಗುತ್ತದೆ. ಏಕೆಂದರೆ ಅವು ಬ್ರೈಟ್‌ ಲುಕ್‌ ಕೊಡುತ್ತವೆ. ಬೆಡ್‌ ರೂಮಿನಲ್ಲಿ ಮಾರ್ಬಲ್ ಅಥವಾ ವುಡ್‌ ಎರಡರಲ್ಲಿ ಯಾವುದನ್ನಾದರೂ ಉಪಯೋಗಿಸಬಹುದು. ಈಗ ವಿಭಿನ್ನ ರೀತಿಯ ಟೈಲ್ಸ್ ಗಳೊಂದಿಗೆ ಅನೇಕ ರೀತಿಯ ಫೋಟೋಗಳನ್ನು ಅಚ್ಚು ಮಾಡಲಾಗುತ್ತದೆ. ಇದಲ್ಲದೆ ಪ್ಲಾಸ್ಟಿಕ್‌ ಫ್ಲೋರಿಂಗ್‌ ಕೂಡ ಒಂದು ಆಯ್ಕೆ. ಆದರೆ ಇದು ಹೆಚ್ಚು ಬಳಕೆಯಲ್ಲಿಲ್ಲ.

ಸೀಲಿಂಗ್

ಈಗ ಫಾಲ್ಸ್ ಸೀಲಿಂಗ್‌ ಕೂಡ ಉಪಯೋಗದಲ್ಲಿದೆ. ಮನೆಗಳಲ್ಲಿ ಪಿಓಪಿ ಸೀಲಿಂಗ್‌ ಚೆನ್ನಾಗಿರುತ್ತದೆ. ಬೆಡ್‌ ರೂಮಿನ ಛಾವಣಿಗೆ ಪಿಂಕ್‌ ಕಲರ್‌ ಕೊಡಬಹುದು. ಕೋಣೆ ಚಿಕ್ಕದಾಗಿದ್ದರೆ ಬೆಡ್‌ ರೂಮಿನ ಛಾವಣಿಯ ಬಣ್ಣ ಲೈಟಾಗಿ ಇರಲಿ. ಛಾವಣಿ ಬಹಳ ಎತ್ತರವಾಗಿದ್ದರೆ ಗೋಡೆಗಳ ಬಣ್ಣಕ್ಕಿಂತ ಒಂದು ಗಾಢ ಬಣ್ಣದ ಶೇಡ್‌ ಛಾವಣಿಗೆ ಇರಲಿ.

ಲಿವಿಂಗ್ರೂಮ್

ಲಿವಿಂಗ್‌ ರೂಮಿನಿಂದ ನಿಮ್ಮ ವಿಚಾರಗಳು ಹಾಗೂ ನಡವಳಿಕೆಗಳ ಬಗ್ಗೆ ತಿಳಿಯುತ್ತದೆ. ಹೈಕ್ಲಾಸ್‌ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಲಿವಿಂಗ್‌ ರೂಮಿನಲ್ಲಿ ಜೋಡಿಸಬೇಕು. ಏಕೆಂದರೆ ಈ ಕೋಣೆಯಿಂದಲೇ ನಿಮ್ಮ ರೀತಿನೀತಿ ಮತ್ತು ಜೀವನಶೈಲಿ ತಿಳಿಯುತ್ತದೆ. ಲಿವಿಂಗ್‌ ರೂಮಿನ ಅಲಂಕಾರದಲ್ಲಿ ಬಣ್ಣ ಪ್ರಮುಖ ಪಾತ್ರ ವಹಿಸುತ್ತದೆ. ತೆಳು ಬಣ್ಣ ಚಿಕ್ಕ ಕೋಣೆಯನ್ನೂ ದೊಡ್ಡದಾಗಿ ತೋರಿಸುತ್ತದೆ. ಲಿವಿಂಗ್‌ ರೂಮಿನಲ್ಲಿ  ವುಡನ್‌ ಫ್ಲೋರಿಂಗ್‌ ನ್ನು ಆಯ್ಕೆ ಮಾಡಬಹುದು. ಏಕೆಂದರೆ ಅದನ್ನು ಸ್ವಚ್ಛಗೊಳಿಸುವುದು ಸುಲಭ. ಲಿವಿಂಗ್‌ರೂಮಿನಲ್ಲಿ ಮನೆಯ ಎಲ್ಲ ಸದಸ್ಯರೂ ಒಟ್ಟಿಗೆ ಹೆಚ್ಚು ಹೊತ್ತು ಕಳೆಯುತ್ತಾರೆ. ಆದ್ದರಿಂದ ಕೋಣೆಯ ರೂಪುರೇಷೆ ಸಿದ್ಧಗೊಳಿಸುವಾಗ ಹೆಚ್ಚು ಜನ ಕುಳಿತುಕೊಳ್ಳುವ ವ್ಯವಸ್ಥೆ ಇರಬೇಕು. ಕೋಣೆಯಲ್ಲಿ ಹೆಚ್ಚು ಜನ ಕುಳಿತುಕೊಳ್ಳುವಂತೆ ಫರ್ನೀಚರ್‌ ಉಪಯೋಗಿಸಿ. ಉದಾಹರಣೆಗೆ ಒಂದು ಚಿಕ್ಕ ಟೇಬಲ್ ನ ನಾಲ್ಕೂ ಕಡೆ ಕುರ್ಚಿಗಳನ್ನು ಇಡಿ. ಮಲ್ಟಿಪರ್ಪಸ್‌ ಫರ್ನೀಚರ್‌ ಉತ್ತಮ. ಫರ್ನೀಚರ್‌ ನ್ನು ಕೋಣೆಯ ಆಕಾರಕ್ಕೆ ತಕ್ಕಂತೆಯೇ ಆಯ್ಕೆ ಮಾಡಿ. ಫರ್ನೀಚರ್‌ ಸೆಟ್ ಮಾಡುವಾಗ ಓಡಾಡಲು 3-4 ಅಡಿ ಜಾಗ ಬಿಡಿ.

bed

ಲಿವಿಂಗ್‌ ರೂಮಿನ ಅಲಂಕಾರಕ್ಕೆ ನಿಶ್ಚಿತ ನಿಯಮವೇನೂ ಇಲ್ಲ. ಅದನ್ನು ನಿಮ್ಮ ಇಚ್ಛೆಗೆ ಅನುಸಾರವಾಗಿ ಅಲಂಕರಿಸಬಹುದು. ಈಗ ಫರ್ನೀಚರ್‌ನ ಅನೇಕ ಡಿಸೈನ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಾಡರ್ನ್‌ ಲುಕ್‌, ಎಸ್‌.ಎಸ್‌. (ಸ್ಟೇನ್‌ ಲೆಸ್‌ ಸ್ಟೀಲ್‌) ಫರ್ನೀಚರ್‌ ಮತ್ತು ಟೆಂಪೊರರಿ ಹಾಗೂ ವುಡ್‌ವರ್ಕ್‌ ನಲ್ಲಿ ಇಟಾಲಿಯನ್‌ ಫರ್ನೀಚರ್‌ ಗಳು ಬಹಳ ಇಷ್ಟಪಡಲಾಗುತ್ತಿದೆ. ಆದಾಗ್ಯೂ ಅಗ್ಗದ ಫರ್ನೀಚರ್‌ ನಲ್ಲಿ ಪ್ಲಾಸ್ಟಿಕ್‌ ಫರ್ನೀಚರ್‌ ಗಳಿವೆ. ಆದರೆ ಅದರಲ್ಲಿ ಸೋಫಾ ಮತ್ತು ಬೆಡ್‌ ಇತ್ಯಾದಿ ಇರುವುದಿಲ್ಲ. ವುಡನ್‌ ಫರ್ನೀಚರ್‌ ಹೆಚ್ಚಿನ ರೇಂಜ್‌ ನಿಂದ ಕಡಿಮೆ ರೇಂಜ್‌ ನಲ್ಲಿಯೂ ಸಿಗುತ್ತದೆ. ಇದನ್ನು ನಿಮ್ಮ ಇಷ್ಟಕ್ಕೆ ತಕ್ಕಂತೆ ಮಾಡಿಸಬಹುದು. ಮಾರುಕಟ್ಟೆಯಲ್ಲಿ ಫ್ಲೋರ್‌ ಫ್ಯಾಬ್ರಿಕ್‌ ನ ಸೋಫಾ ಕವರ್‌ ಚಾಲನೆಯಲ್ಲಿದೆ. ಅದು ಮಾಡರ್ನ್‌ ಲುಕ್‌ ಕೊಡುತ್ತದೆ. ಇವುಗಳಿಂದ ಸಾಧಾರಣ ಸೋಫಾ ಸೆಟ್‌ ನ್ನು ಅಲಂಕರಿಸಿ ಸುಂದರವಾಗಿ ಮಾಡಬಹುದು.

ಲಿವಿಂಗ್‌ ರೂಮಿನ ಪರದೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಡಿ. ಪರದೆಗಳು ಆಕರ್ಷಕವಾಗಿದ್ದು ಫ್ಲೋರ್‌ ವರೆಗೆ ಉದ್ದವಿರಬೇಕು. ಇದರಿಂದ ಕೋಣೆಯ ಸೌಂದರ್ಯ ಹೆಚ್ಚುತ್ತದೆ. ಕಾಟನ್‌ ಮತ್ತು ಸಿಲ್ಕ್ ಲೈನಿಂಗ್‌ ಇವರು ಪರದೆ ಚೆನ್ನಾಗಿರುತ್ತದೆ.

ಬೆಳಕಿಗಾಗಿ ಡೆಕೋರೇಟಿವ್ ‌ಟೇಬಲ್ ಲ್ಯಾಂಪ್‌ ಮತ್ತು ಸ್ಟ್ಯಾಂಡಿಂಗ್‌ ಲ್ಯಾಂಪ್‌ ಅಳವಡಿಸಬಹುದು. ಕೆಲವು ವಿಶೇಷ ಮತ್ತು ದುಬಾರಿ ವಸ್ತುಗಳನ್ನು ಹೈಲೈಟ್‌ ಮಾಡಲು ನೀವು ಲೈಟಿಂಗ್‌ ಎಫೆಕ್ಟ್ ಕೊಡಬಹುದು. ಪ್ರತಿ ಕೋಣೆಯ ಉಪಯೋಗಕ್ಕೆ ತಕ್ಕಂತೆ ಬೇರೆ ಬೇರೆ ಲೈಟ್‌ ಗಳನ್ನು ಉಪಯೋಗಿಸಿ. ಲಿವಿಂಗ್‌ ರೂಮಿನಲ್ಲಿ ಪೇಕ್‌ ಲೈಟಿಂಗ್‌ ಉಪಯೋಗಿಸಬೇಕು. ಮನೆಯ ಯಾವುದಾದರೂ ಮೂಲೆಯನ್ನು ಹೈಲೈಟ್‌ ಮಾಡಲು ಟ್ರ್ಯಾಕ್‌ ಲೈಟ್‌ ಉಪಯೋಗಿಸಬಹುದು. ಒಂದು ವೇಳೆ ನೀವು ಜೂಮರ್ ಅಳವಡಿಸುತ್ತಿದ್ದರೆ ಅದರೊಂದಿಗೆ ಇನ್ನೊಂದು ಲೈಟ್‌ ಉಪಯೋಗಿಸಬೇಡಿ. ಒಂದು ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚು ಫ್ಲವರ್‌ ವಾಸ್‌ ಇರಬಾರದು. ಹೆಚ್ಚು ಫ್ಲವರ್‌ ವಾಸ್‌ ಗಳನ್ನು ಇಡಬೇಕೆಂದಿದ್ದರೆ ಮೊದಲು ಚಿಕ್ಕದು, ಕಡೆಯಲ್ಲಿ ಅತ್ಯಂತ ದೊಡ್ಡದು ಈ ಕ್ರಮದಲ್ಲಿ ಜೋಡಿಸಿ. ಡ್ರಾಯಿಂಗ್‌ ರೂಮ್ ದೊಡ್ಡದಾಗಿದ್ದರೆ 2 ಮೂಲೆಗಳಲ್ಲಿ 2 ಹ್ಯಾಂಗಿಂಗ್‌ ಲ್ಯಾಂಪ್‌ ಗಳನ್ನು ಹಾಕಬಹುದು. ಮಾಡರ್ನ್‌ ಹಾಗೂ ಓಲ್ಡ್ ವರ್ಷನ್‌ ನ ಫ್ಯೂಷನ್‌ ಕೂಡ ಮಾಡಬಹುದು.

ಉದಾಹರಣೆಗೆ ಅಜ್ಜಿ ಅಥವಾ ತಾತನ ಹಳೆಯ ಕುರ್ಚಿಯೊಂದಿಗೆ ಯಾವುದಾದರೂ ಚಿಕ್ಕ ಗುಂಡಗಿನ ಅಥವಾ ಚೌಕಾಕಾರದ ಟೇಬಲ್ ಇಟ್ಟು ಕುರ್ಚಿಯ ಮೇಲೆ ಒಂದು ಸುಂದರವಾದ ಕುಶನ್‌ ಇಡಬಹುದು. ಕೋಣೆ ದೊಡ್ಡದಾಗಿದ್ದರೆ ನೆಲದಲ್ಲಿ ಒಂದು ಜಮಖಾನೆಯ ಮೇಲೆ ಒಂದು ಸುಂದರ ಬೆಡ್‌ ಶೀಟ್‌ ಹರಡಿ ಅದರ ಮೇಲೆ ಟ್ರೆಂಡಿ ಕುಶನ್‌ ಇಡಬಹುದು.

ಲಿವಿಂಗ್‌ ರೂಮಿನ ಆಕಾರಕ್ಕೆ ತಕ್ಕಂತೆ ಸ್ಟಾಚ್ಯು, ಡೆಕೋರೇಟಿವ್ ‌ಪೀಸಸ್‌, ಪೇಂಟಿಂಗ್ಸ್, ವಾಟರ್‌ ಫೌಂಟನ್‌, ದೊಡ್ಡ ಫ್ಲವರ್‌ ವಾಸ್‌ ಕೂಡ ಸಜ್ಜುಗೊಳಿಸಬಹುದು. ಗೋಡೆಗಳ ಮೇಲೆ ನಿಮ್ಮ ಕೈಗಳಿಂದ ಸುಂದರ ಮೋಟಿಫ್‌, ಬಳ್ಳಿ ಅಥವಾ ಹೂ ಮಾಡಬಹುದು. ಹೀಗೆ ನಿಮ್ಮ ಮನೆ, ದೊಡ್ಡದಾಗಿ, ವ್ಯವಸ್ಥಿತವಾಗಿ ಮತ್ತು ಭವ್ಯವಾಗಿ ಕಾಣುತ್ತದೆ.

ಬೃಂದಾ ವಿನೋದ್‌. 

ಬಣ್ಣ….. ನನ್ನ ಒಲವಿನ ಬಣ್ಣ!

ಬಣ್ಣ, ಬದುಕಿನಲ್ಲಿ ಅಲ್ಲದೆ ಮನಸ್ಸಿನಲ್ಲಿ ಹಾಗೂ ಮೆದುಳಿನ ಮೇಲೂ ಗಾಢ ಪ್ರಭಾವ ಬೀರುತ್ತದೆ. ಮನುಷ್ಯರ ಜೀವನದ ಮೇಲೆ ಬಣ್ಣಗಳು ಬೀರುವ ಪ್ರಭಾವದ ಬಗ್ಗೆ ಮನೋವಿಜ್ಞಾನಿ ಅಶುಮ್ ಗುಪ್ತಾ ಹೀಗೆ ಹೇಳುತ್ತಾರೆ. ಪ್ರತಿ ಬಣ್ಣಕ್ಕೂ ತನ್ನದೇ ಆದ ಪ್ರತ್ಯೇಕ ಮೂಡ್‌ ಹಾಗೂ ಪ್ರಭಾವ ಇರುತ್ತದೆ.

ಅಂದಹಾಗೆ ಬಣ್ಣಗಳ ಆಯ್ಕೆ

ವ್ಯಕ್ತಿಯ ಇಷ್ಟ, ಪರ್ಸನಾಲಿಟಿ, ಟೆಂಪರ್‌ ಮೆಂಟ್‌, ಪ್ರೊಫೆಷನಲ್ ಮತ್ತು ಆಲೋಚನೆಯ ವಿಧಾನ ಇತ್ಯಾದಿಗಳ ಮೇಲೆ ಅವಲಂಬಿತವಾಗಿದೆ. ಕೆಲವರು ಸೋಬರ್‌ ಬಣ್ಣ ಇಷ್ಟಪಡುತ್ತಾರೆ. ಕೆಲವರು ಹೊಳಪಿನ ಬಣ್ಣ ಇಚ್ಛಿಸುತ್ತಾರೆ. ಯುವಕರು ತಮ್ಮ ಬೆಡ್‌ ರೂಮಿನಲ್ಲಿ ವುಡ್‌ ಮತ್ತು ಪೇಸ್ಟಲ್ ಬಣ್ಣ ಮಾಡಿಸಲು ಇಚ್ಛಿಸುವುದಿಲ್ಲ. ಅವರಿಗೆ ಹೊಳಪಿನ ಬಣ್ಣ ಹೆಚ್ಚು ಇಷ್ಟ. ಆದರೆ ಎಲ್ಲ ಯುವಕರಿಗೂ ಹೊಳಪಿನ ಬಣ್ಣ ಇಷ್ಟವಾಗಬೇಕೆಂದೇನಿಲ್ಲ. ಮನೆಯಲ್ಲಿ ಕಲರ್‌ ಫುಲ್ ಗೋಡೆಗಳು, ಪರದೆ ಹಾಗೂ ಬೆಡ್‌ ಶೀಟ್ ಇತ್ಯಾದಿಗಳಿಂದ ಪಾಸಿಟಿವ್ ‌ಮೂಡ್‌ ಇದ್ದು ಮನಸ್ಸಿನಲ್ಲಿ ಉತ್ಸಾಹವಿರುತ್ತದೆ.

ಕೆಂಪು ಬಣ್ಣ ಪ್ರೀತಿ, ಉತ್ಸಾಹ ಹಾಗೂ ಬೆಚ್ಚನೆಯ ಪ್ರತೀಕವಾಗಿದ್ದರೆ, ಹಸಿರು ಬಣ್ಣ ತಣ್ಣನೆಯ ಹಾಗೂ ಹಸಿರಿನ ಅನುಭವ ಕೊಡುತ್ತದೆ.

ಬಿಳಿ ಬಣ್ಣ ಸರಳ, ಪ್ರಗತಿಶೀಲ ಹಾಗೂ ಶಾಂತಿಯ ಪ್ರತೀಕ. ಕಪ್ಪು ಶೋಕವನ್ನು ಪ್ರದರ್ಶಿಸುತ್ತದೆ. ಆದರೆ ಇದರ ಕಾಂಬಿನೇಶನ್ ರಾಯಲ್ ಲುಕ್‌ ಕೊಡುತ್ತದೆ. ಬೆಡ್‌ ರೂಮನ್ನು ಇಬ್ಬರು ಶೇರ್‌ ಮಾಡುವುದರಿಂದ ಇಬ್ಬರ ಇಚ್ಛೆಗೆ ತಕ್ಕಂತೆ ಬೆಡ್‌ ರೂಮಿಗೆ ಕಲರ್ ಥೀಮ್ ಆರಿಸಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ