ಈಗ ಜನ ತಮ್ಮ ಇಷ್ಟದ `ಇಂಟೀರಿಯರ್‌' ಮಾಡಿಸಲು ಚೆನ್ನಾಗಿ ಹಣ ಖರ್ಚು ಮಾಡಲು ಸಿದ್ಧರಿದ್ದಾರೆ. ಎಲ್ಲರ ಮನದಲ್ಲೂ ತಮ್ಮ ಮನೆಯ ಅಲಂಕಾರದ ಬಗ್ಗೆ ಕೆಲವು ಇಚ್ಛೆಗಳಿರುತ್ತವೆ. ಮನೆಯನ್ನು ಅಲಂಕರಿಸಲು 3 ವಿಷಯಗಳ ಬಗ್ಗೆ ವಿಶೇಷ ಗಮನ ಕೊಡಿ. ಬಜೆಟ್‌, ಅಲಂಕಾರದ ಥೀಮ್ ಮತ್ತು ಮನೆಯ ಆಕಾರ.

ಇಂಟೀರಿಯರ್‌ ನಿಮ್ಮ ಬಜೆಟ್‌ ಹಾಗೂ ಇಷ್ಟವನ್ನು ಗಮನದಲ್ಲಿಟ್ಟುಕೊಂಡು ಮೊದಲು ಇಂಟೀರಿಯರ್‌ ಥೀಮ್ ನ್ನು ಆಯ್ಕೆ ಮಾಡಿ. ಅಂದಹಾಗೆ ಈಗ ಮಾಡರ್ನ್‌ ಲುಕ್‌ ಹೆಚ್ಚು ಪ್ರಚಲಿತದಲ್ಲಿದೆ. ಇದಲ್ಲದೆ, ಕಾಂಟೆಂಪೊರರಿ, ಮಾಡರ್ನ್‌ ಕಾಂಟೆಂಪೊರರಿ, ಎಥ್ನಿಕ್‌, ಫ್ಯೂಷನ್‌ ಇತ್ಯಾದಿ ಥೀಮ್ ಗಳ ಆಧಾರದ ಮೇಲೂ ಮನೆಯ ಇಂಟೀರಿಯರ್‌ ಡಿಸೈನ್‌ ಮಾಡಿಸಲಾಗುತ್ತದೆ.

ಮನೆಯ ಅಲಂಕಾರಕ್ಕೆ ಆಕರ್ಷಕ ಹಾಗೂ ಬಾಳಿಕೆ ಬರುವ ಮತ್ತು ನಿಮ್ಮ ಬಜೆಟ್‌ ಗೆ ತಕ್ಕಂತಹ ವಸ್ತುಗಳನ್ನು ಆಯ್ಕೆ ಮಾಡಿ. ಮನೆಯ ಇಂಟೀರಿಯರ್‌ ನಲ್ಲಿ ಅತ್ಯಂತ ಮಹತ್ವಪೂರ್ಣವಾದುದ್ದು ಫರ್ನೀಚರ್‌. ನೀವು ದುಬಾರಿಯಾದ ಹಾಗೂ ಬ್ರ್ಯಾಂಡೆಡ್ ಫರ್ನೀಚರ್‌ ನೊಂದಿಗೆ ಆಕರ್ಷಕ ಹಾಗೂ ಅಗ್ಗದ ಫರ್ನೀಚರ್‌ ಆರಿಸಬಹುದು. ಈಗ ಬೆತ್ತದಿಂದ ಹಿಡಿದು ಸ್ಟೀಲ್ ಮತ್ತು ಪ್ಲ್ಯಾಸ್ಟಿಕ್ ವರೆಗೆ ಫರ್ನೀಚರ್‌ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮನೆಗೆ ಸ್ಟೈಲಿಶ್‌ ಲುಕ್‌ ಕೊಡಲು ತೆಳುವಾದ ಹಾಗೂ ಸುಂದರ ಡೆಕೋರೇಟರ್‌ ಪೀಸ್‌ ಗಳು ಸಿಗುತ್ತವೆ. ಇವುಗಳಿಂದ ನಿಮ್ಮ ಕಲ್ಪನೆಗೆ ತಕ್ಕಂತೆ ಮನೆಯನ್ನು ಅಲಂಕರಿಸಬಹುದು.

ಬೆಡ್‌ ರೂಮ್ ನೀವು ನವವಿವಾಹಿತ ದಂಪತಿಗಳಾಗಿದ್ದರೆ ನಿಮ್ಮ ಬೆಡ್‌ ರೂಮಿನ ಅಲಂಕಾರದ ಬಗ್ಗೆ ವಿಶೇಷ ಗಮನ ಕೊಡಬೇಕು. ಬೆಡ್‌ ರೂಮ್ ನಲ್ಲಿ ಮಂಚ ಆಕರ್ಷಣೆಯ ಮುಖ್ಯ ಕೇಂದ್ರವಾಗಿದೆ. ಮಂಚ ಆರಾಮದಾಯಕವಾಗಿಲ್ಲದಿದ್ದರೆ ನಿಮಗೆ ವಿಶ್ರಾಂತಿಯ ಅನುಭವವಾಗುವುದಿಲ್ಲ ಮತ್ತು ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯೊಡನೆ ವ್ಯವಹರಿಸಲಾಗುವುದಿಲ್ಲ.

ನೀವು ನಿಮ್ಮ ಬೆಡ್‌ ರೂಮನ್ನು ಲಗ್ಝುರಿಯಸ್‌ ಆಗಿ ಮಾಡುತ್ತಿದ್ದರೆ ಕೆನೋಪಿ ಅಂದರೆ ಮೇಲೆ ಆವರಣವಿರುವ ಬೆಡ್‌ ಆರಿಸಬಹುದು. ಇದು ಬೆಡ್‌ ರೂಮಿಗೆ ರಾಯಲ್ ಲುಕ್‌ ಕೊಡುತ್ತದೆ. ಅದರ ಮೇಲೆ ಮಲಗಿದ ಕೂಡಲೇ ರಾಜೋಚಿತ ಠೀವಿಯ ಅನುಭವವಾಗುತ್ತದೆ.

ಈಗೀಗ ಒನ್‌ ಸ್ಟೆಪ್‌ ಬೆಡ್‌ ಕೂಡ ಮಾರ್ಕೆಟ್‌ ನಲ್ಲಿದೆ. ಇದರಲ್ಲಿ ಬೆಡ್‌ ಕೆಳಗೆ 1 ಇಂಚ್‌ ನ ಸ್ಟೆಪ್‌ ಇದ್ದು ಅದರಿಂದ ಬೆಡ್‌ ನ ಸೌಂದರ್ಯ ಹೆಚ್ಚುತ್ತದೆ. ಮಂಚದ ಮೇಲೆ 2 ಬೇರೆ ಬೇರೆ ಹಾಸುಗೆಗಳನ್ನು ಉಪಯೋಗಿಸುವ ಬದಲು ಒಂದೇ ಹಾಸಿಗೆಯನ್ನು ಉಪಯೋಗಿಸಿ.

ಹಾಸಿಗೆಯನ್ನು ಆರಿಸುವಾಗ ಅದರ ಹೆಡ್‌ ಬೋರ್ಡ್‌ ಕಡೆಯೂ ಗಮನಹರಿಸಿ. ಮಂಚ ರೂಮಿನ ಮಧ್ಯದಲ್ಲೇ ಇರಲಿ. ಮಂಚದ ಜೊತೆ ಬೆಡ್‌ ರೂಮಿನ ಇತರ ಫರ್ನೀಚರ್‌ ಗಳಲ್ಲಿ ಸಿಟಿಂಗ್‌ ಫರ್ನೀಚರ್‌, ಚೇರ್ಸ್ ಟಿವಿ ಟ್ರಾಲಿ, ವಾರ್ಡ್‌ ರೋಬ್‌ ಮತ್ತು ಸೈಡ್ ಟೇಬಲ್ ಇತ್ಯಾದಿ ಇರುತ್ತವೆ. ಇನ್ನೂ ಆಯ್ಕೆ ಮಾಡಿದ ಥೀಮ್ ಗೆ ಅನುಸಾರವಾಗಿ ಆರಿಸಿ.

ಬೆಡ್‌ ರೂಮಿನ ಫರ್ನೀಚರ್‌ ಹೆಚ್ಚು ಭಾರ ಇರಬಾರದು. ಅದರಿಂದ ರೂಮಿನ ಸೆಟಿಂಗ್‌ ಬದಲಿಸುವಾಗ ತೊಂದರೆಯಾಗುತ್ತದೆ. ವುಡನ್‌ ಫರ್ನೀಚರ್‌ ಅಗ್ಗ ಹಾಗೂ ಬಾಳಿಕೆ ಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ