ಗೋಪಿ : ನೀನು ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟುಲು ಬಯಸುವೆ?
ರವಿ : ಜಿರಲೆಯಾಗಿ.
ಗೋಪಿ : ಅದೇಕೆ?
ರವಿ : ಅದಕ್ಕೆ ಮಾತ್ರವೇ ನನ್ನ ಹೆಂಡತಿ ಹೆದರುವುದು.
ಒಬ್ಬ ವ್ಯಕ್ತಿ ಪೊಲೀಸ್ ಠಾಣೆಗೆ ಫೋನ್ ಮಾಡಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ದೂರು ನೀಡಿದ.
ಆಫೀಸರ್ : ಯಾವಾಗಿನಿಂದ?
ವ್ಯಕ್ತಿ : 1 ತಿಂಗಳಾಗಿರಬೇಕು….
ಆಫೀಸರ್ : ಆದರೆ ರಿಪೋಟ್ ನೀಡಲು ನೀವೇಕೆ ಇಷ್ಟು ತಡ ಮಾಡಿದಿರಿ?
ವ್ಯಕ್ತಿ : ನಿನ್ನೆಯವರೆಗೂ ಇದನ್ನು ನಾನೊಂದು ಸುಂದರ ಕನಸೆಂದೇ ಭಾವಿಸಿದ್ದೆ. ಆದರೆ ಅಕ್ಕಪಕ್ಕದ ಮನೆಯವರೆಲ್ಲ, `ಏನ್ರಿ, ನಿಮ್ಮ ಮನೆಯಲ್ಲಿ ಗಲಾಟೆನೇ ಇಲ್ಲ…. ನಿಮ್ಮ ಮುಖ ಇಷ್ಟು ಪ್ರಸನ್ನವಾಗಿದೆ, ಆರೋಗ್ಯ ಕೂಡಿ ಮೈಕೆ ತುಂಬಿಕೊಂಡಿದ್ದೀರಿ…..’ ಎಂದು ವಿಚಾರಿಸಿದಾಗಲೇ ಹೀಗೂ ಇರಬಹುದೇ ಅನಿಸಿದ್ದು……
ಹೆಂಡತಿ : ನೀವು ನನ್ನನ್ನು ನಿಜವಾಗಿಯೂ ಪ್ರೇಮಿಸುತ್ತೀರಾ?
ಗಂಡ : ಅದರಲ್ಲಿ ಸಂದೇಹವೇಕೆ?
ಹೆಂಡತಿ : ಹಾಗಾದರೆ ನನಗಾಗಿ ನೀವು ಪ್ರಾಣ ಬಿಡಲಿಕ್ಕೂ ಸಿದ್ಧವೇ?
ಗಂಡ : ಇಲ್ಲ….ಇಲ್ಲ…. ನನ್ನದು ಅಮರ ಪ್ರೇಮ!
ಪತಿ : ಕೇಳಿಲ್ಲಿ….. ಪೇಪರ್ ಲ್ಲಿ ಹೊಸ ಸಂಶೋಧನೆ ಕುರಿತು ವಿಜ್ಞಾನಿಯೊಬ್ಬರು ಹೇಳ್ತಿದ್ದಾರೆ, ಹೆಚ್ಚು ಹೆಚ್ಚು ಮಾತನಾಡುವುದರಿಂದ ವಯಸ್ಸು ಕಡಿಮೆ ಆಗುತ್ತದಂತೆ….
ಪತ್ನಿ : ಈಗಲಾದ್ರೂ ಗೊತ್ತಾಯ್ತೇ…? ನನ್ನ ವಯಸ್ಸು 45 ಅಲ್ಲ… ಕೇವಲ 35 ಅಂತ!
ಮಧುಚಂದ್ರದ ಮೂಡ್ ನಲ್ಲಿ ಮತ್ತೇರಿದ್ದ ನವಿವಾಹಿತೆ ತನ್ನ ಗಂಡನಿಗೆ ಹೇಳಿದಳು, “ನಿಜಕ್ಕೂ ಹೇಳ್ತೀನಿ, ನಿಮ್ಮದು ಅಪರಂಜಿ ಗುಣ… ನೂರಕ್ಕೆ ಒಬ್ಬರು ಅಂತೀನಿ…”
ಮೊದಲೇ ಸಂಶಯ ಸ್ವಭಾವದ ಗಂಡ ಗಂಭೀರವಾಗಿ ಕೇಳಿದ, “ಅದೆಲ್ಲ ಇರಲಿ, ಮಿಕ್ಕ 99 ಮಂದಿ ಯಾರು?”
ಗಂಡ : ಇವತ್ತು ಭಾನುವಾರ, ಇವತ್ತೊಂದು ದಿನವಾದರೂ ನಾನು ನೆಮ್ಮದಿಯಾಗಿ ಇರಲು ಬಯಸುತ್ತೀನಿ. ಹೀಗಾಗಿ ಹೊಸ ಸಿನಿಮಾದ 3 ಟಿಕೆಟ್ಸ್ ತಂದಿದ್ದೀನಿ.
ಹೆಂಡತಿ : ಬರೀ ಮೂರೇ? ಯಾರು ಯಾರಿಗೆ?
ಗಂಡ : ಒಂದು ನಿನಗೆ, ಉಳಿದದ್ದು ನಿಮ್ಮಮ್ಮ ಅಪ್ಪನಿಗೆ!
ಪತಿ : ಫ್ರಿಜ್ ನಲ್ಲಿಟ್ಟರೂ ಉಷ್ಣತೆಯ ಗುಣ ಬಿಡದ ವಸ್ತು ಯಾವುದು?
ಪತ್ನಿ : ಯಾವುದಾಗಿರಲು ಸಾಧ್ಯ?
ಪತಿ : ಗರಂಮಸಾಲ!
ಪತ್ನಿ : ಏನ್ರಿ, ನಾನು ಮಾಡಿದ ಉಪ್ಪಿಟ್ಟು ಹೇಗಿದೆ?
ಪತಿ : ಏನೋ ಇದೆ…. ಖಾಲಿ ಮಾತ್ರ ಆಗ್ತಿಲ್ಲ.
ಪತ್ನಿ : ಏನ್ರಿ ಹೀಗಂತೀರಾ? ಮಕ್ಕಳು ಆಗಲೇ ಇನ್ನಷ್ಟು ಬೇಕು ಅಂತ 2-2 ಪ್ಲೇಟು ತೆಗೆದುಕೊಂಡು ಹೋದ್ರು…
ಅಷ್ಟರಲ್ಲಿ ಮಕ್ಕಳ ಕೋಣೆಯಿಂದ ಧ್ವನಿ ಕೇಳಿಸಿತು, “ಅಮ್ಮ, ಇನ್ನೊಂದು ಸ್ವಲ್ಪ ಬೇಕು…. ಹರಿದ 1 ಪುಸ್ತಕ ಅಂಟಿಸಿಕೊಳ್ಳೋದು ಬಾಕಿ ಇದೆ!”
ಪತ್ನಿ : ಇದೇನ್ರಿ ಆಫೀಸ್ ನಿಂದ ಇಷ್ಟು ಬೇಗ ಮನೆಗೆ ಬಂದುಬಿಟ್ರಿ… ಅಲ್ಲೇನೂ ಎಡವಟ್ಟು ಆಗಿಲ್ಲ ತಾನೇ?
ಪತಿ : ಏನು ಮಾಡ್ಲಿ? ನಮ್ಮ ಬಾಸ್ ಕೋಪದಿಂದ `ಗೋ ಟು ಹೆಲ್!’ ಅಂತ ರೇಗಿಬಿಟ್ರು.
ಪತಿ : ಛೇ….ಛೇ! ಇನ್ನು ಮುಂದೆ ನಾನೆಂದೂ ಏರೋಪ್ಲೇನ್ ಹತ್ತೋಲ್ಲ ಬಿಡು.
ಪತ್ನಿ : ಯಾಕ್ರಿ? ಏನಾಯ್ತು?
ಪತಿ : ಆ ಹಾಳಾದ ಏರ್ ಹೋಸ್ಟೆಸ್ ಮೊದಲು ನನ್ನನ್ನು ಬೆಲ್ಟ್ ನಿಂದ ಕುರ್ಚಿಗೆ ಬಿಗಿಯಾಗಿ ಕಟ್ಟಿಹಾಕಿ, ನಂತರ ವೈಯಾರದಿಂದ, `ಏನಾದ್ರೂ ಬೇಕಿತ್ತೇ ಸರ್?’ ಅನ್ನುವುದೇ?
ಪ್ರಕಾಶ್ : ಸರ್, ನನ್ನ ಹೆಂಡತಿ ಕಾಣೆಯಾಗಿದ್ದಾಳೆ! ದೂರು ಕೊಟ್ಟಿರ್ತೀನಿ, ನಿಧಾನವಾಗಿ…. ಆದರೆ… ಹುಡುಕಿಕೊಡಿ.
ಪೋಸ್ಟ್ ಮಾಸ್ಟರ್ : ರೀ ಸ್ವಾಮಿ, ಇದು ಪೋಸ್ಟ್ ಆಫೀಸ್, ಪೊಲೀಸ್ ಠಾಣೆಯಲ್ಲ ನಿಮ್ಮ ದೂರು ತೆಗೆದುಕೊಳ್ಳಲು…..
ಪ್ರಕಾಶ್ : ಅಯ್ಯೋ….. ಹೌದೇ? ನನಗಂತೂ ಸಂತೋಷದಲ್ಲಿ ಎಲ್ಲಿಗೆ ಬಂದಿದ್ದೇನೆ ಏನು ಮಾಡ್ತಿದ್ದೇನೆ ಅಂತಾನೂ ಗೊತ್ತಾಗ್ತಿಲ್ಲ…..
ಪತ್ನಿ : ಏನ್ರಿ ಇದು? ಪಾರ್ಟಿ ಮುಗಿಸಿಕೊಂಡು ಇಷ್ಟು ತಡವಾಗಿ ಬಂದಿದ್ದೀರಿ…. ಅದು ಅಲ್ದೆ ನಿಮ್ಮ ಬಳಿ ಶರ್ಟ್ ಮೇಲೆ ಏನಿದು ಸುಡುಗಾಡು… ಲಿಪ್‌ಸ್ಟಿಕ್‌ಕಲೆ?
ಪತಿ : ಅಯ್ಯೋ! ಇದು ಹೇಗಾಯ್ತು ಮಾರಾಯ್ತಿ? ಆಗಂತೂ ನಾನು ಶರ್ಟ್ ಕೂಡ ಹಾಕಿರಲಿಲ್ಲ…
ಪತ್ನಿ : ನಿನ್ನೆ ಸಂಜೆ ಕಿಟಿಪಾರ್ಟಿಗೆ ಹೋಗುವ ಮುನ್ನ ನಾನೊಬ್ಬ ಅತಿ ಸುಂದರ ಮಹಿಳೆಯನ್ನು ಭೇಟಿಯಾದೆ.
ಪತಿ : ಸರಿ…. ಅದಕ್ಕೇನೀಗ?
ಪತ್ನಿ : ನಾನು ಆಕೆಯನ್ನು ಎಷ್ಟು ಹೊಗಳಿದೆ ಅಂದ್ರೆ….. ಗಂಟಲು ಕಟ್ಟಿ ನೀರು ಕುಡಿಯುವ ಹಾಗಾಯ್ತು.
ಪತಿ : ಸರಿ… ಮುಂದೇನು ಅಂತ ಹೇಳು…
ಪತ್ನಿ : ಮುಂದೇನು? ನಾನು ಕನ್ನಡಿ ಬಿಟ್ಟು ಹ್ಯಾಂಡ್ ಬ್ಯಾಗ್ ಹಿಡಿದು ಕಿಟಿಪಾರ್ಟಿಗೆ ಹೊರಟೆ.
ತಂದೆ : ಅಲ್ಲಯ್ಯ, ಹೈಸ್ಕೂಲಿಗೆ ಬಂದ್ರೂ ನಿನ್ನ ತರಲೆ ಬುದ್ಧಿ ಬಿಡಲಿಲ್ಲ. ನೋಡು, ನಿನ್ನ ಮಿಸ್ ನನಗೆ ಲೆಟರ್ ಕಳಿಸಿದ್ದಾರೆ.
ಮಗ : ಇರಲಿ, ನೀವು ಚಿಂತೆ ಮಾಡಬೇಡಿ ಡ್ಯಾಡಿ, ನಾನು ಮಮ್ಮಿಗೆ ಏನೂ ಹೇಳೋಲ್ಲ!
ಡಾ. ಕುಲಕರ್ಣಿ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಸಿಲ್ವರ್ ಜ್ಯೂಬಿಲಿ ಸಮಾರಂಭ ನಡೆಯುತ್ತಿತ್ತು. ಗ್ರಾಂಡ್ ಪಾರ್ಟಿಯಲ್ಲಿ ಎಲ್ಲರೂ ಹಾಯಾಗಿದ್ದರು. ಡಾಕ್ಟರ್ ಸಾಹೇಬರು ನಡುನಡುವೆ ಹೆಂಡತಿಯನ್ನು `ಹನಿ’ `ಸ್ವೀಟಿ’ `ಡಿಯರ್’ `ಡಾರ್ಲಿಂಗ್’ ಎಂದೆಲ್ಲ ಸಂಬೋಧಿಸುತ್ತಾ ಅತಿಥಿಗಳನ್ನು ಜೋಡಿಯಾಗಿ ಸತ್ಕರಿಸುತ್ತಿದ್ದರು.
ಆ ಸಮಾರಂಭಕ್ಕೆ ಬಂದಿದ್ದ ಯುವ ಪತ್ರಕರ್ತನೊಬ್ಬ ಬಲು ಉತ್ಸಾಹದಿಂದ ಡಾ. ಕುಲಕರ್ಣಿಯವರ ಸಂದರ್ಶನ ತೆಗೆದುಕೊಳ್ಳುತ್ತಿದ್ದ.
ಪತ್ರಕರ್ತ : ಸರ್, ನಿಮ್ಮಿಬ್ಬರ ಯಶಸ್ವೀ ದಾಂಪತ್ಯದ ಗುಟ್ಟೇನು? ಇಷ್ಟು ವರ್ಷಗಳು ಕಳೆದ ಮೇಲೂ ನಿಮ್ಮಾಕೆಯನ್ನು ಇಷ್ಟು ರೊಮ್ಯಾಂಟಿಕ್ ಆಗಿ ಸ್ವೀಟಿ, ಡಾರ್ಲಿಂಗ್ ಅಂತಿದ್ದೀರಲ್ಲ…. ನಿಜಕ್ಕೂ ಆಕೆ ಪುಣ್ಯ ಮಾಡಿದ್ದಾರೆ.
ಡಾ. ಕುಲಕರ್ಣಿ : ಅದು ಹಾಗಲ್ರಿ, 2 ವರ್ಷದ ಹಿಂದೆಯೇ ನನಗೆ ಆಕೆಯ ಹೆಸರು ಮರೆತುಹೋಯ್ತು. ಅದನ್ನು ನೇರವಾಗಿ ಕೇಳಿದರೆ ಆಕೆಗೆ ಕೋಪ ಬರಲ್ವೇ? ಅದಕ್ಕೆ ಹೀಗೇನಾದರೂ ಹೇಳಿ ಸಂಭಾಳಿಸುತ್ತೀನಿ.
ಪತಿ : ಆಹಾ…. ಈ ಸಿನಿಮಾ ನೋಡ್ತಿದ್ರೆ ಮತ್ತೆ ನಮಿತಾಳನ್ನು ಕಿಸ್ ಮಾಡಲು ಮನಸ್ಸಾಗುತ್ತಿದೆ.
ಪತ್ನಿ : ಅಂದ್ರೆ….? ಹಿಂದೆಯೂ ನೀವು ಒಂದು ಸಲ ನಮಿತಾಳನ್ನು ಕಿಸ್ ಮಾಡಿದ್ರಿ ಅನ್ನಿ.
ಪತಿ : ಹಾಗಲ್ಲ…. ಹಿಂದಿನ ಸಿನಿಮಾ ನೋಡಿದಾಗ್ಲೂ ಹಾಗೇ ಅನಿಸಿತ್ತು.