ಗೋಪಿ : ನೀನು ಮುಂದಿನ ಜನ್ಮದಲ್ಲಿ ಏನಾಗಿ ಹುಟ್ಟುಲು ಬಯಸುವೆ?

ರವಿ : ಜಿರಲೆಯಾಗಿ.

ಗೋಪಿ : ಅದೇಕೆ?

ರವಿ : ಅದಕ್ಕೆ ಮಾತ್ರವೇ ನನ್ನ ಹೆಂಡತಿ ಹೆದರುವುದು.

ಒಬ್ಬ ವ್ಯಕ್ತಿ ಪೊಲೀಸ್‌ ಠಾಣೆಗೆ ಫೋನ್‌ ಮಾಡಿ ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ದೂರು ನೀಡಿದ.

ಆಫೀಸರ್‌ : ಯಾವಾಗಿನಿಂದ?

ವ್ಯಕ್ತಿ : 1 ತಿಂಗಳಾಗಿರಬೇಕು....

ಆಫೀಸರ್‌ : ಆದರೆ ರಿಪೋಟ್‌ ನೀಡಲು ನೀವೇಕೆ ಇಷ್ಟು ತಡ ಮಾಡಿದಿರಿ?

ವ್ಯಕ್ತಿ : ನಿನ್ನೆಯವರೆಗೂ ಇದನ್ನು ನಾನೊಂದು ಸುಂದರ ಕನಸೆಂದೇ ಭಾವಿಸಿದ್ದೆ. ಆದರೆ ಅಕ್ಕಪಕ್ಕದ ಮನೆಯವರೆಲ್ಲ, `ಏನ್ರಿ, ನಿಮ್ಮ ಮನೆಯಲ್ಲಿ ಗಲಾಟೆನೇ ಇಲ್ಲ.... ನಿಮ್ಮ ಮುಖ ಇಷ್ಟು ಪ್ರಸನ್ನವಾಗಿದೆ, ಆರೋಗ್ಯ ಕೂಡಿ ಮೈಕೆ ತುಂಬಿಕೊಂಡಿದ್ದೀರಿ.....' ಎಂದು ವಿಚಾರಿಸಿದಾಗಲೇ ಹೀಗೂ ಇರಬಹುದೇ ಅನಿಸಿದ್ದು......

ಹೆಂಡತಿ : ನೀವು ನನ್ನನ್ನು ನಿಜವಾಗಿಯೂ ಪ್ರೇಮಿಸುತ್ತೀರಾ?

ಗಂಡ : ಅದರಲ್ಲಿ ಸಂದೇಹವೇಕೆ?

ಹೆಂಡತಿ : ಹಾಗಾದರೆ ನನಗಾಗಿ ನೀವು ಪ್ರಾಣ ಬಿಡಲಿಕ್ಕೂ ಸಿದ್ಧವೇ?

ಗಂಡ : ಇಲ್ಲ....ಇಲ್ಲ.... ನನ್ನದು ಅಮರ ಪ್ರೇಮ!

ಪತಿ : ಕೇಳಿಲ್ಲಿ..... ಪೇಪರ್‌ ಲ್ಲಿ ಹೊಸ ಸಂಶೋಧನೆ ಕುರಿತು ವಿಜ್ಞಾನಿಯೊಬ್ಬರು ಹೇಳ್ತಿದ್ದಾರೆ, ಹೆಚ್ಚು ಹೆಚ್ಚು ಮಾತನಾಡುವುದರಿಂದ ವಯಸ್ಸು ಕಡಿಮೆ ಆಗುತ್ತದಂತೆ....

ಪತ್ನಿ : ಈಗಲಾದ್ರೂ ಗೊತ್ತಾಯ್ತೇ...? ನನ್ನ ವಯಸ್ಸು 45 ಅಲ್ಲ... ಕೇವಲ 35 ಅಂತ!

ಮಧುಚಂದ್ರದ ಮೂಡ್‌ ನಲ್ಲಿ ಮತ್ತೇರಿದ್ದ ನವಿವಾಹಿತೆ ತನ್ನ ಗಂಡನಿಗೆ ಹೇಳಿದಳು, ``ನಿಜಕ್ಕೂ ಹೇಳ್ತೀನಿ, ನಿಮ್ಮದು ಅಪರಂಜಿ ಗುಣ... ನೂರಕ್ಕೆ ಒಬ್ಬರು ಅಂತೀನಿ...''

ಮೊದಲೇ ಸಂಶಯ ಸ್ವಭಾವದ ಗಂಡ ಗಂಭೀರವಾಗಿ ಕೇಳಿದ, ``ಅದೆಲ್ಲ ಇರಲಿ, ಮಿಕ್ಕ 99 ಮಂದಿ ಯಾರು?''

ಗಂಡ : ಇವತ್ತು ಭಾನುವಾರ, ಇವತ್ತೊಂದು ದಿನವಾದರೂ ನಾನು ನೆಮ್ಮದಿಯಾಗಿ ಇರಲು ಬಯಸುತ್ತೀನಿ. ಹೀಗಾಗಿ ಹೊಸ ಸಿನಿಮಾದ 3 ಟಿಕೆಟ್ಸ್ ತಂದಿದ್ದೀನಿ.

ಹೆಂಡತಿ : ಬರೀ ಮೂರೇ? ಯಾರು ಯಾರಿಗೆ?

ಗಂಡ : ಒಂದು ನಿನಗೆ, ಉಳಿದದ್ದು ನಿಮ್ಮಮ್ಮ ಅಪ್ಪನಿಗೆ!

ಪತಿ : ಫ್ರಿಜ್‌ ನಲ್ಲಿಟ್ಟರೂ ಉಷ್ಣತೆಯ ಗುಣ ಬಿಡದ ವಸ್ತು ಯಾವುದು?

ಪತ್ನಿ : ಯಾವುದಾಗಿರಲು ಸಾಧ್ಯ?

ಪತಿ : ಗರಂಮಸಾಲ!

ಪತ್ನಿ : ಏನ್ರಿ, ನಾನು ಮಾಡಿದ ಉಪ್ಪಿಟ್ಟು ಹೇಗಿದೆ?

ಪತಿ : ಏನೋ ಇದೆ.... ಖಾಲಿ ಮಾತ್ರ ಆಗ್ತಿಲ್ಲ.

ಪತ್ನಿ : ಏನ್ರಿ ಹೀಗಂತೀರಾ? ಮಕ್ಕಳು ಆಗಲೇ ಇನ್ನಷ್ಟು ಬೇಕು ಅಂತ 2-2 ಪ್ಲೇಟು ತೆಗೆದುಕೊಂಡು ಹೋದ್ರು...

ಅಷ್ಟರಲ್ಲಿ ಮಕ್ಕಳ ಕೋಣೆಯಿಂದ ಧ್ವನಿ ಕೇಳಿಸಿತು, ``ಅಮ್ಮ, ಇನ್ನೊಂದು ಸ್ವಲ್ಪ ಬೇಕು.... ಹರಿದ 1 ಪುಸ್ತಕ ಅಂಟಿಸಿಕೊಳ್ಳೋದು ಬಾಕಿ ಇದೆ!''

ಪತ್ನಿ : ಇದೇನ್ರಿ ಆಫೀಸ್‌ ನಿಂದ ಇಷ್ಟು ಬೇಗ ಮನೆಗೆ ಬಂದುಬಿಟ್ರಿ... ಅಲ್ಲೇನೂ ಎಡವಟ್ಟು ಆಗಿಲ್ಲ ತಾನೇ?

ಪತಿ : ಏನು ಮಾಡ್ಲಿ? ನಮ್ಮ ಬಾಸ್‌ ಕೋಪದಿಂದ `ಗೋ ಟು ಹೆಲ್!' ಅಂತ ರೇಗಿಬಿಟ್ರು.

ಪತಿ : ಛೇ....ಛೇ! ಇನ್ನು ಮುಂದೆ ನಾನೆಂದೂ ಏರೋಪ್ಲೇನ್‌ ಹತ್ತೋಲ್ಲ ಬಿಡು.

ಪತ್ನಿ : ಯಾಕ್ರಿ? ಏನಾಯ್ತು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ