ರಂಗಶ್ರೀ ಕಾವ್ಯ ಸೌರಭ : ದಯಾನಂದ ಸಾಗರ್ ಪ್ರತಿಷ್ಠಾನದ ಅಂಗವಾಗಿ `ಕಾವ್ಯ ಸಾಗರ’ ಎಂಬ ರಾಜ್ಯಮಟ್ಟದ ಕವನವಾಚನ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಡಾ. ಹೇಮಚಂದ್ರ ಸಾಗರ, ದೊರೆಸ್ವಾಮಿ, ಡಾ. ಹಂ.ಪ. ನಾಗರಾಜಯ್ಯ, ಡಾ. ಕಮಲಾ ಹಂಪನಾ, ಪೆರುಮಾಳ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ `ರಂಗಶ್ರೀ’ ಪುರಸ್ಕಾರ ನೀಡಲಾಯಿತು.
ಪುಸ್ತಕ ಲೋಕಾರ್ಪಣೆ :
ನೃಪತುಂಗ ಸಾಹಿತ್ಯ ವೇದಿಕೆಯಲ್ಲಿ ಈಚೆಗೆ ಭಾಸ್ಕರ್ ಹೆಗಡೆಯವರು ಬರೆದ `ನಂಬಿಕೆಗಳೆಂದೂ ಮೂಢನಂಬಿಕೆಗಳಾಗಬಾರದು’ ಎಂಬ ವಿಷಯದ ಬಗೆಗಿನ ಪುಸ್ತಕವನ್ನು ಆರೂರು ಲಕ್ಷಣ ಶೇಟ್ ಲೋಕಾರ್ಪಣೆ ಮಾಡಿದರು. ಪದ್ಮಜಾ ಉಮರ್ಜಿ, ಸಿ.ಜಿ. ಧಾರವಾಡ ಶೆಟ್ಟರ್, ನಿರಂಜನ ವಾಲಿಶೆಟ್ಟರ್, ಎಸ್.ಎಸ್. ನೇಕಾರ, ಡಾ. ಎಂ.ಎಸ್. ಹುಲ್ಲೆಯೋಳಿ, ಅರಕೇರಿ, ಸಿ.ಎಂ. ಚೆನ್ನಬಸಪ್ಪ ಉಪಸ್ಥಿತರಿದ್ದರು.
ಗೃಹಿಣಿಯ ಕಲಾಶ್ರೀಮಂತಿಕೆ :
ಇತ್ತೀಚೆಗೆ ಮೈಸೂರಿನ ಕಲಾಮಂದಿರದ ಸುಚಿತ್ರ ಕಲಾ ಪ್ರದರ್ಶನಾಲಯದಲ್ಲಿ ನಿಸರ್ಗದ ರಮಣೀಯತೆಯನ್ನು ಅಭಿವ್ಯಕ್ತಗೊಳಿಸುವ ನಯನಮನೋಹರ ತೈಲವರ್ಣ ಚಿತ್ರಗಳು ಅನಾವರಣಗೊಂಡು ಆಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಫೋಟೋಗಳ ಪಡಿಯಚ್ಚಿನಂತಿದ್ದ ಸುಮಾರು ಮೂವತ್ತಕ್ಕೂ ಹೆಚ್ಚಿನ ಪ್ರದರ್ಶಿತ ಕಲಾಕೃತಿಗಳು ಮಂಗಳೂರಿನ ಗೃಹಿಣಿ ಜಲಜಾಕ್ಷಿ ಚಂದ್ರು ಪೂಜಾರ್ ರವರ ಕೈಚಳಕದಿಂದ ಮೂಡಿದವೆಂಬುದು ವಿಶೇಷ.
ಸುಶ್ರಾವ್ಯ ಸಮೂಹ ಗಾಯನ : ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ಏರ್ಪಡಿಸಿದ್ದ `ಭಾವ ನೃತ್ಯಾಂಜಲಿ’ ಕಾರ್ಯಕ್ರಮ ಯುವ ಗಾಯಕಿಯರು ಹಾಗೂ ಮಕ್ಕಳು ಸಮೂಹ ಗಾನದಲ್ಲಿ ವಿವಿಧ ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ರಂಗು ತುಂಬಿದರು.
ರಂಗಭೂಮಿ ಕಲಾವಿದರ ಸನ್ಮಾನ :
ಇತ್ತೀಚೆಗೆ ನಂಜನಗೂಡಿನಲ್ಲಿ ನಡೆದ ಮೈಸೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹುಣಸೂರಿನ ರಂಗಭೂಮಿ ಕಲಾವಿದ ಕುಮಾರ್ ಅರಸೇಗೌಡ ಹಾಗೂ ಸಮಾಜ ಸೇವಕ ಟಿ.ಆರ್. ಚಂದ್ರಶೇಖರ್ ರನ್ನು ಸನ್ಮಾನಿಸಲಾಯಿತು. ಈ ಸಮ್ಮೇಳನದ ಅಧ್ಯಕ್ಷರಾದ ಪ್ರೊ. ಮಯೂರು ಗುರುಸ್ವಾಮಿ ಮತ್ತಿತರ ಗಣ್ಯರು ಹಾಜರಿದ್ದರು.
ರಂಜಿಸಿದ ಭರತನಾಟ್ಯ : ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ಹಮ್ಮಿಕೊಂಡಿದ್ದ ಭಾವ ನೃತ್ಯಾಂಜಲಿ ಕಾರ್ಯಕ್ರಮದಲ್ಲಿ ಕೆ. ಮಾಧವಿ ಭರತನಾಟ್ಯ ಪ್ರದರ್ಶಿಸಿದರು.
ಸನ್ಮಾನ ಸಮಾರಂಭ :
ಓಂಕಾರ ಮೆಲೋಡೀಸ್ ನ ಪ್ರಮೀಳಾ ನಾಯ್ಡು ಅವರ ಸನ್ಮಾನ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಮಾ ದೇವರಾಜ್, ಮೋಹನ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಜಯಮ್ಮ, ಭಾರತಿ ಉಪಸ್ಥಿತರಿದ್ದರು.
ಭಾವ ನೃತ್ಯಾಂಜಲಿ :
ಪಂಚಾಮೃತ ಸುಗಮ ಸಂಗೀತ ಅಕಾಡೆಮಿ `ಭಾವ ನೃತ್ಯಾಂಜಲಿ’ ಕಾರ್ಯಕ್ರಮ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಗಾಯಕಿ ಅನುಷಾ ಎಂ. ರಾವ್ ಅವರನ್ನು ಹಿರಿಯ ರಂಗಭೂಮಿ ಕಲಾವಿದ ಆರ್. ಪರಮಶಿವನ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಡಾ. ನಾ. ಸೋಮೇಶ್ವರ, ಕೆ. ಶಿವಸುಬ್ರಹ್ಮಣ್ಯ, ಹೊಂಬಾಳೆ ಫಲ್ಗುಣ, ವಸಂತಕುಮಾರ್ ಕುಂಬ್ಳೆ, ಗಾಯತ್ರಿ ಕೇಶವ್ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ :
ಡಾ. ರಾಜ್ ಕುಮಾರ್ ಸ್ಮರಣಾರ್ಥ ಈಚೆಗೆ ರಾಜ್ಯಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ನ ಕಾರ್ಯಕ್ರಮದಲ್ಲಿ ಚಲನಚಿತ್ರ, ಕಿರುತೆರೆ ಹಾಗೂ ರಂಗಭೂಮಿಯಲ್ಲಿನ ಸಾಧನೆಗಾಗಿ ಶಂಕರ ಭಟ್ ಅವರಿಗೆ `ಕಾವ್ಯಚತುರ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಯೋಗಕೇಂದ್ರದ ಎಂ. ಜಯರಾಂ ಸುವರ್ಣ, ಮಹದೇವ್ ಉಪಸ್ಥಿತರಿದ್ದರು.
ರಕ್ತದಾನ ಶಿಬಿರ :
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರbeಡ, ಹೈಡ್ರೊಲೈನ್ಸ್ ಸಂಸ್ಥೆ ಹಾಗೂ ಆರ್.ಬಿ. ಪಾಟೀಲ್ ಕ್ಯಾನ್ಸರ್ ನವನಗರ ಹುಬ್ಬಳ್ಳಿ ಇವರ ವತಿಯಿಂದ ದೀಪಕ್ ಸೇಥಿ ಹಾಗೂ ಲಲಿತ್ ಸೇಥಿ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಎ.ಡಿ. ಕರ್ಪೂರ ಮಠ, ಹೈಡ್ರೊಲೈನ್ಸ್ ಇಂಡಿಯಾದ ಪ್ರದೀಪ್ ಕುಲಕರ್ಣಿ ಡಾ. ಉಮೇಶ್ ಹಳ್ಳಿಕೇರಿ, ಬಿ.ಆರ್. ಸಾರಥಿ ಪಾಲ್ಗೊಂಡಿದ್ದರು.
ಹೆರಿಟೇಜ್ ಕ್ಲಬ್ ಉದ್ಘಾಟನೆ :
ಧಾರವಾಡ ತಾಲ್ಲೂಕಿನ ನವಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಜನರಲ್ ಎಸ್.ಜಿ. ಸರದೇಶ್ ಪಾಂಡೆ `ಇಂಟ್ಯಾಕ್ ಹೆರಿಟೇಜ್ ಕ್ಲಬ್’ನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಎಸ್.ಜಿ. ಭಾಗವತ್, ಬಿ.ಆರ್. ಸಾರಥಿ, ಹೇಮಲತಾ ಬೆಟಗೇರಿ ಹಾಗೂ ಮುಖ್ಯಾಧ್ಯಾಪಕಿ ರೇಖಾ ಭಜಂತ್ರಿ ಉಪಸ್ಥಿತರಿದ್ದರು.
ಪರಿಸರ ಗೀತೆಗಳ ಸಿ.ಡಿ. ಬಿಡುಗಡೆ :
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ `ಜೀವ ಸರಪಳಿಯ ಗೂಡು’ ಎಂಬ ಪರಿಸರ ಗೀತೆಗಳ ಸಿ.ಡಿ.ಯನ್ನು ಕರಾವಿಪ ಕಛೇರಿಯಲ್ಲಿ ಜನಪದ ವಿದ್ವಾಂಸ ಬೆಳಗ್ ವೀರಣ್ಣ ಬಿಡುಗಡೆಗೊಳಿಸಿದರು. ಅಭಿಮನ್ಯು, ವರುಣ್, ಪ್ರದೀಪ್, ಎಲ್.ಎನ್. ಮಕುಂದರಾಜ್, ಪ್ರೊ. ಕೆ.ಎಸ್. ನಟರಾಜ್, ಡಾ. ವಸುಂಧರಾ ಭೂಪತಿ, ಬಿ.ಎಂ.ಎಸ್ ಕಾಲೇಜಿನ ಪ್ರಿನ್ಸಿಪಾಲ್ ಪದ್ಮಾ ಮುಂತಾದವರು ಉಪಸ್ಥಿತರಿದ್ದರು.