ಆ್ಯಸಿಡ್‌ ದಾಳಿಯಿಂದ ನರಳುತ್ತಿರುವ ಮಹಿಳೆಯರ ಕಷ್ಟಗಳನ್ನು ಅರಿತು ಸುಪ್ರೀಂ ಕೋರ್ಟ್‌ ಆ್ಯಸಿಡ್‌ ನ್ನು ಮುಕ್ತವಾಗಿ ಮಾರಾಟ ಮಾಡುವುದನ್ನು ತಡೆಯಬೇಕು, ಆ್ಯಸಿಡ್‌ ದಾಳಿಯಿಂದ ಪೀಡಿತರಾದವರಿಗೆ 3 ಲಕ್ಷ ರೂ. ಪರಿಹಾರ ಕೊಡಬೇಕು. ಅದರಲ್ಲಿ 1 ಲಕ್ಷ ರೂ.ಗಳನ್ನು ತಕ್ಷಣದ ಚಿಕಿತ್ಸೆಗೆ 15 ದಿನಗಳ ಒಳಗೆ ಕೊಡಬೇಕೆಂದು ಆದೇಶಿಸಿದೆ. ಕಳೆದ ಡಿಸೆಂಬರ್‌ ನಲ್ಲಿ ದೆಹಲಿ ಬಸ್‌ ನಲ್ಲಿ ನಡೆದ ಅತ್ಯಾಚಾರದ ಘಟನೆಯ ನಂತರ ಆ್ಯಸಿಡ್‌ ಹಾಕಿದವರಿಗೆ ಕೊಡುವ ಶಿಕ್ಷೆಯನ್ನು ಹೆಚ್ಚಿಸಿ 10 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿತ್ತು.

ಆ್ಯಸಿಡ್‌ ದಾಳಿಯಿಂದ ಬರೀ ನೋವಷ್ಟೇ ಅಲ್ಲ, ಪೀಡಿತಳ ಇಡೀ ಬದುಕು ಹಾಳಾಗುತ್ತದೆ. ಅವಳು ಸಮಾಜದಿಂದ ಬಹಿಷ್ಕೃತಳಾಗುತ್ತಾಳೆ. ಅವಳ ಬಗ್ಗೆ ಕ್ಷಣಿಕ ಸಹಾನುಭೂತಿ ಇರುತ್ತದೆ. ನಂತರ ಯಾರೂ ಅವಳನ್ನು ಹತ್ತಿರ ಸೇರಿಸುವುದಿಲ್ಲ. ಗೃಹಶೋಭಾ ಕಳೆದ ಕೆಲವು ತಿಂಗಳುಗಳಿಂದ ಇಂತಹ ದೊಡ್ಡ ದೊಡ್ಡ ವರದಿಗಳನ್ನು ಪ್ರಕಟಿಸಿ ಈ ವಿಷಯಕ್ಕೆ ಪ್ರಾಮುಖ್ಯತೆ ಕೊಡಲು ಯಶಸ್ವಿಯಾಗಿ ಪ್ರಯತ್ನಿಸಿದೆ.

ಈ ಉಪಾಯಗಳೇನೋ ಸರಿ. ಆದರೆ ಸಾಮಾಜಿಕ ಮಾನ್ಯತೆಗಳ ಬಗ್ಗೆ ಇಲ್ಲೇನೂ ಮಾಡಲಾಗುವುದಿಲ್ಲ. ಸಮಸ್ಯೆ ಕಾನೂನು ವ್ಯವಸ್ಥೆಗಿಂತ ಹೆಚ್ಚಾಗಿ ಮಾನಸಿಕತೆಯದಾಗಿದೆ. 21ನೇ ಶತಮಾನದಲ್ಲೂ ದೇಶ ಅಸಲಿಗೆ ಎಂತಹ ಯುಗದಲ್ಲಿ ಬದುಕುತ್ತಿದೆಯೆಂದರೆ ಸೇಡು ತೀರಿಸಿಕೊಳ್ಳಲು ಶತ್ರುವಿನ ಪತ್ನಿಯನ್ನು ಎತ್ತಿಕೊಂಡು ಹೋಗಲಾಗುತ್ತಿತ್ತು ಅಥವಾ ಮದುವೆಗಾಗಿ ಅವಳನ್ನು ಯಾವುದಾದರೂ ಸ್ಪರ್ಧೆಯ ಬಹುಮಾನ ಎಂದುಕೊಳ್ಳುವುದು.

ಈ ಮಾನಸಿಕತೆ ದಿನ ಸದೃಢವಾಗುತ್ತದೆ, ಬಲಹೀನವಾಗುವುದಿಲ್ಲ. ನಮ್ಮ ಧರ್ಮಪ್ರಚಾರಕರು ಮಹಿಳೆಯರು ಎಲ್ಲೆ ದಾಟಬಾರದು. ಮನೆಯಲ್ಲಿ ಗಂಡ ಮತ್ತು ಮಕ್ಕಳ ಸೇವೆ ಮಾಡಬೇಕು, ಹೆದರಿಕೊಂಡಿರಬೇಕು, ಹೆಚ್ಚು ಓದುವುದು ತಪ್ಪು. ಸುಖವಂತೂ ಭಜನೆ ಕೀರ್ತನೆಗಳಿಂದ ಸಿಗುತ್ತದೆ ಎಂದು ಪದೇ ಪದೇ ಹೇಳುತ್ತಾರೆ.

ರಾಮಾಯಣ, ಮಹಾಭಾರತದ ಉದಾಹರಣೆಗಳನ್ನು ಮತ್ತೆ ಮತ್ತೆ ಹೇಳಲಾಗುತ್ತದೆ. ಅವುಗಳಲ್ಲಿ ಮಹಿಳೆಯರನ್ನು ಸತತವಾಗಿ ಖಂಡಿಸಲಾಗಿದೆ. ಇಂದಿಗೂ ಕಾಶಿ ಮತ್ತು ಬೃಂದಾನವನದಲ್ಲಿ ವಿಧವೆಯರನ್ನು ಇಟ್ಟುಕೊಂಡು ಹೆಮ್ಮೆಪಡುವ ಸಮಾಜ ನಮ್ಮದು. ಅದು ಮಹಿಳೆಯರನ್ನು ಗೌರವದಿಂದ ನೋಡುತ್ತದೆ ಎಂದು ಹೇಗೆ ನಿರೀಕ್ಷಿಸಲಾಗುತ್ತದೆ?

ಹುಡುಗಿಯರನ್ನು ಆ್ಯಸಿಡ್‌ ದಾಳಿಗೆ ಬಲಿಯಾಗಿಸಲು ಕಾರಣ ಪೀಡಿತಳು ಸ್ವತಃ ಕಟಕಟೆಯಲ್ಲಿ ನಿಲ್ಲುತ್ತಾಳೆಂದು ಜನರಿಗೆ ಗೊತ್ತು. ಆ್ಯಸಿಡ್‌ ಹಾಕಿದವನಿಗೆ ಯಾವ ಶಿಕ್ಷೆ ಸಿಕ್ಕಿತೆಂದು ಪ್ರಶ್ನಿಸಲಾಗುವುದಿಲ್ಲ. ಆದರೆ ಪೀಡಿತಳು ಅವಳ ಮೇಲೆ ಆ್ಯಸಿಡ್‌ ಹಾಕುವಂತಾದ್ದನ್ನು ಏನು ಮಾಡಿದಳು ಎಂದು ಪ್ರಶ್ನಿಸಲಾಗುತ್ತದೆ.

ಸಮಾಜ ಮಹಿಳೆಯರನ್ನು ಚಪ್ಪಲಿಗಳಂತೆ ನೋಡುತ್ತದೆ. 18 ವರ್ಷದ ಹುಡುಗನೊಬ್ಬ ತನ್ನ ಪ್ರೀತಿಯ ಪ್ರಸ್ತಾಪ ತಿರಸ್ಕೃತವಾದಾಗ ಆ್ಯಸಿಡ್‌ ಎರಚಿ ಅವಳನ್ನು ಜೀವನವಿಡೀ ಗೃಹಬಂಧನದಲ್ಲಿರುವಂತೆ ಮಾಡುತ್ತೇನೆಂದು ಹೆದರಿಸುತ್ತಾನೆ. ಬೆದರಿಕೆ ಹಾಕಿದ ಹುಡುಗನಿಗೆ ಯಾರೂ ಏನೂ ಹೇಳುವುದಿಲ್ಲ. ಆದರೆ ಹುಡುಗಿ ಮನೆಯಿಂದಾಚೆ ಹೊರಬರುವುದು ನಿಂತುಹೋಗುತ್ತದೆ. ಅಂದರೆ ರಕ್ಷಣೆಯ ಹೆಸರಿನಲ್ಲಿ ತಾನು ಗೃಹಬಂಧನಕ್ಕೆ ಒಳಗಾಗುತ್ತೇನೆಂದು ಯಾವ ಹುಡುಗಿಯೂ ಇದರ ಬಗ್ಗೆ ದೂರುವುದಿಲ್ಲ.

ಧರ್ಮ ಪ್ರಚಾರಕ್ಕೆ ತಡೆಹಾಕುವುದು ಈಗ ಬಹಳ ಅಗತ್ಯವಾಗಿದೆ. ಧಾರ್ಮಿಕ ಭಾವನೆಗಳಿಗೆ ಪೆಟ್ಟು ಬೀಳುತ್ತಿದೆ ಎಂದು ಜನ ಕೋರ್ಟಿಗೆ ಹೋಗುವಂತೆ ಮಹಿಳೆಯರನ್ನು ಹೀನವಾಗಿ ತೋರಿಸುವ ಧಾರ್ಮಿಕ ಪ್ರವಚನ ಕೊಡುವವರನ್ನು ಪೊಲೀಸರು ಕೋರ್ಟಿಗೆ ಎಳೆತರಬೇಕು. ಧರ್ಮದ ರಕ್ಷಣೆಯ ಹೆಸರಿನಲ್ಲಿ ಗದ್ದಲ ಮಾಡುವ ಜನ ಮಹಿಳೆಯರ ರಕ್ಷಣೆಯ ಹೆಸರಿನಲ್ಲಿ ಗದ್ದಲವನ್ನೇಕೆ ಮಾಡುವುದಿಲ್ಲ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ