ಇಪ್ಪತ್ತೊಂದನೇ ಶತಮಾನ ವಿಶ್ವದ ಸ್ವರೂಪವನ್ನು ಹಲವಾರು ಘಟ್ಟಗಳಲ್ಲಿ ಬದಲಾಯಿಸಿಬಿಟ್ಟಿದೆ. ಈ ಬದಲಾವಣೆಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಟೆಕ್ನಾಲಜಿ, ಇದಂತೂ ನಮಗೀಗ ಉಸಿರಾಟದಷ್ಟೆ ಮುಖ್ಯವಾಗಿ ಹೋಗಿದೆ.
ಕಳೆದ ಕೆಲವು ದಶಕಗಳವರೆಗೆ ಕೇವಲ ಪುರುಷರಿಗೆ ಮಾತ್ರವೇ ಇದರ ಮೇಲೆ ಏಕಸ್ವಾಮ್ಯತೆ ಎಂದು ಬಿಂಬಿಸಲಾಗಿತ್ತು. ಹೆಂಗಸರಿಗೆ ಈ ಕುರಿತಾಗಿ ಅಷ್ಟೇನೂ ಆಸಕ್ತಿ ಇಲ್ಲ ಎಂಬಂತೆ ಸೂಚಿಸಲಾಗುತ್ತಿತ್ತು. ಆದರೆ ಇದೀಗ ಪರಿವರ್ತನೆಯ ಕಾಲ. ಕಾರ್ಪೊರೇಟ್ ಜಗತ್ತಿನಲ್ಲಿ ಮಹಿಳೆಯರು ದಾಂಗುಡಿ ಇಟ್ಟ ಮೇಲೆ, ಅವರು ತಮ್ಮ ಟೆಕ್ನಿಕ್ ಅಗತ್ಯಗಳಿಗಾಗಿ ಸ್ಮಾರ್ಟ್ ಸಲ್ಯೂಶನ್ಸ್ ಹುಡುಕತೊಡಗಿದ್ದಾರೆ. ಹೀಗಾಗಿ ಇಂದು ಬೋಲ್ಡ್ ಬ್ಯೂಟಿಫುಲ್ ಮೊಬೈಲ್ ಹ್ಯಾಂಡ್ ಸೆಟ್ಸ್, ಸ್ಲೀಕ್ ಟಚ್ ಸ್ಕ್ರೀನ್, ಐ ಪ್ಯಾಡ್ಸ್, ಟ್ಯಾಬ್ಲೆಟ್ಸ್ ಇತ್ಯಾದಿಗಳು ಇವರ ಕರಗಳಲ್ಲಿ ಲೀಲಾಜಾಲವಾಗಿ ನಲಿಯುತ್ತಿವೆ.
ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮದೇ ಒಂದು ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಅನನ್ಯಾ ವರ್ಮಾ, ಆಧುನಿಕ ಟೆಕ್ನಿಕ್ ಪರಿಕರಗಳ ಬಗ್ಗೆ ಜಾಗೃತರಾಗಿರುವ ಹಾಗೂ ಸದಾ ಅಪ್ ಡೇಟೆಡ್ ಆಗಿರಲು ಬಯಸುವ ಹೆಂಗಸರಲ್ಲಿ ಒಬ್ಬರೆನಿಸಿದ್ದಾರೆ. ಇವರಿಗೆ ಗ್ಯಾಜೆಟ್ಸ್ ಟ್ರೆಂಡ್ ಎಷ್ಟು ಒಗ್ಗಿಹೋಗಿದೆ ಎಂದರೆ ಲೇಟೆಸ್ಟ್ ಫ್ಯಾಷನ್ ಮೆಟೀರಿಯಲ್ಸ್ ಸೆಲೆಕ್ಟ್ ಮಾಡುವಷ್ಟೇ ಸಲೀಸು ಎಂಬಂತಾಗಿದೆ. ಮಾರ್ಕೆಟ್ ನಲ್ಲಿ ಯಾವುದೇ ಹೊಸ ಗ್ಯಾಜೆಟ್ ಬಂದಿರಲಿ, ಇವರು ಅದನ್ನು ಅಗತ್ಯವಾಗಿ ಕೊಳ್ಳುತ್ತಾರೆ. ಆದರೆ ಆಕೆಗೆ ಸ್ಲೀಕ್ ಹಾಗೂ ಬೋಲ್ಡ್ ಡಿಸೈನ್ಸ್ ಮಾತ್ರ ಹೆಚ್ಚು ಇಷ್ಟವಾಗುತ್ತವೆ, ಅದು ಮೊಬೈಲ್ ಅಥವಾ ಲ್ಯಾಪ್ ಟಾಪ್ ಆಗಿರಬಹುದು.
ಹೊಸ ಟೆಕ್ನಿಕ್ ಸಾಧನಗಳು ಈಝಿ ಯೂಸರ್ ಫ್ರೆಂಡ್ಲಿ ಆಗಿರುವುದರಿಂದ, ಉದ್ಯೋಗಸ್ಥ ವನಿತೆಯರು, ಈ ಗ್ಯಾಜೆಟ್ಸ್ ನ್ನು ತಮ್ಮ ಬ್ರೆಸ್ಟ್ ಫ್ರೆಂಡ್ ಎಂದೇ ಭಾವಿಸುತ್ತಾರೆ. ಅವರು ಮೀಟಿಂಗ್ ನಲ್ಲಿ ಬಿಝಿ ಆಗಿದ್ದರೆ ಟ್ಯಾಬ್ಲೆಟ್ ಮೇಲ್ ಚೆಕ್ ಮಾಡಲು, ವಿಡಿಯೋ ಕಾಲ್ಸ್ ಮಾಡಲು, ತಮ್ಮ ಪ್ರೆಸೆಂಟೇಷನ್ಸ್ ಡೌನ್ ಲೋಡ್ ಮಾಡಿಕೊಳ್ಳಲು ಹಾಗೂ ತಮ್ಮ ಪರಿವಾರದೊಂದಿಗೆ ಸಂಪರ್ಕದಲ್ಲಿರಲು ಅತ್ಯುತ್ತಮ ಸಾಧನವಾಗಿದೆ.
ಮಹಿಳೆಯರೇ ಟಾರ್ಗೆಟ್
ಜಾಹೀರಾತುಗಳಲ್ಲಿ ಕೊಡುತ್ತಿರುವ ಪ್ರಚಾರ ಹಾಗೂ ಮಾರುಕಟ್ಟೆಯ ಒಲವು ಗಮನಿಸಿದರೆ ಈ ದಿನಗಳಲ್ಲಿ ಗ್ಯಾಜೆಟ್ಸ್ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ಆದರೆ ಈ ಬಾರಿ ಇವುಗಳ ತಯಾರಕರ ಟಾರ್ಗೆಟ್ ಪುರುಷರ ಬದಲಿಗೆ ಮಹಿಳೆಯರಾಗಿದ್ದಾರೆ. ಆದ್ದರಿಂದಲೇ ಕಂಪನಿಗಳು ಮಹಿಳೆಯರಿಗೆ ಬೇರೆ ಬೇರೆ ಬಣ್ಣಗಳಲ್ಲಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಇನ್ನೊಂದೆಡೆ ಫಿಟ್ ನೆಸ್ ಬಗ್ಗೆ ಜಾಗರೂಕರಾಗಿರುವ ಮಹಿಳೆಯರ ಆರೋಗ್ಯದ ಬಗ್ಗೆ ಗಮನಿಸುವ ಮೊಬೈಲ್ ಗಳು ಬರುತ್ತಿವೆ. ಫಿಟ್ ನೆಸ್ ಟ್ರೇನರ್ ನಂತೆ ಕೆಲಸ ಮಾಡುವುದರೊಂದಿಗೆ ಈ ಫೋನ್ ಗಳು ಸ್ಟ್ರೆಸ್ ಲೆವೆಲ್ ಮತ್ತು ಹಾರ್ಟ್ ರೇಟ್ ಕೂಡ ಮಾನೀಟರ್ ಮಾಡುತ್ತವೆ. ಕ್ಯಾಮೆರಾ, ಮ್ಯೂಸಿಕ್ ಪ್ಲೇಯರ್ ಮತ್ತು ಇಂಟರ್ ನೆಟ್ ನ ಲಾಭ ಪಡೆಯುವಲ್ಲಿ ಬಹಳಷ್ಟು ಅಡ್ವಾನ್ಸ್ ಆಗಿರುವ ಈ ಮೊಬೈಲ್ ನ ಸಹಾಯದಿಂದ ಈಗ ಮಹಿಳೆಯರು ತಮ್ಮ ಶರೀರದ ಕೊಬ್ಬು ಹಾಗೂ ಉಸಿರಿನ ದುರ್ವಾಸನೆಯವರೆಗೆ ಪರೀಕ್ಷಿಸಿಕೊಳ್ಳಬಹುದು.