ಅರುಣ್‌ : ನನ್ನ ಫ್ರೆಂಡ್‌ ಕಿರಣ್‌ ಎಷ್ಟು ಶಾಂತ ಸ್ವಭಾವದವನು ಗೊತ್ತಾ? ಅವನೆಂದೂ ಯಾವ ವಿಷಯಕ್ಕೂ ಕೋಪ ಮಾಡಿಕೊಂಡ ಪ್ರಸಂಗವೇ ಇಲ್ಲ. ಮನಸ್ಸನ್ನು ಸದಾ ಸ್ಥಿಮಿತದಲ್ಲಿ ಇಟ್ಟುಕೊಂಡಿರುತ್ತಾನೆ.

ವರುಣ್‌ : ಹೌದೇನು? ಒಂದು ಉದಾಹರಣೆ ಕೊಡು ನೋಡೋಣ.

ಅರುಣ್‌ : ನಾನು ನಿನ್ನೆ ಸಂಜೆ ಮಾಲ್ ಗೆ ಹೋಗೋಣ ಅಂತ ಅವನನ್ನು ಹುಡುಕಿಕೊಂಡು ಹೊರಟೆ. ಅವರ ಮನೆ ಅಪಾರ್ಟ್ ಮೆಂಟ್‌ನ 3ನೇ ಮಹಡಿಯಲ್ಲಿದೆ. ಅಲ್ಲಿಂದ ಇಳಿದು ನಾವು ಹೊರಹೋಗಬೇಕು, ಅಷ್ಟರಲ್ಲಿ 5ನೇ ಮಹಡಿಯಿಂದ ಯಾರೋ ಒಬ್ಬ ಮಹಿಳೆ ಮೇಲಿನಿಂದ ಅವನ ತಲೆ ಮೇಲೆ ಸಾಂಬಾರ್‌ ಸುರಿದುಬಿಟ್ಟಳು.

ವರುಣ್‌ : ಅಯ್ಯಯ್ಯೋ..... ಆಮೇಲೇನಾಯ್ತು?

ಅರುಣ್‌ : ಅವನು ಒಂದಿಷ್ಟು ವಿಚಲಿತನಾಗದೆ, `ಮೇಡಂ, ಹಾಗೆ 1-2 ರೊಟ್ಟಿ ಇದ್ದರೆ ಎಸೆದು ಬಿಡಿ, ರಾತ್ರಿ ಡಿನ್ನರ್‌ ಈಗಲೇ ಮುಗಿಸಿಕೊಳ್ತೀನಿ,' ಎನ್ನುವುದೇ?

ಸತೀಶ : ನಿನ್ನೆ ನನ್ನ ಹೆಂಡತಿ ಜೊತೆ ಕಾರಣವಿಲ್ಲದೆ ಜಗಳ ಆಯ್ತು.

ಮಹೇಶ : ಯಾಕೆ? ಅಂಥದ್ದು ಏನಾಯ್ತು?

ಸತೀಶ : ನಾನು ಟಿ.ವಿ.ಯಲ್ಲಿ ಕ್ರಿಕೆಟ್‌ ಮ್ಯಾಚ್‌ ನೋಡಬೇಕಿತ್ತು, ಅವಳು ನೋಡಿದ್ರೆ ಇವತ್ತೇ ಸಿನಿಮಾಗೆ ಹೋಗೋಣ ಅಂತ ಶುರು ಮಾಡಿದ್ಲು.

ಮಹೇಶ : ಹ್ಞೂಂ.... ಸಿನಿಮಾ ಹೇಗಿತ್ತು?

ಅತ್ತೆ : ನೋಡಮ್ಮ, ನೀನು ಹೊರಗಡೆ ಬೀದಿಯಲ್ಲಿ ಓಡಾಡುವಾಗ ಮರೆಯದೆ ಖಂಡಿತಾ ತಲೆ ಮೇಲೆ ಸೆರಗು ಹೊದ್ದಿರಬೇಕು, ನೀನಿನ್ನು ತಾರುಣ್ಯದಲ್ಲಿದ್ದಿ ಅಂತ ಮರೀಬೇಡ. ನನ್ನನ್ನು ನೋಡು, ವಯಸ್ಸಾದ ಮೇಲೂ ನಾನು ತಲೆ ಮೇಲೆ ಸೆರಗು ಹೊದೆಯದೆ ಹೊರಗೆ ಓಡಾಡೋಲ್ಲ.

ಸೊಸೆ : ಆಗಲಿ ಅತ್ತೆ, ನಿಮ್ಮಂತೆಯೇ ನಾನೂ ಸಹ ವಯಸ್ಸಾದ ಮೇಲೆ ಮುಖದ ಸುಕ್ಕು ಕಾಣಿಸದಿರಲಿ ಎಂದು ತಲೆಯ ಮೇಲೆ ಸೆರಗು ಹೊದ್ದು ಓಡಾಡುತ್ತೇನೆ.

ಪತ್ನಿ : ನೀವು ನಿಜಕ್ಕೂ ನನ್ನನ್ನು ಬಹಳ ಪ್ರೇಮಿಸುತ್ತೀರಾ?

ಪತಿ : ನಾನು ನಿನ್ನನ್ನು ಎಷ್ಟು ಪ್ರೇಮಿಸುತ್ತೇನೆಂದರೆ ನೀನು ನನಗೆ ನಕಲಿ ವಿಷ ಕೊಟ್ಟರೂ ಗಟಗಟ ಕುಡಿದುಬಿಡ್ತೀನಿ, ಬೇಕಾದ್ರೆ ಈ ಅಸಲಿ ವಿಷ ಟ್ರೈ ಮಾಡಿ ನೋಡು!

ಹೊಸ ಸೀರೆ : ಗಂಡಸಿಗೆ 2 ಪೆಗ್‌ ಹಾಕುವುದರಿಂದ ಏರುವ ಅದೇ ನಶೆ, ಇದನ್ನು ಉಡುವ ಹೆಂಗಸಿಗೆ ಆಗುತ್ತದಂತೆ.

ಎರಡನೇ ಮದುವೆ : ಅನುಭವಗಳ ಮೇಲೆ ಆಶಾಕಿರಣದ ವಿಜಯೋತ್ಸವ.

ಹೆಂಡತಿ : ಮದುವೆಯ ನಂತರ ನಿಮ್ಮ ಎಲ್ಲಾ ಅಭ್ಯಾಸಗಳಿಗೂ ಆಕ್ಷೇಪಣೆ ಹೇಳುತ್ತಾ, ತನಗೆ ಬೇಕಾದಂತೆ ಪರಿವರ್ತಿಸಿಕೊಳ್ಳುತ್ತಾ, ಕೊನೆಗೊಂದು ದಿನ `ನೀವೆಷ್ಟು ಬದಲಾಗಿ ಹೋದ್ರಿ.... ಮದುವೆ ಹೊಸತರಲ್ಲಿ ನೀವು ಹೀಗಿರಲಿಲ್ಲ' ಎನ್ನುವಳು.

ಯಶಸ್ವೀ ವ್ಯಕ್ತಿ : ಮೊದಲ ಹೆಂಡತಿಯ ಕಾರಣದಿಂದ ಯಶಸ್ಸು ದೊರಕಿಸಿಕೊಂಡ ಈತ, ಯಶಸ್ಸಿನ ಕಾರಣದಿಂದ ಎರಡನೇ ಹೆಂಡತಿಯನ್ನು ದಕ್ಕಿಸಿಕೊಳ್ಳುವನು.

ಸುರೇಖಾ : ವಿಚ್ಛೇದನದ ನಂತರ ನನ್ನ ಹಾಗೂ ನನ್ನ ಗಂಡನ ಮಧ್ಯೆ ಎಲ್ಲ ಸಮಸಮನಾಗಿ ಹಂಚಿಕೆಯಾದ. 2 ಮಕ್ಕಳು ಆತನ ಬಳಿ, 2 ಮಕ್ಕಳು ನನ್ನ ಬಳಿ ಉಳಿದರು.

ವಿನುತಾ : ಅದು ಸರಿ, ಆಸ್ತಿ ಹೇಗೆ ಹಂಚಿಕೆಯಾಯ್ತು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ