ಹೈ ಬನ್‌, ನ್ಯೂಡ್‌ ಲಿಪ್‌ ಸ್ಟಿಕ್‌ ಹಾಗೂ ಸೈಡ್‌ ಕರ್ಲ್ಸ್….. 70ರ ದಶಕದಲ್ಲಿ ಹೆಚ್ಚು ಪ್ರಭಾವಶಾಲಿ ಎನಿಸಿದ್ದ ಈ ಫ್ಯಾಷನ್‌ ರೆಟ್ರೋ ಲುಕ್ಸ್ ಗಾಗಿ, ಈಗ ಮತ್ತೊಮ್ಮೆ ಫ್ಯಾಷನ್‌ ಪ್ರಪಂಚದಲ್ಲಿ ಪುನರಾವರ್ತನೆಯ ಗಾಳಿ ಬೀಸುತ್ತಿದೆ.

ಈ ಕುರಿತಾಗಿ ಇಂದಿನ ಆಧುನಿಕ ಸೌಂದರ್ಯ ತಜ್ಞೆಯರು ಹಾಗೂ ಫ್ಯಾಷನ್‌ ಸ್ಪೆಷಲಿಸ್ಟ್ ಹೇಳುವುದೆಂದರೆ, “ಹಳೆಯ ಫ್ಯಾಷನ್ ಈಗ ಮತ್ತೊಮ್ಮೆ ಹೊಸ ರೂಪದಲ್ಲಿ ಮರಳಿ ಬಂದಿದೆ. ರೆಟ್ರೋ ಫ್ಯಾಷನ್‌ ಹಾಗೂ ಲುಕ್ಸ್ ಇದರಲ್ಲಿ ಪ್ರಮುಖ. ಇದನ್ನು ಬಳಸಿಕೊಳ್ಳಲು ಮೇಕಪ್‌ ಹಾಗೂ ಹೇರ್‌ ಸ್ಟೈಲ್ ‌ಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ಥೀಮ್ ಅನುಸಾರ, ಹೈಬನ್‌ ಗೆ ದುಪಟ್ಟಾ ಹಾಗೂ ಕಂಗಳಿಗೆ ದಟ್ಟ ಕಾಡಿಗೆ ಹೆಚ್ಚು ಶೋಭಿಸುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಟೆಕ್ನಿಕ್ಸ್ ಗೊತ್ತಿರಬೇಕಷ್ಟೆ.”

ಮೇಕಪ್ಗೆ ಮೊದಲು ನ್ಯೂಟ್ರಲೈಝರ್ಬಳಸಿ :

side-curl-(1)

ಮೇಕಪ್‌ ಗೆ ಮೊದಲು ಮುಖದ ಶುಚಿತ್ವ ಶುಭ್ರತೆಗಾಗಿ, ಹೆಚ್ಚಿನ ಮಹಿಳೆಯರು ಕ್ಲೆನ್ಸರ್‌ ಬಳಸುತ್ತಾರೆ. ಇದು ಆಯ್ಲಿ ಆದಕಾರಣ 1 ಅಥವಾ 2 ತಾಸಿನ ನಂತರ ಮೇಕಪ್‌ ಕೆಟ್ಟುಹೋಗಲು ಶುರುವಾಗುತ್ತದೆ. ಮೇಕಪ್‌ ನಲ್ಲಿ ಅಲ್ಲಲ್ಲಿ ಗೀಚುಗಳು ಕಾಣಿಸುತ್ತವೆ. ಆದ್ದರಿಂದ ಕ್ಲೆನ್ಸರ್‌ ಬಳಸುವ ಬದಲು ಮುಖವನ್ನು ಜೆಲ್ ‌ಫೇಸ್‌ ವಾಶ್‌ ನಿಂದ ತೊಳೆಯಿರಿ, ನಂತರ ನ್ಯೂಟ್ರಲೈಝರ್‌ ಬಳಸಿರಿ.

ಚರ್ಮ ಡ್ರೈ ಅಥವಾ ಆಯ್ಲಿ ಆಗಿರಲಿ, ನ್ಯೂಟ್ರಲೈಝರ್‌ ಎಲ್ಲಾ ಬಗ್ಗೆಯ ಚರ್ಮಗಳನ್ನೂ 7-8 ತಾಸು ಸಮತೋಲನದಲ್ಲಿ ಇಡುತ್ತದೆ. ಇದರ ಬಳಕೆಯ ನಂತರ ಮೇಕಪ್‌ ಹಲವಾರು ತಾಸು ಹಾಗೆಯೇ ಉಳಿಯುತ್ತದೆ ಹಾಗೂ ಫ್ರೆಶ್‌ ನೆಸ್‌ ಸಹ ಹಾಗೆಯೇ ಚಿಮ್ಮುತ್ತಿರುತ್ತದೆ. ಆಯ್ಲಿ ತ್ವಚೆಗೆ ಕಾನ್‌ ಸನ್‌ ಟ್ರೇಟಿವ್ ‌ನ್ಯೂಟ್ರಲೈಝರ್‌ ಹಾಗೂ ಶುಷ್ಕ ತ್ವಚೆಗೆ ಡೈಲ್ಯೂಟೆಡ್‌ ನ್ಯೂಟ್ರಲೈಝರ್‌ನ್ನೇ ಬಳಸಬೇಕು. ಇದನ್ನು ಬಳಸಿದ 10-15 ನಿಮಿಷಗಳ ನಂತರ ಮೇಕಪ್‌ ಮಾಡಿಕೊಳ್ಳಿ.

ಕಾಂಪ್ಲೆಕ್ಷನ್ಕಡೆ ಗಮನವಿಡಿ

retromakeup

ಪ್ರತಿಯೊಬ್ಬರಿಗೂ ಒಂದೊಂದು ವಿಧದ ಬಣ್ಣ ಒಪ್ಪುತ್ತದೆ. ಹೀಗಾಗಿ ಮೇಕಪ್‌ ಮಾಡಿಕೊಳ್ಳುವ ಮುನ್ನ ನಿಮಗೆ ಯಾವ ತರಹದ ಶೇಡ್‌ ಚೆನ್ನಾಗಿ ಸೂಟ್‌ ಆಗುತ್ತದೆ ಎಂದು ಪರೀಕ್ಷಿಸಿ. ಮೊದಲು ರೆಟ್ರೋ ಮೇಕಪ್‌ ಮೂಲಕ ಪಿಂಕ್‌ ಟೋನ್‌ ಅಂದರೆ ಮೇಕಪ್ ನಲ್ಲಿ ಪಿಂಕ್‌ ಮತ್ತು ರೆಡ್‌ ಬಣ್ಣಗಳನ್ನು ಅಧಿಕ ಬಳಸಲಾಗುತ್ತಿತ್ತು. ಆದರೆ ಇಂದಿನ ಹೈ ಡೆಫ್‌ ನೇಷನ್‌ ಮೇಕಪ್‌ ನ ಕಾಲದಲ್ಲಿ ಯೆಲ್ಲೋ ಟೋನ್‌ ಹೆಚ್ಚು ಬಳಸಲ್ಪಡುತ್ತದೆ. ಯೆಲ್ಲೋ ಟೋನ್‌ ನಲ್ಲಿ ಸ್ಕಿನ್‌ ಮತ್ತು ಬ್ರೌನ್‌ ಬಣ್ಣಗಳು ಸುಲಭವಾಗಿ ಸಿಗುತ್ತವೆ.

ರೆಟ್ರೋ ಮೇಕಪ್‌ ಮಾಡುವ ಸಮಯದಲ್ಲಿ ಪಿಂಕ್‌ ಮತ್ತು ಯೆಲ್ಲೋ ಟೋನ್‌ ಬೆರೆಸಿ ಬಳಸಲಾಗುತ್ತದೆ. ಗೌರವರ್ಣದವರು ಯೆಲ್ಲೋ ಟೋನ್‌ ನ್ನು ಶೇ.70 ಹಾಗೂ ಪಿಂಕ್‌ ಟೋನ್‌ ನ್ನು ಶೇ.30 ರಷ್ಟು ಬಳಸಬೇಕು. ಅಧಿಕ ಪಿಂಕ್‌ ಟೋನಿನ ಬಳಕೆಯಿಂದ ಮೇಕಪ್‌ ಹೆವಿ ಎನಿಸಬಹುದು. ಶ್ಯಾಮಲ ವರ್ಣದವರು ಶೇ.70 ಪಿಂಕ್‌ ಹಾಗೂ ಶೇ.30ರಷ್ಟು ಯೆಲ್ಲೋ ಟೋನ್‌ ಬಳಸಬೇಕು. ಇದರಿಂದ ಅವರವರ ಫೀಚರ್ಸ್‌ ಹೆಚ್ಚು ಹೊಳೆಯುತ್ತದೆ. ಗೋಧಿ ಮೈಬಣ್ಣದವರು ಶೇ.40 ಯೆಲ್ಲೋ ಹಾಗೂ ಶೇ.60ರಷ್ಟು ಪಿಂಕ್‌ಟೋನ್‌ ಬಳಸಬೇಕು.

ರೆಟ್ರೋ ಮೇಕಪ್ಬೇಸ್‌ :

neutiliger-(1)

ನ್ಯೂಟ್ರಲೈಝರ್‌ ನಂತರ ಪ್ಯಾನ್‌ ಕೇಕ್‌ ನಿಂದ ಬೇಸ್‌ ರೆಡಿ ಮಾಡಿ. ಬಣ್ಣದ ಆಯ್ಕೆಯನ್ನು ನಿಮ್ಮ ಚರ್ಮದ ಬಣ್ಣಕ್ಕಿಂತ 1 ಶೇಡ್‌ ಲೈಟ್‌ ಇರುವಂತೆ ನೋಡಿಕೊಳ್ಳಿ. ಇದು ಆಯಿ್ಲ ನ್ನು ಸಹ ಕಂಟ್ರೋಲ್ ಮಾಡುತ್ತದೆ. ಇದಾದ ನಂತರ ಪ್ಯಾನ್‌ ಸ್ಟಿಕ್‌ ನಿಂದ ಮೂಗು, ಹಣೆ, ಕೆನ್ನೆ ಮತ್ತು ಗಲ್ಲಗಳನ್ನು ಹೈಲೈಟ್‌ ಗೊಳಿಸಿ. ಇದನ್ನು ಇಡೀ ಮುಖಕ್ಕೆ ಹರಡಬಾರದೆಂಬುದು ಗಮನದಲ್ಲಿರಲಿ. ಇದಾದ ಮೇಲೆ ಟ್ರಾನ್ಸ್ ಲೂಸೆಂಟ್‌ ಪೌಡರ್‌ ಸಿಂಪಡಿಸಿರಿ. ಯಾರು ಗೌರವರ್ಣದವರೋ ಅವರು ಪಿಂಕ್‌, ಯೆಲ್ಲೋ ಮತ್ತು ಲೈಟ್‌….. ಹೀಗೆ 3 ಬಗೆಯ ಶೇಡ್ಸ್ ನ್ನೂ ಟ್ರಾನ್ಸ್ ಲೂಸೆಂಟ್‌ ಪೌಡರ್‌ ಬೆರೆಸಿ ಬಳಸಬಹುದು. ಯಾರು ಶ್ಯಾಮಲ ವರ್ಣದವರೋ ಅವರು ಯೆಲ್ಲೋ ಬಣ್ಣದ ಜೊತೆಗೆ ತೆಳು ಪಿಂಕ್‌ ಹಾಗೂ ವೈಟ್‌ ಬಣ್ಣಗಳನ್ನು ಬಳಸಬಹುದು. ಇಡೀ ಮುಖದ ಮೇಲೆ ಬೇಸ್‌ ನ್ನು ಚೆನ್ನಾಗಿ ಸೆಟ್‌ ಮಾಡುವುದಕ್ಕಾಗಿ, ಲೈಟ್‌ ಸ್ಪಾಂಜ್‌ ನ್ನೇ ಬಳಸಿರಿ. ಇದರಿಂದ ನ್ಯಾಚುರಲ್ ಲುಕ್ಸ್ ಬರುತ್ತದೆ. ನಂತರ ಬ್ಲಶರ್‌ ನಿಂದ ಕೆನ್ನೆಗಳನ್ನು ಹೈಲೈಟ್‌ ಗೊಳಿಸಿರಿ.

ಮೇಕಪ್‌ :

lip-mkp

ರೆಟ್ರೋ ಥೀಂ ಪ್ರಕಾರ, ಐ ಮೇಕಪ್‌ ಗಾಗಿ ಐ ಬಾಲ್ಸ್ ಮೇಲೆ ಪಿಂಕ್‌ ಪಿಗ್ಮೆಂಟ್‌ ಅಥವಾ ಅದರ ಜೊತೆ ಬೇರೆ ಯಾವುದೇ ಬಗೆಯ ಕಲರ್‌ ಪಿಗ್ಮೆಂಟ್‌ ನ್ನು ಬಳಸಬಹುದು. ಐ ಶ್ಯಾಡೋ ಸಹ ಬಳಸಬಹುದು. ನಂತರ ಐ ಬ್ರೋದ ಕೆಳಗಿನ ಭಾಗವನ್ನು ಹೈಲೈಟರ್‌ ನಿಂದ ಹೈಲೈಟ್‌ ಮಾಡಿ. ಐ ಲೈನರ್‌ ಹಾಗೂ ಕಾಡಿಗೆ ತುಸು ದಪ್ಪಗೆ ಹಾಗೂ ಕಂಗಳ ಹೊರಗಿನ ಕಡೆಗೆ ಬರುತ್ತಿರುವಂತೆ ಬಳಸಬೇಕು. ಜೆಲ್ ‌ಬೇಸ್ಡ್ ಕಾಡಿಗೆಯನ್ನೂ ಬಳಸಬಹುದು. ಇದು ಗಂಟೆಗಟ್ಟಲೆ ಅಂಟಿಕೊಂಡಿರುವುದರ ಜೊತೆ ಜೊತೆಗೆ ಹೊಳಪನ್ನೂ ತುಂಬುತ್ತದೆ. ಮಸ್ಕರಾದಲ್ಲಿ ನೀವು ಬ್ಲ್ಯಾಕ್‌, ಬ್ರೌನ್‌ ಹೊರತುಪಡಿಸಿ ಟ್ರಾನ್ಸ್ ಪರೆಂಟ್‌ ಸಹ ಬಳಸಬಹುದು.

ನೀವು ಕಂಗಳಿಗೆ ಸ್ಮೋಕಿ ಲುಕ್‌ ಸಹ ನೀಡಬಹುದು. ಇದಕ್ಕಾಗಿ ಐ ಬಾಲ್ಸ್ ಗೆ ರೆಡ್‌ ಮತ್ತು ಕಾಪರ್‌ ಕಲರ್‌ ಪಿಗ್ಮೆಂಟ್‌ ಬಳಸಬೇಕು, ನಂತರ ಅವೆರಡನ್ನೂ ಚೆನ್ನಾಗಿ ಮರ್ಜ್‌ ಮಾಡಬೇಕು. ನೀವು ಇದಕ್ಕಾಗಿ ಬ್ಲ್ಯಾಕ್‌ ಶೇಡ್‌ ಸಹ ಬಳಸಬಹುದು. ಯಾರ ಕಂಗಳು ತುಸು ಆಳವಾಗಿ ಒಳಕ್ಕೆ ಹುದುಗಿವೆ ಎನಿಸುತ್ತದೋ, ಅವರ ಕಂಗಳಿಗೆ ಸ್ಮೋಕಿ ಐ ಮೇಕಪ್‌ ಹೆಚ್ಚು ಶೋಭಿಸುತ್ತದೆ.

ಏಕೆಂದರೆ ಇದು ಕಂಗಳನ್ನು ಹೆಚ್ಚು ಹೈಲೈಟ್‌ಗೊಳಿಸುತ್ತದೆ. ಪಿಗ್ಮೆಂಟ್‌ ತೀಡಿದ ನಂತರ ಕಂಗಳಿಗೆ ಕಾಡಿಗೆ, ಐ ಲೈನರ್‌ ಮತ್ತು ಮಸ್ಕರಾಗಳನ್ನು ಬಳಸಿರಿ. ಕೊನೆಯಲ್ಲಿ ಕಂಗಳನ್ನು ಹೈಲೈಟ್‌ ಗೊಳಿಸಲು ಐ ಬಾಲ್ಸ್ ಮೇಲೆ ಸ್ಕಿನ್‌ ಗ್ಲಾಸ್‌ ನ್ನು ಸಹ ಬಳಸಬಹುದು.

ರೆಟ್ರೋ ಹೇರ್ಸ್ಟೈಲ್ ಹೈ ಬನ್‌ :

ಇದಕ್ಕಾಗಿ ಎಲ್ಲಕ್ಕೂ ಮೊದಲು ಕೂದಲನ್ನು ಚೆನ್ನಾಗಿ ಬಾಚಿ, ಮುಂಭಾಗ ಮತ್ತು ಹಿಂಭಾಗ ಎಂದು 2 ಭಾಗ ಮಾಡಿಕೊಳ್ಳಬೇಕು. ನಂತರ ಕೂದಲಿನ ಮಧ್ಯಭಾಗದಲ್ಲಿ ಗುಂಡಗಿನ ಬನ್‌ (ಕೊಂಡೆ) ಇರಿಸಿ ಪಿನ್‌ ಅಪ್‌ ಮಾಡಿ. ಈಗ ಮುಂದಿನ ಭಾಗದಲ್ಲಿ ಮಧ್ಯದಿಂದ ಬೈತಲೆ ತೆಗೆಯಿರಿ.

ನಂತರ ಅದರಿಂದ 1-1 ಜೊಂಪೆ ತೆಗೆದು ಬ್ಯಾಕ್‌ ಕೋಂಬಿಂಗ್‌ ಮಾಡುತ್ತಾ, ಬನ್‌ ಮೇಲೆ ಪಿನ್‌ ಅಪ್‌ ಮಾಡಿಕೊಳ್ಳುತ್ತಾ ಹೋಗಿ. ಆದರೆ ಎರಡೂ ಕಡೆ 1-1 ಜೊಂಪೆ ಹಾಗೇ ಬಿಡಿ. ನಂತರ ಬನ್‌ ಮೇಲೆ ದುಪಟ್ಟಾ ರೌಂಡ್‌ ಮಾಡುತ್ತಾ ಕಟ್ಟಬೇಕು. ಅಗತ್ಯವೆನಿಸಿದರೆ ಸೈಡ್‌ ನಲ್ಲಿ 1 ಗುಲಾಬಿ ಸಿಗಿಸಿದರೆ ಚೆನ್ನಾಗಿರುತ್ತದೆ. ಕೃತಕ ಗುಲಾಬಿಯಾದರೆ ಅದಕ್ಕೆ ಮೆಟಾಲಿಕ್‌ ಪಿಗ್ಮೆಂಟ್‌ ಸಹ ಬಳಸಬಹುದು.

ಲಿಪ್ಮೇಕಪ್‌ :

ಥೀಂ ಪ್ರಕಾರ ಲಿಪ್‌ ಸ್ಟಿಕ್‌ ನ್ಯೂಡ್‌ ಆಗಿರಬೇಕು, ಅಂದರೆ ಅದು ಬಣ್ಣವಿಲ್ಲದೆ ಪ್ಲೇನ್‌ ಆಗಿರಬೇಕು, ಗ್ಲಾಸಿ ಆಗಿರಬಾರದು. ರೆಟ್ರೋ ಲುಕ್ಸ್ ಗಾಗಿ ನೀವು ಪಿಂಕ್‌ರೆಡ್‌ ಲಿಪ್‌ ಸ್ಟಿಕ್‌ ಬಳಸಬೇಕು, ಆಗ ಅದು ಹೆಚ್ಚು ಆಕರ್ಷಕವಾಗಿರುತ್ತದೆ. ನಿಮ್ಮ ಉಡುಗೆಗೆ ಹೊಂದುವ ಶೇಡ್‌ ನ್ನು ಸಹ ನೀವು ಆರಿಸಬಹುದು.

ಸೈಡ್ವರ್ಕ್‌ :

nirmal-randhava

ಇದನ್ನು ಪಡೆಯಲಿಕ್ಕಾಗಿ, ನೀವು ಹೈ ಬನ್‌ ಮಾದರಿಯಲ್ಲೇ ಕೂದಲನ್ನು ಹೆಣೆಯಿರಿ. ಆದರೆ ಈ ಬಾರಿ ಮುಂಭಾಗದಲ್ಲಿ ಒಂದೇ ಬದಿಗೆ ಕೂದಲಿನ ಜೊಂಪೆ ಬಿಡಿ, ನಂತರ ಅದನ್ನು ಕರ್ಲ್ ಮಾಡಿ. ಹಿಂಭಾಗದ ಕೂದಲಿನಲ್ಲೂ ಇದೇ ತರಹ ಹೆಣೆದುಕೊಳ್ಳಿ ಹಾಗೂ ಕೆಳಭಾಗದಲ್ಲಿ ಉಳಿದ ಕೂದಲನ್ನು ಕರ್ಲ್ ಮಾಡಬಹುದು. ಮುಂಭಾಗದ ಬನ್‌ ಗೆ ಒಂದು ಕೆಂಗುಲಾಬಿಯನ್ನು ಸಹ ಸಿಗಿಸಬಹುದು.

ಎಲ್ಲಾ ಮುಗಿದ ನಂತರ, ಉಡುಗೆ ಹಾಗೂ ಲಿಪ್‌ ಸ್ಟಿಕ್‌ ಗೆ ಹೊಂದುವ ಹಾಗೆ, ಹಣೆ ಮಧ್ಯೆ ಸ್ಟಿಕರ್‌ ಬಿಂದಿ ಇರಿಸಬೇಕು. ಗುಂಡನೆಯ ಮುಖಕ್ಕೆ ಉದ್ದನೆ ಹಾಗೂ ಉದ್ದನೆಯ ಮುಖಕ್ಕೆ ಗುಂಡಗಿನ ಬಿಂದಿ ಅಂದವಾಗಿ ಶೋಭಿಸುತ್ತದೆ. ಅಂಡಾಕಾರ (ಓವಲ್)ದ ಮುಖಕ್ಕೆ ಮೆರೂನ್‌ ಬಣ್ಣದ ಬಿಂದಿ ಹೆಚ್ಚು ಒಪ್ಪುತ್ತದೆ.

ಜೆ. ನಿರ್ಮಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ