ಡಿಸೈನರ್ಪೆನ್‌ :

ನಿಮ್ಮ ಗಂಡನಿಗೆ ಒಂದು ಡಿಸೈನರ್‌ ಪೆನ್‌ ಸೆಟ್‌ ಕೊಟ್ಟರೆ ಅತ್ಯಂತ ಸುಂದರವಾದ ಕಾಣಿಕೆಯಾಗುತ್ತದೆ. ಅದು ಸದಾ ಅವರ ಪಾಕೆಟ್‌ ನಲ್ಲಿ ಹೃದಯಕ್ಕೆ ಹತ್ತಿರವಾಗಿರುತ್ತದೆ. ಅವರು ಬರೆಯುವಾಗೆಲ್ಲಾ ಅವರ ಮನಸ್ಸಿನಲ್ಲಿ ನೀವೇ ಇರುತ್ತೀರಿ. ಅದರೊಂದಿಗೆ ಪೆನ್‌ ಸ್ಟ್ಯಾಂಡ್‌ ಕೂಡ ಕೊಡಬಹುದು. ಆಫೀಸಿನಲ್ಲಿ ಟೇಬಲ್ ಮೇಲಿಟ್ಟ ಪೆನ್‌ ಸ್ಟ್ಯಾಂಡ್‌ ಮೇಲೆ ಅವರ ದೃಷ್ಟಿ ಹೋಗುತ್ತಿರುತ್ತದೆ.

ರಿಸ್ಟ್ ವಾಚ್‌ :

D-Star200-chrono

ಗಂಡನ ಪರ್ಸನಾಲಿಟಿಗೆ ಮ್ಯಾಚ್‌ ಆಗುವಂತಹ ಒಂದು ಗೋಲ್ಡನ್‌ ಅಥವಾ ಸಿಲ್ವರ್‌ ಬೆಲ್ಟ್ ನ ಲೇಟೆಸ್ಟ್ ರಿಸ್ಟ್ ವಾಚ್‌ ಕೊಡಿ. ನೀವು ಅವರ ಜೀವನದಲ್ಲಿ ಎಷ್ಟು ಮಹತ್ವಪೂರ್ಣರಾಗಿರುತ್ತೀರೆಂದು ನೋಡಿ. ವಿಶಿಷ್ಟವಾಗಿರುವಂತಹ ಹಾಗೂ ಅವರ ಮಣಿಕಟ್ಟಿನ ಮೇಲೆ ಸುಂದರವಾಗಿ ಕಾಣುವಂತಹ ವಾಚ್‌ ಖರೀದಿಸಿ. ಟೈಟನ್‌, ಟೈಮೆಕ್ಸ್, ಫಾಸಿವ್‌, ಸಿಟಿಜೆನ್‌, ಟಾಮಿ, ಫಾಸ್ಟ್ರಾಕ್‌ ನಂತಹ ಬ್ರ್ಯಾಂಡ್‌ ಗಳ ಗಡಿಯಾರನ್ನು ಟ್ರೈ ಮಾಡಬಹುದು.

ಗ್ಯಾಜೆಟ್ಸ್ :

Large_59b53cdb1c8f3eca68b6046ca90c2fc6

ಪತಿಗೆ ಇಷ್ಟವಾದ ಗ್ಯಾಜೆಟ್ಸ್ ಕೊಡಬಹುದು. ಮೊಬೈಲ್‌, ಟ್ಯಾಬ್ಲೆಟ್‌, ಐಪಾಡ್‌ ಅಥವಾ ಕಂಪ್ಯೂಟರ್‌ ಆ್ಯಕ್ಸೆಸರೀಸ್ ಇತ್ಯಾದಿ ಗಿಫ್ಟ್ ಕೊಟ್ಟು ಅವರ ಹೃದಯದಲ್ಲಿ ನಿಮಗಾಗಿ ವಿಶೇಷ ಸ್ಥಾನ ಗಳಿಸಬಹುದು.

ಶರ್ಟ್‌ :

dress-shirt

ಗಂಡನಿಗೆ ಸ್ಮಾರ್ಟ್‌ ಬ್ರ್ಯಾಂಡೆಡ್‌ ಶರ್ಟ್‌ ಅಥಾ ಫಂಕಿ ಟೀಶರ್ಟ್‌ ಗಿಫ್ಟ್ ಆಗಿ ಕೊಡಬಹುದು. ಶರ್ಟ್‌ ಸೋಬರ್‌ ಆಗಿದ್ದು ಆಫೀಸ್‌ ಅಥವಾ ಮೀಟಿಂಗ್‌ ಗಳಲ್ಲಿ ಧರಿಸಲು ಲಾಯಕ್ಕಾಗಿರಬೇಕು.

ಟೀಶರ್ಟ್‌ ಖರೀದಿಸುವಾಗ ಕಲರ್‌ ಬದಲು ಪ್ರಿಂಟೆಡ್‌ ಮ್ಯಾಟರ್‌ ಬಗ್ಗೆ ಹೆಚ್ಚು ಗಮನಕೊಡಿ. ಯಾವುದಾದರೂ ವಿಶಿಷ್ಟವಾದ ಕೊಟೇಶನ್‌ ಅಥವಾ ಪೇಂಟಿಂಗ್‌ ಇರುವ ಟೀಶರ್ಟ್‌ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ಶರ್ಟ್‌ ಅಥವಾ ಜೀನ್ಸ್ ಗೆ ಅಡಿಡಾಸ್‌, ಆ್ಯಲೆನ್‌ ಸೋಲಿ, ಆ್ಯರೋ, ಫ್ಯಾಬ್‌ ಇಂಡಿಯಾ, ಫೀಫಾ, ಜೆನೆಸಿಸ್‌, ಜಾನ್‌ ಮಿಲರ್‌, ಲೀ, ಲೆವಿಸ್‌, ರೀಡ್‌ ಅಂಡ್‌ ಟೇಲರ್‌, ಸ್ಪೈಕರ್‌, ವಿಲ್ಸ್ ಲೈಫ್‌ ಸ್ಟೈಲ್‌, ರೇಮಂಡ್‌ ಗಳಂತಹ ಬ್ರ್ಯಾಂಡ್‌ ಟ್ರೈ ಮಾಡಬಹುದು.

ಪರ್ಫ್ಯೂಮ್ :

ಮನಸ್ಸು ಹಾಗೂ ಭಾವನೆಗಳನ್ನು ಮುದಗೊಳಿಸಲು ಕೊಡಬಹುದಾದ ವಿಶೇಷ ಗಿಫ್ಟ್ ಪರ್ಫ್ಯೂಮ್ ಅಥವಾ ಡಿಯೋ. ನೀವು ಕೊಟ್ಟ ಪರ್ಫ್ಯೂಮ್ ಹಾಕಿಕೊಂಡಾಗ ಅದರ ಸುವಾಸನೆಯಲ್ಲಿ ಸಂಗಾತಿ ಮೀಯುವರು. ಪರ್ಫ್ಯೂಮ್ ಅವರ ಪರ್ಸನಾಲಿಟಿಗೆ ಸೂಟ್‌ ಆಗುವಂತಿರಬೇಕು.

ಟೈ :

128033-open

 

ಟೈ ಬಗ್ಗೆ ಪುರುಷರು ಬಹಳಷ್ಟು ಚ್ಯೂಸಿಯಾಗಿರುತ್ತಾರೆ. ಆದ್ದರಿಂದ ಅವರಿಗಿಷ್ಟವಾದ ಟೈ ಆರಿಸಿ.

ಬುಕ್ಸ್ :

book-gifts

ಗಂಡನಿಗೆ ಪುಸ್ತಕ ಓದುವ ಅಭ್ಯಾಸವಿದ್ದರೆ ಅವರಿಗೆ ಇಷ್ಟವಾದ ವಿಷಯದ ಪುಸ್ತಕ ಅಥವಾ ಕಾದಂಬರಿ ಗಿಫ್ಟ್ ಕೊಡಬಹುದು. ಪುಸ್ತಕಗಳಲ್ಲದೆ ಅವರಿಗೆ ಡೈರಿ, ಬುಕ್‌ ಹೋಲ್ಡರ್‌, ಶೆಲ್ಫ್ ಕೂಡ ಗಿಫ್ಟ್ ಕೊಟ್ಟರೆ ಅದರಲ್ಲಿ ಪುಸ್ತಕಗಳನ್ನು ಸುಂದರವಾಗಿ ಜೋಡಿಸಿ ಇಡಬಹುದು.

ಪರ್ಸ್‌ :

ನೀವು ಗಂಡನ ಹಣವನ್ನು ನಿಮ್ಮದೆಂದು ತಿಳಿಯಬಹುದು. ಆದರೆ ಅದನ್ನು ಇಟ್ಟುಕೊಳ್ಳಲು ಒಂದು ಸುಂದರ ಪರ್ಸ್ ಅಗತ್ಯವಿದೆ. ಮಾರ್ಕೆಟ್‌ನಲ್ಲಿ ಸಿಗುವ ರಾಂಗ್ಲರ್‌, ಕಾರಾ, ಮ್ಯಾಪ್‌, ಫಾಸ್ಟ್ರಾಕ್‌, ಬ್ಯಾಗಿಟ್‌, ಹೈಡ್‌ ಕ್ರಾಫ್ಟ್ ನಂತಹ ಬ್ರ್ಯಾಂಡೆಡ್ ಪರ್ಸ್‌ ಗಳಲ್ಲಿ ಯಾವುದಾದರೂ ಕೊಡಬಹುದು ಅಥವಾ ಲೋಕಲ್ ಮಾರ್ಕೆಟ್‌ ನಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ ಮತ್ತು ಸ್ಟೈಲಿಶ್ ಪರ್ಸ್‌ ಕೊಡಬಹುದು.

ಜ್ಯೂವೆಲರಿ :

CableCufflinksYG2

 

ಹಬ್ಬದ ಸಂದರ್ಭದಲ್ಲಿ ಗಂಡನಿಗೆ ಸುಂದರ ಬ್ರೇಸ್‌ ಲೆಟ್‌, ಚೇನ್‌ ಪೆಂಡೆಂಟ್‌, ರಿಂಗ್‌, ಕಫ್‌ ಲಿಂಕ್ಸ್ ಇತ್ಯಾದಿಗಳನ್ನೂ ಗಿಫ್ಟ್ ಆಗಿ ಕೊಡಬಹುದು.

ಡ್ರೈಫ್ರೂಟ್ಸ್/ಚಾಕಲೇಟ್‌/ಫ್ಲವರ್ಸ್ :

37693_1_org

ಇವೆಲ್ಲವನ್ನೂ ಫೇವರಿಟ್‌ ಗಿಫ್ಟ್ಸ್ ಎನ್ನುತ್ತಾರೆ. ಹಬ್ಬಗಳಲ್ಲಿ ಇವನ್ನು ಸಂಬಂಧಿಕರಿಗೆ ಕೊಡುತ್ತಾರೆ. ಆಗಾಗ್ಗೆ ಗಂಡನಿಗೂ ಪ್ರೀತಿಯಿಂದ ಇವನ್ನು ಗಿಫ್ಟ್ ಆಗಿ ಕೊಡಿ. ನಂತರ ಅದರ ಪರಿಣಾಮ ನೋಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ